Subscribe to Gizbot

ತಂತ್ರಜ್ಞಾನ ಸಹಾಯದಿಂದ ಸಿಗರೇಟ್ ಸೇದೊದನ್ನ ಬಿಡಬಹುದು!! ಹೇಗೆ ಗೊತ್ತಾ?

Written By:

ದೇಶದಲ್ಲಿ ಒಟ್ಟು ತಂಬಾಕು ಸೇವಿಸುವವರ ಸಂಖ್ಯೆಯಲ್ಲಿ 81 ಲಕ್ಷದಷ್ಟು ಇಳಿಕೆಯಾಗಿರುವುದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ. ಈ ಪೈಕಿ ತಂಬಾಕು ಸೇವಿಸುವ ಯುವಜನರ ಪ್ರಮಾಣ ಕಳೆದ ಕೆಲ ವರ್ಷಗಳಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.!!

ಹಾಗಾಗಿ, ಸಿಗರೇಟ್ ಅಥವಾ ತಂಬಾಕು ಸೇವನೆ ಬಿಡುವ ಆಲೋಚನೆ ನಿಮ್ಮಲಿದ್ದರೆ ಕೆಲವೊಂದು ಚಿಕ್ಕಪುಟ್ಟ ಕಾರ್ಯಗಳನ್ನು ಮಾಡಿ ತಂಬಾಕು ಸೇವನೆ ಬಿಡಬಹುದು. ಅದು ಕೂಡ ಸಿಂಪಲ್ ತಂತ್ರಜ್ಞಾನ ಸಹಾಯದಿಂದ!! ಹೇಗೆ ಅಂತ ತಿಳ್ಕೊಬೇಕಾ ಹಾಗಿದ್ರೆ ಮುಂದೆ ಓದಿ.!!

ತಂತ್ರಜ್ಞಾನ ಸಹಾಯದಿಂದ ಸಿಗರೇಟ್ ಸೇದೊದನ್ನ ಬಿಡಬಹುದು!! ಹೇಗೆ ಗೊತ್ತಾ?

ಸಿಗರೇಟ್ ಅಥವಾ ತಂಬಾಕು ಸೇವನೆ ಬಿಡುಬೇಕು ಎನ್ನುವುದು ಎಲ್ಲರ ಆಸೆಯಾದರೂ ಸಹ ಬಿಡುವುದು ಕಷ್ಟ. ಹಾಗಾಗಿ, ಅಮೆರಿಕಾದ CDC (Centers for Diseases for Control) ಸಂಸ್ಥೆ ಈ ಬಗ್ಗೆ 7,900 ಜನರ ಮೇಲೆ ಒಂದು ಅಧ್ಯಯನ ಮಾಡಿ ತಂಬಾಕು ಸೇವನೆ ಬಗ್ಗೆ ಒಂದು ವರದಿ ನೀಡಿದೆ.!

ತಂತ್ರಜ್ಞಾನ ಸಹಾಯದಿಂದ ಸಿಗರೇಟ್ ಸೇದೊದನ್ನ ಬಿಡಬಹುದು!! ಹೇಗೆ ಗೊತ್ತಾ?

CDC ನೀಡಿರುವ ವರದಿಯಲ್ಲಿ ತಂಬಾಕು ಸೇವನೆ ಬಿಡುವರಲ್ಲಿ ಬಹುತೇಕರು ಆನ್‌ಲೈನ್ ಮಾರ್ಗದರ್ಶನ ಪಡೆದಿರುವುದು ಕಂಡುಬಂದಿದೆಯಂತೆ. ಆನ್‌ಲೈನ್‌ನಲ್ಲಿ ತಂಬಾಕು ಸೇವನೆ ಬಿಡುವ ಬಗ್ಗೆ ಹುಡುಕುವವರು ಮಾನಸಿಕವಾಗಿ ತಂಬಾಕಿನಿಂದ ದೂರವಾಗುತ್ತಾರಂತೆ ಎಂದು ವರದಿ ನೀಡಿದೆ.!!

ಇದನ್ನು ಮಾನಸಿಕ ತಂತ್ರಜ್ಞಾನ ಎಂದು ಕರೆದಿದ್ದು, ತಂಬಾಕು ಸೇವನೆ ಬಿಡಬೇಕು ಎಂದು ಆಲೋಚನೆ ಮಾಡುವವರಿಗೆ ಆನ್‌ಲೈನ್ ಮೂಲಕ ಸಿಗುವ ಸಲಹೆ ಸಿಗರೇಟ್ ಬಿಡುವ ಯೂಚನೆಗೆ ಪೂರಕವಾಗಿ ಕೆಲಸ ಮಾಡುತ್ತದೆಯಂತೆ. ಹಾಗಿದ್ರೆ ನೀವು ಟ್ರೈ ಮಾಡಬಹುದು. ಅಲ್ಲವೆ!!

ಓದಿರಿ: ಆಪಲ್ ಗ್ರಾಹಕರು ನಾವು ತುಂಬಾ ಸುರಕ್ಷಿತ ಎಂದು ತಿಳಿದಿದ್ದೀರಾ? ಈ ಸ್ಟೋರಿ ನೋಡಿ!!

English summary
Anyone who has been a smoker—or been close with someone who smokes regularly—knows how hard it is to quit.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot