Subscribe to Gizbot

ಭವಿಷ್ಯದ ಪಾಸ್‌ವರ್ಡ್ ವ್ಯವಸ್ಥೆ ಹೇಗಿರಬಹುದು?..ಅಭಿವೃದ್ಧಿ ಹೇಗೆ ನಡೆಯುತ್ತಿದೆ!?

Written By:

ಇದು ಆನ್‌ಲೈನ್ ಯುಗ. ಹಾಗಾಗಿ, ನಮ್ಮ ರಕ್ಷಣೆ ಕಾಪಾಡಿಕೊಳ್ಳಲು ಕಂಪ್ಯೂಟರ್‌, ಮೇಲ್‌, ಸ್ಮಾರ್ಟ್‌ಫೋನ್‌, ಫೇಸ್‌ಬುಕ್‌ಗೆ, ಟ್ವಿಟರ್‌ಗೆ, ಹೀಗೆ ಬಳಕೆಯಲ್ಲಿನ ಎಲ್ಲಾ ಆನ್‌ಲೈನ್ ಸೇವೆಗಳಿಗೂ ಉತ್ತಮ ಪಾಸ್‌ವರ್ಡ್‌ಗಳ ರಕ್ಷಣೆ ಇರಲೇಬೇಕು.! ಹಾಗಾಗಿಯೇ, ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಗಳು ಸಹ ಬಳಕೆಗೆ ಬರುತ್ತಿವೆ.!!

ಈಗಾಗಲೇ ಫಿಂಗರ್‌ಪ್ರಿಂಟ್, ವಾಯ್ಸ್ ರೆಕಗ್ನೈಶನ್‌ನಂತಹ ಅತ್ಯುತ್ತಮ ತಂತ್ರಜ್ಞಾನ ವಿಧಾನಗಳನ್ನು ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳುವ ತಂತ್ರಜ್ಞಾನ ಬಂದಿದೆ. ಇದಲ್ಲದೆ, ಭವಿಷ್ಯದಲ್ಲಿ ಮಾನವನೇ ಪೂರ್ತಿ ಪಾಸ್‌ವರ್ಡ್‌ ಆಗಿ ಬದಲಾಗುವ ಕಾಲ ಸನ್ನಿಹಿತವಾಗುತ್ತಿದೆ.!! ಹಾಗಾದರೆ, ಭವಿಷ್ಯದ ಪಾಸ್‌ವರ್ಡ್ ವ್ಯವಸ್ಥೆ ಹೇಗಿರಬಹುದು? ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭವಿಷ್ಯದ ಪಾಸ್‌ವರ್ಡ್ ವ್ಯವಸ್ಥೆ.

ಭವಿಷ್ಯದ ಪಾಸ್‌ವರ್ಡ್ ವ್ಯವಸ್ಥೆ.

ಆನ್‌ಲೈನ್‌ನಲ್ಲಿ ಹಲವು ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಡುವುದು ಕಷ್ಟ. ಜೊತೆಗೆ ಹ್ಯಾಕರ್‌ಗಳಿಂದ ತಪ್ಪಿಸಿಕೊಳ್ಳಲು ಪಾಸ್‌ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸುತ್ತಿರಬೇಕು. ಇಷ್ಟೆಲ್ಲಾ ಸಮಸ್ಯೆಗಳನ್ನು ಪರಿಹರಿಸಲೆಂದೇ ಭವಿಷ್ಯದ ಪಾಸ್‌ವರ್ಡ್ ವ್ಯವಸ್ಥೆ ತಯಾರಾಗುತ್ತಿದೆ.!!

ನೀವೆ ನಿಮ್ಮ ಪಾಸ್‌ವರ್ಡ್!!

ನೀವೆ ನಿಮ್ಮ ಪಾಸ್‌ವರ್ಡ್!!

ಈಗಾಗಲೇ ಫಿಂಗರ್‌ಪ್ರಿಂಟ್, ವಾಯ್ಸ್ ರೆಕಗ್ನೈಶನ್‌ನಂತಹ ಅತ್ಯುತ್ತಮ ತಂತ್ರಜ್ಞಾನ ವಿಧಾನಗಳನ್ನು ಪಾಸ್‌ವರ್ಡ್‌ ಆಗಿ ಬಳಕೆಯಲ್ಲಿದ್ದರೂ ಸಹ ಭವಿಷ್ಯದಲ್ಲಿ ಮನುಷ್ಯನನ್ನೇ ಪಾಸ್‌ವರ್ಡ್ ಆಗಿ ಬಳಕೆ ಮಾಡುವ ತಂತ್ರಜ್ಞಾನ ಬಳಕೆಗೆ ಬರಲಿವೆ.!!

ಮನುಷ್ಯನೇ ಪಾಸ್‌ವರ್ಡ್‌ ಆದರೆ ಹೇಗಿರಲಿದೆ.!!

ಮನುಷ್ಯನೇ ಪಾಸ್‌ವರ್ಡ್‌ ಆದರೆ ಹೇಗಿರಲಿದೆ.!!

ಬೇರೆ ಯಾರೂ ಕೂಡ ಅನುಕರಣೆ ಮಾಡಲು ಸಾಧ್ಯವಿಲ್ಲದ ತುಟಿಗಳ ಚಲನೆ, ನಡೆಯುವ ರೀತಿ, ಎದೆ ಬಡಿತವನ್ನು ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳುವ ಕಾಲ ಭವಿಷ್ಯದಲ್ಲಿ ಬರಲಿದೆ. ಮುಖವನ್ನೇ ಪಾಸ್‌ವರ್ಡ್‌ ಆಗಿ ಬಳಸಿಕೊಳ್ಳುವಂತಹ ತಂತ್ರಜ್ಞಾನ ಈಗ ಲಭ್ಯವಿದ್ದರೂ ಕಂಪ್ಯೂಟರ್‌ನಲ್ಲಿ ಮುಖವನ್ನೇ ಪುನಃಸೃಷ್ಟಿಸಿ ನಿಮ್ಮ ಖಾತೆಯನ್ನು ತೆರೆಯಬಲ್ಲರು.

ಲಿಪ್‌ಮೋಷನ್ ಪಾಸ್‌ವರ್ಡ್?

ಲಿಪ್‌ಮೋಷನ್ ಪಾಸ್‌ವರ್ಡ್?

ತುಟಿಗಳ ಚಲನೆ ಆಧರಿಸಿ ಕಂಪ್ಯೂಟರ್ ಪಾಸ್‌ವರ್ಡ್ ತೆರೆಯುವ ತಂತ್ರಜ್ಞಾನವನ್ನು ಹಾಂಕಾಂಗ್‌ನ ಬ್ಯಾಪ್ಟಿಸ್ಟ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿ ಮಾಡುತ್ತಿದ್ದಾರೆ. ಇದಕ್ಕೆ ಲಿಪ್‌ಮೋಷನ್ ಪಾಸ್‌ವರ್ಡ್ ಎಂದು ಕರೆಯಲಾಗಿದ್ದು, ಇದು ಕೂಡ ಭವಿಷ್ಯದ ಪಾಸ್‌ವರ್ಡ್ ಆಗಬಹುದು.

ಕ್ಯಾಪ್ಸೂಲ್ ಪಾಸ್‌ವರ್ಡ್‌?

ಕ್ಯಾಪ್ಸೂಲ್ ಪಾಸ್‌ವರ್ಡ್‌?

ನೀವು ಕೇಳಿರದ ಮತ್ತು ಊಹೆ ಮಾಡಿಯೂ ಇರದ ಪಾಸ್‌ವರ್ಡ್‌ಗಳಿಗಿಂತಲೂ ಈ ಕ್ಯಾಪ್ಸೂಲ್ ಪಾಸ್‌ವರ್ಡ್‌ ಬಹಳ ಭಿನ್ನವಾದದ್ದು. ವಿಶ್ವದ ಹೆಸರಾಂತ ಆನ್‌ಲೈನ್‌ನ ಪಾವತಿ ಸಂಸ್ಥೆ ಪೇಪಾಲ್ ಈ ರೀತಿಯ ಪಾಸ್‌ವರ್ಡ್‌ಗಳನ್ನು ರೂಪಿಸುವ ಕೆಲಸದಲ್ಲಿ ಒಂದು ವರ್ಷದಿಂದ ನಿರತವಾಗಿದೆ. ಚಿಪ್‌ ಕ್ಯಾಪ್ಸೂಲ್ ನುಂಗಿ ಕಂಪ್ಯೂಟರ್ ಮುಂದೆ ಕುಳಿತರೆ, ದೇಹದಲ್ಲಿ ಉತ್ಪತ್ತಿಯಾಗುವ ಆಮ್ಲಗಳ ಶಕ್ತಿಯಿಂದ ಈ ಚಿಪ್‌ ಕಾರ್ಯ ನಿರ್ವಹಿಸುತ್ತದೆ. ಆಗ ಚಿಪ್‌ ಅನ್ನು ಕಂಪ್ಯೂಟರ್‌ ಗ್ರಹಿಸಿ ಕಾರ್ಯನಿರ್ವಹಣೆ ನೀಡುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Your Password Doesn't Need To Be So Complicated.to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot