ಚೀನಾದ ಆ್ಯಪಲ್ ಶಿಯೋಮಿ ಬಿಡುಗಡೆಗೊಳಿಸಿರುವ ಹತ್ತು ವಿಶಿಷ್ಟ ಗ್ಯಾಜೆಟ್ಟುಗಳು.

|

ವಿಭಿನ್ನ ವಿಶಿಷ್ಟ ಗ್ಯಾಜೆಟ್ಟುಗಳನ್ನು ಮಾರುಕಟ್ಟೆಗೆ ಬಿಡುವ ಶಿಯೋಮಿ ಕಂಪನಿಯು ಹೊಸ ಉತ್ಪನ್ನವೊಂದನ್ನು ಬಿಡುಗಡೆಗೊಳಿಸಿದೆ: ವಾವ್ ಸ್ಟಿಕ್ 1fs ಹೆಸರಿನ ಈ ಎಲೆಕ್ಟ್ರಿಕ್ ಸ್ಕ್ರೂ ಡ್ರೈವರಿನ ಬೆಲೆ ಆರ್.ಎಂ.ಬಿ 199 (ಅಂದಾಜು 2,000 ರುಪಾಯಿ).

ಚೀನಾದ ಆ್ಯಪಲ್ ಶಿಯೋಮಿ ಬಿಡುಗಡೆಗೊಳಿಸಿರುವ ಹತ್ತು ವಿಶಿಷ್ಟ ಗ್ಯಾಜೆಟ್ಟುಗಳು.

ಶಿಯೋಮಿ ವಾವ್ ಸ್ಟಿಕ್ 1fs ಚಿಕ್ಕದಾಗಿದೆ, ಕೊಂಡೊಯ್ಯಲು ಸಲೀಸಾಗಿದೆ. ಪೆನ್ ರೀತಿಯ ಡಿಸೈನ್ ಹೊಂದಿರುವ ವಾವ್ ಸ್ಟಿಕ್ ಅಲುಮಿನಿಂನಿಂದ ರಚನೆಯಾಗಿದೆ. ಈ ಸ್ಕ್ರೂ ಡ್ರೈವರಿನ ತೂಕ 234 ಗ್ರಾಮಗಳು ಮತ್ತು ಇದರಲ್ಲಿ ಕತ್ತಲ ಸಮಯದಲ್ಲಿ ಉಪಯೋಗವಾಗುವಂತೆ ಎಲ್.ಇ.ಡಿ ಲೈಟ್ ಕೂಡ ಇದೆ.

ಓದಿರಿ: ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಪ್ರತಿ ಭಾನುವಾರ ಅನ್‌ಲಿಮಿಟೆಡ್‌ ಉಚಿತ ಕರೆ ಆಫರ್

ಈ ವಾವ್ ಸ್ಟಿಕ್ 1fsನಲ್ಲಿ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ ಮೋಡುಗಳೆರಡೂ ಇದೆ. ಮೋಟಾರನ್ನ ರಕ್ಷಿಸುವ ಸಲುವಾಗಿ 3 ಆ್ಯಕ್ಸಿಸ್ ನ ಸ್ವಯಂ ಚಾಲಿತ ಲಾಕಿಂಗ್ ವ್ಯವಸ್ಥೆಯಿದೆ. ನಿಮಿಷಕ್ಕೆ 100 ಆರ್.ಪಿ.ಎಂ ನಷ್ಟು ಗರಿಷ್ಠ ವೇಗದಲ್ಲಿ ಮೋಟಾರ್ ತಿರುಗುತ್ತದೆ. ವಾವ್ ಸ್ಟಿಕ್ 1fsನಲ್ಲಿರುವ ತೆರೆಯಬಹುದಾದ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಎಂಟು ಘಂಟೆಗಳ ಕಾಲ ಉಪಯೋಗಿಸಬಹುದು ಎಂದ ಶಿಯೋಮಿ ಕಂಪನಿ ಹೇಳಿಕೊಳ್ಳುತ್ತದೆ.

ಓದಿರಿ: ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಗೊತ್ತಿರಬೇಕಾದ ಹತ್ತು ಸರಳ ಟಿಪ್ಸುಗಳು

ಶಿಯೋಮಿ ಅನೇಕ ಐ.ಓಟಿ ಸಾಧನಗಳನ್ನು ಬಿಡುಗಡೆಗೊಳಿಸುವುದಕ್ಕೆ ಹೆಸರುವಾಸಿ. ನಿಮ್ಮ ದಿನನಿತ್ಯದ ಕೆಲಸಕ್ಕೆ ಅನುಕೂಲಕರವಾಗಬಲ್ಲ ಕೆಲವಷ್ಟು ಸಾಧನಗಳನ್ನು ಇಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಗಮನಿಸಿ.

ಎಂ.ಐ ಛತ್ರಿ

ಎಂ.ಐ ಛತ್ರಿ

ಇತ್ತೀಚೆಗೆ, ಶಿಯೋಮಿ ನೀರ ಹನಿಗಳು ತಾನೇ ತಾನಾಗಿ ಕೆಳಗೆ ಬಿದ್ದುಬಿಡುವಂತಹ ಎಂ.ಐ ಛತ್ರಿಯನ್ನು ತಯಾರಿಸಿದೆ. ತೈವಾನಿನ ಕೆರಮ್ ಬಟ್ಟೆಯನ್ನು ಉಪಯೋಗಿಸಿ ತಯಾರಿಸಲಾಗಿರುವ ಈ ಛತ್ರಿಯಲ್ಲಿ ಜಲ ನಿರೋಧಕ ಟೆಫ್ಲಾನ್ ಕೋಟಿಂಗ್ ಮಾಡಲಾಗಿದೆ. ಅಪಾಯಕಾರಿ ಯು.ವಿ ಕಿರಣಗಳಿಂದ ಬಳಕೆದಾರರನ್ನು ಈ ಛತ್ರಿ ರಕ್ಷಿಸುತ್ತದೆ.

ಸೊಳ್ಳೆ ಓಡಿಸುವ ಎಂ.ಐ.ಜೆ.ಐ.ಎ ಪೋರ್ಟಬಲ್ ಸಾಧನ

ಸೊಳ್ಳೆ ಓಡಿಸುವ ಎಂ.ಐ.ಜೆ.ಐ.ಎ ಪೋರ್ಟಬಲ್ ಸಾಧನ

ಶಿಯೋಮಿಯ ಸೊಳ್ಳೆ ಓಡಿಸುವ ಪೋರ್ಟಬಲ್ ಸಾಧನದ ಬೆಲೆ $4 (ಅಂದಾಜು 250 ರುಪಾಯಿ). ಇದು ಕಾರ್ಯನಿರ್ವಹಿಸಲು ಪವರ್ ಬ್ಯಾಂಕಿಗೆ ಕನೆಕ್ಟ್ ಮಾಡಬೇಕು. ಬಳಕೆದಾರರು ಇದರಲ್ಲಿ ಸೊಳ್ಳೆ ಬತ್ತಿಯನ್ನು ಇಟ್ಟರೆ ಸಾಧನ ಕೆಲಸ ಮಾಡಲರಾಂಭಿಸುತ್ತದೆ. ತುಂಬ ವಿಶೇಷ ತಂತ್ರಜ್ಞಾನವೇನೂ ಇಲ್ಲಿ ಇಲ್ಲ.

ಎಂ.ಐ.ಜೆ.ಐ.ಎ ಪೆನ್

ಎಂ.ಐ.ಜೆ.ಐ.ಎ ಪೆನ್

ಎಂ.ಐ ಪೆನ್ ಮಾಮೂಲಿ ರಿಫಿಲ್ ಮಾಡಬಹುದಾದ ಪೆನ್, ಇದಕ್ಕೆ ಸ್ವಿಸ್ ಪ್ರೆಮೆಕ್ ರಿಫಿಲ್ಲುಗಳನ್ನು ಉಪಯೋಗಿಸಬೇಕು. ಜಪಾನಿನ ಶೀಘ್ರ ಒಣಗಿಬಿಡುವ ಇಂಕನ್ನು ಬೇಕಾದರೂ ಈ ಪೆನ್ನಿನೊಡನೆ ಉಪಯೋಗಿಸಬಹುದು. ಈ ಪೆನ್ ಮುರಿಯುವುದಿಲ್ಲ, ಹೊಳಪು ಕಳೆದುಕೊಳ್ಳುವುದಿಲ್ಲ. ಕಪ್ಪು ಬಿಳುಪು ಬಣ್ಣದಲ್ಲಿ ಲಭ್ಯವಿದೆ.

ಯೀಲೈಟ್ ಬೆಡ್ ಸೈಡ್ ಲ್ಯಾಂಪ್

ಯೀಲೈಟ್ ಬೆಡ್ ಸೈಡ್ ಲ್ಯಾಂಪ್

ಶಿಯೋಮಿ ಕಂಪನಿಯ ಬೆಡ್ ಸೈಡ್ ಲ್ಯಾಂಪನ್ನು ನಿಮ್ಮ ಸ್ಮಾರ್ಟ್ ಫೋನಿನಿಂದಲೇ ನಿಯಂತ್ರಿಸಬಹುದು. ಒಟ್ಟು 16 ಮಿಲಿಯನ್ ಕಲರ್ರುಗಳನ್ನು ಹೊರಹಾಕಬಲ್ಲದು, ಕೈಸನ್ನೆಯ ಮೂಲಕ ಬಣ್ಣ, ಬೆಳಕಿನ ಪ್ರಖರತೆಯನ್ನು ಬದಲಿಸುವ ಸೌಕರ್ಯವಿದೆ.

ಎಂ.ಐ ಕೆಟಲ್

ಎಂ.ಐ ಕೆಟಲ್

ಶಿಯೋಮಿ ಎಂ.ಐ ಕೆಟಲ್ ನೀರನ್ನು ಬಿಸಿ ಮಾಡುವ ಸಾಮಾನ್ಯ ಎಲೆಕ್ಟ್ರಿಕ್ ಕೆಟಲ್ ಅಲ್ಲ. ಇದೊಂದು ಸ್ಮಾರ್ಟ್ ಕೆಟಲ್. ಈ ಕೆಟಲ್ ಅನ್ನು ನಿಮ್ಮ ಸ್ಮಾರ್ಟ್ ಫೋನಿನಿಂದ ಎಂ.ಐ ಹೋಮ್ ಆ್ಯಪ್ ಮೂಲಕ ನಿಯಂತ್ರಿಸಬಹುದು.

ಎಂ.ಐ ರೈಸ್ ಕುಕರ್

ಎಂ.ಐ ರೈಸ್ ಕುಕರ್

ಶಿಯೋಮಿಯ ರೈಸ್ ಕುಕ್ಕರಿನಲ್ಲಿ ಹಲವು ವೈಶಿಷ್ಟತೆಗಳಿವೆ. ವಿದ್ಯುತ್ ಕಾಂತೀಯ ತರಂಗಗಳನ್ನು ಉಪಯೋಗಿಸಿಕೊಂಡು ಬಿಸಿ ಮಾಡುವ ತಂತ್ರಜ್ಞಾನವಿದೆ ಮತ್ತು ಒಳಗಿನ ಒತ್ತಡವನ್ನು ನಿಯಂತ್ರಿಸಲು ಮ್ಯಾಗ್ನೆಟಿಕ್ ವಾಲ್ವ್ ಇದೆ. ಈ ಸಾಧನವು ಅಡುಗೆಗೆ ಬಳಸುವ ಅಕ್ಕಿಯನ್ನು ಸ್ಕ್ಯಾನ್ ಮಾಡಿ ಅದರ ಆಧಾರದ ಮೇಲೆ ಅನ್ನವಾಗುವ ಪ್ರಕ್ರಿಯೆಯನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುತ್ತದೆ.

ಶಿಯೋಮಿ ಟೂಥ್ ಬ್ರಶ್

ಶಿಯೋಮಿ ಟೂಥ್ ಬ್ರಶ್

ಸೋಕೇರ್ x3 ಹೆಸರಿನ ಶಿಯೋಮಿ ಟೂಥ್ ಬ್ರಶ್ಶಿನ ಬೆಲೆ ಸುಮಾರು 2,300 ರುಪಾಯಿ. ಮ್ಯಾಗ್ನೆಟಿಕ್ ಅಕಾಸ್ಟಿಕ್ ಸಸ್ಪೆನ್ಷನ್ ಮೋಟಾರನ್ನು ಉಪಯೋಗಿಸುವ ಈ ಟೂಥ್ ಬ್ರಶ್ ಹಲ್ಲುಗಳನ್ನು ಸ್ವಚ್ವವಾಗಿಡಲು ಸಹಕಾರಿ. ಇದು ಜಲ ನಿರೋಧಕ ಮತ್ತು ಇದರ ಬ್ರಶ್ ತುಂಬ ಸೂಕ್ಷವಾಗಿದೆ.

ಎಂ.ಐ ವಾಟರ್ ಪ್ಯುರಿಫೈಯರ್

ಎಂ.ಐ ವಾಟರ್ ಪ್ಯುರಿಫೈಯರ್

ಶಿಯೋಮಿ ಕಂಪನಿಯ ಎಂ.ಐ ವಾಟರ್ ಪ್ಯುರಿಫೈಯರ್ ನ ಬೆಲೆ ಸುಮಾರು 13,200 ರುಪಾಯಿ. ನಿಮ್ಮ ಸ್ಮಾರ್ಟ್ ಫೋನನ್ನು ಉಪಯೋಗಿಸಿ ಇದನ್ನು ನಿಯಂತ್ರಿಸಬಹುದು. ನೀರು ಶುದ್ಧೀಕರಿಸಲು ಆರ್.ಒ ತಂತ್ರಜ್ಞಾನವನ್ನಿದು ಉಪಯೋಗಿಸುತ್ತದೆ. ಈ ಸಾಧನವು ಮೆಡಿಕಲ್ ನೀರಿಗೆ, ನೀರಿನಲ್ಲಿರುವ ಉಪ್ಪಿನಂಶ ತೆಗೆಯುವುದಕ್ಕೆ ಮತ್ತು ಶುದ್ಧ ನೀರನ್ನ ಫಿಲ್ಟರ್ ಮಾಡುವುದುಕ್ಕೆ ಸೂಕ್ತವಾದುದು.

ಲಿ-ನಿಂಗ್ ಸ್ಮಾರ್ಟ್ ಶೂ

ಲಿ-ನಿಂಗ್ ಸ್ಮಾರ್ಟ್ ಶೂ

ಈ ಶೂಗಳನ್ನು ಬ್ಲೂಟೂಥ್ ಮೂಲಕ ನಿಮ್ಮ ಸ್ಮಾರ್ಟ್ ಫೋನಿಗೆ ಸಂಪರ್ಕಿಸಬಹುದು. ಹಾಕಿದ ಹೆಜ್ಜೆಗಳೆಷ್ಟು, ಎಷ್ಟು ಕ್ಯಾಲರಿಯನ್ನು ಉಪಯೋಗಿಸಿದ್ದೇವೆ ಮತ್ತು ಇತರೆ ಫಿಟ್ ನೆಸ್ ಸಂಬಂಧಿತ ಡಾಟಾಗಳನ್ನು ಈ ಶೂಗಳಲ್ಲಿರುವ ಸಂವೇದಕಗಳು ಗುರುತಿಸುತ್ತವೆ.

ಎಂ.ಐ ಏರ್ ಪ್ಯುರಿಫೈಯರ್ 2

ಎಂ.ಐ ಏರ್ ಪ್ಯುರಿಫೈಯರ್ 2

ಶಿಯೋಮಿ ಏರ್ ಪ್ಯುರಿಫೈಯರ್ 2 ಗಾಳಿಯಲ್ಲಿರುವ 99.7 ಪ್ರತಿಶತಃದಷ್ಟು ಧೂಳಿನ ಕಣಗಳನ್ನು ಒಂದು ಘಂಟೆಯೊಳಗೆ ತೆಗೆದುಹಾಕಿ ಶುದ್ಧ ಗಾಳಿ ನೀಡಬಲ್ಲದು. ಇದು ಶಿಯೋಮಿ ಹೊರತಂದಿರುವ ಎರಡನೇ ಜೆನರೇಷನ್ನಿನ ಏರ್ ಪ್ಯುರಿಫೈಯರ್. ಇದರ ಬೆಲೆ ಸುಮಾರು 7,200 ರುಪಾಯಿಗಳು.

Best Mobiles in India

English summary
Xiaomi has announced the launch of the Wowstick 1fs electric screwdriver in China. Take a look ten other gadgets that the company has launched before including the Mi Pen, Mi Umbrella, Kettle, Smart Shoes, and more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X