Subscribe to Gizbot

3G/4G ವೋಡಾಫೋನ್ ಸೂಪರ್‌ನೈಟ್ ಆಫರ್ ಯೂಸ್‌ ಮಾಡೋಕು ತಲೆಬೇಕು!!

Written By:

ಈ ಟೆಲಿಕಾಂ ಕಂಪೆನಿಯವರು ಆಫರ್ ಕೊಡ್ಬೇಕು ಅಂತ ಕೊಡ್ತಾರಾ ಇಲ್ಲ ನಾವು ಆಫರ್ ಕೊಡ್ತೀವಿ ಅಂತ ಕೊಡ್ತಾರಾ ಗೊತ್ತಾಗೊಲ್ಲಾ ಕಣ್ರೀ!! ಇವರು ಕೊಡೊ ಆಫರ್ ಮಾತ್ರ ಚೆನ್ನಾಗಿರುತ್ತೆ ಆದ್ರೆ ಬಳಸ್ಕೊಳೊಕೆ ಸ್ವಲ್ಪ ಕಷ್ಟ.! ಇದಕ್ಕೆ ಉದಾಹರಣೆ ವೊಡಾಫೋನ್ ಸೂಪರ್‌ನೈಟ್ ಆಫರ್!!

ಹೌದು, ವೊಡಾಫೋನ್ ತನ್ನ 3G ಮತ್ತು 4G ಗ್ರಾಹಕರಿಬ್ಬರಿಗೂ ಒಂದೊಳ್ಳೆ ಉತ್ತಮ ಆಫರ್ ಬಿಡುಗಡೆ ಮಾಡಿದೆ.!! ಕೇವಲ 29 ರೂಪಾಯಿಗಳಿಗೆ 5 ಗಂಟೆಗಳ ಕಾಲ ಅನ್‌ಲಿಮಿಟೆಡ್ ಡೇಟಾ ಬಳಕೆ ಮಾಡುವ ಅವಕಾಶವನ್ನು ವೊಡಾಫೋನ್ ನೀಡಿದೆ.!!

ಮೊದಲೇ ಹೇಳ್ದಂಗೆ ಆಫರ್ ಚೆನ್ನಾಗಿದೆ. ಆದ್ರೆ ರಾತ್ರಿ 1 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೂ ಮಾತ್ರ ಈ ಡೇಟಾ ಆಫರ್ ಲಭ್ಯವಿದೆ.! ಹಾಗಿದ್ರೆ ಈ ವೊಡಾಫೋನ್ ಅನ್‌ಲಿಮಿಟೆಡ್ ಡೇಟಾವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ಡೌನ್‌ಲೋಡ್ ಮಾಡಿ!!

ಹಾಟ್‌ಸ್ಟಾರ್‌ನಲ್ಲಿ ಸಿನಿಮಾ ಡೌನ್‌ಲೋಡ್ ಮಾಡಿ!!

ಹಾಟ್‌ಸ್ಟಾರ್‌ನಲ್ಲಿ ಹೊಸ ಹೊಸ ಸಿನಿಮಾಗಳು ಲಭ್ಯವಿವೆ. ಆದರೆ ಅವುಗಳನ್ನು ಲೈವ್‌ನೋಡಲು ಸಾಧ್ಯವಿಲ್ಲಾ.!! ಹಾಗಾಗಿ, 29 ರೂ. ರೀಚಾರ್ಜ್ ಮಾಡಿ ಒಮ್ಮೆಲೆ ನಾಲ್ಕು ಸಿನಿಮಾಗಳನ್ನು ಡೌನ್‌ಲೋಡ್ ಮಾಡಿ.ನಿಮಗೆ ಸಮಯವಿದ್ದಾಗ ನೋಡಿಕೊಳ್ಳಿ.!!

ಕಂಪ್ಯೂಟರ್ / ಮೊಬೈಲ್ ಅಪ್‌ಡೇಟ್ ಮಾಡಿ.!!

