ಆಪ್ ಟ್ಯಾಕ್ಸಿ ಉಬರ್ ನಿಂದ ಹಾರುವ ಕಾರ್..!!!

Written By:

ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆಪ್ ಆಧಾರಿತ ಟ್ಯಾಕ್ಸಿ ಸೇವೆಯನ್ನು ನೀಡುವುದರಲ್ಲಿ ಮುಂಚುಣಿಯಲ್ಲಿರುವ ಉಬರ್ ಸಂಸ್ಥೆ ಇನ್ನು ಮೂರು ವರ್ಷಗಳಲ್ಲಿ ಹಾರುವ ಕಾರ್‌ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಅದುವೇ ಭಾರತದಲ್ಲೇ ಎನ್ನುವ ಮಾತು ಕೇಳಿಬಂದಿದೆ.

ಆಪ್ ಟ್ಯಾಕ್ಸಿ ಉಬರ್ ನಿಂದ ಹಾರುವ ಕಾರ್..!!!

ಓದಿರಿ: ಭಾರತದಲ್ಲಿ ಇಂಟರ್‌ನೆಟ್ ಬಳಕೆದಾರರಿಗೆ ಇಂಗ್ಲೀಷ್ ಬೇಕೆ..? ಗೂಗಲ್ ಹೇಳಿದ್ದು ಕೇಳಿದ್ರೆ ಶಾಕ್ ಆಗ್ತೀರಾ..?

ಬಾಂಡ್ ಸಿನಿಮಾಗಳಲ್ಲಿ ನೋಡಿರುವಂತೆ ನೆಲದ ಮೇಲೆ ಓಡುವ ಕಾರು, ಹಾಗೆ ಆಗಸದಲ್ಲೂ ಹಾರಾಡಲಿದೆ. ರಸ್ತೆಯಲ್ಲಿ ಟ್ರಾಫಿಕ್ ಇದ್ದ ಸಂದರ್ಭದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಲು ಈ ಕಾರುಗಳು ಸಹಾಯಕವಾಗಲಿದೆ. ಈಗಾಗಲೇ ವಿನ್ಯಾಸ ನಿರ್ಮಾಣವಾಗಿದ್ದು, ಶೀಘ್ರವೇ ತಯಾರಿ ಆರಂಭವಾಗಬೇಕಿದೆ.

ಹಾರುವ ಕಾರುಗಳಿಗೆ 2020ರಲ್ಲಿ ಮಾನ್ಯತೆ ದೊರೆಯಲಿದ್ದು, ಅದಾದ ಕೆಲವೇ ದಿನಗಳಲ್ಲಿ ಇದು ಮಾರುಕಟ್ಟೆಗೆ ಬರಲಿದ್ದು, ದುಬಾರಿಯಾಗಿರಲಿದೆ. ಸಾಮಾನ್ಯ ಜನರು ಈ ಕಾರನ್ನು ಕೊಳ್ಳಲು ಸಾಧ್ಯವಿಲ್ಲದ ಕಾರಣ ಉಬರ್ ಹಾರುವ ಕಾರಿನ ಟ್ಯಾಕ್ಸಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.

ಆಪ್ ಟ್ಯಾಕ್ಸಿ ಉಬರ್ ನಿಂದ ಹಾರುವ ಕಾರ್..!!!

ಓದಿರಿ: ಇನ್ನು ಜಿಯೋ ನೆಟ್‌ವರ್ಕ್ ಸ್ಪೀಡ್ ಇಲ್ಲ ಎನ್ನುವಂತಿಲ್ಲ: ಕಾರಣ ಇಲ್ಲಿದೇ

ಈಗಾಗಲೇ ಹಾರುವ ಕಾರುಗಳನ್ನು ತಯಾರಿಸಲು ಹಲವಾರು ಕಂಪನಿಗಳು ಮುಂದೆ ಬಂದಿದ್ದು, ಶೀಘ್ರವೇ ಅವುಗಳ ತಯಾರಿಯನ್ನು ಆರಂಭಿಸಿ, ಮಾನ್ಯತೆಯನ್ನು ಪಡೆದುಕೊಳ್ಳುವ ಸಾಧ್ಯತೆಯು ಹೆಚ್ಚಾಗಿದೆ. ಸೆಲ್ಪ್ ಡ್ರೈವ್ ಕಾರುಗಳಿಗಿಂತಲೂ ಮುಂಚೆಯೇ ಹಾರುವ ಕಾರುಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ.

ಈಗಾಗಲೇ ದೊರೆತಿರುವ ಮಾಹಿತಿ ಪ್ರಕಾರ ಹಾರುವ ಕಾರಿಗ ರೂ. 12 ಕೋಟಿಯಾಗಲಿದ್ದು, ಸಾಮಾನ್ಯ ಜನರ ಜೇಬಿಗೆ ಇದು ಹೊರೆಯಾಗಲಿದೆ. ಹಾಗಾಗಿ ಇದರ ಲಾಭ ಪಡೆಯುವ ಉಬರ್ ಕಾರುಗಳನ್ನು ಬಾಡಿಗೆಗೆ ನೀಡುವ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ.

Read more about:
English summary
Uber plans to take you flying into the future. The American company has ventured into flying-cars project by promising to exhibit their first functional prototype by the year 2020. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot