HTC One X ಯಾಕೆ ಕೊಳ್ಳಬೇಕು

By Varun
|
HTC One X ಯಾಕೆ ಕೊಳ್ಳಬೇಕು

HTC ಮೊಬೈಲ್ ಏಪ್ರಿಲ್ ಮೊದಲನೇ ವಾರ One X ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ನೆನ್ನೆ ಓದಿದ್ದೀರಿ.

ಆಂಡ್ರಾಯ್ಡ್ 4.0 ICS ತಂತ್ರಾಂಶ ಹೊಂದಿರುವ ಈ ಫೋನ್ ಬಹಳ ನಿರೀಕ್ಷೆ ಹುಟ್ಟಿಸಿರುವುದು ಅದರ ಫೀಚರುಗಳಿಂದಾಗಿ. ಸ್ವಲ್ಪ ದುಬಾರಿಯಾಗಿದ್ದರೂ ಅತ್ಯುತ್ತಮ ಸ್ಮಾರ್ಟ್ ಫೋನುಗಳಲ್ಲಿ ಒಂದಾಗಿರುವ ಎಲ್ಲ ಸಾಧ್ಯತೆ ಇದೆ.

ಈ ಸ್ಮಾರ್ಟ್ ಫೋನು ಮಾರುಕಟ್ಟೆಗೆ ಬರುವ ಮುನ್ನ ಇದರ 4 ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಿ:

  • ಅತ್ಯುತ್ತಮ ಕ್ಯಾಮರಾ: ಈ ಫೋನ್, 8 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿದ್ದು, 3264 x 2448 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. 30 ಫ್ರೇಮ್ ಪರ್ ಸೆಕಂಡ್ ವೀಡಿಯೋ ರೆಕಾರ್ಡಿಂಗ್ ಕೂಡ ಇದರಲ್ಲಿದೆ.

  • ಡಿಸ್ಪ್ಲೇ : 4.7 ಇಂಚ್ ಸೂಪರ್ IPS LCD2 ಕೆಪಾಸಿಟಿವ್ ಟಚ್ ಸ್ಕ್ರೀನ್, 1280 x 720 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದ್ದು ತರಚು ನಿರೋಧಕ ಗೊರಿಲ್ಲ ಗ್ಲಾಸ್ ಕವರಿಂಗ್ ಇದೆ.

  • ಮ್ಯೂಸಿಕ್ ಅನುಭೂತಿ: ಬೀಟ್ಸ್ ಆಡಿಯೋ ತಂತ್ರಜ್ಞಾನ ಅತ್ಯುತ್ತಮ ಸಂಗೀತ ಕೇಳುವವರಿಗೆ ಮುದ ನೀಡಲಿದ್ದು ಸಾಧಾರಣ ಇಯರ್ ಫೋನ್ನಲ್ಲೂ ಕೂಡ ಒಳ್ಳೆ ಔಟ್ ಪುಟ್ ನೀಡುತ್ತದೆ. ಬೀಟ್ಸ್ ಆಡಿಯೋನಿಂದಾಗಿ ಐಟ್ಯೂನ್ ಮಳಿಗೆಯಿಂದಲೂ ಕೂಡ ಹಾಡುಗಳನ್ನು ಡೌನ್ಲೋಡ್ ಮಾಡಬಹುದು.

  • ಡ್ರಾಪ್ ಬಾಕ್ಸ್: HTC ಬಳಕೆದಾರರಿಗೆ ಡ್ರಾಪ್ ಬಾಕ್ಸ್.ಕಾಂ ನಿಂದ 25 GB ಮಾಹಿತಿಯನ್ನು ಉಚಿತವಾಗಿ ಸಂಗ್ರಹ ಮಾಡಬಹುದಾದ ಸೌಲಭ್ಯ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X