ಆಪಲ್ ಗ್ರಾಹಕರು ನಾವು ತುಂಬಾ ಸುರಕ್ಷಿತ ಎಂದು ತಿಳಿದಿದ್ದೀರಾ? ಈ ಸ್ಟೋರಿ ನೋಡಿ!!

Written By:

ಆಪಲ್ ಗ್ರಾಹಕರು ನಾವು ತುಂಬಾ ಸುರಕ್ಷಿತ ಎಂದು ತಿಳಿದಿದ್ದೀರಾ? ನಿಜವಾಗಿಯೂ ನೀವು ಸುರಕ್ಷಿತವಾಗಿಲ್ಲದೇ ಇರಬಹುದು.! ಏಕೆಂದರೆ ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಮಾರಾಟ ಮಾಡುತ್ತಿದ್ದ ಆಪಲ್ ಕಂಪೆನಿ ಉದ್ಯೋಗಿಗಳನ್ನು ಒಳಗೊಂಡ ಜಾಲವೊಂದನ್ನು ಬಂಧಿಸಿರುವುದಾಗಿ ಚೀನಾದ ಅಧಿಕಾರಿಗಳು ಹೇಳಿದ್ದಾರೆ.!!

ಆಪಲ್‌ನ ಆಂತರಿಕ ಗಣಕೀಕೃತ ವ್ಯವಸ್ಥೆಯನ್ನು ಅಕ್ರಮವಾಗಿ ಬಳಸಿ ಗ್ರಾಹಕರ ಮೊಬೈಲ್‌ ಸಂಖ್ಯೆ ಸೇರಿದಂತೆ, ಆಪಲ್ ಐಡಿ ಹಾಗೂ ಮತ್ತಿತರ ದತ್ತಾಂಶಗಳನ್ನು ಸುಮಾರು ₹40 ಕೋಟಿಗೂ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಎಂದು ಚೀನಾದ ದಕ್ಷಿಣ ಝೇಜಾಂಗ್ ಪ್ರಾಂತ್ಯದ ಪೊಲೀಸರು ತಿಳಿಸಿದ್ದಾರೆ.!!

ಆಪಲ್ ಗ್ರಾಹಕರು ನಾವು ತುಂಬಾ ಸುರಕ್ಷಿತ ಎಂದು ತಿಳಿದಿದ್ದೀರಾ? ಈ ಸ್ಟೋರಿ ನೋಡಿ!!

ಒಟ್ಟು 22 ಜನರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ 20 ಜನರು ಆಪಲ್ ಕಂಪೆನಿಯ ಉದ್ಯೋಗಿಗಳೇ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಹಲವು ದಿನಗಳಿಂದ ತನಿಖೆ ನಡೆಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಪಲ್ ಗ್ರಾಹಕರು ನಾವು ತುಂಬಾ ಸುರಕ್ಷಿತ ಎಂದು ತಿಳಿದಿದ್ದೀರಾ? ಈ ಸ್ಟೋರಿ ನೋಡಿ!!

ಇನ್ನು ಬಂಧಿತರು ಗ್ರಾಹಕರ ಮಾಹಿತಿಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸುಮಾರು ₹1700ರ ವರೆಗೆ ಹಣ ಪಡೆಯುತ್ತಿದ್ದರು ಎಂದು ಹೇಳಲಾಗಿದದ. ಆದರೆ, ಅವರು ಮಾರಾಟವಾಗಿರುವ ಮಾಹಿತಿ ಚೀನಾದ ಗ್ರಾಹಕರದ್ದೇ ಅಥವಾ ಬೇರೆ ದೇಶದವರದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ.

ಓದಿರಿ: ಆಧಾರ್-ಸಿಮ್ ಲಿಂಕ್ ಮಾಡಲು ಕೊನೆ ದಿನಾಂಕ ಯಾವಾಗ?..ಏಕೆ ಮಾಡಿಸಲೇಬೇಕು?

English summary
A week after China’s first cybersecurity law took effect. to know more visitt o kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot