ಇನ್ನು ಮುಖದ ಮೂಲಕ ಮಾತನಾಡಿ: ಇನ್ಟೆಕ್ಸ್

By Super
|
ಇನ್ನು ಮುಖದ ಮೂಲಕ ಮಾತನಾಡಿ: ಇನ್ಟೆಕ್ಸ್
ಬೆಂಗಳೂರು, ಜು. 17: ಮೊಬೈಲ್ ಗಳಲ್ಲಿ ಈಗ ದಿನಕ್ಕೊಂದು ಹೊಸ ತಂತ್ರಜ್ಞಾನ ಬರುತ್ತಿದೆ. ಇರುವ ಮೊಬೈಲ್ ಮೊದಲೆಲ್ಲ ವರುಷ ಕಳೆದರೂ ಹಳೆಯದೆನಿಸುತ್ತಿರಲಿಲ್ಲ. ಆದರೆ ಈಗ! ನಿನ್ನೆ ಕೊಂಡ ಮೊಬೈಲ್ ಇಂದು ಹಳೆಯದು ಎನಿಸುತ್ತಿದೆ. ಇದಕ್ಕೆ ಕಾರಣ ಹೊಸ ಹೊಸ ತಂತ್ರಜ್ಞಾನದ ಬಳಕೆ.

ಇದೀಗ ಆ ದಿಕ್ಕಿನಲ್ಲಿ ಹೊರಟಿರುವ ಮೊಬೈಲ್ ಕಂಪೆನಿಯ ಹೆಸರು ಇಂಟೆಕ್ಸ್. ಇದು 'IN 4470 N' ಎಂಬ ಹೊಸ ಮೊಬೈಲ್ ಬಿಡುಗಡೆ ಮಾಡಿದೆ. ವಿಡಿಯೋ ಕಾಲಿಂಗ್ ಮೂಲಕ ಫೇಸ್ ಟು ಫೇಸ್ ಸೌಲಭ್ಯ ಕಲ್ಪಿಸುವ ಇದು ಈ ಹೊಸ ತಂತ್ರಜ್ಞಾನ ತಂದಿರುವ ಮೊಟ್ಟಮೊದಲ ಮೊಬೈಲ್ ಆಗಿದೆ.

'ಈಗ ಏನೇ ಹೇಳುವುದಿದ್ದರೂ ಮುಖದ ಮೂಲಕ ಹೇಳು!'ಎಂಬ ಘೋಷಣೆಯೊಂದಿಗೆ ಬಂದಿರುವ ಇದು ಇದರಲ್ಲಿರುವ ಜಾಹೀರಾತು ಮೂಲಕ ಲಭ್ಯವಿರುವ ವಿಡಿಯೋ ಕಾಲಿಂಗ್ ಸೌಲಭ್ಯ ನಿಜವಾಗಿಯೂ ಆಚ್ಚರಿ ಹುಟ್ಟಿಸುತ್ತದೆ.

ಈ ಹೊಸ 'IN 4470 N' ನಲ್ಲಿರುವ ವಿಶೇಷತೆಗಳು:
* ಡ್ಯುಯಲ್ ಸಿಮ್
* ಫೇಸ್ ಟು ಫೇಸ್ ಚಾಟ್
* ಆನ್ಸರಿಂಗ್ ಮಶಿನ್
* ಮೊಬೈಲ್ ಟ್ರಾಕರ್
* ವಿಸ್ತರಿಸಬಹುದಾದ 8GB ಮೆಮೊರಿ
* ಆಡಿಯೋ & ವಿಡಿಯೋ ಪ್ಲೇಯರ್
* GPRS & ಬ್ಲೂಟೂಥ್
* 2000 mAh ಬ್ಯಾಟರಿ

ಈ ಎಲ್ಲ ವಿಶೇಷತೆಗಳೊಂದಿಗೆ ಸ್ಪೈಸ್ ಇದರಲ್ಲಿರುವ Ads ವಿಡಿಯೋ ಕಾಲಿಂಗ್ ಜನರನ್ನು ಆಕರ್ಷಿಸುವ ಮೂಲಕ ಹೊಸ ಚರಿತ್ರೆ ಬರಯಲಿದೆ ಎಂದೇ ಹೇಳಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X