ಶಿಯೋಮಿ ಎಂಐ ಏರ್ ಪ್ಯುರಿಫೈಯರ್ ಪ್ರೊ: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಎಂಐ ಪ್ಯೂರಿಫೈಯರ್ ನ ಮೂರನೇ ತಲೆಮಾರಿನಲ್ಲಿ ಒ.ಎಲ್.ಇ.ಡಿ ಪರದೆ ಮತ್ತು ಎಂಐ ತಂತ್ರಾಂಶದ ಮೂಲಕ ನಿಯಂತ್ರಿಸುವ ಸೌಲಭ್ಯವಿರಲಿದೆ.

|

ಚೀನಾದ ಟೆಕ್ ದೈತ್ಯ ಗ್ರಾಹಕರ ಅಗತ್ಯಕ್ಕನುಗುಣವಾಗಿ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಯಾವತ್ತೂ ಹಿಂದಿಲ್ಲ. ಸ್ಮಾರ್ಟ್ ಫೋನ್ ವಿಭಾಗದಲ್ಲಿ ಈಗಾಗಲೇ ಕಂಪನಿ ಉತ್ತಮ ಹೆಸರು ಮಾಡಿದೆ. ಕಡಿಮೆ ಬೆಲೆಗೆ ಉತ್ತಮ ಗುಣ ವಿಶೇಷತೆಗಳುಳ್ಳ ಫೋನುಗಳನ್ನು ಬಿಡುಗಡೆಗೊಳಿಸಿದೆ. ಈಗ ಕಂಪನಿಯು ತನ್ನ ವ್ಯಾಪಾರ ವಹಿವಾಟನ್ನು ಪವರ್ ಬ್ಯಾಂಕ್, ಹೆಡ್ ಫೋನ್, ಏರ್ ಪ್ಯೂರಿಫೈಯರ್ ಗೂ ವಿಸ್ತರಿಸಿದೆ.

ಶಿಯೋಮಿ ಎಂಐ ಏರ್ ಪ್ಯುರಿಫೈಯರ್ ಪ್ರೊ: ನಿಮಗೆ ಗೊತ್ತಿರಬೇಕಾದ ಐದು ಸಂಗತಿಗಳು.

ಗಾಳಿ ಶುದ್ಧಿ ಮಾಡುವ ಏರ್ ಪ್ಯುರಿಫೈಯರ್ ಬಗ್ಗೆ ಹೇಳುವುದಾದರೆ ಕಂಪನಿಯು ಮೂರನೇ ತಲೆಮಾರಿನ ಏರ್ ಪ್ಯುರಿಫೈಯರ್ ಆದ ಎಂಐ ಏರ್ ಪ್ಯುರಿಫೈಯರ್ ಪ್ರೋ ಅನ್ನು ಬಿಡುಗಡೆಗೊಳಿಸಿದೆ. ಇದು ಹೆಚ್ಚು ಶಕ್ತಿಶಾಲಿಯಾಗಿದೆ ಮತ್ತು ಉತ್ತಮ ದಕ್ಷತೆ ಹೊಂದಿದೆ. ಶಿಯೋಮಿಯು ಚೀನಾದಲ್ಲಿ ಅಂದಾಜು 14,770 ರುಪಾಯಿಗೆ ಇದನ್ನು ಮಾರುತ್ತಿದೆ, ನವೆಂಬರ್ ಒಂದರಿಂದ.

ಓದಿರಿ: ವಾಟ್ಸಾಪ್ ಬಳಕೆದಾರರು ತಪ್ಪದೇ ಓದಿಕೊಳ್ಳಬೇಕಾದ 5 ವಂಚನೆಗಳು

ಭಾರತವು ಮಾಲಿನ್ಯದ ವಿಷಯದಲ್ಲಿ ಚೀನಾವನ್ನು ಹಿಂದಿಕ್ಕುವ ದಿನಗಳು ಸಮೀಪಿಸುತ್ತಿರುವಾಗ, ಶಿಯೋಮಿಯು 2016ರ ಕೊನೆಯಲ್ಲಿ ಏರ್ ಪ್ಯುರಿಫೈಯರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದರೆ ಅಚ್ಚರಿಯಿಲ್ಲ. ಉತ್ತಮ ಲಾಭವನ್ನೂ ಮಾಡಿಕೊಳ್ಳಬಹುದು. ಭಾರತದಲ್ಲಿ ವಾಯು ಮಾಲಿನ್ಯವು ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ.

ಓದಿರಿ: ನಿಮ್ಮ ಫೋನಿನ ಡಾಟಾ ಮತ್ತು ಬ್ಯಾಟರಿ ಲೈಫ್ ಉಳಿಸಲು ವಾಟ್ಸಪ್ ನೋಟಿಫಿಕೇಷನ್ ಅನ್ನು ನಿಯಂತ್ರಿಸಲು 3 ದಾರಿ

ಏರ್ ಪ್ಯುರಿಫೈಯರ್ ಅನ್ನು ಕೊಳ್ಳುವ ಆಸಕ್ತಿ ನಿಮಗಿದ್ದಲ್ಲಿ, ಶಿಯೋಮಿ ಎಂಐ ಏರ್ ಪ್ಯುರಿಫೈಯರ್ ಪ್ರೊದ ಐದು ವಿಶೇಷತೆಗಳನ್ನು ಗಮನಿಸಿ.

ಗಾಳಿಯ ಗುಣಮಟ್ಟವನ್ನು ತೋರಿಸಲು ಒ.ಎಲ್.ಇ.ಡಿ ಪರದೆ.

ಗಾಳಿಯ ಗುಣಮಟ್ಟವನ್ನು ತೋರಿಸಲು ಒ.ಎಲ್.ಇ.ಡಿ ಪರದೆ.

ಶಿಯೋಮಿ ಎಂಐ ಏರ್ ಪ್ಯುರಿಫೈಯರ್ ಪ್ರೋ ಗಾಳಿಯ ಗುಣಮಟ್ಟವನ್ನು ತೋರಿಸಲು ಒ.ಎಲ್.ಇ.ಡಿ ಪರದೆಯಿರಲಿದೆ. ಏರ್ ಪ್ಯುರಿಫೈಯರ್ ತನ್ನೊಳಗಿರುವ ಪಿಎಂ2.5 ಕಾನ್ಸಂಟ್ರೇಷನ್ ಸ್ಕೇಲ್ ಬಳಸಿಕೊಂಡು ಗುಣಮಟ್ಟವನ್ನು ಅಳೆಯುತ್ತದೆ, ಮತ್ತು ಜೊತೆಗೆ ಉಷ್ಟಾಂಶ ಮತ್ತು ತೇವಾಂಶವನ್ನೂ ತಿಳಿಸುತ್ತದೆ.

ಜೊತೆಗೆ ಪರದೆಯ ಸುತ್ತ ಇರುವ ಎಲ್.ಇ.ಡಿ ಉಂಗುರದ ಬಣ್ಣವು ಗಾಳಿಯ ಗುಣಮಟ್ಟವನ್ನು ಆಧರಿಸಿ ಹಸಿರು ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತದೆ.

ದೊಡ್ಡದಿದೆ, ಹೆಚ್ಚು ಪ್ರದೇಶವನ್ನು ಒಳಗೊಳ್ಳುತ್ತದೆ.

ದೊಡ್ಡದಿದೆ, ಹೆಚ್ಚು ಪ್ರದೇಶವನ್ನು ಒಳಗೊಳ್ಳುತ್ತದೆ.

ಶಿಯೋಮಿ ಎಂಐ ಏರ್ ಪ್ಯುರಿಫೈಯರ್ ಪ್ರೊದ ಗಾತ್ರ 735 x 200 x 260 ಎಂಎಂ. ಶಿಯೋಮಿಯ ಪ್ರಕಾರ ಈ ಸಾಧನವು 60 ಸ್ಕ್ವೇರ್ ಮೀಟರಿನಷ್ಟು ಒಳಾಂಗಣವನ್ನು ಶುದ್ಧಗೊಳಿಸುತ್ತದೆ. ಹಿಂದಿನ ಏರ್ ಪ್ಯುರಿಫೈಯರ್ 37 ಸ್ಕ್ವೇರ್ ಮೀಟರಿನಷ್ಟು ಮಾತ್ರ ಶುದ್ಧಗೊಳಿಸುತ್ತಿತ್ತು. ಈ ಏರ್ ಪ್ಯುರಿಫೈಯರ್ ನ ತೂಕ 9.7 ಕೆ.ಜಿ.

ಒಳಗೇನಿದೆ.

ಒಳಗೇನಿದೆ.

ಏರ್ ಪ್ಯುರಿಫೈಯರ್ ನಲ್ಲಿ 360ಡಿಗ್ರಿಯ ಮೂರು ಪದರದ ಫಿಲ್ಟರ್ ಇದೆ, ಜೊತೆಗೆ ಪಿ.ಇ.ಟಿ ಪ್ರಿ ಫಿಲ್ಟರ್, ಇಪಿಎ ಫಿಲ್ಟರ್ ಮತ್ತು ಕಾರ್ಬನ್ ಫಿಲ್ಟರ್ ಇದೆ.

ಇದರಲ್ಲಿ ಉಷ್ಟಾಂಶ, ತೇವಾಂಶ ಮತ್ತು ಗಾಳಿಯ ಗುಣಮಟ್ಟದ ಸಂವೇದಕಗಳಿವೆ. ಜೊತೆಗೆ, ಹೊಸ ಲೇಸರ್ ಪಾರ್ಟಿಕಲ್ ಸಂವೇದಕವನ್ನು ಶಿಯೋಮಿ ಇದರಲ್ಲಿ ಸೇರಿಸಿದೆ, ಇದರಿಂದ ಗಾಳಿಯ ಗುಣಮಟ್ಟ ನಿಖರವಾಗಿ ತಿಳಿಯಲಿದೆ. 0.3 ಮೈಕ್ರೋಮೀಟರ್ ವರೆಗಿನ ವಸ್ತುಗಳನ್ನು ಇದು ಪತ್ತೆ ಹಚ್ಚಬಲ್ಲದು.

ಶಿಯೋಮಿಯ ಪ್ರಕಾರ, ಹೊಸ ಎಂಐ ಏರ್ ಪ್ಯುರಿಫೈಯರ್ ಘಂಟೆಗೆ 500 ಕ್ಯುಬಿಕ್ ಮೀಟರ್ ಲೆಕ್ಕದಲ್ಲಿ ಗಾಳಿಯನ್ನು ಶುದ್ಧಗೊಳಿಸುತ್ತದೆ.

ವೈಫೈ ಇರುವ ಏರ್ ಪ್ಯುರಿಫೈಯರ್ ಅನ್ನು ನಿಯಂತ್ರಿಸಲು ಎಂಐ ತಂತ್ರಾಂಶ.

ವೈಫೈ ಇರುವ ಏರ್ ಪ್ಯುರಿಫೈಯರ್ ಅನ್ನು ನಿಯಂತ್ರಿಸಲು ಎಂಐ ತಂತ್ರಾಂಶ.

ಈ ಏರ್ ಪ್ಯುರಿಫೈಯರ್ ನಲ್ಲಿ ವೈಫೈ 802.11ಎನ್ ಇದೆ. ಆ್ಯಂಡ್ರಾಯ್ಡ್ ಮತ್ತು ಐ.ಒ.ಎಸ್ ಗೆ ಲಭ್ಯವಿರುವ ಎಂಐ ಹೋಮ್ ಆ್ಯಪ್ ಮೂಲಕ ಇದನ್ನು ನಿಯಂತ್ರಿಸಬಹುದು. ಆನ್ - ಆಫ್ ಆಗುವ ಸಮಯ, ನೈಟ್ ಮೋಡ್ ಗೆ ಬದಲಾಗುವ ಸಮಯವನ್ನು ತಂತ್ರಾಂಶದ ಮೂಲಕ ನಿಗದಿಗೊಳಿಸಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Xiaomi Mi Air Purifier Pro comes with an OLED display and can be controlled over Wi-Fi.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X