ಕಂಪ್ಯೂಟರ್ / ಮೊಬೈಲ್ ಅಪ್‌ಡೇಟ್ ಮಾಡಿ.!!

ನಿಮ್ಮ ಕಂಪ್ಯೂಟರ್ ಅಪ್‌ಡೇಟ್ ಮಾಡಿ ತುಂಬಾ ದಿನಗಳಾಗಿದ್ದರೆ ನಿಮ್ಮ ಮೊಬೈಲ್ ನೆಟ್ ಅನ್ನು ಕಂಪ್ಯೂಟರ್‌ಗೆ ಸಂಪರ್ಕಿಸಿ ಅಪ್‌ಡೆಟ್ ಮಾಡಲು ಕ್ಲಿಕ್ ಮಾಡಿ. ರಾತ್ರಿ ಒಂದರ ನಂತರ ನಿಮ್ಮ ಕಂಪ್ಯೂಟರ್ ಅಪ್‌ಡೇಟ್ ಆಗಲು ಶುರುವಾಗುತ್ತದೆ. ಮತ್ತು 29 ರೂ.ಗೆ ಅಪ್‌ಡೇಟ್ ಆಗುತ್ತದೆ.!!

ಗೇಮ್ಸ್ ಡೌನ್‌ಲೋಡ್ ಮಾಡಿ.!!

ಗೇಮ್ಸ್ ಡೌನ್‌ಲೋಡ್ ಮಾಡಿ.!!

ಆನ್‌ಲೈನ್ ಗೇಮ್ಸ್ ಒಂದೊಂದು ಒಂದು ಜಿಬಿಗೂ ಹೆಚ್ಚು ಸಾಮರ್ಥ್ಯ ಹೊಂದಿರುತ್ತವೆ. ಅಂತಹ ಕೆಲವು ಅತ್ಯುತ್ತಮ ಗೆಮ್‌ಗಳನ್ನು ಇಂತಹ ಸಮಯದಲ್ಲಿ ನಿಮ್ಮ ಕಂಪ್ಯೂಟರ್‌ಗೆ ಗೇಮ್‌ ಡೌನ್‌ಲೋಡ್ ಮಾಡಿ. ನಿಮ್ಮಿಷ್ಟದ ಉತ್ತಮ ಗೇಮ್ ಆಡಿ.!!

ಆಪ್ಸ್ ಡೌನ್‌ಲೋಡ್ ಮಾಡಿ.!!

ಆಪ್ಸ್ ಡೌನ್‌ಲೋಡ್ ಮಾಡಿ.!!

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಸ್ಪೆಸ್ ಇದ್ದರೆ ನಿಮಗೆ ಯಾವೆಲ್ಲಾ ಆಪ್ಸ್ ಅವಶ್ಯಕತೆ ಇದೆಯೋ ಆ ಎಲ್ಲಾ ಆಪ್ಸ್‌ಗಳನ್ನು ಡೌನ್‌ಲೋಡ್ ಮಾಡಿ. ಒಮ್ಮೆ ಡೌನ್‌ಲೋಡ್ ಮಾಡುವ ಬಟನ್ ಕ್ಲಿಕ್ ಮಾಡಿದರೆ ರಾತ್ರಿ ಒಂದು ಗಂಟೆಯ ನಂತರ ಇವೆಲ್ಲಾ ಆಪ್‌ಗಳು ಡೌನ್‌ಲೋಡ್ ಆಗುವಹಾಗೆ ಮಾಡಿ. ಬೆಳಗ್ಗೆ ಎಲ್ಲಾ ಆಪ್ಸ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ!!

ಓದಿರಿ:ಏರ್ಟೆಲ್, ಐಡಿಯಾಗೆ ತಿರುಗುಬಾಣ ನೀಡಿದ ಜಿಯೋ, ಟ್ರಾಯ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Vodafone SuperNight prepaid plan announced. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot