ಜಗತ್ತನ್ನೇ ಬೆಚ್ಚಿ ಬೀಳಿಸಿದೆ ವಿಕಿಲೀಕ್ಸ್ ವರದಿ!! ಏನು ಗೊತ್ತಾ?

ಜಗತ್ತಿನ ಯಾವುದೇ ಫೋನ್‌ ಹಾಗೂ ಕಂಪ್ಯೂಟರ್‌ಗಳನ್ನು ಬಳಕೆದಾರರಿಗೆ ಗೊತ್ತೇ ಆಗದಂತೆ ಅಮೆರಿಕಾದ ಬೇಹುಗಾರಿಕಾ ಸಂಸ್ಥೆ ಹ್ಯಾಕ್ ಮಾಡುತ್ತಿದೆ.!!

|

ಅಮೆರಿಕಾದ ಬೇಹುಗಾರಿಕಾ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ ಪ್ರತಿಯೋರ್ವರ ವೈಯಕ್ತಿಕ ಮಾಹಿತಿಗೆ ಕನ್ನ ಹಾಕುತ್ತಿದೆ ಎಂಬ "ವಾಲ್ಟ್ 7"ಎಂಬ ಹೆಸರಿನ ಸುಮಾರು 8 ಸಾವಿರ ಪುಟಗಳಷ್ಟಿರುವ ವರದಿಯನ್ನು ವಿಕಿಲೀಕ್ಸ್ ಬಿಡುಗಡೆ ಮಾಡಿದ್ದು, ಬಿಡುಗಡೆ ಮಾಡಿರುವ ದಾಖಲೆಗಳು ಜಗತ್ತಿನಾದ್ಯಂತ ಭಾರಿ ಸಂಚಲನ ಹುಟ್ಟುಹಾಕಿವೆ.!!

ಜಗತ್ತಿನ ಯಾವುದೇ ಫೋನ್‌ ಹಾಗೂ ಕಂಪ್ಯೂಟರ್‌ಗಳನ್ನು ಬಳಕೆದಾರರಿಗೆ ಗೊತ್ತೇ ಆಗದಂತೆ ಅಮೆರಿಕಾದ ಬೇಹುಗಾರಿಕಾ ಸಂಸ್ಥೆ ಹ್ಯಾಕ್ ಮಾಡುತ್ತಿದೆ. ಇದಕ್ಕಾಗಿಯೇ ಜನಸಾಮಾನ್ಯರು ಬಳಸುವ ಎಲೆಕ್ಟ್ರಾನಿಕ್ ಗಾಡ್ಜೆಟ್‌ಗಳ ಮೂಲಕ ವೈಯಕ್ತಿಕ ಮಾಹಿತಿ ಪಡೆಯಲು ಮಾಲ್‌ವೇರ್‌ಗಳನ್ನು ಸೃಷ್ಟಿಸಿದೆ ಎಂದು ವಿಕಿಲೀಕ್ಸ್ ವರದಿಯನ್ನು ಬಿಡುಗಡೆ ಮಾಡಿದೆ.!!

ಜಗತ್ತನ್ನೇ ಬೆಚ್ಚಿ ಬೀಳಿಸಿದೆ ವಿಕಿಲೀಕ್ಸ್ ವರದಿ!! ಏನು ಗೊತ್ತಾ?

ಆಂಡ್ರಾಯ್ಡ್ ,ಆಪಲ್ ಫೋನ್‌ಗಳ ಮೂಲಕ ಜನಸಾಮಾನ್ಯರಫೋನ್‌ಗೆ ಬರುವ ಸಂದೇಶಗಳು, ಕಾಲ್‌ ವಿವರ, ಮೈಕ್ರೋಫೋನ್ ಮೂಲಕ ಧ್ವನಿ ಸಂಭಾಷಣೆಗಳು ಹಾಗೂ ಕ್ಯಾಮೆರಾ ಮೂಲಕ ದೃಶ್ಯಗಳು ಹಾಗೂ ಇರುವ ಸ್ಥಳವನ್ನು ನಿಖರವಾಗಿ ಸಿಐಎ ಪಡೆದುಕೊಳ್ಳುತ್ತಿದ್ದು, ಸಿಐಎ ಸಿದ್ಧಪಡಿಸಿಕೊಂಡಿರುವ ಉಪಕರಣಗಳ ಮೂಲಕ ಯಾವುದೇ ಸಂದೇಶವನ್ನು ಅವರು ಓದಬಹುದಾಗಿದೆ ಎಂದು ವಿಕಿಲೀಕ್ಸ್ ಬಯಲು ಮಾಡಿದೆ.!

ಜಗತ್ತನ್ನೇ ಬೆಚ್ಚಿ ಬೀಳಿಸಿದೆ ವಿಕಿಲೀಕ್ಸ್ ವರದಿ!! ಏನು ಗೊತ್ತಾ?

ಸಾಮಾನ್ಯವಾಗಿ ಬಳಕೆಯಲ್ಲಿರುವ ಟೆಲಿಗ್ರಾಮ್, ವಾಟ್ಸಾಪ್‌ ರೀತಿಯ ಮೆಸೇಜಿಂಗ್‌ ಆಪ್‌ಗಳಲ್ಲಿ ಸಂದೇಶಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ ಎಂದು ಕಂಪನಿಗಳು ಹೇಳುತ್ತವೆ. ಪ್ರತಿಯೊಬ್ಬರ ವೈಯಕ್ತಿಕ ಸಂದೇಶಗಳು ಇನ್ನೊಬ್ಬರಿಗೆ ಓದಲು ಅವಕಾಶ ಇರುವುದಿಲ್ಲ ಎಂದು ಇವುಗಳು ಹೇಳಿದರೂ ವೈಯಕ್ತಿಕ ಸಂದೇಶಗಳು ಯಾವುದೇ ಕಾರಣಕ್ಕೂ ಸುರಕ್ಷಿತವಲ್ಲ ಎಂಬುದನ್ನು ವಿಕಿಲೀಕ್ಸ್ ದಾಖಲೆಗಳು ಬಹಿರಂಗಪಡಿಸಿವೆ. ಮುಂದಿನ ದಿನಗಳಲ್ಲಿ ಸಿಐಎ ಬೇಹುಗಾರಿಕೆ ಕುರಿತು ಇನ್ನಷ್ಟು ಮಾಹಿತಿ ಹೊರಹಾಕುವುದಾಗಿ ವಿಕಿಲೀಕ್ಸ್ ಹೇಳಿದೆ.!!

Best Mobiles in India

English summary
The 8,761 documents published by WikiLeaks focus mainly on techniques for hacking and surveillance.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X