'ಯುಎಫ್‌ಓ' ಭೂಮಿಗೆ ಪ್ರವೇಶಿಸುತ್ತಿದ್ದ ವೀಡಿಯೊವನ್ನು ನಾಸಾ ಕಡಿತಗೊಳಿಸಿದ್ದೇಕೆ?

Written By:

ಏಲಿಯನ್‌ಗಳ ಬಗ್ಗೆ ಪಿತೂರಿ ಸಿದ್ಧಾಂತಿಗಳು ವಾದಿಸುವ ಕೆಲವೊಂದು ಆಧಾರ ವಿಷಯಗಳು ನಂಬದೇ ಇರಲಾರದಂತಹ ಸಂಕಷ್ಟಕ್ಕೆ ಒಡ್ಡುತ್ತದೆ. ಆದ್ದರಿಂದ ಜನರು ಸಹ ಪಿತೂರಿ ಸಿದ್ಧಾಂತಿಗಳು ಹೇಳುವ ಮಾಹಿತಿಯನ್ನು ಇಷ್ಟಪಡುತ್ತಾರೆ.

ಪಿತೂರಿ ಸಿದ್ಧಾಂತಿಗಳ ವಾದಗಳನ್ನು ಎಲ್ಲರೂ ಸರಿ ಎನ್ನುವ ಕಾಲ ಹತ್ತಿರಕ್ಕೆ ಬಂದಿದೆ. ಅಂದಹಾಗೆ ಇತ್ತೀಚೆಗೆ ಯುಎಫ್‌ಓ(unidentified flying object) ಭೂಮಿಗೆ ಪ್ರವೇಶಿಸುವ ವೀಡಿಯೋ ದೊರೆತಿದ್ದು, ಅದನ್ನು ನಾಸಾ ಸಂಪೂರ್ಣ ವೀಡಿಯೊ ಮಾಡದೆ ಅರ್ಧಕ್ಕೆ ಕಡಿತಗೊಳಿಸಿದೆ. ನಾಸಾ 'ಯುಎಫ್‌ಓ' ಭೂಮಿಯ ವಾತಾವರಣಕ್ಕೆ ಪ್ರವೇಶಿಸುವುದನ್ನು ವೀಡಿಯೊ ಮಾಡದೇ ಕಡಿತಗೊಳಿಸಿದ್ದಾದರೂ ಏಕೆ ಎಂಬ ಸಂಶಯ ಹುಟ್ಟಿಕೊಂಡಿದೆ. ಈ ಬಗ್ಗೆ ದೊರೆತಿರುವ ವೀಡಿಯೊ ಮತ್ತು ಹೆಚ್ಚಿನ ಮಾಹಿತಿಗಾಗಿ ಲೇಖನದ ಸ್ಲೈಡರ್‌ ಓದಿರಿ.

5 ವರ್ಷಗಳ ನಂತರ ಗುರು ಗ್ರಹ ತಲುಪಿದ ನಾಸಾದ 'ಜುನೋ'

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ

ಇತ್ತೀಚೆಗೆ ನಾಸಾದ ಲೈವ್‌ ವೀಡಿಯೊ ಕ್ಯಾಪ್ಚರ್ ಮಾಡುವ ಕ್ಯಾಮೆರಾ ಕಣ್ಣಿಗೆ ಒಂದು ಸಣ್ಣ ವೈಟ್‌ ಡಾಟ್‌ ಕಾಣಿಸಿಕೊಂಡಿತ್ತು. ಅಲ್ಲದೇ ಅದು ಭೂಮಿಯ ವಾತಾವರಣಕ್ಕೆ ಪ್ರವೇಶ ಮಾಡುತ್ತಿತ್ತು. ಕ್ಯಾಮೆರಾ ಕಣ್ಣಿಗೆ ಹತ್ತಿರವಾಗುತ್ತಿದ್ದಂತೆ ನಾಸಾ ಲೈವ್‌ ಸ್ಟ್ರೀಮ್‌ ಅನ್ನು ಕಡಿತಗೊಳಿಸಿತ್ತು. ನಾಸಾ ಲೈವ್‌ ಸ್ಟ್ರೀಮ್‌ ಕಡಿತಗೊಳಿಸಿದ್ದು ಏಕೆ? ಮುಂದೆ ಓದಿರಿ.

ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಏನು?

ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಏನು?

ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ನಿಖರವಾಗಿ ಏನು ಎಂದು ತಿಳಿದಿಲ್ಲ. ಆದರೆ ವೀಡಿಯೊ ಮಾತ್ರ ಆನ್‌ಲೈನ್‌ನಲ್ಲಿ ವೈರಲ್‌ ಆಗಿದೆ. ಆದರೆ ನಾಸಾ ಯುಎಫ್‌ಓ ಎಂದಿಗೂ ನೋಡಿಲ್ಲ ಅದು ಹತ್ತಿರದಿಂದ ಏನು ಎಂದು ತಿಳಿದಿಲ್ಲ ಎಂದಿದೆ.

 ಲೈವ್‌ ಸ್ಟ್ರೀಮ್‌ ನಿಲ್ಲಿಸಿದ್ದೇಕೆ?

ಲೈವ್‌ ಸ್ಟ್ರೀಮ್‌ ನಿಲ್ಲಿಸಿದ್ದೇಕೆ?

ಲೈವ್‌ ಸ್ಟ್ರೀಮ್ ಕಡಿತಗೊಳಿಸಿದ್ದಕ್ಕೇ ಕಾರಣವೇನು ಎಂದು ಕೇಳಿದಕ್ಕೆ 'ಲೈವ್‌ ಸ್ಟ್ರೀಮ್ ಸಿಗ್ನಲ್‌ ನಿಯಂತ್ರಣ ಕಳೆದುಕೊಂಡಿತು' ಎಂದು ಹೇಳಿದೆ.

ನಾಸಾ ಸ್ಪೋಕ್‌ಪರ್ಸನ್‌

ನಾಸಾ ಸ್ಪೋಕ್‌ಪರ್ಸನ್‌

'ಲೈವ್‌ ಸ್ಟ್ರೀಮ್‌ ಫೀಡ್‌ ಅನ್ನು ಕೈಯಿಂದ ಬದಲಾಯಿಸಿಲ್ಲ. ಇದು ಆಟೋಮೆಟಿಕಲ್ ಸ್ವಿಚ್‌ನಲ್ಲಿರುತ್ತದೆ. ಅಲ್ಲದೇ ನಿಯಂತ್ರಣ ಕೊಠಡಿಯಲ್ಲಿ ಯಾರು ಇರಲಿಲ್ಲ ಎಂದು ನಾಸಾ ಸ್ಪೋಕ್‌ಪರ್ಸನ್‌ ಹೇಳಿದ್ದಾರೆ.

ನೆಟ್‌ವರ್ಕ್‌ ಆಧಾರಿತ ಡಾಟಾ

ನೆಟ್‌ವರ್ಕ್‌ ಆಧಾರಿತ ಡಾಟಾ

ನಾಸಾ ಸ್ಪೇಸ್‌ ಸ್ಟೇಷನ್‌ ಯಾವಾಗಲು ನೆಟ್‌ವರ್ಕ್‌ ಆಧಾರಿತ ಬಾಹ್ಯಾಕಾಶ ಡಾಟಾ ಬಳಸಲಾಗುತ್ತದೆ. ಇದು ವಿಶಾಲ ಪ್ರದೇಶದ ಮಾಹಿತಿ ಸಂಗ್ರಹ ನೀಡುತ್ತದೆ. ಆದರೆ ಕೆಲವೊಮ್ಮೆ ನೆಟ್‌ವರ್ಕ್‌ ಸಿಗ್ನಲ್‌ನಿಂದ ಸಮಸ್ಯೆ ಉಂಟಾಗುತ್ತದೆ ಎಂದು ಹೇಳಲಾಗಿದೆ.

ವೀಡಿಯೊದಲ್ಲಿ ಕಾಣಿಸಿಕೊಂಡ ಸಣ್ಣ ವಸ್ತು

ವೀಡಿಯೊದಲ್ಲಿ ಕಾಣಿಸಿಕೊಂಡ ಸಣ್ಣ ವಸ್ತು

ವೀಡಿಯೊದಲ್ಲಿ ಕಾಣಿಸಿಕೊಂಡ ವಸ್ತು ಒಂದು ಉಪಗ್ರಹ, ಬಾಹ್ಯಾಕಾಶ ಭಗ್ನಾವಶೇಷ, ಒಂದು ಉಲ್ಕೆ ಅಥವಾ ವೀಡಿಯೊ ಕ್ಯಾಮೆರಾ ಲೆನ್ಸ್ ಮೇಲಿನ ಬೆಳಕಿನ ಸರಳ ಪ್ರತಿಬಿಂಬವೂ ಸಹ ಆಗಿರಬಹುದು ಎನ್ನಲಾಗಿದೆ.

rn

ಯುಎಫ್‌ಓ ಕಾಣಿಸಿಕೊಂಡ ವೀಡಿಯೊ

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಯುಎಫ್‌ಓ ಭೂಮಿಯ ವಾತಾವರಣಕ್ಕೆ ಪ್ರವೇಶಿಸುತ್ತಿರುವುದನ್ನು ಜುಲೈ 9 ರಂದು ವೀಡಿಯೊ ಮಾಡಿತ್ತು. ಈ ವೀಡಿಯೊನ ಸಣ್ಣ ಭಾಗವನ್ನು 'ಸ್ಟ್ರೀಪ್‌ಕ್ಯಾಪ್ಲ್' ಎಂಬ ಯೂಟ್ಯೂಬ್‌ ಬಳಕೆದಾರ ಪೋಸ್ಟ್‌ ಮಾಡಿದ್ದರು. ಆ ವೀಡಿಯೊದಲ್ಲಿ ಕಾಣಿಸಿಕೊಂಡ ಯುಎಫ್‌ಓವನ್ನು ನೀವೆ ನೋಡಿ.

 'ಸ್ಟ್ರೀಪ್‌ಕ್ಯಾಪ್ಲ್'

'ಸ್ಟ್ರೀಪ್‌ಕ್ಯಾಪ್ಲ್'

" ವೀಡಿಯೊದಲ್ಲಿ ಕಾಣಿಸಿಕೊಂಡಿದ್ದು ಉಲ್ಕೆ ಸಹ ಆಗಿರಬಹುದು. ಆದರೆ ಕುತೂಹಲ ಹೆಚ್ಚಾಗುತ್ತಿದ್ದಂತೆ ಕ್ಯಾಮೆರಾದಲ್ಲಿ ಕ್ಯಾಪ್ಚರ್‌ ಕಡಿತವಾಗಿದೆ", ಎಂದು 'ಸ್ಟ್ರೀಪ್‌ಕ್ಯಾಪ್ಲ್' ಬರೆದಿದ್ದಾರೆ. ಅಲ್ಲದೇ ಇವರು ಅಪ್‌ಲೋಡ್‌ ಮಾಡಿದ ವೀಡಿಯೊ 207 ದಶಲಕ್ಷ ವೀಕ್ಷಣೆ ಪಡೆದಿದ್ದು, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಟ್ರೆಂಡಿಂಗ್‌ ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Video: NASA cuts feed as UFO enters Earth’s atmosphere. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot