ಆಂಡ್ರಾಯ್ಡ್ ಲಾಲಿಪಪ್ ಮನಮೋಹಕ ವಿಶೇಷತೆ

Posted By:

ಗೂಗಲ್‌ನ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್, ನಿಜಕ್ಕೂ ಇದು ಹೆಚ್ಚು ಜನಪ್ರಿಯವಾದ ಮೊಬೈಲ್ ಪ್ಲಾಟ್‌ಫಾರ್ಮ್ ಆಗಿದೆ. ಇತಿಹಾಸದಲ್ಲೇ ಅತಿ ಹೆಚ್ಚಿನ ಪ್ರಸಿದ್ಧಿ ಮತ್ತು ಕೀರ್ತಿಯನ್ನು ಪಡೆದಿರುವ ಮೊಬೈಲ್ ಪ್ಲಾಟ್‌ಫಾರ್ಮನ್ನಾಗಿ ಕಂಪೆನಿ ಈ ಓಎಸ್ ಅನ್ನು ರೂಪಿಸಿದೆ. ಇನ್ನು ತನ್ನ ಕಿರೀಟಕ್ಕೆ ಇನ್ನೊಂದು ಗರಿ ಎಂಬಂತೆ ಆಂಡ್ರಾಯ್ಡ್ ಲಾಲಿಪಪ್ ಅನ್ನು ಕಂಪೆನಿ ಬಿಡುಗಡೆ ಮಾಡಿದ್ದು ನಿಜಕ್ಕೂ ಇದು ಗೂಗಲ್ ಅನ್ನು ಪ್ರತಿಷ್ಟೆಯ ಉತ್ತುಂಗಕ್ಕೆ ಏರಿಸಲಿದೆ.

ಇದನ್ನೂ ಓದಿ: ದೋಷಿಗಳ ವಾಟ್ಸಾಪ್ ಖಾತೆ ಜಾಲಾಡಬೇಕೇ?

ಹೊಸ ಆಂಡ್ರಾಯ್ಡ್ ಎಲ್ ಈ ಮುಂಚೆ ಬಿಡುಗಡೆ ಮಾಡಿರುವ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಅನ್ನು ಧೂಳೀಪಟ ಮಾಡುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಹೊಸ ಮತ್ತು ನವೀಕೃತ ಪ್ಲಾಟ್‌ಫಾರ್ಮ್ ಅತ್ಯಂತ ಆಕರ್ಷಕ ಫೀಚರ್‌ಗಳು ಮತ್ತು ಹೊಸದಾಗಿ ಸೇರಿಸಲಾದ ಅಂಶಗಳನ್ನು ಈ ಓಎಸ್ ಮೂಲಕ ಜಾರಿಗೆ ತರುತ್ತಿದ್ದು ನಿಜಕ್ಕೂ ಹೊಸ ಹ್ಯಾಂಡ್‌ಸೆಟ್‌ಗಳಲ್ಲಿ ಆಂಡ್ರಾಯ್ಡ್ ಎಲ್ ರಾರಾಜಿಸಲಿದೆ.

ಇನ್ನು ಇತ್ತೀಚೆಗೆ ಬಿಡುಗಡೆಯಾಗಿರುವ ಹೆಚ್ಚಿನ ಫೋನ್‌ಗಳಲ್ಲಿ ಕಂಡುಬರುವ ಆಂಡ್ರಾಯ್ಡ್ ಎಲ್ ಪ್ಲಾಟ್‌ಫಾರ್ಮ್ ನಿಜಕ್ಕೂ ಫೋನ್ ಪ್ರಿಯರಲ್ಲಿ ಕಾತರತೆಯನ್ನು ಹೆಚ್ಚಿಸಿದೆ. ಇನ್ನು ನಿಮ್ಮ ಫೋನ್‌ನಲ್ಲಿ ಲಾಲಿಪಪ್ ಅಪ್‌ಗ್ರೇಡ್ ಏಕೆ ಮಾಡಬೇಕು ಎಂಬುದಕ್ಕೆ ಕಾರಣಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಇದನ್ನೂ ಓದಿ: ಸ್ಯಾಮ್‌ಸಂಗ್ ಎಸ್5 ನಲ್ಲಿ ಕಂಡುಬಂದಿರುವ ಸಮಸ್ಯೆಗಳು ಹಾಗೂ ಪರಿಹಾರಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡಬಲ್ ಟ್ಯಾಪ್ ಎಚ್ಚರ

ಡಬಲ್ ಟ್ಯಾಪ್ ಎಚ್ಚರ

#1

ಹೊಸ ಎಲ್‌ಜಿ ಸೆಟ್‌ಗಳಲ್ಲಿ ಮಾತ್ರವೇ ಕಂಡುಬರುವ ಒಂದು ವಿಶೇಷ ಅಂಶ ಇದಾಗಿದ್ದು ಲಾಲಿಪಪ್ ನಲ್ಲಿ ಈ ವಿಶೇಷತೆಯನ್ನು ನಿಮಗೆ ಪಡೆಯಬಹುದಾಗಿದೆ. ಇದಕ್ಕೆ ಸಂಯೋಜನೆಯಾಗುವ ಹಾರ್ಡ್‌ವೇರ್ ಅನ್ನು ನಿಮ್ಮ ಫೋನ್ ಒಳಗೊಂಡಿರುವುದು ಅತೀ ಅವಶ್ಯಕವಾಗಿದೆ.

ಪ್ರಿಯಾರ್ಟಿ ಮೋಡ್

ಪ್ರಿಯಾರ್ಟಿ ಮೋಡ್

#2

ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಮನಸೆಳೆಯುವ ಒಂದು ವಿಶೇಷತೆ ಎಂದರೆ ಗೂಗಲ್‌ನ ಹೊಸ ಪ್ರಿಯಾರ್ಟಿ ಮೋಡ್ ಆಗಿದೆ. ಐಓಎಸ್ ಆಧಾರಿತ "ಡು ನಾಟ್ ಡಿಸ್ಟರ್ಬ್" ವಿಶೇಷತೆಯನ್ನು ಈ ಪ್ಲಾಟ್‌ಫಾರ್ಮ್ ಹೊಂದಿದ್ದು, ಯಾವುದೇ ಅಪ್ಲಿಕೇಶನ್ ನಿಮ್ಮನ್ನು ಡಿಸ್ಟರ್ಬ್ ಮಾಡುವುದಿಲ್ಲ.

ಓಕೆ ಗೂಗಲ್

ಓಕೆ ಗೂಗಲ್

#3

ನಿಮ್ಮ ಹ್ಯಾಂಡ್‌ಸೆಟ್‌ನಲ್ಲಿ ಮಾತಿನ ಮೂಲಕ ಸೂಚನೆಗಳನ್ನು ನೀಡಿ ಓಕೆ ಗೂಗಲ್ ಅನ್ನು ಬಳಸಬಹುದಾಗಿದೆ. ಲೋಲಿಪಪ್ ಗೂಗಲ್‌ನ ಈ ವಿಶೇಷತೆಯನ್ನು ಪಡೆದುಕೊಳ್ಳಲಿದೆ. ನಿಮ್ಮ ಫೋನ್ ಸ್ಟ್ಯಾಂಡ್ ಬೈ ಮೋಡ್‌ನಲ್ಲಿದ್ದರೆ, ಅದನ್ನು ಎಚ್ಚರಗೊಳಿಸಲು ನೀವು ಮಾತನಾಡುವುದು ಅತೀ ಅವಶ್ಯಕವಾಗಿದೆ.

ಸುಧಾರಿತ ತ್ವರಿತ ಸೆಟ್ಟಿಂಗ್ಸ್

ಸುಧಾರಿತ ತ್ವರಿತ ಸೆಟ್ಟಿಂಗ್ಸ್

#4

ಲಾಲಿಪಪ್ ಗೆ ಗೂಗಲ್ ಹೆಚ್ಚಿನ ಸುಧಾರಣೆಗಳನ್ನು ಉಂಟುಮಾಡಿದೆ. ಇದರಿಂದ ಬಳಕೆದಾರರಿಗೆ ಜೀವನವನ್ನು ಇನ್ನಷ್ಟು ಸುಲಭಗೊಳಿಸುವ ಯೋಜನೆ ಗೂಗಲ್‌ನದ್ದಾಗಿದೆ. ಹೆಚ್ಚಿನ ಪ್ರಿಯಾರ್ಟಿ ಅಧಿಸೂಚನೆ ಮೋಡ್‌ಗಳಿಗೆ ಧ್ವನಿ ಕೀ ಬಟನ್‌ಗಳನ್ನು ಹೊಂದಿದೆ.

ಮೆಟೀರಿಯಲ್ ವಿನ್ಯಾಸ

ಮೆಟೀರಿಯಲ್ ವಿನ್ಯಾಸ

#5

ಸಂಪೂರ್ಣ ಹ್ಯಾಂಡ್‌ಸೆಟ್‌ನತ್ತ ನೋಟ ಹರಿಸಿದಾಗ ನಿಜಕ್ಕೂ ಇದು ಆಕರ್ಷಕ ವಿನ್ಯಾಸಗಳನ್ನು ಪಡೆದುಕೊಂಡಿದೆ. ಓಎಸ್‌ನ ವಿನ್ಯಾಸ ಕೂಡ ಬಣ್ಣದಿಂದ ಕೂಡಿದ್ದು ನಿಜಕ್ಕೂ ಇದು ಮನಮೋಹಕವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Android Lollipop Rollout Starts Officially: 5 Reasons Why You Should Update Your Handset.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot