ನೀವು ಹ್ಯಾಕರ್ಸ್ ಆಗ್ಬೇಕಾ... ಆಗಿದ್ರೇ ಈ ಚಿತ್ರಗಳನ್ನು ನೋಡಿ..!

By Avinash
|

ಹ್ಯಾಕಿಂಗ್ ಆಧುನಿಕ ಜಗತ್ತನ್ನು ಭಯ ಪಡಿಸುತ್ತಿರುವ ಒಂದು ಪದ. ಡಿಜಿಟಲ್ ಯುಗದಲ್ಲಿ ಯಾವುದು ಸೇಫ್ ಅಲ್ಲ ಎಂದು ಪದೇ ಪದೇ ಸಾಬೀತು ಪಡಿಸುತ್ತಿರುವುದು ಹ್ಯಾಕಿಂಗ್. ಪ್ರತಿ ದಿನ ವಿಶ್ವದ ಹಲವೆಡೇ ಬ್ಯಾಂಕ್ ನಿಂದ ಗೊತ್ತಿಲ್ಲದೇ ಹಣ ಡ್ರಾ ಆಗುತ್ತದೆ. ನಾವು ಮಾತಾಡೋದನ್ನ ಯಾರೋ ಕದ್ದು ಕೇಳ್ತಿರ್ತಾರೆ.

ಪ್ರತಿಭೆ ನಿಮ್ಮದಿದ್ದರೇ...ವೇದಿಕೆ ಇಲ್ಲಿದೆ...ನೀವು ಸೆಲೆಬ್ರಿಟಿಯಾಗಬೇಕಂದರೆ ಈ ಆಪ್ಸ್ ಬಳಸಿ..!ಪ್ರತಿಭೆ ನಿಮ್ಮದಿದ್ದರೇ...ವೇದಿಕೆ ಇಲ್ಲಿದೆ...ನೀವು ಸೆಲೆಬ್ರಿಟಿಯಾಗಬೇಕಂದರೆ ಈ ಆಪ್ಸ್ ಬಳಸಿ..!

ನಮ್ಮ ಸಂಪೂರ್ಣ ಮಾಹಿತಿಯನ್ನು ಸರ್ವರ್ ಗಳಿಂದ ಕದಿಯುವ ಹ್ಯಾಕರ್ ಗಳು ತಮ್ಮ ಕೈಗೊಂಬೆಯಂತೆ ನಮ್ಮನ್ನು ಆಡಿಸಲು ಪ್ರಾರಂಭಿಸುತ್ತಾರೆ. ಹ್ಯಾಕಿಂಗ್ ಬಗ್ಗೆ ಬೆಳಕು ಚೆಲ್ಲಲು ಅನೇಕ ಸಿನಿಮಗಳು ನಮ್ಮ ಮುಂದೆ ಬಂದಿವೆ. ಹ್ಯಾಕಿಂಗ್ ಬಗ್ಗೆ ತಿಳಿಯಬೇಕು ಎನಿಸಿದರೆ ಈ ಕೆಳಗೆ ನೀಡಿರುವ ಸಿನಿಮಾಗಳನ್ನು ಒಂದು ಬಾರಿ ನೋಡಿ...ಹ್ಯಾಕಿಂಗ್ ಎಂಬುದು ಏನು? ಎಷ್ಟು ಭಯಾನಕ ಎಂಬುದು ಗೊತ್ತಾಗುತ್ತದೆ.

ನೀವು ಹ್ಯಾಕರ್ಸ್ ಆಗ್ಬೇಕಾ... ಆಗಿದ್ರೇ ಈ ಚಿತ್ರಗಳನ್ನು ನೋಡಿ..!

1. ಹ್ಯಾಕರ್ಸ್ Hackers (1995)

1. ಹ್ಯಾಕರ್ಸ್ Hackers (1995)

ಒನ್ ಲೈನ್ ಕಥೆ: 5 ಆಯಿಲ್ ಟ್ಯಾಂಕರ್ ಕಡಿಯುವುದಕ್ಕಾಗಿ ವೈರಸ್ ಅಭಿವೃದ್ಧಿಪಡಿಸಿದ ಹ್ಯಾಕರ್ಸ್ ಬಗ್ಗೆ ಈ ಚಿತ್ರ ಹೇಳುತ್ತದೆ.
ನಿರ್ದೇಶನ: ಇಯಾನ್ ಸಾಫ್ಟ್ಲೀ
ತಾರಾಗಣ: ಜಾನಿ ಲೀ ಮಿಲ್ಲರ್, ಆಂಜಲಿನಾ ಜಾಲಿ, ಜೆಸ್ಸೆ ಬ್ರಾಡ್ ಫೋರ್ಡ್, ಮ್ಯಾಥ್ಯು ಲಿಲ್ಲಾರ್ಡ್

2. ದಿ ಲಾನ್ ಮೂವರ್ ಮ್ಯಾನ್ The Lawnmower Man (1992)

2. ದಿ ಲಾನ್ ಮೂವರ್ ಮ್ಯಾನ್ The Lawnmower Man (1992)

ಒನ್ ಲೈನ್ ಕಥೆ: ಒಬ್ಬ ಸಾಮಾನ್ಯ ಮನುಷ್ಯ ಕಂಪ್ಯೂಟರ್ ಸೈನ್ಸ್ ಅಪ್ಲಿಕೇಷನ್ ನಿಂದ ಜಿನಿಯಸ್ ಆಗೋದು ಕಥೆ.
ನಿರ್ದೇಶನ: ಬ್ರೆಟ್ ಲಿಯೋನಾರ್ಡ್
ತಾರಾಗಣ: ಜೆಫ್ಫ ಫಾಹೇ, ಪಿಯರ್ಸ್ ಬ್ರಾಸ್ನಾನ್, ಜೆನ್ನಿ ರೈಟ್, ಮಾರ್ಕ್ ಬ್ರಿಂಗಲ್ಸನ್

3. ಲೈವ್ ಫ್ರೀ ಆರ್ ಡೈ ಹಾರ್ಡ್ Live Free or Die Hard (2007)

3. ಲೈವ್ ಫ್ರೀ ಆರ್ ಡೈ ಹಾರ್ಡ್ Live Free or Die Hard (2007)

ಒನ್ ಲೈನ್ ಕಥೆ: ಜಾನ್ ಮೆಕ್ಲೇನ್ ಮತ್ತು ಒಬ್ಬ ಯುವ ಹ್ಯಾಕರ್ ಗಳಿಬ್ಬರು ಸೇರಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಸೈಬರ್ ಟೆರರಿಸ್ಟ್ ಆಗಿದ್ದ ಥಾಮಸ್ ಗ್ಯಾಬ್ರಿಯಲ್ ಅನ್ನು ಹಿಡಿಯುವುದೇ ಕಥೆ.
ನಿರ್ದೇಶನ: ಲೆನ್ ವೈಸ್ ಮ್ಯಾನ್
ತಾರಾಗಣ: ಬ್ರುಷ್ ವಿಲ್ಲಿಸ್, ಜಸ್ಟ್ ಇನ್ ಲಾಂಗ್, ಟಿಮೋಥಿ ಒಲಿಫಾಂಟ್, ಮ್ಯಾಗ್ಗಿ ಕ್ಯೂ

4. ಇಗಲ್ ಐ Eagle Eye (2008)

4. ಇಗಲ್ ಐ Eagle Eye (2008)

ಒನ್ ಲೈನ್ ಕಥೆ: ಜೆರ್ರಿ ಮತ್ತು ರಾಚೆಲ್ ಎಂಬ ವ್ಯಕ್ತಿಗಳು ಒಬ್ಬ ಮಹಿಳೆಗೆ, ಅವಳ ಕುಟುಂಬಕ್ಕೆ ತಂತ್ರಜ್ಞಾನ ಮೂಲಕ ತೊಂದರೆ ಕೊಡುತ್ತಾ, ಅವಳ ದೈನಂದಿನ ಪ್ರತಿಯೊಂದು ಚಟುವಟಿಕೆಗಳನ್ನು ನಿಯಂತ್ರಿಸುವುದು ಕಥೆ.
ನಿರ್ದೇಶನ: ಡಿ.ಜೆ.ಕಾರ್ಸೋ
ತಾರಾಗಣ: ಶೀಯಾ ಲಾಬ್ಯೂಪ್, ಮೀಚೆಲ್ ಮೋನಾಗಾನ್, ರೋಸರಿಯೋ ಡಾಸನ್, ಮಿಚೆಲ್ ಚಿಕ್ಲಿಸ್

5. ಸ್ವಾರ್ಡ್ ಫಿಶ್ Swordfish (2001)

5. ಸ್ವಾರ್ಡ್ ಫಿಶ್ Swordfish (2001)

ಒನ್ ಲೈನ್ ಕಥೆ: ಗಾಬ್ರಿಯಲ್ ಶೇರ್ ನೇತೃತ್ವದಲ್ಲಿ ಭಯೋತ್ಪಾದಕ ವಿರೋಧಿ ಸಂಘಟನೆ ಬ್ಲಾಕ್ ಶೆಲ್ ಅಂತಾರಾಷ್ಟ್ರೀಯ ಭಯೋತ್ಪಾದಕ ಕೃತ್ಯಗಳನ್ನು ನಿಯಂತ್ರಿಸಲು ಹಣಕಾಸು ಸಹಾಯವನ್ನು ಮಾಡುತ್ತಿತ್ತು. ಆದರೆ, ಈ ಸಂಘಟನೆ ಮುಚ್ಚಿದಾಗ ಗಾಬ್ರಿಯಲ್ ಸ್ಟೇನ್ಲಿ ಜಾಬ್ಸ್ ಎಂಬ ಹ್ಯಾಕರ್ ಮೂಲಕ ತನ್ನ ಕೆಲಸ ನಿರ್ವಹಿಸುತ್ತಾನೆ ಎಂಬುದೆ ಸಿನಿಮಾ.
ನಿರ್ದೇಶನ: ಡಾಮಿನಿಕ್ ಸೇನಾ
ತಾರಾಗಣ: ಜೋನ್ ಟ್ರಾವ್ಲೋಟಾ, ಹ್ಯುಗ್ ಜಾಕ್ ಮ್ಯಾನ, ಹೆಲ್ಲೇ ಬೆರ್ರಿ, ಡಾನ್ ಚಿಡಲ್

6. ಆಂಟಿಟ್ರಸ್ಟ್ Antitrust (2001)

6. ಆಂಟಿಟ್ರಸ್ಟ್ Antitrust (2001)

ಒನ್ ಲೈನ್ ಕಥೆ: ಕಂಪ್ಯೂಟರ್ ಪ್ರೋಗ್ರಾಮರ್ ತಾನು ಕೆಲಸ ಮಾಡುವ ಜಾಗದಲ್ಲಿ ತನ್ನ ಬಾಸ್ ನಡೆಸುವ ಗುಪ್ತ ಹಾಗೂ ಅಪನಂಬಿಕೆ ಕಾರ್ಯಗಳನ್ನು ಕಂಡು ಹಿಡಿಯುವ ಕಥೆ.
ನಿರ್ದೇಶನ: ಪೀಟರ್ ಹೌವಿಟ್
ತಾರಾಗಣ: ರೀನ್ ಪಿಲ್ಲಿಪ್ಪೇ, ಟಿಮ್ ರಾಬಿನ್ಸ್, ರಚೆಲ್ ಲೈ ಕುಕ್, ಕ್ಲಾರಿ ಫೋರ್ಲಾನಿ

7. ಟೇಕ್ ಡೌನ್ Takedown (2000)

7. ಟೇಕ್ ಡೌನ್ Takedown (2000)

ಒನ್ ಲೈನ್ ಕಥೆ: ಪ್ರಖ್ಯಾತ ಕಂಪ್ಯೂಟರ್ ಹ್ಯಾಕರ್ ಕೇವಿನ್ ಮಿಟ್ ನಿಕ್ ಜೀವನ ಆಧರಿಸಿದ ಸಿನಿಮಾ.
ನಿರ್ದೇಶನ:ಜೋಯ್ ಚಾಪೆಲ್ಲೆ
ತಾರಾಗಣ: ಸ್ಕೀಟ್ ಅಲರಿಚ್, ರಸ್ಸೇಲ್ ವಾಂಗ್, ಎಂಜೆಲಾ ಫೀಥರ್ ಸ್ಟೋನ್, ಡೋನಾಲ್ ಲಾಗ್

8. ಹ್ಯಾಕರ್ಸ್ ಆರ್ ಪೀಪಲ್ ಟೂ Hackers Are People Too (2008 Video)

8. ಹ್ಯಾಕರ್ಸ್ ಆರ್ ಪೀಪಲ್ ಟೂ Hackers Are People Too (2008 Video)

ಹ್ಯಾಕರ್ಸ್ ನಿಮ್ಮೊಂದಿಗೆ ಇದ್ದಾರೆ, ನಿಮ್ಮ ಕುಟುಂಬದವರು, ನಿಮ್ಮ ಸ್ನೇಹಿತರು ಮತ್ತು ಸುತ್ತಮುತ್ತಲಿನ ಜನರಲ್ಲೂ ಹ್ಯಾಕರ್ಸ್ ಇರುತ್ತಾರೆ ಎಂದು ಈ ಕಿರುಚಿತ್ರ ವಿಶಿಷ್ಟವಾಗಿ ತೋರಿಸಿದೆ.
ನಿರ್ದೇಶನ: ಆಷ್ಲೇ ಸ್ಚಾವರ್ತಾ
ತಾರಾಗಣ: ಕ್ರಿಸ್ ಡಾರ್ಬೋ, ಸ್ಕಾಟ್ ಡೇವಿಡ್ ಸನ್, ಫ್ಲೇ, ಗ್ರೇಏ ಫ್ರಿಕ್ವೆನ್ಸಿ

9. ಹ್ಯಾಕರ್ಸ್ ವಾಂಟೆಡ್ Hackers Wanted (2009)

9. ಹ್ಯಾಕರ್ಸ್ ವಾಂಟೆಡ್ Hackers Wanted (2009)

ಪ್ರಖ್ಯಾತ ಹ್ಯಾಕರ್ ಆಡ್ರೇನ್ ಲಾಮೋ ಅವರ ಹ್ಯಾಕಿಂಗ್ ಸಾಹಸಗಳನ್ನು ಸಾಕ್ಷ್ಯಚಿತ್ರ ನಿಮ್ಮ ಮುಂದಿಡುತ್ತದೆ.
ನಿರ್ದೇಶನ: ಸ್ಯಾಮ್ ಬೊಜ್ಜೋ
ತಾರಾಗಣ: ಜಾನ್ ಅರ್ಕಿಲ್ಲಾ, ಕ್ರೇಗ್ ಕಲೇಫ್, ಜಾನ್ ಡ್ರಾಪರ್, ಫ್ರಾಂಕ್ ಹಾರೆಲ್

10. ಸಿಕ್ರೇಟ್ ಹಿಸ್ಟರಿ ಆಫ್ ಹ್ಯಾಕಿಂಗ್ Secret History of Hacking (2001)

10. ಸಿಕ್ರೇಟ್ ಹಿಸ್ಟರಿ ಆಫ್ ಹ್ಯಾಕಿಂಗ್ Secret History of Hacking (2001)

ಒನ್ ಲೈನ್ ಕಥೆ: ಕ್ಯಾಪ್ಟನ್ ಕ್ರಂಚ್, ಸ್ಟೀವ್ ವೋಜ್ನಾಯಿಕ್ ಮತ್ತು ಕೇವಿನ ಮಿಟನಿಕ್ ಕೇಂದ್ರಿತವಾಗಿ ಹ್ಯಾಕೀಂಗ್ ಇತಿಹಾಸವನ್ನು ಹೇಳುವ ಸಾಕ್ಷ್ಯಚಿತ್ರ ಇದಾಗಿದೆ.
ನಿರ್ದೇಶನ: ರಾಲ್ಪ್ ಲೀ
ತಾರಾಗಣ: ಜಾನ್ ಡ್ರ್ಯಾಪರ್, ಕೇವಿನ ಮಿಟನಿಕ್, ಡೆನ್ನಿ ಟೆರೆಸಿ, ಸ್ಟೀವ್ ವೋಜ್ನಾಯಿಕ್

11. ಹ್ಯಾಕರ್ಸ್ Hackers: Outlaws and Angels (2002 TV Movie)

11. ಹ್ಯಾಕರ್ಸ್ Hackers: Outlaws and Angels (2002 TV Movie)

ಒನ್ ಲೈನ್ ಕಥೆ: ಡಿಸ್ಕವರಿ ಚಾನೆಲ್ ನಿರ್ಮಿಸಿರುವ ಸಾಕ್ಷ್ಯಚಿತ್ರ ಇದಾಗಿದ್ದು, ಹ್ಯಾಕಿಂಗ್ ಕುರಿತು ಸಂಪೂರ್ಣ ಮಾಹಿತಯನ್ನು ನೀಡಲಾಗಿದೆ.
ನಿರ್ದೇಶನ: ರಾಲ್ಪ್ ಲೀ
ತಾರಾಗಣ: ಇಯಾನ್ ಮರ್ಪಿ, ಸ್ಟೀವ್ ವೋಜ್ನಾಯಿಕ್

Best Mobiles in India

English summary
Top Hacker & Technology Based Movies. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X