ಸೋನಿ ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್ ಅತ್ಯುತ್ತಮ ಫೋನ್ ಹೇಗೆ?

By Shwetha

  ಸೋನಿಯ ಎಕ್ಸ್‌ಪೀರಿಯಾ ಶ್ರೇಣಿಯ ಹ್ಯಾಂಡ್‌ಸೆಟ್‌ಗೆ ಯಾವುದೇ ಹೆಚ್ಚಿನ ಪ್ರಸ್ತುತಿಯ ಅವಶ್ಯಕತೆಯಿಲ್ಲ. ಇದು ಹೆಚ್ಚಿನ ಇತಿಹಾಸವನ್ನು ಹೊಂದಿದ್ದು ಫೋನ್ ಹಲವಾರು ವರ್ಷಗಳಿಂದ ತನ್ನ ಪ್ರಸಿದ್ಧಿಯನ್ನು ಪಡೆದುಕೊಂಡು ಬಂದಿದೆ. ಇನ್ನು ಹ್ಯಾಂಡ್‌ಸೆಟ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತಿರುವ ಸೋನಿಯ ಹಿರಿಮೆ ನಿಜಕ್ಕೂ ಶ್ಲಾಘನೀಯವಾದುದು.

  ಹೊಸದಾಗಿ ಪರಿಚಯಿಸಿದ ಸೋನಿ ಎಕ್ಸ್‌ಪೀರಿಯಾ ಝೆಡ್ 3 ಕಾಂಪ್ಯಾಕ್ಟ್, ಇದರ ಬಗ್ಗೆ ಹೆಚ್ಚು ಹೇಳಬೇಕಾದ ಅಗತ್ಯವೇ ಇಲ್ಲ. ಇತ್ತೀಚೆಗೆ ಬಿಡುಗಡೆ ಮಾಡಿರುವ ಎಕ್ಸ್‌ಪೀರಿಯಾ ಝೆಡ್3 ಯ ಕಿರಿಯ ಸಹೋದರ ಎಂದೇ ಗುರುತಿಸಲ್ಪಡುವ ಎಕ್ಸ್‌ಪೀರಿಯಾ ಝೆಡ್3 ನಿಜಕ್ಕೂ ನೋಡಲು ಮನೋಹರವಾಗಿದ್ದು ವೈಶಿಷ್ಟ್ಯಪೂರ್ಣ ಎಂದೆನಿಸಿದೆ.

  ಇದನ್ನೂ ಓದಿ: ಆಂಡ್ರಾಯ್ಡ್ ಲೋಲಿಪಪ್ ಮನಮೋಹಕ ವಿಶೇಷತೆ

  ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್ ನಿಜಕ್ಕೂ ತನ್ನ ಬಗ್ಗೆ ಖ್ಯಾತಿಯನ್ನು ಪಡೆದುಕೊಂಡೇ ಅಡಿ ಇಡುತ್ತಿದೆ. ಇನ್ನು ಫೋನ್‌ನ ಕುರಿತು ಹೇಳಬೇಕಾದರೆ ಇದು 4.6 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಟ್ರಿಲ್ಯುಮಿನಿಯಸ್ ತಂತ್ರಜ್ಞಾನವನ್ನು ಪಡೆದುಕೊಂಡಿದೆ. ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 2.5 ಜಿಎಚ್‌ಝೆಡ್‌ನೊಂದಿಗೆ ಅಡ್ರೆನೊ 330 ಜಿಪಿಯುವನ್ನು ಫೋನ್ ಪಡೆದುಕೊಂಡಿದೆ. ಇದು 2 ಜಿಬಿ RAM ಅನ್ನು ಪಡೆದುಕೊಂಡಿದ್ದು ಆಂಡ್ರಾಯ್ಡ್ 4.4.4 ಕಿಟ್‌ಕ್ಯಾಟ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದೆ.

  ಇನ್ನು ಫೋನ್‌ನ ಕ್ಯಾಮೆರಾ ಕಡೆಗೆ ದೃಷ್ಟಿ ಹರಿಸುವುದಾದರೆ ಇದು 20.7 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು 2.2 ಎಮ್‌ಪಿ ಕ್ಯಾಮೆರಾವನ್ನು ಫೋನ್‌ನ ಮುಂಭಾಗದಲ್ಲಿ ಹೊಂದಿದೆ. ಇನ್ನು ಈ ಫೋನ್ ಏಕೆ ಅತ್ಯುತ್ತಮ ಎಂಬುದನ್ನು ತಿಳಿದುಕೊಳ್ಳವ ಬಯಕೆ ನಿಮ್ಮದಾಗಿದೆಯೇ ಹಾಗಿದ್ದರೆ ಕೆಳಗಿನ ಸ್ಲೈಡ್‌ಗಳಲ್ಲಿ ಇದನ್ನು ಅರಿತುಕೊಳ್ಳಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  #1

  ನಿಜಕ್ಕೂ ಅತಿ ಸುಂದರವಾಗಿರುವ ಮತ್ತು ಹಗುರವಾಗಿರುವ ಸೆಟ್ ಇದಾಗಿದ್ದು, ಹಿಂದಿನ ಆವೃತ್ತಿಯ ಪಡಿಯಚ್ಚಿನಂತೆ ಈ ಫೋನ್ ಬಂದಿದೆ. ಇನ್ನು ಸೋನಿ ಎಕ್ಸ್‌ಪೀರಿಯಾ ಝೆಡ್3 ಕುರಿತು ಹೇಳಬೇಕಾದರೆ ಇತರ ಫೋನ್‌ಗಳಿಗಿಂತಲೂ ಇದು ಮನಸೆಳೆಯುವ ವಿನ್ಯಾಸದಲ್ಲಿ ಕಂಡುಬಂದಿದೆ. ಇದು ಸ್ಮಾರ್ಟ್ ನೋಟವನ್ನು ಪಡೆದುಕೊಂಡಿದ್ದು ನಿಮ್ಮ ಕೈಯಲ್ಲಿ ಭದ್ರವಾಗಿ ಕುಳಿತುಕೊಳ್ಳುವಂಥದ್ದಾಗಿದೆ. ಇದರ ಆಕರ್ಷಕ ಗಾತ್ರ ಮತ್ತು ವೃತ್ತಾಕಾರದ ಮೂಲೆಗಳಿಗೆ ಧನ್ಯವಾದಗಳನ್ನು ಅರ್ಪಿಸಬೇಕು.

  #2

  ಈ ಫೋನ್ ಕೈಯಲ್ಲಿ ಹಿಡಿದುಕೊಳ್ಳಲು ತುಂಬಾ ಆರಾಮದಾಯಕವಾಗಿದ್ದು, ತನ್ನ ಓಮ್ನಿಬ್ಯಾಲೆನ್ಸ್ ವಿನ್ಯಾಸದಲ್ಲಿ ಇದರ ಶಕ್ತಿ ಅಡಗಿದೆ. ಇದು ನಿಮ್ಮ ಕೈಯಲ್ಲಿ ಭದ್ರವಾಗಿ ಇರುತ್ತದೆ ಎಂಬುದಕ್ಕೆ ಇದರ ವಿನ್ಯಾಸ ಸಾಕು. ಇನ್ನು ಈಗಷ್ಟೇ ಬಿಡುಗಡೆಯಾಗಿರುವ ಆಪಲ್ ಐಫೋನ್ 6 ಗಿಂತಲೂ ಹೆಚ್ಚು ಮನೋಹರ ಎಂದೆನಿಸಿರುವ ಸೋನಿ ಎಕ್ಸ್‌ಪೀರಿಯಾ ಝೆಡ್3 ಆಪರೇಟ್ ಮಾಡಲು ತುಂಬಾ ಸರಳವಾಗಿದೆ.

  #3

  ಇನ್ನು ಸೋನಿ ಕಂಪೆನಿಯ ಫೋನ್‌ಗಳೆಲ್ಲಾ ನೀರಿನ ವಿರುದ್ಧ ಹೋರಾಡುವಂತಹ ಗುಣವನ್ನು ಪಡೆದುಕೊಂಡು ಬಂದಿದೆ. ಇನ್ನು ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್ ವಿಷಯದಲ್ಲಿ ಇದು ಇನ್ನೊಮ್ಮೆ ಸಾಬೀತಾಗಿದೆ. ಆಪಲ್ ರಚಿತ ಫೋನ್‌ಗಳಲ್ಲಿ ಇಲ್ಲದೇ ಇರುವ ಗುಣವನ್ನು ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್ ಪಡೆದುಕೊಂಡಿದೆ. ನೀರಿನಿಂದ ಫೋನ್‌ಗೆ ಏನಾದರೂ ಸಂಭವಿಸುತ್ತದೆ ಎಂಬ ಭಯ ನಿಮಗೆ ಬೇಡ.

  #4

  ಮೂಲ ಎಕ್ಸ್‌ಪೀರಿಯಾ ಝೆಡ್3 ಯ ಮಿನಿ ಆವೃತ್ತಿ ಇದಾಗಿದ್ದರೂ ಇದು ತನ್ನೆಲ್ಲಾ ವಿಶೇಷತೆಗಳನ್ನು ಮರೆತು ಬಂದಿದೆ ಎಂದಲ್ಲ. ತನ್ನ ಹಿಂದಿನ ಆವೃತ್ತಿಯಂತೆಯೇ ಇದು 2.5 ಜಿಎಚ್‌ಝೆಡ್‌ನೊಂದಿಗೆ ಅಡ್ರೆನೊ 330 ಜಿಪಿಯುವನ್ನು ಫೋನ್ ಪಡೆದುಕೊಂಡಿದ್ದು 3ಜಿಬಿ RAM ಅನ್ನು ಹೊಂದಿದೆ ಆದರೆ ಫೋನ್ ಒದಗಿಸುವುದು 2ಜಿಬಿ RAM ಆಗಿದೆ. ಇನ್ನು ಐಫೋನ್6, ಕೇವಲ 1 ಜಿಬಿ RAM ಅನ್ನು ಒಳಗೊಂಡಿದೆ.

  #5

  ಹೊಸ ಎಕ್ಸ್‌ಪೀರಿಯಾ ಝೆಡ್3 ಯ ಡಿಸ್‌ಪ್ಲೇ ಪರದೆಯು ಪ್ರಮುಖ ವಿಶೇಷತೆಗಳಲ್ಲಿ ಒಂದಾಗಿದೆ. ಕ್ಯಾಮೆರಾ ಮತ್ತು ಟಿವಿ ವ್ಯವಹಾರಗಳಲ್ಲಿ ಎತ್ತಿದ ಕೈ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಸೋನಿ ತನ್ನ ಹ್ಯಾಂಡ್‌ಸೆಟ್‌ಗಳಲ್ಲೂ ಇದೇ ರೀತಿಯ ಕಮಾಲನ್ನು ಪ್ರದರ್ಶಿಸಿದೆ ಎಂಬುದನ್ನು ಮಾತ್ರ ಇಲ್ಲಿ ಪರಿಗಣಿಸಬೇಕಾಗುತ್ತದೆ. ಎಕ್ಸ್‌ಪೀರಿಯಾ ಝೆಡ್3 ಯ ಡಿಸ್‌ಪ್ಲೇ ನಿಜಕ್ಕೂ ಮನಮೋಹಕವಾಗಿದ್ದು ನಿಮ್ಮಲ್ಲಿ ಕೊಳ್ಳುವ ಉತ್ಕಟತೆಯನ್ನು ಹೆಚ್ಚಿಸುವುದು ಖಂಡಿತ.

  #6

  ಕಂಪೆನಿಯ ಸ್ಮಾರ್ಟ್‌ವಾಚ್ ಮತ್ತು ಫೋನ್‌ನ ನಡುವಿನ ಹೊಂದಾಣಿಕೆ ನಿಜಕ್ಕೂ ಅಮೋಘವಾಗಿದ್ದು ವೇಗವಾದ ಸಂಪರ್ಕ ವಿಶೇಷತೆಯನ್ನು ಫೋನ್ ಪಡೆದುಕೊಂಡಿದೆ. ಐಫೋನ್ ಕೂಡ ಈ ವಿಶೇಷತೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿಲ್ಲ ಆದರೆ ಸೋನಿ ಎಕ್ಸ್‌ಪೀರಿಯಾ ಝೆಡ್3 ಯ ಈ ವಿಶೇಷತೆ ಮಾತ್ರ ಸೋನಿ ಅಭಿಮಾನಿಗಳಲ್ಲಿ ಹೊಸ ಪುಳಕವನ್ನುಂಟು ಮಾಡುವುದು ಸತ್ಯವಾಗಿದೆ.

  #7

  ಮೂಲ ಎಕ್ಸ್‌ಪೀರಿಯಾ ಝೆಡ್3 ಮತ್ತು ಎಕ್ಸ್‌ಪೀರಿಯಾ ಝೆಡ್3 ಕಾಂಪ್ಯಾಕ್ಟ್‌ಗಳಲ್ಲಿ ಯಾವುದೇ ಹೆಚ್ಚಿನ ವ್ಯತ್ಯಾಸಗಳಿಲ್ಲ. ಈ ಎರಡೂ ಹ್ಯಾಂಡ್‌ಸೆಟ್‌ಗಳು 20.7ಎಮ್‌ಪಿಯ ಕ್ಯಾಮೆರಾವನ್ನು ಹೊಂದಿದ್ದು 25ಎಮ್‌ಎಮ್ ಜಿ ಲೆನ್ಸ್ ಮತ್ತು ಐಎಸ್‌ಒ 12800 ಸೆಟ್ಟಿಂಗ್‌ಗಳನ್ನು ಪಡೆದುಕೊಂಡಿದೆ. ಯಾವುದೇ ಆಂಡ್ರಾಯ್ಡ್ ಫೋನ್‌ನಲ್ಲೂ ನೀವಿಷ್ಟು ಬಲಶಾಲಿಯಾದ ಕ್ಯಾಮೆರಾವನ್ನು ನೋಡುವುದು ಅಸಾಧ್ಯವಾಗಿದೆ. ಹೊಸ ಆಪಲ್ ಐಫೋನ್ 6 ಬರೇ 8ಎಮ್‌ಪಿ ಕ್ಯಾಮೆರಾವನ್ನು ನೀಡುತ್ತಿದೆ. ಇದು ಕಡಿಮೆ ಬೆಳಕಿನ ವಲಯದಲ್ಲಿ ಕೂಡ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

  #8

  ಇನ್ನು ಎಕ್ಸ್‌ಪೀರಿಯಾ ಝೆಡ್‌3 ಕಾಂಪ್ಯಾಕ್ಟ್‌ನ ಬ್ಯಾಟರಿ ಗುಣಮಟ್ಟವಂತೂ ಮನಸೆಳೆಯುವಂಥಿದ್ದು ಸುದೀರ್ಘ ಸಮಯ ಬಾಳಿಕೆ ಬರುತ್ತದೆ ಎಂಬುದೇ ಇದರ ವಿಶೇಷತೆಯಾಗಿದೆ. ಸಿಂಗಲ್ ಚಾರ್ಜ್‌ನಲ್ಲೇ 24 ಗಂಟೆಗಳ ಅನಿಯಮಿತ ಬ್ಯಾಟರಿ ಬಾಳ್ವಿಕೆಯನ್ನು ಇದು ಒದಗಿಸುತ್ತದೆ.

  #9

  ಸೋನಿಯ ಕಸ್ಟಮ್ ಯೂಸರ್ ಇಂಟರ್ಫೇಸ್ ಜೊತೆಗೆ ಸುಧಾರಿತ ಆಂಡ್ರಾಯ್ಡ್ 4.4 ಇದರಲ್ಲಿ ಚಾಲನೆಯಾಗುತ್ತಿದ್ದು ಹೊಸದಾಗಿ ಅಡಿಇಡುತ್ತಿರುವ ಆಂಡ್ರಾಯ್ಡ್ ಎಲ್‌ಗೆ ಇದನ್ನು ನವೀಕರಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಶಕ್ತಿಶಾಲಿ ಸಿಪಿಯುವನ್ನು ಇದು ಒದಗಿಸುತ್ತಿದ್ದು, ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ ಹೆಚ್ಚು ಬೇಡಿಕೆಯ ಆಟಗಳನ್ನು ಇದು ಸುಲಭವಾಗಿ ನಿಮಗೆ ಒದಗಿಸುತ್ತದೆ.

  #10

  ಎಕ್ಸ್‌ಪೀರಿಯಾ ಅಭಿಮಾನಿಗಳನ್ನು ಹೆಚ್ಚು ಆಕರ್ಷಿಸುವ ಒಂದು ವಲಯವಾಗಿದೆ ಪ್ಲೇಥೋರಾ. ಸೋನಿ ಸೇವೆಗಳ ಹೆಚ್ಚಿನದನ್ನು ಒದಗಿಸುವ ಎಕ್ಸ್‌ಪೀರಿಯಾ ಕಾಂಪ್ಯಾಕ್ಟ್ ನಿಜಕ್ಕೂ ಮನಮೋಹಕ ಹ್ಯಾಂಡ್‌ಸೆಟ್ ಎಂದೆನಿಸಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This article tells about 10 Hard-Hitting Reasons Why Sony Xperia Z3 Compact is the Best Mini Flagship.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more