ಏನಿದು ಹೈಡ್ರೋಜನ್ ಬಾಂಬ್?..ಇದು ಅಣುಬಾಂಬ್‌ಗಿಂತ ಅಪಾಯಕಾರಿ ಏಕೆ?

ಏನಿದು ಹೈಡ್ರೋಜನ್ ಬಾಂಬ್?..ಬಾಂಬ್ ಯಶಸ್ವಿಯಿಂದಾಗಿ ಪ್ರಪಂಚವೇ ಭೀತಿಯಲ್ಲಿರುವುದೇಕೆ?

|

ಸರ್ವಾಧಿಕಾರಿ ಆಡಳಿತದ ಉತ್ತರ ಕೊರಿಯಾದ ಹೈಡ್ರೋಜನ್ ಬಾಂಬ್ ಸ್ಫೋಟ ಪರೀಕ್ಷೆ ಯಶಸ್ವಿಯಾಗಿದ್ದೆ ತಡ ವಿಶ್ವಾದ್ಯಂತ ಎಲ್ಲಾ ರಾಷ್ಟ್ರಗಳು ಭೀತಿಗೆ ತುತ್ತಾಗಿವೆ. ಉತ್ತರ ಕೊರಿಯಾದ ವಿಚಿತ್ರ ಹಾಗೂ ವಿಲಕ್ಷಣ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್ ಎಲ್ಲಿ ಯಾವಾಗ ಇಂತಹ ಬಾಂಬ್ ಬಳಕೆ ಮಾಡಬಹುದು ಎಂದು ವಿಶ್ವ ನಾಯಕರು ತಲೆಕೆಡಿಸಿಕೊಂಡಿದ್ದಾರೆ.!!

ಹಾಗಾದರೆ, ಏನಿದು ಹೈಡ್ರೋಜನ್ ಬಾಂಬ್?..ಬಾಂಬ್ ಯಶಸ್ವಿಯಿಂದಾಗಿ ಪ್ರಪಂಚವೇ ಭೀತಿಯಲ್ಲಿರುವುದೇಕೆ? ಅಣುಬಾಂಬ್‌ಗಿಂತ ಹೇಗೆ ಭಿನ್ನ ಮತ್ತು ಶಕ್ತಿಯುತವಾಗಿದೆಯೇ? ಎಂಬ ಹಲವು ಪ್ರಶ್ನೆಗಳು ಎಲ್ಲರಲ್ಲಿಯೂ ಮೂಡುತ್ತದೆ.!! ಹಾಗಾಗಿ, ಇಂದಿನ ಲೇಖನದಲ್ಲಿ ಹೈಡ್ರೋಜನ್ ಬಾಂಬ್ ಬಗೆಗಿನ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.!!

ಏನಿದು ಹೈಡ್ರೋಜನ್ ಬಾಂಬ್?

ಏನಿದು ಹೈಡ್ರೋಜನ್ ಬಾಂಬ್?

ಥರ್ಮೋನ್ಯೂಕ್ಲಿಯರ್ ಅಥವಾ ಹೈಡ್ರೋಜನ್ ಬಾಂಬ್ ಪರಮಾಣು ಬಾಂಬ್‌ಗಿಂತಲೂ ಹೆಚ್ಚು ಪ್ರಬಲ ಮತ್ತು ಅಪಾಯಕಾರಿ ಶಸ್ತ್ರಾಸ್ತ್ರ. ಒಂದು ಹೈಡ್ರೋಜನ್ ಬಾಂಬ್ ಸ್ಫೋಟದಿಂದ 100 ಕಿ.ಮೀಟರ್‌ನಷ್ಟು ದೊಡ್ಡದಾದ ನಗರವನ್ನು ಕೆಲವೇ ನಿಮಿಷಗಳಲ್ಲಿ ಬೂದಿ ಮಾಡಬಹುದು. ಬೆಂಗಳೂರು ನಗರ ವಿನಾಶಕ್ಕೆ ಕೆಲವೇ ಸೆಕೆಂಡ್‌ಗಳು ಸಾಕಾಗಬಹುದು.!!

ಹೇಗೆ ಕಾರ್ಯನಿರ್ವಹಿಸುತ್ತದೆ ಹೈಡ್ರೋಜನ್ ಬಾಂಬ್?!

ಹೇಗೆ ಕಾರ್ಯನಿರ್ವಹಿಸುತ್ತದೆ ಹೈಡ್ರೋಜನ್ ಬಾಂಬ್?!

ಹೈಡ್ರೋಜನ್ ಬಾಂಬ್ ಗಳಲ್ಲಿ ಹೈಡ್ರೋಜನ್ ಪರಮಾಣುಗಳ ಫ್ಯೂಶನ್ ಬಳಸಲಾಗುತ್ತದೆ. ಅದಕ್ಕಾಗಿಯೇ ಇದಕ್ಕೆ ಹೈಡ್ರೋಜನ್ ಬಾಂಬ್ ಎಂದು ಹಸರಿಸಲಾಗಿದೆ. ಹೈಡ್ರೋಜನ್ ಬಾಂಬ್‌ನಲ್ಲಿ 2 ಅಥವಾ ಅದಕ್ಕಿಂತ ಹೆಚ್ಚಿನ ಪರಮಾಣು ಒಟ್ಟುಗೂಡುವುದರಿಂದ ಅದರ ಶಕ್ತಿ ಪರಮಾಣು ಬಾಂಬ್ ಗಿಂತಲೂ ಅಧಿಕವಾಗಿರುತ್ತದೆ.

ಅಣುಬಾಂಬ್‌ಗಿಂತ ಹೇಗೆ ಭಿನ್ನ?

ಅಣುಬಾಂಬ್‌ಗಿಂತ ಹೇಗೆ ಭಿನ್ನ?

ಅಣು ಬಾಂಬ್ ಮತ್ತು ಹೈಡ್ರೋಜನ್ ಬಾಂಬ್ ಎರಡೂ ಸಹ ಪರಮಾಣು ಶಸ್ತ್ರಾಸ್ತ್ರಗಳೇ. ಆದರೆ, ಪರಮಾಣು ಬಾಂಬ್‌ಗಳಲ್ಲಿ ಅಣುಗಳ ಬೇರ್ಪಡಿಸುವಿಕೆ (ವಿದಳನ)ದಿಂದ ಶಕ್ತಿ ಉತ್ಪಾದನೆಯಾದರೆ, ಹೈಡ್ರೋಜನ್ ಬಾಂಬ್‌ಗಳಲ್ಲಿ ಅಣುಗಳ ಸಮ್ಮಿಲನದಿಂದ ಶಕ್ತಿ ಉತ್ಪಾದನೆಯಾಗುತ್ತದೆ.!!

ಭೂಕಂಪವೇ ಸಂಭವಿಸುತ್ತದೆ.!!

ಭೂಕಂಪವೇ ಸಂಭವಿಸುತ್ತದೆ.!!

ಹೈಡ್ರೋಜನ್ ಬಾಂಬ್ ಸ್ಪೋಟದ ತೀರ್ವತೆ ಎಷ್ಟಿರುತ್ತದೆ ಎಂದರೆ ಒಂದು ಸಣ್ಣ ಬಾಂಬ್ ಇಡೀ ಭೂಮಿಯನ್ನೇ ಅಲುಗಾಡಿಸುವ ಶಕ್ತಿಯನ್ನು ಹೊಂದಿರುತ್ತದೆ.!! ಒಮ್ಮೆ ಏನಾದರೂ ಬಾಂಬ್ ಜನನಿಬುಡ ಸ್ಥಳಗಳಲ್ಲಿ ಸ್ಪೋಟವಾದರೆ ಪ್ರಾಣಿಗಳ ಅಸ್ಥಿ ಕೂಡ ಸಿಗುವುದು ಅಸಾಧ್ಯವೇ ಸರಿ!!

ಚಿಕ್ಕ ಗಾತ್ರದಲ್ಲಿರಲಿದೆ ಹೈಡ್ರೋಜನ್ ಬಾಂಬ್!!

ಚಿಕ್ಕ ಗಾತ್ರದಲ್ಲಿರಲಿದೆ ಹೈಡ್ರೋಜನ್ ಬಾಂಬ್!!

ಪರಮಾಣು ಬಾಂಬ್ ಗಿಂತ ಹೆಚ್ಚು ಪ್ರಬಲವಾದ ಹೈಡ್ರೋಜನ್ ಬಾಂಬ್ ಗಳನ್ನು ಚಿಕ್ಕ ಗಾತ್ರಗಳಲ್ಲಿ ತಯಾರಿಸುವುದು ಸುಲಭ. ಹಾಗಾಗಿ, ಕಡಿಮೆ ಗಾತ್ರದ ಕ್ಷಿಪಣಿಗಳಲ್ಲಿ ಇದನ್ನು ಬಳಸುವುದು. ಇದರಿಂದ ಸಣ್ಣಪುಟ್ಟ ದೇಶಗಳು ಕೂಡ ಹೈಡ್ರೋಜನ್ ಬಾಂಬ್ ಅನ್ನು ಪ್ರಯೋಗಿಸಲು ಸಾಧ್ಯವಾಗಬಹುದು.!

Blue Whale - ಬ್ಲೂ ವೇಲ್ ನಿಮ್ಮ ಮಕ್ಕಳ ಜೀವ ತೆಗೆಯಲಿದೆ ಎಚ್ಚರ..!!
ಇದುವರೆಗೂ ಎಲ್ಲೂ ಬಳಸಿಲ್ಲ

ಇದುವರೆಗೂ ಎಲ್ಲೂ ಬಳಸಿಲ್ಲ

ಜಪಾನ್‌ನ ಹಿರೋಷಿಮಾ, ನಾಗಾಸಾಕಿಗಳಲ್ಲಿ ಮೇಲೆ ಅಮೆರಿಕ ಬಳಸಿದ್ದು ಅಣುಬಾಂಬ್‌ಗಳಷ್ಟೆ. ಅದರ ಪರಿಣಾಮವೇ ಅಷ್ಟಿದ್ದರೆ, ಇನ್ನು ಹೈಡ್ರೋಜನ್ ಬಾಂಬ್ ಪರಿಣಾಮ ಊಹೆಗೆ ನಿಲುಕದ್ದು. ಅತ್ಯಂತ ಅಪಾಯಕಾರಿ ಎಂದು ಬಣ್ಣಿಸಲಾಗುವ ಹೈಡ್ರೋಜನ್ ಬಾಂಬ್ ಅನ್ನು ಇದುವರೆಗೂ ಯಾವ ಯುದ್ಧದಲ್ಲೂ ಪ್ರಯೋಗಿಸಿಲ್ಲ. 1950 ರ ದಶಕದಲ್ಲೇ ಅಮೆರಿಕ ಹೈಡ್ರೋಜನ್ ಬಾಂಬ್ ಅನ್ನು ಅಭಿವೃಧ್ಧಿಪಡಿಸಿದ್ದರೂ ಎಲ್ಲೂ ಬಳಕೆ ಮಾಡಿಲ್ಲ.!!

<strong>ಆಪ್‌ ಇನ್‌ಸ್ಟಾಲ್ ಮಾಡುವಾಗ ಭಾರತೀಯರು ಮಾತ್ರ ಮಾಡುತ್ತಿರುವ 7 ತಪ್ಪುಗಳಿವು!!</strong>ಆಪ್‌ ಇನ್‌ಸ್ಟಾಲ್ ಮಾಡುವಾಗ ಭಾರತೀಯರು ಮಾತ್ರ ಮಾಡುತ್ತಿರುವ 7 ತಪ್ಪುಗಳಿವು!!

Best Mobiles in India

Read more about:
English summary
North Korea has announced it had successfully carried out its first hydrogen bomb test.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X