ಈ ಹತ್ತು ಫೀಚರ್ ಗಳು 2018 ರಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಂದ ಕಾಣೆಯಾದವು

  |

  ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ಪ್ರತಿವರ್ಷವು ಹೊಸ ಟ್ರೆಂಡ್ ನ್ನು ನಾವು ಗಮನಿಸುತ್ತೇವೆ. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿಕೊಂಡು ಹೋಗುತ್ತದೆ ಎಂಬ ಮಾತಿನಂತೆ ಕೆಲವು ಹೊಸದಾಗಿ ಮಾರುಕಟ್ಟೆಗೆ ಬಂದಾಗ ಕೆಲವು ಹಳೆಯದು ಮರೆಮಾಸಿ ಬಿಡುತ್ತದೆ.

  ಈ ಹತ್ತು ಫೀಚರ್ ಗಳು 2018 ರಲ್ಲಿ ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಂದ ಕಾಣೆಯಾದವು

  ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಕೆಲವು ವಿಶೇಷ ಫೀಚರ್ ಗಳು ಮೊದಮೊದಲು ಹೈ ಬಜೆಟ್ ನ ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಳ್ಳುತ್ತದೆ ನಂತರ ಅದು ಮಧ್ಯಮ ಬಜೆಟ್ ನ ಸ್ಮಾರ್ಟ್ ಫೋನ್ ಗಳಿಗೆ ಬಂತು ನಂತರದ ಕೆಲವೇ ವರ್ಷಗಳಲ್ಲಿ ಬಜೆಟ್ ಸ್ಮಾರ್ಟ್ ಫೋನ್ ಗಳಲ್ಲೂ ಬರುತ್ತದೆ. ಈ ವರ್ಷವೂ ಕೂಡ ಕೆಲವು ಫೀಚರ್ ಗಳು ಹಾಗೆಯೇ ಆಗಿದೆ. ಯಾವುದು ಎಂಬ ಬಗ್ಗೆ ತಿಳಿದುಕೊಳ್ಳಲು ಮುಂಚೆ ಓದಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  5- ಇಂಚಿನ ಸ್ಕ್ರೀನ್ ಸೈಜ್

  ಈ ವರ್ಷ ಬಜೆಟ್ ಸ್ಮಾರ್ಟ್ ಫೋನ್ ಗಳು 5.5 ಇಂಚಿನ ಮತ್ತು 6 ಇಂಚಿನ ಸ್ಕ್ರೀನ್ ಸೈಜ್ ನಲ್ಲಿ ಬಿಡುಗಡೆಗೊಂಡಿದೆ. ಇನ್ನು ಫ್ಲ್ಯಾಗ್ ಶಿಪ್ ಫೋನ್ ಗಳಾದ ಗ್ಯಾಲಕ್ಸಿ ನೋಟ್ 9, ಹುವಾಯಿ ಮೇಟ್ 20 ಪ್ರೋ, ಪಿಕ್ಸಲ್ 3ಎಕ್ಸ್ಎಲ್, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9+ ಅಥವಾ ಒನ್ ಪ್ಲಸ್ 6ಟಿ ಫೋನ್ ಗಳು 6 ಇಂಚಿನ ಸರಾಸರಿ ಸ್ಕ್ರೀನ್ ಸೈಜ್ ನ್ನು ಹೊಂದಿದೆ.

  HD ರೆಸಲ್ಯೂಷನ್ನಿನ ಡಿಸ್ಪ್ಲೇ ಗಳು

  5 ಇಂಚಿನ ಸ್ಕ್ರೀನ್ ನಲ್ಲಿ ಸ್ಮಾರ್ಟ್ ಫೋನ್ ತಯಾರಕರು HD (720x1280 pixels) ಡಿಸ್ಪ್ಲೇ ರೆಸಲ್ಯೂಷನ್ ನ್ನು ಇಡುತ್ತಿದ್ದರು. ಇದು ಪ್ರಮುಖವಾಗಿ ಸ್ಕ್ರೀನ್ ಪೆನಲ್ ನ ಎಕ್ಸ್ ಡೆಂಟ್ ಆಗಿರುವ ಅನುಪಾತದ ಕಾರಣದಿಂದ ಆಗುತ್ತಿತ್ತು. ಇದೀಗ ಬೇಸಿಕ್ ಸೆಟ್ ಗಳು ಕೂಡ HD+ ರೆಸಲ್ಯೂಷನ್ ನ್ನು ಹೊಂದಿರುತ್ತದೆ.

  ಸಾಂಪ್ರದಾಯಿಕ ಸ್ಕ್ರೀನ್ bezelಗಳು

  ಸ್ಕ್ರೀನ್ ಸೈಜ್ ಮತ್ತು ಅನುಪಾತದಲ್ಲಿ ಹೆಚ್ಚಳವಾದಾಗ ಸ್ಕ್ರೀನ್ ಬೆಝಲ್ ಗಳನ್ನು ತೆಗೆದುಹಾಕಬೇಕು ಎಂಬ ಅನಿವಾರ್ಯತೆ ಇಲ್ಲ. ಆದರೆ ಸಾಂಪ್ರದಾಯಿಕವಾಗಿದ್ದ ಸ್ಕ್ರೀನ್ ಬೆಝಲ್ ಗಳು ಇದೀಗ ಸ್ವಲ್ಪ ಮೇಲ್ಬಾಗದಲ್ಲಿ ಮತ್ತು ತಳಭಾಗದಲ್ಲಿ ತೆಳುವಾಗಿರುವುದನ್ನು ನಾವು ಗಮನಿಸಬಹುದು.

  ಪ್ಲಾಸ್ಟಿಕ್/ ಪಾಲಿಕಾರ್ಬೋನೇಟ್ ಬ್ಯಾಕ್ ಪೆನಲ್

  ಪ್ಲಾಸ್ಟಿಕ್ ಅಥವಾ ಪಾಲಿಕಾರ್ಬೋನೇಟ್ ಬ್ಯಾಕ್ ಪೆನಲ್ ಈ ವರ್ಷ ಯಾವುದೇ ಸ್ಮಾರ್ಟ್ ಫೋನ್ ಗಳಲ್ಲೂ ಕಾಣಸಿಗುವುದಿಲ್ಲ. ಹೆಚ್ಚಿನ ಫೋನ್ ಗಳು ಮೆಟಲ್ ಬ್ಯಾಕ್ ನ್ನು ಹೊಂದಿರುತ್ತದೆ. ಪ್ರೀಮಿಯಂ ಫೋನ್ ಗಳು ಗ್ಲಾಸ್+ಮೆಟಲ್ ನ್ನು ಬಳಸಿದ್ದು ಅವು ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಕೆಲವೇ ಕೆಲವು ಫೋನ್ ಗಳು ಮಾತ್ರವೇ ಇದೀಗ ಪಾಲಿಕಾರ್ಬೋನೇಟ್ ನಿಂದ ತಯಾರಿಸಲ್ಪಡುತ್ತಿದೆ.

  ಹಿಂಭಾಗದ ಸಿಂಗಲ್ ಕ್ಯಾಮರಾ

  ಹಿಂಭಾಗದಲ್ಲಿ ಒಂದೇ ಕ್ಯಾಮರಾವಿರುವ ಫೋನ್ ಗಳು ಹೆಚ್ಚುಕಡಿಮೆ ಮುಗಿದ ಅಧ್ಯಾಯವಾಗಿದೆ. ಗೂಗಲ್ ಪಿಕ್ಸಲ್ 3 ಮತ್ತು 3ಎಕ್ಸ್ಎಲ್ ಗಳು ಕಂಪ್ಯೂಟೇಷನಲ್ ಫೋಟೋಗ್ರಫಿಯಲ್ಲಿ ಕೆಲವು ಆಕರ್ಷಕ ಕೆಲಸವನ್ನು ಮಾಡುತ್ತಿವೆ. ಉಳಿದೆಲ್ಲ ಫೋನ್ ಗಳು ಸಿಂಗಲ್ ಕ್ಯಾಮರಾ ಅಳವಡಿಸುವಿಕೆಯಿಂದ ಹಿಂದೆ ಸರಿದಿವೆ. ಹುವಾಯಿ ಮತ್ತು ಸ್ಯಾಮ್ ಸಂಗ್ ಮೂರು ಮತ್ತು ನಾಲ್ಕು ಕ್ಯಾಮರಾಗಳನ್ನು ಅಳವಡಿಸುವುದಕ್ಕೆ ಮುಂದಾಗಿವೆ.

  3000mAh ಬ್ಯಾಟರಿ ಕೆಪಾಸಿಟಿ

  3000mAh ಬ್ಯಾಟರಿ ಕೆಪಾಸಿಟಿಯ ಫೋನ್ ಗಳು ಇನ್ನೂ ಲಭ್ಯವಿದೆಯಾದರು ಅದರ ಟ್ರೆಂಡ್ 2018 ಕ್ಕೆ ಅಂತ್ಯಗೊಂಡಿದೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳು ಇದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲು ಮುಂದಾಗಿವೆ.ಒನ್ ಪ್ಲಸ್, ಹುವಾಯಿ ಮೇಟ್ 20ಪ್ರೋ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9, ನೋಟ್ 9 ಸೇರಿದಂತೆ ಇತರೆ ಫ್ಲ್ಯಾಗ್ ಶಿಪ್ ಫೋನ್ ಗಳು 3000mAh ಬ್ಯಾಟರಿಗಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.ಪಿಕ್ಸಲ್ 3 ಮತ್ತು 3ಎಕ್ಸ್ಎಲ್ ಈ ವಿಚಾರದಲ್ಲೂ ಕೂಡ ಗುಂಪಿಗೆ ಸೇರದ ಫೋನ್ ಗಳಾಗಿವೆ.

  ಫಿಸಿಕಲ್ ಫಿಂಗರ್ ಪ್ರಿಂಟ್ ಸೆನ್ಸರ್

  3000mAh ಬ್ಯಾಟರಿಯ ರೀತಿಯಲ್ಲೇ ಫಿಸಿಕಲ್ ಫಿಂಗರ್ ಪ್ರಿಂಟ್ ಸೆನ್ಸರ್ ಅಳವಡಿಕೆ ಈಗಲೂ ಕೂಡ ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ನಡೆಯುತ್ತದೆಯಾದರೂ ಟ್ರೆಂಡ್ ಆಗಿ ಉಳಿದಿಲ್ಲ. ಇದನ್ನು ನೀವು ಕೆಲವು ಆಯ್ದ ಮಿಡ್ ರೇಂಜಿನ ಮತ್ತು ಬಜೆಟ್ ಸ್ಮಾರ್ಟ್ ಫೋನ್ ಗಳಲ್ಲಿ ಗಮನಿಸಬಹುದಾಗಿದೆ.ಹೆಚ್ಚಿನ ಮಿಡ್ ರೇಂಜ್ ಮತ್ತು ಪ್ರೀಮಿಯಂ ಹ್ಯಾಂಡ್ ಸೆಟ್ ಗಳು ಅದರಲ್ಲೂ ಓಪ್ಪೋ ಮತ್ತು ವಿವೋಗಳು ಈಗಾಗಲೇ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ನ್ನು ಒಳಗೊಂಡಿವೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳು ಫೇಸ್ ಅನ್ ಲಾಕ್ ಫೀಚರ್ ನ್ನು ಕೂಡ ಹೊಂದಿರುತ್ತದೆ.

  3GB RAM

  4GB RAM ಇದೀಗ ಟ್ರೆಂಡ್ ಆಗಿ ಉಳಿದಿಲ್ಲ. ಹೆಚ್ಚಿನ ಸ್ಮಾರ್ಟ್ ಫೋನ್ ತಯಾರಕರು ಒನ್ ಪ್ಲಸ್, ಹುವಾಯಿ, ಓಪ್ಪೋ, ಸ್ಯಾಮ್ ಸಂಗ್ ಹಾಗೂ ಇತರೆ ಹಲವಾರು ಸ್ಮಾರ್ಟ್ ಫೋನ್ ತಯಾರಕರು 6GB RAM ಗೆ ಮುಂದುವರಿದಿದ್ದಾರೆ. ಅಷ್ಟೇ ಯಾಕೆ ಕೆಲವು ಫೋನ್ ಗಳು 10GB RAMನ್ನು ತಲುಪಿವೆ. ಇತ್ತೀಚೆಗೆ ಲೆನೊವಾ 12GB RAM ನ ಫೋನ್ ನ್ನು ತಂದಿದೆ.

  ಹೆಡ್ ಫೋನ್ ಜ್ಯಾಕ್

  ಸಾಂಪ್ರಾದಾಯಿಕ ಹೆಡ್ ಫೋನ್ ಜಾಕ್ ನ್ನು ಬಿಟ್ಟುಬಿಡಲಾಗಿದೆ. ಹೆಚ್ಚಿನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳು 3.5 ಎಂಎಂ ಹೆಡ್ ಫೋನ್ ಜ್ಯಾಕ್ ನ್ನು ಬಳಸುತ್ತಿದ್ದವು ಮತ್ತು ಇದೀಗ ಈ ಟ್ರೆಂಡ್ ಹಳತಾಗಿದೆ. ಕಳೆದ ವರ್ಷ ಆಪಲ್ ಐಫೋನ್ ಎಕ್ಸ್ ನಲ್ಲಿ ಈ ಟ್ರೆಂಡ್ ಆರಂಭಿಸಿತ್ತು. ಆದರೆ ಇದೀಗ ಒನ್ ಪ್ಲಸ್ 6ಟಿ, ಹುವಾಯಿ ಮೇಟ್ 20 ಪ್ರೋ , ಗೂಗಲ್ ಪಿಕ್ಸಲ್ 3ಎಕ್ಸ್ಎಲ್ ಇದನ್ನು ಹಳೆ ಸಂಪ್ರದಾಯವನ್ನು ಮುರಿದುಬಿಟ್ಟಿವೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ ಮತ್ತು ನೋಟ್ ಮಾತ್ರವೇ ಇದನ್ನು ಬೆಂಬಲಿಸುತ್ತಿದೆ.

  ಹಿಗ್ಗಿಸಿಕೊಳ್ಳಬಹುದಾಗಿರುವ ಮೆಮೊರಿ

  ಹೈ ಎಂಡ್ ಸ್ಮಾರ್ಟ್ ಫೋನ್ ಗಳಲ್ಲಿ ಎಕ್ಸ್ಟರ್ನಲ್ ಸ್ಟೋರೇಜ್ ನ್ನು ಸೇರಿಸುವ ಅವಕಾಶವನ್ನು ಬಿಡುತ್ತಿದೆ. ಸ್ಯಾಮ್ ಸಂಗ್ ಮಾತ್ರವೇ ತನ್ನ ಗ್ಯಾಲಕ್ಸಿ ಎಸ್ ಮತ್ತು ನೋಟ್ ಸಿರೀಸ್ ನಲ್ಲಿ ಈ ಅವಕಾಶವನ್ನು ನೀಡುತ್ತಿವೆ. ಅದನ್ನು ಹೊರತು ಪಡಿಸಿದರೆ ಒನ್ ಪ್ಲಸ್, ಗೂಗಲ್ ಪಿಕ್ಸಲ್, ಹುವಾಯಿ ಮತ್ತು ಇತರೆ ಫೋನ್ ಗಳು ಈಗಾಗಲೇ ಇದನ್ನು ಬಿಟ್ಟುಬಿಟ್ಟಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  10 features that almost disappeared from top-end smartphones in 2018

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more