ಈ ಹೊಸ KFC ಮೀಲ್ ಬರಲಿದೆ ಹಾರುವ ಡ್ರೋನ್ ಬಾಕ್ಸ್ ನಲ್ಲಿ!!

By: Tejaswini P G

ಫ್ರೈಡ್ ಚಿಕನ್ ಗೆ ಹೆಸರುವಾಸಿಯಾದ KFC ಈಗ ತಮ್ಮ ಚಿಕನ್ ಅನ್ನು ಗ್ರಾಹಕರಿಗೆ ನೀಡುವ ವಿನೂತನ ವಿಧಾನವನ್ನು ಕಂಡುಕೊಂಡಿದೆ. ಇನ್ನು ಮುಂದೆ KFC ಯ ಸ್ಮೋಕಿ ಗ್ರಿಲ್ಲ್ಡ್ ವಿಂಗ್ಸ್ ಭಾರತದ ಆಯ್ದ 10 ನಗರಗಳಲ್ಲಿ ಹಾರುವ ಡ್ರೋನ್ ಗಳಾಗಿ ಪರಿವರ್ತನೆಗೊಳ್ಳಬಲ್ಲ ಬಾಕ್ಸ್ಗಳಲ್ಲಿ ಗ್ರಾಹಕರನ್ನು ತಲುಪಲಿದ್ದು,ಈ ಡ್ರೋನ್ಗಳನ್ನು ಸ್ಮಾರ್ಟ್ಫೋನ್ಗಳ ಮೂಲಕ ನಿಯಂತ್ರಿಸಲಾಗುತ್ತದೆ.

ಈ ಹೊಸ KFC ಮೀಲ್ ಬರಲಿದೆ ಹಾರುವ ಡ್ರೋನ್ ಬಾಕ್ಸ್ ನಲ್ಲಿ!!

ಜಗತ್ತಿನಲ್ಲಿ ಎರಡು ರೀತಿಯ 'ವಿಂಗ್ಸ್' ಗಳಿವೆಯಂತೆ- ಒಂದು 'ಫಿಂಗರ್ ಲಿಕಿಂಗ್ ಗುಡ್' ಆದರೆ ಮತ್ತೊಂದು ಹಾರುವ ಸಾಮರ್ಥ್ಯವುಳ್ಳದ್ದು! KFC ಇಂಡಿಯಾದ ನೂತನ ವಿಂಗ್ ಗಳು ಈ ಎರಡೂ ಗುಣಗಳನ್ನು ಪಡೆದಿದೆ! ಈ ಹತ್ತು ನಗರಗಳ ಆಯ್ದ KFC ಔಟ್ಲೆಟ್ಗಳಲ್ಲಿ ಹೊಸ ಸ್ಮೋಕಿ ಗ್ರಿಲ್ಲ್ಡ್ ವಿಂಗ್ಸ್ ಆರ್ಡರ್ ಮಾಡಿ, ಮತ್ತದನ್ನು ಪಡೆಯಿರಿ ನಿಮ್ಮ ಸ್ಮಾರ್ಟ್ಫೋನ್ ನಿಂದ ನಿಯಂತ್ರಿಸಬಲ್ಲ ಹಾರುವ ಡ್ರೋನ್ ಆಗಿ ಪರಿವರ್ತನೆಗೊಳ್ಳುವ ಆಕರ್ಷಕ ಪ್ಯಾಕೇಜಿಂಗ್ ನಲ್ಲಿ! ಹೌದು, ಈ ಆಕರ್ಷಕ ಪ್ಯಾಕೇಜಿಂಗ್ ಈಗ ಭಾರತದಲ್ಲಿ ಲಭ್ಯವಿದೆ!

KFC ಯು ಈ ಆಕರ್ಷಕ ಮೀಲ್ ಕಾಂಬೋ ಪ್ಯಾಕ್ ಅನ್ನು KFO( ಕೆಂಟಕಿ ಫ್ಲೈಯಿಂಗ್ ಆಬ್ಜೆಕ್ಟ್) ಎಂದು ಹೆಸರಿಸಿದ್ದು, ಇದು ಅತ್ಯಂತ ಆಕರ್ಷಕ ಮೀಲ್ ಕಾಂಬೋ ಆಗಿದೆ!ಸ್ಮೋಕಿ ಗ್ರಿಲ್ಲ್ಡ್ ವಿಂಗ್ಸ್ ನ ಈ ಪ್ಯಾಕೇಜಿಂಗ್ ಕೆಂಪು ಮತ್ತು ಬಿಳಿಯ ಬಣ್ಣ ಹೊಂದಿದ್ದು, ಬೇರ್ಪಡಿಸಬಲ್ಲ ಬಿಡಿ ಭಾಗಗಳನ್ನು ಹೊಂದಿದ್ದು ಅದನ್ನು ಸುಲಭವಾಗಿ ಜೋಡಿಸಬಹುದಾಗಿದೆ.

ಆನ್ಲೈನ್ ನಲ್ಲಿ ಲಭ್ಯವಿರುವ ಯೂಸರ್ ಮ್ಯಾನುವಲ್ ಬಳಸಿ ಹಾರುವ ಡ್ರೋನ್ ಪ್ಯಾಕೇಜ್ ಅನ್ನು ಜೋಡಿಸಬಹುದಾಗಿದೆ. ಈ ಆನ್ಲೈನ್ ಯೂಸರ್ ಮ್ಯಾನುವಲ್ ಬಳಸಿ ಡ್ರೋನ್ ಅನ್ನು ವೇಗವಾಗಿ, ಸುಲಭವಾಗಿ ಮತ್ತು ಯಾವುದೇ ಜಂಜಾಟವಿಲ್ಲದೆ ಜೋಡಿಸಬಹುದಾಗಿದೆ.

ಎಲ್ಲಾ ಭಾಗಗಳನ್ನು ಜೋಡಿಸಿದ ನಂತರ ಬಳಕೆದಾರರು ಅದರ ಪವರ್ ಅನ್ನು ಸ್ವಿಚ್ ಆನ್ ಮಾಡಿ ಬ್ಲೂಟೂತ್ ಮೂಲಕ ತಮ್ಮ ಸ್ಮಾರ್ಟ್ಫನ್ ಗೆ ಕನೆಕ್ಟ್ ಮಾಡಬೇಕು. ಈ ಹತ್ತು ನಗರಗಳ 12 ಆಯ್ದ ಸ್ಟೋರ್ಗಳಲ್ಲಿ ಜನವರಿ 25 ಮತ್ತು 26ರಂದು ಸ್ಮೋಕಿ ಗ್ರಿಲ್ಲ್ಡ್ ವಿಂಗ್ಸ್ ಆರ್ಡರ್ ಮಾಡುವ ಆಯ್ದ ಅದೃಷ್ಟಶಾಲಿ ಗ್ರಾಹಕರು ಈ ಕೆಂಟಕಿ ಫ್ಲೈಯಿಂಗ್ ಆಬ್ಜೆಕ್ಟ್ (KFO) ಗೆಲ್ಲಬಹುದಾಗಿದೆ.

ಈ ಲಾಂಚ್ ಕುರಿತು ಮಾತನಾಡಿದ KFC ಇಂಡಿಯಾದ CMO ಆದ ಲುಯಿಸ್ ರುಯಿಜ್ ರಿಬಾಟ್ ಅವರು ಈ ಲಾಂಚ್ ಕುರಿತು ಮಾತನಾಡುತ್ತಾ "ಆಹಾರ ಮತ್ತು ತಂತ್ರಜ್ಞಾನ, ಈ ಎರಡು ವಿಷಯಗಳು ನಮ್ಮನ್ನು ಮತ್ತು ಗ್ರಾಹಕರನ್ನು ಸದಾ ಉತ್ಸಾಹಿಗಳನ್ನಾಗಿರಿಸುತ್ತದೆ. ಸ್ವಾದಿಷ್ಟವಾದ ಸ್ಮೋಕಿ ಗ್ರಿಲ್ಲ್ಡ್ ವಿಂಗ್ಸ್ ಅನ್ನು ಲಾಂಚ್ ಮಾಡುವ ಸಂದರ್ಭದಲ್ಲಿ ಸೀಮಿತ ಆವೃತ್ತಿಯ KFO ಬಾಕ್ಸ್ ಅನ್ನು ಲಾಂಚ್ ಮಾಡುತ್ತಿದ್ದೇವೆ. ಇದೊಂದು ಅತ್ಯಂತ ಆಕರ್ಷಕ ಪ್ಯಾಕೇಜಿಂಗ್ ಆಗಿದ್ದು, ಹಾರುವ ಡ್ರೋನ್ ಆಗಿ ಪರಿವರ್ತೆನಗೊಳ್ಳುತ್ತದೆ." ಎಂದು ಹೇಳಿದ್ದಾರೆ.

HP Sprocket First Impressions (Kannada)
KFO ಪಡೆಯಲು ಗ್ರಾಹಕರು ಹತ್ತಿರದ KFC ರೆಸ್ಟೋರೆಂಟ್ಗೆ ಜನವರಿ 25 ಮತ್ತು 26ರಂದು ಭೇಟಿ ನೀಡಿ ಸ್ಮೋಕಿ ಗ್ರಿಲ್ಲ್ಡ್ ವಿಂಗ್ಸ್ ಆರ್ಡರ್ ಮಾಡಬೇಕು. ಈ ಗ್ರಾಹಕರ ಪೈಕಿ 24 ಅದೃಷ್ಟಶಾಲಿ ಗ್ರಾಹಕರು KFO ಗೆಲ್ಲಬಹುದಾಗಿದೆ ಎಂದು KFC ತಿಳಿಸಿದೆ.

KFO ಲಭ್ಯವಿರುವ KFC ಸ್ಟೋರ್ ಗಳ ವಿವರ ಈ ಕೆಳಗಿನಂತಿದೆ

ದಿನಾಂಕ ಸಮಯ ಔಟ್ಲೆಟ್

 • 25th ಜನವರಿ, ಗುರುವಾರ 1:00-4:00 PM ದೆಹಲಿ 6&8, ಸಿಂದಿಯಾ ಹೌಸ್, ಔಟರ್ ಸರ್ಕಲ್, ಕನೌಟ್ ಪ್ಲೇಸ್, ಹೊಸ ದೆಹಲಿ, ದೆಹಲಿ 110001
 • 25th ಜನವರಿ, ಗುರುವಾರ 1:00-4:00 PM ಮುಂಬೈ ಕೆನಿಲ್ವರ್ತ್ ಮಾಲ್, ಲಿಂಕಿಂಗ್ ರೋಡ್, ಬಾಂದ್ರಾ ಪಶ್ಚಿಮ, ಮುಂಬೈ, ಮಹರಾಷ್ಟ್ರ 400050
 • 25th ಜನವರಿ, ಗುರುವಾರ 4:00-7:00 PM ಕೋಲ್ಕೋತಾ 20K, ಆಪೋಸಿಟ್ ಪೀಟ್ ಕ್ಯಾಟ್ ರೆಸ್ಟೋರೆಂಟ್, ಪಾರ್ಕ್ ಸ್ಟ್ರೀಟ್, ಕೋಲ್ಕೋತಾ, ಪಶ್ಚಿಮ ಬಂಗಾಲ 700017
 • 25th ಜನವರಿ, ಗುರುವಾರ 4:00-7:00 PM ಪುಣೆ ಅಮನೋರಾ ಟೌನ್ ಸೆಂಟರ್, ಅಮನೋರಾ ಪಾರ್ಕ್ ಟೌನ್, ಹಡಪ್ಸರ್, ಪುಣೆ, ಮಹರಾಷ್ಟ್ರ 411028
 • 25th ಜನವರಿ, ಗುರುವಾರ 4:00-7:00 PM ಚೆನ್ನೈ 183/188, ಅರ್ಕಾಟ್ ರೋಡ್, ಪಳನಿಯಪ್ಪಾ ನಗರ್, ವಡಪಳನಿ, ಚೆನ್ನೈ, ತಮಿಳು ನಾಡು 600026
 • 25th ಜನವರಿ, ಗುರುವಾರ 7:00-10:00 PM ಹೈದರಾಬಾದ್ ಗ್ರೌಂಡ್ ಫ್ಲೋರ್, ಸರ್ವೆ ನಂ 124, ವಿಲೇಜ್, ವಿನಾಯಕನಗರ್, ಸೆರ್ಲಿಂಗಂಪಲ್ಲಿ ಮಂಡಲ್,ಗಾಚಿಬೌಲಿ, ಹೈದರಾಬಾದ್ ತೆಲಂಗಾಣಾ 500032
 • 26th ಜನವರಿ, ಶುಕ್ರವಾರ 1:00-4:00 PM ಗುರ್ಗಾಂವ್ 3rd ಫ್ಲೋರ್, ಆಂಬಿಯೆನ್ಸ್ ಮಾಲ್, DLF ಫೇಸ್ 3, ಗುರ್ಗಾಂವ್ 122010
 • 26th ಜನವರಿ, ಶುಕ್ರವಾರ 1:00-4:00 PM ಚಂಡೀಘರ್ 178-178ಎ, ಎಲಾಂಟೆ ಮಾಲ್, ಇಂಡಸ್ಟ್ರಿಯಲ್ & ಬಿಸ್ನೆಸ್ ಪಾರ್ಕ್, ಫೇಸ್ 1 ಚಂಡೀಘರ್ 160002
 • 26th ಜನವರಿ, ಶುಕ್ರವಾರ 7:00-10:00 PM ಕೊಚ್ಚಿ ಲುಲು ಇಂಟರ್ನ್ಯಾಶ್ನಲ್ ಶಾಪಿಂಗ್ ಮಾಲ್,50/2392, NH47, ಎಡಪಲ್ಲಿ,ಕೊಚ್ಚಿ, ಕೇರಳ 682024
 • 26th ಜನವರಿ, ಶುಕ್ರವಾರ 1:00-4:00 PM ಬೆಂಗಳೂರು KFC ರೆಸ್ಟೋರೆಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸೆಂಟ್ರಲ್ ಮಾಲ್, ಸರ್ವೇ ನಂ 5/78/7,78/8, ಬೆಳಂದೂರು ವಿಲೇಜ್, ವರ್ತೂರು ಹೋಬ್ಳಿ, ಬೆಂಗಳೂರು 560103
 • 26th ಜನವರಿ, ಶುಕ್ರವಾರ 4:00-7:00 PM ಬೆಂಗಳೂರು GS-11,GS-12,GS-13, ಸಿಗ್ನೇಚರ್ ಟವರ್ #6, ಗೋಪಾಲನ್ ಸಿಗ್ನೇಚರ್ ಮಾಲ್, ನಾಗಾವರ ಪಾಳ್ಯ, ಸಿವಿ ರಾಮನ್ ನಗರ್, ಓಲ್ಡ್ ಮದ್ರಾಸ್ ರೋಡ್, ಬೆಂಗಳೂರು 560093
 • 26th ಜನವರಿ, ಶುಕ್ರವಾರ 7:00-10:00 PM ಬೆಂಗಳೂರು KFC ರೆಸ್ಟೋರೆಂಟ್, ಹೈಪರ್ಸಿಟಿ, ಸರ್ವೇ ನಂ. 6/2 & 6/3, ಕುಂದಲಹಳ್ಳಿ ಗೇಟ್ ಹತ್ತಿರ, ಅರ್ತೂರು ಹೋಬ್ಳಿ, ಹೈಪರ್ಸಿಟಿ ಬ್ರೂಕ್ಫೀಲ್ಡ್, ಬೆಂಗಳೂರು 560037
English summary
KFC Smoky Grilled wings will be available at select 10 cities in India and is served in box that doubles as a flying drone which can be powered using a smartphone.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot