ನಿಮ್ಮ ಮೊಬೈಲಿಗೆ ಹತ್ತು ಉಚಿತ ಅಪ್ಲಿಕೇಷನ್

Posted By: Staff

ನಿಮ್ಮ ಮೊಬೈಲಿಗೆ ಹತ್ತು ಉಚಿತ ಅಪ್ಲಿಕೇಷನ್
ದೇಶದಲ್ಲಿ ಹೆಚ್ಚಿನವರು ಆಂಡಾಯ್ಡ್ ಮೊಬೈಲ್ಸ್ ಬಳಸುತ್ತಾರೆ. ಆಂಡ್ರಾಯ್ಡ್ ತಂತ್ರಜ್ಞಾನ ಹೊಂದಿರುವ ಸಾಧನಗಳಿಗೆ ಉಚಿತವಾಗಿ ಅಳವಡಿಸಬಹುದಾದ ಹತ್ತು ಅಪ್ಲಿಕೇಷನ್ ಗಳು ಇಲ್ಲಿವೆ. ನಿಮಗೆ ಬೇಕಾದ್ದನ್ನು ಹೆಕ್ಕಿಕೊಳ್ಳಬಹುದು.

ನ್ಯೂಸ್ ಹಂಟ್: ನಿಮ್ಮ ಮೊಬೈಲಿನಲ್ಲಿ ಕನ್ನಡ ಸುದ್ದಿಗಳನ್ನು ಓದದಿದ್ದರೆ ಹೇಗೆ? ನಿಮ್ಮ ಇಂಟರ್ನೆಟ್ ಸಂಪರ್ಕವಿರುವ ಮೊಬೈಲಿಗೆ ನ್ಯೂಸ್ ಹಂಟ್ ಡೌನ್ ಲೋಡ್ ಮಾಡಿಕೊಂಡು ದಟ್ಸ್ ಕನ್ನಡ ಸೇರಿದಂತೆ ಭಾರತದ ಹೆಚ್ಚಿನ ಭಾಷೆಗಳ ಸುದ್ದಿಗಳನ್ನು ಓದಿರಿ.

ಈ ಅಪ್ಲಿಕೇಷನ್ ಒಂದು ಬಾರಿ ಇನ್ ಸ್ಟಾಲ್ ಆದರೆ, ದಟ್ಸ್ ಕನ್ನಡ ಸುದ್ದಿಗಳನ್ನು ನೀವಲ್ಲ, ಕನ್ನಡ ಸುದ್ದಿಗಳು ನಿಮ್ಮನ್ನೇ ಹಿಂಬಾಲಿಸಿಕೊಂಡು ಬರುತ್ತವೆ. ಸುದ್ದಿಗಳು ಮಾತ್ರವಲ್ಲ ಸಿನೆಮಾ, ಅಡುಗೆ, ಆರೋಗ್ಯ, ಎನ್ಆರ್ಐ, ನಗೆಹನಿ, ಕಾಮಸೂತ್ರ ಮುಂತಾದವುಗಳನ್ನು ನಿಮ್ಮ ಮೊಬೈಲ್ ಹ್ಯಾಂಡ್ ಸೆಟ್ಟಿನಲ್ಲಿಯೇ ಓದಿ ಆನಂದಿಸಬಹುದು. ಇಲ್ಲಿ ಕ್ಲಿಕ್ಕಿಸಿ.

ಗೂಗಲ್ ಮ್ಯಾಪ್ಸ್:
ದಾರಿತಪ್ಪಿದಾಗ ನಿಮಗೆ ದಾರಿ ತೋರಿಸುವ ಗೂಗಲ್ ಮ್ಯಾಪನ್ನು ನಿಮ್ಮ ಮೊಬೈಲ್ ನಲ್ಲಿ ಮಿಸ್ ಮಾಡಿಕೊಳ್ಳಬೇಡಿ.

ಅಡ್ವಾನ್ಸಡ್ ಟಾಸ್ಕ್ ಕಿಲ್ಲರ್: ಇದು ನಿಮ್ಮ ಮೊಬೈಲಿನ ಬ್ಯಾಟರಿ ಉಳಿತಾಯ ಮಾಡುತ್ತದೆ. ಅಚ್ಚರಿಯಾಯಿತೇ ?ಇದೇಂಥ ಕಿಲ್ಲರ್ ಆಪ್ ಎಂದು. ಇದರ ಫೀಚರ್ಸ್ ಗಳನ್ನು ಗೂಗಲ್ ನಲ್ಲಿ ಹುಡುಕಿ ನೋಡಿ.

ಡ್ರಾಪ್ ಬಾಕ್ಸ್:
ಡ್ರಾಪ್ ಬಾಕ್ಸ್ ನಲ್ಲಿ ನಿಮ್ಮ ಫೋಟೊ, ವಿಡಿಯೋ, ಫೈಲು ಮತ್ತು ಇತರ ದಾಖಲೆಗಳನ್ನು ಸಂಗ್ರಹಿಸಿಡಬಹುದು.

ಯೂಟ್ಯೂಬ್:
ವೆಬ್ ಬ್ರೌಸರ್ ಮರೆತುಬಿಡಿ. ಈ ಅಪ್ಲಿಕೇಷನ್ ಬಳಸುವ ಮೂಲಕ ನೇರವಾಗಿ ಯೂಟ್ಯೂಬ್ ಕನೆಕ್ಟ್ ಆಗಿ ವಿಡಿಯೋ ನೋಡಿ ಆನಂದಿಸಬಹುದು.

ನೆಟ್ ಕ್ವಿನ್ ಆಂಟಿವೈರಸ್:
ಮೊಬೈಲ್ ನೊಳಗೆ ನುಸುಳುವ ಮಾಲ್ ವೇರ್ ಮತ್ತು ಸ್ಪೈವೇರ್ ಕುರಿತ ಚಿಂತೆಗೆ ಗೋಲಿ ಹೊಡೆಯಿರಿ. ಸಿಂಪಲ್ ಆಗಿ ಈ ಉಚಿತ ಆಂಟಿ ವೈರಸನ್ನು ಡೌನ್ ಲೋಡ್ ಮಾಡಿಕೊಳ್ಳಿ. ವೈರಸಿನಿಂದ ನಿಮ್ಮ ಮೊಬೈಲನ್ನು ಮುಕ್ತಗೊಳಿಸಿ.

ಅಡಾಬ್ ರೀಡರ್:
ಇದನ್ನು ಕೂಡ ಉಚಿತವಾಗಿ ನಿಮ್ಮ ಆಂಡ್ರಾಯ್ಡ್ ಮೊಬೈಲಿಗೆ ಅಳವಡಿಸಿಕೊಳ್ಳಬಹುದು. ಶೀಘ್ರದಲ್ಲಿ ಫೈಲುಗಳನ್ನು ತೆರೆಯಲು ಮತ್ತು ಅತ್ಯಧಿಕ ಗುಣಮಟ್ಟದ ಚಿತ್ರಗಳನ್ನು ನೋಡಲು, ಪಿಡಿಎಫ್ ಡಾಕ್ಯುಮೆಂಟ್ಸ್ ಓದಲು ಇದು ನೆರವಾಗಲಿದೆ.

ಜಿಟಾಕ್:
ನಿಮ್ಮ ಮೊಬೈಲಿಗೆ Gtalk ಅಳವಡಿಸಿಕೊಳ್ಳುವ ಮೂಲಕ ಮೊಬೈಲ್ ಮೂಲಕವೇ ಆನ್ ಲೈನ್ ಸ್ನೇಹಿತರೊಂದಿಗೆ ಚಾಟ್ ಮಾಡಬಹುದಾಗಿದೆ. ಇದಕ್ಕೆ ಲಾಗಿನ್, ಸೈನ್ ಇನ್ ಆಗೋ ಅವಶ್ಯಕತೆಯೇ ಇಲ್ಲ.

ಆಂಗ್ರಿ ಬರ್ಡ್ಸ್: Angry birds ಎಂಬ ಆಟವನ್ನು ಡೌನ್ ಲೋಡ್ ಮಾಡಿಕೊಳ್ಳಿ. ಕ್ರೇಝಿ ಹಕ್ಕಿಯೊಂದಿಗೆ ಆಟವಾಡಿ ಮನರಂಜನೆ ಪಡೆಯಬಹುದು.

ಜಿಮೇಲ್: ಇಂಟರ್ ನೆಟ್ ಕನೆಕ್ಷನ್ ಇರುವ ಮೊಬೈಲಿನಲ್ಲಿ ಜಿಮೈಲ್ ಇರದಿದ್ದರೆ ಹೇಗೆ. ಜಿಮೇಲ್ ಅಪ್ಲಿಕೇಷನ್ ಕೂಡ ಉಚಿತವಾಗಿ ದೊರಕುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot