ಫ್ರೆಂಚ್ ಗುಹೆಯಲ್ಲಿ ಕಂಡುಬಂದ ರಹಸ್ಯಮಯ ಭೂಗತ ರಚನೆ

Written By:

  ಈ ಜಗತ್ತು ಅನೂಹ್ಯವಾದ ರಹಸ್ಯಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದ್ದು ಇವುಗಳ ಅನ್ವೇಷಣೆಯಿಂದ ಆ ಕಾಲದಲ್ಲಿದ್ದ ನಾಗರೀಕತೆ, ಅವರುಗಳು ಜೀವನ ಶೈಲಿ ಮತ್ತು ಜೀವನ ನಿರ್ವಹಣೆಗೆ ಅವರು ಕಂಡುಕೊಂಡ ರೀತಿನೀತಿಗಳು, ವಿಜ್ಞಾನವನ್ನು ಅವರು ಬಳಸಿಕೊಳ್ಳುತ್ತಿದ್ದ ರೀತಿ ಮೊದಲಾದ ಅಂಶಗಳು ಲಭ್ಯವಾಗಿವೆ. ನಾವು ಇಂದು ಏನು ಆಧುನೀಕತೆ ಎಂದು ಕರೆಯುತ್ತಿದ್ದೇವೆಯೋ ಅಂತಹ ವಿಚಾರ ಧಾರೆಗಳನ್ನು ಕೆಲವೊಂದು ನಾಗರೀಕತೆಗಳು ಆ ಕಾಲದಲ್ಲಿಯೇ ಅನ್ವೇಷಿಸಿಕೊಂಡಿದ್ದವು. ಈಗ ಇದಕ್ಕೆ ಪುಷ್ಟಿಯನ್ನು ನೀಡುವಂತಹ ಒಂದು ಅನ್ವೇಷಣೆಯನ್ನು ವಿಜ್ಞಾನಿಗಳ ತಂಡವೊಂದು ಅವಲೋಕಿಸಿದ್ದು ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಿದ್ದೇವೆ.

  ಓದಿರಿ: 5000 ವರ್ಷಗಳ ಹಿಂದಿನ ದೇವಸ್ಥಾನ ಪತ್ತೆ ಏನಿದರ ರಹಸ್ಯ

  ಫ್ರೆಂಚ್ ಗುಹೆಗಳಲ್ಲಿ ಪತ್ತೆಯಾಗಿರುವ ರಹಸ್ಯಮಯವಾದ ಭೂಗತ ರಚನೆಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅವರುಗಳು ಹೇಳುವಂತೆ ಬಹುಶಃ ಈ ರಚನೆಗಳನ್ನು ನಿರ್ಮಿಸಿದವರು ನಿಯಾಂಡರ್ತಲ್‌ಗಳಾಗಿದ್ದು ಸುಮಾರು 176,500 ವರ್ಷಗಳ ಹಿಂದೆ ರಚೆನಗೊಂಡಿದ್ದಿರಬಹುದು ಎಂಬುದಾಗಿ ಪತ್ತೆಯಾಗಿದೆ. ಎರಡು ಕಲ್ಲಿನ ರಿಂಗ್‌ಗಳನ್ನು ಬಾವಿಯ ಅಡಿಭಾಗದಲ್ಲಿ ಸ್ಥಾಪಿಸಲಾಗಿದ್ದು ದಕ್ಷಿಣ ಫ್ರಾನ್ಸ್ ಭಾಗದಲ್ಲಿ ಈ ರಚನೆಗಳನ್ನು ಕಂಡುಕೊಳ್ಳಲಾಗಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಸ್ಲೈಡರ್‌ಗಳಲ್ಲಿ ಅರಿತುಕೊಳ್ಳೋಣ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  #1

  ನಿಯಾಂಡರ್ತಲ್‌ಗಳು ಪರಿಗಣಿಸಲಾಗಿದ್ದು ವಿಶ್ವದ ಪುರಾತತ್ವಜ್ಞರು ಭಾವಿಸಿದ್ದ ಹೆಚ್ಚು ಸಂಕೀರ್ಣ ಜೀವಿಗಳು ಹೇಗಾಗಿದ್ದರು ಎಂಬುದನ್ನು ಈ ರಚನೆಗಳು ತಿಳಿಸುತ್ತಿವೆ.

  #2

  ರಹಸ್ಯ ರಿಂಗ್‌ಗಳನ್ನು ಇಳಿಬಿದ್ದಿರುವ ಖನಿಜ ನಿಕ್ಷೇಪಗಳಿಂದ ತಯಾರಿಸಲಾಗಿದ್ದು ಈ ಕಂಬದ ಮಾದರಿಯ ಖನಿಜ ನಿಕ್ಷೇಪಗಳನ್ನು ಸಮಾನಾಗಿ ತುಂಡರಿಸಲಾಗಿದ್ದು 16 ಇಂಚಿನ ಉದ್ದದ ಅಂಡಾಕಾರದ ಮಾದರಿಯಲ್ಲಿ ಜೋಡಿಸಲಾಗಿದೆ.

  #3

  ಬೇರೆ ಬೇರೆ ರೀತಿಯ ತಂತ್ರಜ್ಞಾನ ಉಪಕರಣಗಳ ಸಹಾಯದಿಂದ ಈ ರಚನೆಗಳ ಯುಗವನ್ನು ಸಂಶೋಧಕರಿಗೆ ಪತ್ತೆಹಚ್ಚಲಾಗಿದೆ. ಪುರಾತತ್ವಜ್ಞರು ಹೇಳುವಂತೆ, ಈ ರಚನೆಗಳನ್ನು ಪೂರ್ವ ಮಾನವರು ರಚಿಸಿದ್ದರು ಎಂಬುದು ದೃಢವಾಗಿದೆ ಎಂದಾಗಿದೆ.

  #4

  ಭೂಗತವಾಗಿ ಬದುಕಬಲ್ಲ ತಂತ್ರಗಳನ್ನು ನಿಯಾಂಡರ್ತಲ್‌ಗಳು ಅನುಕರಿಸುವಲ್ಲಿ ನಿಪುಣರಾಗಿದ್ದು 176,500 ವರ್ಷಗಳ ಹಿಂದೆಯೇ ಅವರು ಈ ಚಟುವಟಿಕೆಗಳಲ್ಲಿ ಸಿದ್ಧಹಸ್ತರಾಗಿದ್ದರು.

  #5

  ಮಾನವ ಜನಾಂಗವು ಆ ಕಾಲದಲ್ಲಿಯೇ ಆಧುನೀಕತೆಗೆ ಹೆಜ್ಜೆ ಇಟ್ಟಿದ್ದವು ಎಂಬುದನ್ನು ಈ ರಚನೆಗಳು ಪುಷ್ಟೀಕರಿಸಿವೆ. ರಿಂಗ್‌ಗಳು ಮತ್ತು ಸುತ್ತಲಿನ ರಚನೆಯು ಬೆಂಕಿಯ ಕುರುಹುಗಳ ಅಸ್ತಿತ್ವವನ್ನು ಕೆಂಪು ಮತ್ತು ಕಪ್ಪು ಮಸಿಯ ರೂಪದಲ್ಲಿ ಪ್ರಸ್ತುತಪಡಿಸಿವೆ.

  #6

  ರಚನೆಯ ಹೊರಭಾಗದ ಕೆಲವೊಂದು ಕುರುಹುಗಳು ಇನ್ನೂ ಪತ್ತೆಯಾಗಿಲ್ಲ. ಈ ರಚನೆಗಳನ್ನು ಅವರು ಬಹುಶಃ ಬೆಂಕಿಯುರಿಸಲು ಅಥವಾ ಗುಹೆಯಲ್ಲಿ ಬೆಳಕಿನ ವ್ಯವಸ್ಥೆಗಾಗಿ ಬಳಸಿರಬಹುದು ಎಂಬುದಾಗಿ ವಿಜ್ಞಾನಿಗಳು ಅಂದುಕೊಂಡಿದ್ದಾರೆ.

  #7

  ನಿಯಾಂಡರ್ತಲ್‌ಗಳನ್ನು ಹೊರತುಪಡಿಸಿ ದೊಡ್ಡ ಪ್ರಾಣಿಗಳಾದ ಕರಡಿ ಮತ್ತು ತೋಳಗಳು ಈ ರಚನೆಯನ್ನು ನಿರ್ಮಿಸಿದ್ದಿರಬಹುದು ಎಂಬುದಾಗಿ ವಿಜ್ಞಾನಿಗಳು ಲೆಕ್ಕಾಚಾರ ಹಾಕಿದ್ದಾರೆ.

  #8

  ನಿಯಾಂಡರ್ತಲ್‌ಗಳು ಗುಹೆಯ ಆಳವನ್ನು ಪ್ರವೇಶಿಸುವ ಯೋಜನೆಯನ್ನಿಟ್ಟುಕೊಂಡಿದ್ದು ಇಲ್ಲಿ ನೈಸರ್ಗಿಕ ಬೆಳಕಿನ ಅಭಾವವಿದ್ದು ರಿಂಗ್ ರಚನೆಯು ಅವರುಗಳ ಸಮೂಹ ಕಾರ್ಯವನ್ನು ಪ್ರತಿನಿಧಿಸುತ್ತಿದೆ.

  ಗಿಜ್‌ಬಾಟ್ ಲೇಖನಗಳು

  2ನೇ ಮಹಾಯುದ್ಧದಲ್ಲಿ ಗೂಢಲಿಪೀಕರಣಕ್ಕೆ ಬಳಸುತ್ತಿದ್ದ ಮಷಿನ್ 'ಇಬೇ'ನಲ್ಲಿ ಪತ್ತೆ
  ಡ್ರೈವಿಂಗ್‌ನಲ್ಲಿರುವಾಗ ಫೋನ್ ಬಳಸಿದಳು! ಮುಂದೇನಾಯಿತು ವೀಡಿಯೊ ನೋಡಿ
  ಲೈಂಗಿಕ ಚಟುವಟಿಕೆಗೆ ಭವಿಷ್ಯದಲ್ಲಿ 'ರೋಬೋಟ್' ಬಳಕೆ!!

  ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

  ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  A team of scientists has discovered unusual, mysterious underground structures in a French cave. The researchers suspect that these structures were probably built by Neanderthals, nearly 176,500 years ago.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more