Subscribe to Gizbot

ಟೆಲಿಕಾಂ ಕಂಪೆನಿಗಳು ಮಾಡುತ್ತಿದ್ದ ಮೋಸಕ್ಕೆ ನಿಮ್ಮ ರಕ್ತ ಕುದಿಯುತ್ತದೆ!! ಏಕೆ ಗೊತ್ತಾ?

Written By:

ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬಂದ ನಂತರ ಇತರ ಎಲ್ಲಾ ಟೆಲಿಕಾಂಗಳು ನಷ್ಟದ ಹಾದಿ ಹಿಡಿದವು ಎಂಬುದು ನಿಮಗೆ ಗೊತ್ತು. ಆದರೆ, ಆ ನಷ್ಟದ ಪ್ರಮಾಣ ಎಷ್ಟು? ಯಾವ ಯಾವ ಮೂಲಗಳಿಂದ ಅವುಗಳು ನಷ್ಟವನ್ನು ಅನುಭವಿಸಿದವು ಎಂಬುದು ನಿಮಗೆ ನಿಜವಾಗಿಯೂ ತಿಳಿದಿರಲಿಲ್ಲ.! ಹೌದು,ಟೆಲಿಕಾಂ ಕಂಪೆನಿಗಳ ಬ್ಯುಸಿನೆಸ್ ಬಗ್ಗೆ ಸಾಮಾನ್ಯರಿಗೆ ಹೆಚ್ಚೇನು ತಿಳಿದಿರುವುದಿಲ್ಲ.!!

ಹಾಗಾಗಿಯೇ, ಈ ಟೆಲಿಕಾಂ ಕಂಪೆನಿಗಳು ಗ್ರಾಹಕ ಸೇವೆಯ ಹೆಸರಿನಿಂದ ಹಿಡಿದು ಗ್ರಾಹಕ ವಂಚನೆಯಲ್ಲೂ ಹಣಮಾಡುತ್ತಿದ್ದವು. ವ ಗ್ರಾಹಕರ ರಕ್ತ ಹೀರುತ್ತಿದ್ದ ಈ ಟೆಲಿಕಾಂಗಳ ಬಗ್ಗೆ ಒಂದು ಲೇಖನ ಹೊರಬಿದ್ದಿದ್ದು, ಈ ಟೆಲಿಕಾಂಗಳು ಜನರ ರಕ್ತವನ್ನು ಹೇಗೆ ಹೀರುತ್ತಿದ್ದವು. ಮತ್ತು ಪ್ರಸ್ತುತ ಜಿಯೋಯಿಂದ ಉಳಿದ ಟೆಲಿಕಾಂ ಕಂಪೆನಿಗಳು ಹೇಗೆಲ್ಲಾ ಪಡಿಪಾಟಲು ಪಡುತ್ತಿವೆ ಎಂದು ಹೇಳಿದೆ.!!

ಹಾಗಾಗಿ, ಜಿಯೋಗಿಂತಲೂ ಮೊದಲು ಟೆಲಿಕಾಂ ಕಂಪೆನಿಗಳ ಆಟೋಟಟಾಪ ಹೇಗಿತ್ತು ಮತ್ತು ಟೆಲಿಕಾಂನಲ್ಲಿ ಜಿಯೋಯಿಂದ ಗ್ರಾಹಕ ಸೇವೆಹೇಗೆ ಉತ್ತಮವಾಗಿದೆ.!! ಮತ್ತು ಜಿಯೋ ಬೆಸ್ಟ್ ಏಕೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟೆಲಿಕಾಂ ಕಂಪೆನಿಗಳ ಆದಾಯ ಎಷ್ಟು ಗೊತ್ತಾ?

ಟೆಲಿಕಾಂ ಕಂಪೆನಿಗಳ ಆದಾಯ ಎಷ್ಟು ಗೊತ್ತಾ?

ಒಂದು ವರ್ಷಕ್ಕೆ ಭಾರತದಲ್ಲಿರುವ ಒಟ್ಟು ಟೆಲಿಕಾಂಗಳ ಆದಾಯ ಎಷ್ಟು ಎಂಬುದನ್ನು ನೀವು ಊಹೆ ಮಾಡಲು ಸಾಧ್ಯವಿಲ್ಲಾ.! ನಂಬಿದರೆ ನಂಬಿ ಬಿಟ್ಟರೆ ಬಿಡಿ. ಒಮದು ವರದಿಯ ಪ್ರಕಾರ ಭಾರತದ ಎಲ್ಲಾ ಟೆಲಿಕಾಂ ಕಂಪೆನಿಗಳ ಒಂದು ವರ್ಷದ ಆದಾಯ ಮೂರು ಲಕ್ಷಕೋಟಿಗೂ (3,00,000cR) ಹೆಚ್ಚು!! ಅಂದರೆ ಜನರದುಡ್ಡನ್ನು ಹೇಗೆಲ್ಲಾ ನುಂಗಿ ನೀರುಕುಡಿದಿವೆ ನೋಡಿ!!

ಪ್ರತಿ ಟೆಲಿಕಾಂ ದಿನವೊಂದರ ಗಳಿಕೆ 250 ಕೋಟಿ ರೂ.!!

ಪ್ರತಿ ಟೆಲಿಕಾಂ ದಿನವೊಂದರ ಗಳಿಕೆ 250 ಕೋಟಿ ರೂ.!!

ಕರೆ ಕಡಿತಕ್ಕೆ ದಂಡ ವಿಧಿಸುವ ಟ್ರಾಯ್ ಪ್ರಸ್ತಾಪಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಮುಕುಲ್ ರೋಹಟಗಿ ಅವರು ನೀಡಿದ ಮಾಹಿತಿಯಂತೆ ಟೆಲಿಕಾಂ ಕಂಪೆನಿಗಳ ದಿನವೊಂದರ ಸರಾಸರಿ ಗಳಿಕೆ 250 ಕೋಟಿ ರೂಪಾಯಿಗಳು.!!

ಗ್ರಾಹಕರ ಜೇಬಿಗೆ ಕನ್ನ!!

ಗ್ರಾಹಕರ ಜೇಬಿಗೆ ಕನ್ನ!!

ಫೋನಿನಲ್ಲಿ ಮಾತನಾಡುವಾಗ ಆಗುವ ಕರೆಕಡಿತದ ಬಗ್ಗೆ ನಿಮಗೆ ಗೊತ್ತಿರಬಹುದು. ನಿಮಗೆ ಗೊತ್ತಾ?. ರೇಡಿಯೋ ಲಿಂಕ್ ತಂತ್ರಜ್ಞಾನವನ್ನು ತಮಗೆ ಬೇಕಾದಂತೆ ಮಾರ್ಪಡಿಸಿಕೊಂಡ ಟೆಲಿಕಾಂ ಕಂಪೆನಿಗಳು ಕರೆ ಕಡಿತವಾಗಿದ್ದರೂ ಅದು ಚಾಲನೆಯಲ್ಲೇ ಇರುವಂತೆ ತೋರಿಸಿ ಗ್ರಾಹಕರ ಜೇಬಿಗೆ ಕನ್ನ ಹಾಕುತ್ತಿವೆ. ಇದರ ಆದಾಯವೇ ಪ್ರತಿದಿನ 50 ಕೋಟಿಗೂ ಹೆಚ್ಚು.!!

ದಿಕ್ಕುತಪ್ಪಿಸುತ್ತಿದ್ದ ಟೆಲಿಕಾಂ ಕಂಪೆನಿಗಳು!!

ದಿಕ್ಕುತಪ್ಪಿಸುತ್ತಿದ್ದ ಟೆಲಿಕಾಂ ಕಂಪೆನಿಗಳು!!

ಟೆಲಿಕಾಂ ಕಂಪೆನಿಗಳ ನಿಯಂತ್ರಣಕ್ಕೆ ಟ್ರಾಯ್ ಇದ್ದರೂ ಎಲ್ಲಾ ಟೆಲಿಕಾಂಗಳು ಟ್ರಾಯ್ ಅನ್ನು ದಿಕ್ಕುತಪ್ಪಿಸುತ್ತಿದ್ದವು. ಸಾವಿರಾರು ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದ ಟೆಲಿಕಾಂ ಕಂಪೆನಿಗಳು ಗ್ರಾಹಕರಿಗೆ ಇತರ ಸೇವೆಗಳು ಎಂದು ಹಣ ಪೀಕುತ್ತಿದ್ದವು ಎಂದು ಸ್ವತಹಃ ಟ್ರಾಯ್ ಹೇಳಿಕೊಂಡಿದೆ.!!

ಮೂಲ ಸೌಕರ್ಯಕ್ಕೆ ಹೂಡಿಕೆ ಇಲ್ಲ.!!

ಮೂಲ ಸೌಕರ್ಯಕ್ಕೆ ಹೂಡಿಕೆ ಇಲ್ಲ.!!

ಭಾರತದಲ್ಲಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆ 96.2 ಕೋಟಿ. ಇಷ್ಟಾಗಿಯೂ ಯಾವುದೇ ಕಂಪೆನಿ ಕೂಡಾ ಕರೆಗಳ ಗುಣಮಟ್ಟವನ್ನು ಉತ್ತಮ ಪಡಿಸುವ ಹೂಡಿಕೆಗೆ ಸಿದ್ಧವಿಲ್ಲ ಎಂದು ಈ ವರದಿ ಹೇಳಿದೆ.! ಪ್ರಸ್ತುತ 300ರಿಂದ 900 ಮೆಗಾಹರ್ಟ್ಸ್ ಕಂಪನಾಂಕದ ತರಂಗಗಳಲ್ಲಿ ಕರೆಯಗುಣಮಟ್ಟ ಚೆನ್ನಾಗಿರುತ್ತದೆ. ಆದರೆ, ಈ ತರಂಗಗಳ ಖರೀದಿಗೆ ಯಾವ ಟೆಲಿಕಾಂ ಕಂಪೆನಿಯೂ ಮುಂದೆ ಬರುತ್ತಿಲ್ಲ.!!

ಟೆಲಿಕಾಂ ಏಕಸ್ವಾಮ್ಯ!!

ಟೆಲಿಕಾಂ ಏಕಸ್ವಾಮ್ಯ!!

ಒಂದೇ ಒಂದು ಕಂಪೆನಿ ತನ್ನ ಬ್ಯುಸಿನೆಸ್ ಮಾಡುತ್ತಾ ಹೆಚ್ಚು ದರಗಳನ್ನು ವಿಧಿಸುತ್ತಿದ್ದರೆ ಸರಿ. ಆದರೆ ಎಲ್ಲಾ ಟೆಲಿಕಾಂ ಕಂಪೆನಿಗಳು ಸಹ ಸೇವೆಯ ಹೆಸರಿನಲ್ಲಿ ಒಂದೇ ಬಗೆಯಲ್ಲಿ ಕಾರ್ಯನಿರ್ವಹಣೆ ನೀಡುತ್ತಿದ್ದರಿಂದ ಗ್ರಾಹಕನಿಗೆ ಆಯ್ಕೆಗಳೇ ಇಲ್ಲದ ಸ್ಥಿತಿ ಎದುರಾಗಿದ್ದು. ಇದು ಜಿಯೋ ಬರುವ ಮೊದಲು!!

80% ಬೆಲೆ ಇಳಿಕೆ!!

80% ಬೆಲೆ ಇಳಿಕೆ!!

ಜಿಯೋ ಮಾರುಕಟ್ಟೆಗೆ ಬಂದಾಗಿನಿಂದ ಉಳಿದ ಟೆಲಿಕಾಂ ಕಂಪೆನಿ ಸೇವೆಗಳ ಬೆಲೆ 80% ಇಳಿಕೆಯಾಗಿದೆ.!! ಈಗ ಏನಿದ್ದರೂ ಅನ್‌ಲಿಮಿಟೆಡ್ ಸೇವೆಗಳದ್ದೇ ಜಮಾನವಾಗಿದ್ದು, ಗ್ರಾಹಕರು ಅತ್ಯುತ್ತಮ ದರದಲ್ಲಿ ಹೆಚ್ಚು ಸೇವೆಯನ್ನು ಪಡೆಯುತ್ತಿದ್ದಾರೆ.!!

ಭವಿಷ್ಯದ ಟೆಲಿಕಾಂ ಮೊದಲಿನಹಾಗಲ್ಲ!!

ಭವಿಷ್ಯದ ಟೆಲಿಕಾಂ ಮೊದಲಿನಹಾಗಲ್ಲ!!

ಜಿಯೋ ಯಾವಾಗ ಟೆಲಿಕಾಂ ಕಂಪೆನಿಗೆ ಕಾಲಿಟ್ಟಿತೋ ಒಮ್ಮೆಲೇ ಟೆಲಿಕಾಂಗಳೆಲ್ಲವೂ ಮಕಾಡೆ ಮಲಗಿದವು.! ಒಂದು GB ಡೇಟಾಗೆ 300 ರಿಂದ 400ರೂಪಾಯಿಗಳನ್ನು ಪೀಕುತ್ತಿದ್ದ ಕಂಪೆನಿಗಳು ಇದೀಗ 2 ರಿಂದ 3 ರೂಪಾಯಿಗೆ ಒಂದು GB ಡೇಟಾ ನೀಡುತ್ತಿವೆ.!! ಅಂದರೆ ಭವಿಷ್ಯದಲ್ಲಿ ಟೆಲಿಕಾಂ ಪರಿಸ್ಥಿತಿ ಮೊದಲಿನಹಾಗಲ್ಲ!!

ಓದಿರಿ:ಜಿಯೋ ಫೋನ್ ಎಫೆಕ್ಟ್..ಬೆಚ್ಚಿಬೀಳಿಸಿದ ವೊಡಾಫೋನ್ ಹೊಸ ಆಫರ್!!.ದರಸಮರಕ್ಕೆ ಮತ್ತೆ ಮುನ್ನುಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Many operators have increased measures to minimize fraud . to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot