ಸಾಮಾನ್ಯ ಸುದ್ದಿಗಳೇ ಇಂಟರ್ನೆಟ್‌ನಲ್ಲಿ ವೈರಲ್!

By Shwetha
|

ಪ್ರತೀ ವರ್ಷವೂ ಇಂಟರ್ನೆಟ್‌ನಲ್ಲಿ ಸಣ್ಣ ಸುದ್ದಿ ಹೆಚ್ಚು ವೇಗವಾಗಿ ಪ್ರಖ್ಯಾತವಾಗುತ್ತದೆ. ಇದು ಮೋಜಿನ ಸುದ್ದಿಯಾಗಿರಬಹುದು ಅಥವಾ ಮನ ಕಲಕುವ ಕಥೆಯೂ ಆಗಿರಬಹುದು ಆದರೆ ಇಂಟರ್ನೆಟ್‌ನಲ್ಲಿ ಆ ಸುದ್ದಿ ಬಿತ್ತರವಾದ ನಂತರ ಅದು ಕ್ಷಿಪ್ರವಾಗಿ ಹರಡಿಕೊಳ್ಳುತ್ತದೆ. ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿರುವ ಸುದ್ದಿಗಳು ತಾಣದಲ್ಲಿ ಹೆಚ್ಚು ಸದ್ದನ್ನು ಉಂಟುಮಾಡಿರುವಂತಹದ್ದಾಗಿದೆ.

ಓದಿರಿ: ನೀರಿನಾಳದಲ್ಲಿ ಪತ್ತೆಯಾದ ನಗರ! ಅದ್ಭುತಗಳಿಗೆ ಅಂತ್ಯವೇ ಇಲ್ಲ

ಅದನ್ನು ತಿಳಿದುಕೊಳ್ಳಬೇಕೆಂಬ ಕುತೂಹಲ ನಿಮ್ಮದಾಗಿದೆ ಎಂದಾದಲ್ಲಿ ಕೆಳಗಿನ ಸ್ಲೈಡರ್‌ಗಳಲ್ಲಿ ಈ ವಿಷಯದ ವಿವರಗಳನ್ನು ನಾವು ಸಂಪೂರ್ಣವಾಗಿ ನೀಡುತ್ತಿದ್ದೇವೆ.

ದಿರಿಸು

ದಿರಿಸು

ಟ್ವಿಟ್ಟರ್‌ನಿಂದ ಹಿಡಿದು ತಂಬ್ಲರ್‌ವರೆಗೆ ಸುದ್ದಿ ಮಾಡಿದ ದಿರಿಸು ವರ್ಷದ ವೈರಲ್ ಸುದ್ದಿ ಎಂದೇ ಪ್ರಖ್ಯಾತಗೊಂಡಿದೆ. ದಿರಿಸಿನ ಬಣ್ಣದ ಬಗೆಗಿನ ಗೊಂದಲ ವೀಕ್ಷಕರಲ್ಲಿ ಕುತೂಹಲವನ್ನು ಉಂಟುಮಾಡಿದ್ದು ಇದು 73 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ ಎಂಬುದಾಗಿ ಫೇಸ್‌ಬುಕ್ ತಿಳಿಸಿದೆ. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ದಿರಿಸಿನ ಬಣ್ಣವನ್ನು ಬಿತ್ತರಿಸಿದ್ದರು.

ಲೆಫ್ಟ್ ಶಾರ್ಕ್

ಲೆಫ್ಟ್ ಶಾರ್ಕ್

ಕೇಟ್ ಪಿರ್ರೆಯ ಸೂಪರ್ ಬೌಲ್ ಲೈಫ್‌ಟೈಮ್ ಶೋದಲ್ಲಿ ಲೆಫ್ಟ್ ಶಾರ್ಕ್ ಬರೇ ಎರಡು ದಿನದಲ್ಲಿ 160,000 ಟ್ವೀಟ್‌ಗಳನ್ನು ಪಡೆದುಕೊಂಡಿದೆ. ಈ ಶೋಗಿಂತಲೂ ಮತ್ತು ಕೇಟ್ ಪಿರ್ರೆಗಿಂತಲೂ ಲೆಫ್ಟ್ ಶಾರ್ಕ್ ಹೆಸರುವಾಸಿಯಾಯಿತು.

ಪಿಜ್ಜಾ ಇಲಿ

ಪಿಜ್ಜಾ ಇಲಿ

ಮೆಟ್ಟಿಲುಗಳ ಮೇಲೆ ಬಿದ್ದಂತಹ ಪಿಜ್ಜಾವನ್ನು ತಿನ್ನಲು ಬಂದ ಇಲಿಗೆ ಇಂಟರ್ನೆಟ್‌ನಲ್ಲಿ ಸ್ಥಾನವನ್ನು ನೀಡಿ ಪ್ರಖ್ಯಾತಗೊಳಿಸಲಾಯಿತು. ತಾಣದಲ್ಲಿ ಬಂದ ಸುದ್ದಿ ಎಷ್ಟೇ ಕನಿಷ್ಟವಾಗಿದ್ದರೂ ಅದು ಖ್ಯಾತಿಗೊಳ್ಳುವ ಬಗೆಯಿಂದ ಅದರ ಪ್ರಸಿದ್ಧತೆ ಬಲಗೊಳ್ಳುತ್ತದೆ ಎಂಬುದನ್ನು ಪಿಜ್ಜಾ ಇಲಿ ತೋರಿಸಿತು.#PizzaRat ಎಂಬ ಹ್ಯಾಶ್ ಟ್ಯಾಗ್ ನಿರ್ಮಾಣಗೊಂಡು ಟ್ವಿಟ್ಟರ್‌ನಲ್ಲಿ ಇದು ಪ್ರತಿ ನಿಮಿಷಕ್ಕೆ 400 ಕ್ಕಿಂತಲೂ ಹೆಚ್ಚಿನ ಟ್ವೀಟ್‌ಗಳನ್ನು ಪಡೆದುಕೊಂಡಿತು.

ಅಲೆಕ್ಸ್ ಫ್ರಮ್ ಟಾರ್ಗೆಟ್

ಅಲೆಕ್ಸ್ ಫ್ರಮ್ ಟಾರ್ಗೆಟ್

ಈ ಚಿತ್ರದಲ್ಲಿ ಹುಡುಗನೊಬ್ಬ ಟಾರ್ಗೆಟ್ ಕ್ಯಾಶಿಯರ್ ಮುಂಭಾಗದಲ್ಲಿ ಕೆಲಸ ಮಾಡುತ್ತಿರುವ ದೃಶ್ಯವನ್ನು ನಿಮಗೆ ಕಾಣಬಹುದಾಗಿದೆ. ಆದರೆ ತಾಣದಲ್ಲಿ ಸುಮ್ಮನೆ ಪೋಸ್ಟ್ ಆದ ಫೋಟೋ ಪಡೆದುಕೊಂಡ ಇಮೇಜ್ ಅಂತಿಂಥದ್ದಲ್ಲ. ನಂತರ ಈ ಫೋಟೋವನ್ನು ಸಾಕ್ಷಿಯಾಗಿರಿಸಿಕೊಂಡು ಹೊಸದಾದ ಟ್ವಿಟ್ಟರ್ ಖಾತೆಯನ್ನು ಬಳಕೆದಾರರು ನಿರ್ಮಿಸಿದರು ಮತ್ತು ಇದು 300,000 ಫಾಲೋವರ್‌ಗಳನ್ನು ಪಡೆದುಕೊಂಡಿತು.

ಅರಿಜೋನಾ ಲಾಮಾ ಎಸ್ಕೇಪ್

ಅರಿಜೋನಾ ಲಾಮಾ ಎಸ್ಕೇಪ್

ಮಾಲೀಕನ ಕೈಯಿಂದ ತಪ್ಪಿಸಿಕೊಂಡ ಲಾಮಾಗಳು ಮಾಧ್ಯಮದವರ ಕಣ್ಣಿಗೆ ಬಿದ್ದು ಅದೂ ಕೂಡ ತಾಣದಲ್ಲಿ ಪ್ರಸಿದ್ಧತೆಯನ್ನು ಪಡೆದುಕೊಂಡಿತು.

Best Mobiles in India

English summary
So what did Spartz rank as the most viral stories of Here are the top five.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X