ಪ್ರಪಂಚದಲ್ಲೇ ಹೆಚ್ಚು ವರ್ಷ ಬದುಕಿ ಮರಣಗೊಂಡ ನಾಯಿ: ಇಂಟರ್ನೆಟ್‌ ವೈರಲ್‌

Written By:

ಮನುಷ್ಯನ ಜೀವಿತಾವಧಿಯೇ ಇಂದು ಆಹಾರ ಪದ್ಧತಿ ಮತ್ತು ಪರಿಸರದ ಗುಣಮಟ್ಟದಿಂದ 60-80 ವರ್ಷ ಎಂದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಇಂತಹ ಸಮಯದಲ್ಲಿ ಎಲ್ಲರಿಗೂ ವಿಶೇಷ ಸುದ್ದಿ ಏನಂದ್ರೆ ಪ್ರಪಂಚದಲ್ಲೇ ಅತಿ ಹೆಚ್ಚು ವರ್ಷ ನಾಯಿಯೊಂದು ಬದುಕಿದ್ದು ಈಗ ಪ್ರಾಣಬಿಟ್ಟಿದೆ. ಅಂದ್ರೆ ನಾಯಿಗಳ ಜೀವಿತಾವಧಿಗೆ ಹೋಲಿಸಿದರೆ ಈಗ ಸತ್ತಿರುವ ನಾಯಿ ಪ್ರಪಂಚದಲ್ಲೇ ಅತಿ ಹೆಚ್ಚು ವರ್ಷ ಬದುಕಿನ ನಾಯಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮನುಷ್ಯನ ಜೀವಿತಾವಧಿಯಲ್ಲಿ ನಾಯಿಯ ಅತ್ಯಧಿಕ ಜೀವಿತಾವಧಿ 133 ವರ್ಷ ಎನ್ನಲಾಗಿದೆ. ಈ ಸುದ್ದಿಯನ್ನು ಇಂದು ಗಿಜ್‌ಬಾಟ್‌ನಲ್ಲಿ ಹೇಳಲು ಕಾರಣ ಅಂದ್ರೆ ಅತಿಹೆಚ್ಚು ವರ್ಷ ಬದುಕಿ ತೀರಿಕೊಂಡಿರುವ ನಾಯಿ ಇಂದು ಇಂಟರ್ನೆಟ್‌ ವೈರಲ್‌ ಸುದ್ದಿಯಾಗಿದೆ. ನಾಯಿ ಎಷ್ಟು ವರ್ಷ ಬದುಕಿತ್ತು, ಅದರ ಹೆಸರೇನು, ನಾಯಿಗಳ ಜೀವಿತಾವಧಿ ಎಷ್ಟು ಎಂಬಿತ್ಯಾದಿ ವಿಶೇಷ ಮಾಹಿತಿಯನ್ನು ತಿಳಿಯಲು ಲೇಖನದ ಸ್ಲೈಡ್‌ ಓದಿ.
ಮಾಹಿತಿ ಕೃಪೆ: BBC newsbeat

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮ್ಯಾಗಿ

ಮ್ಯಾಗಿ

ಮ್ಯಾಗಿ

ಪ್ರಪಂಚದಲ್ಲೇ ಅತಿಹೆಚ್ಚು ವರ್ಷ ಬದುಕಿದ ನಾಯಿಯ ಹೆಸರು ಮ್ಯಾಗಿ. ಈ ಮುದ್ದಿನ ಸಾಕುನಾಯಿ ಈಗ ತನ್ನ 30ನೇ ವರ್ಷಕ್ಕೆ ಆಸ್ಟ್ರೇಲಿಯದಲ್ಲಿ ಪ್ರಾಣಬಿಟ್ಟಿದೆ. ಮನುಷ್ಯನ ಅತಿ ಹೆಚ್ಚು ಜೀವಿತಾವಧಿಯಲ್ಲಿ ಹೇಳುವುದಾದರೆ 133 ವರ್ಷ.

ಮ್ಯಾಗಿ ಮಾಲೀಕ

ಮ್ಯಾಗಿ ಮಾಲೀಕ

ಮ್ಯಾಗಿ ಮಾಲೀಕ

ಮ್ಯಾಗಿಯ ಮಾಲೀಕರು ವಿಕ್ಟೋರಿಯಾದ ಹೈನು ಕೃಷಿಕ 'ಬ್ರಿಯಾನ್ ಮೆಕ್ಲಾರೆನ್'. ಇವರು ಮ್ಯಾಗಿ ತನ್ನ 30 ವರ್ಷಕ್ಕೆ ಪ್ರಾಣ ಸತ್ತುಹೋಗಿರುವ ಬಗ್ಗೆ ಆಸ್ಟ್ರೇಲಿಯಾದ ಸುದ್ದಿ ಪತ್ರಿಕೆಗೆ ಮಾಹಿತಿ ತಿಳಿಸಿದ್ದಾರೆ.

ಬ್ರಿಯಾನ್‌ ಮೆಕ್ಲಾರೆನ್‌ ಹೇಳಿದ್ದೇನು?

ಬ್ರಿಯಾನ್‌ ಮೆಕ್ಲಾರೆನ್‌ ಹೇಳಿದ್ದೇನು?

ಬ್ರಿಯಾನ್‌ ಮೆಕ್ಲಾರೆನ್‌ ಹೇಳಿದ್ದೇನು?

"ಮ್ಯಾಗಿಗೆ 30 ವರ್ಷ ಆಗಿತ್ತು. ಕಳೆದ ವಾರದಿಂದಲೂ ಸಹ ಚೆನ್ನಾಗಿ ಆಟವಾಡುತ್ತಿತ್ತು. ಮ್ಯಾಗಿ ಹೈನುಕಾರಿಕೆ ಪ್ರದೇಶದಿಂದ ಕಛೇರಿಗೆ ಓಡಾಡುತ್ತಿತ್ತು. ಮತ್ತು ಬೆಕ್ಕಿನೊಂದಿಗೆ ಗುರುಗುಟ್ಟುಕೊಂಡು ಕಾಲ ಕಳೆಯುತ್ತಿತ್ತು", ಎಂದು ಬ್ರಿಯನ್‌ ಆಸ್ಟ್ರೇಲಿಯ 'Weekly Times'ಗೆ ಹೇಳಿದ್ದಾರೆ.

 ಪ್ರೀತಿಯ ಪಪ್ಪಿ

ಪ್ರೀತಿಯ ಪಪ್ಪಿ

ಪ್ರೀತಿಯ ಪಪ್ಪಿ

ಕಳೆದ ಎರಡು ದಿನಗಳ ಹಿಂದಷ್ಟೆ ಹರುಷ ತಪ್ಪಿತ್ತು. ನಾನು ಊಟಕ್ಕೆ ಹೋಗೋಣ ಎಂದದನ್ನು ಕೇಳಿಸಿಕೊಂಡು ಬರಲು ಸಹ ಸಾಧ್ಯವಾಗಲಿಲ್ಲ. ನಾವು ದುಃಖದಲ್ಲಿ ಸಿಲುಕಿದ್ದೇನೆ. ಮ್ಯಾಗಿಯನ್ನು ಬ್ರಿಯನ್‌ರವರ ಮಗ 4 ವರ್ಷದವನಿದ್ದಾಗ ಖರೀದಿಸಿದ್ದರಂತೆ. ಮ್ಯಾಗಿ ಪ್ರಾಣ ಬಿಟ್ಟಿರುವ ಈ ದಿನ ಅವರ ಮಗ 34 ವರ್ಷ ವಯಸ್ಸಿನವರು. ನಾಯಿಗೆ 30 ವರ್ಷ ತುಂಬಿತ್ತು ಎಂದು ಬ್ರಿಯನ್'ರವರು ಹೇಳಿದ್ದಾರೆ.

 ವಿಶ್ವ ದಾಖಲೆ

ವಿಶ್ವ ದಾಖಲೆ

ವಿಶ್ವ ದಾಖಲೆ

ಈ ಹಿಂದೆ ಪ್ರಪಂಚದಲ್ಲೇ ಅತಿಹೆಚ್ಚು ವರ್ಷ ಬದುಕಿನ ನಾಯಿ ಎಂದರೆ ಆಸ್ಟ್ರೇಲಿಯಾದ ಕ್ಯಾಟಲ್‌ ನಾಯಿ, ಇದು 1939 ರಲ್ಲಿ ತನ್ನ 29ನೇ ವರ್ಷಕ್ಕೆ ಮರಣಹೊಂದಿತ್ತು. ಈಗ ಮ್ಯಾಗಿ ತನ್ನ 30ನೇ ವರ್ಷಕ್ಕೆ ಮರಣ ಹೊಂದಿದ್ದು ಹಿಂದಿನ ದಾಖಲೆ ಮುರಿದಿದೆ.

rn

ನಾಯಿಗಳ ಜೀವಿತಾವಧಿ

ನಾಯಿಗಳ ಜೀವಿತಾವಧಿ

ಹಲವು ನಾಯಿಗಳು ಕೇವಲ 8-15 ವರ್ಷದೊಳಗೆ ಜೀವಿಸುತ್ತವೆ. ನಿಖರವಾಗಿ ನಾಯಿಗಳು 20 ವರ್ಷದ ಬದುಕುವುದೇ ವಿರಳ.
ವೀಡಿಯೋ ಕೃಪೆ:sabz world

ನಾಯಿಗಳ ಜೀವಿತಾವಧಿ

ನಾಯಿಗಳ ಜೀವಿತಾವಧಿ

ನಾಯಿಗಳ ಜೀವಿತಾವಧಿ

ಹಲವು ತಳಿ ನಾಯಿಗಳ ಜೀವಿತಾವಧಿ ಎಷ್ಟು ಎಂದು ಈ ಚಿತ್ರ ನೋಡಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
World's 'oldest dog' dies at 30 in Australia after going to sleep in her basket. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot