ವಿಶ್ವ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಸ್ಮಾರ್ಟ್ ಫೋನ್ ಗಳು:
ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಮಂದಿ ಬಳಕೆ ಮಾಡುತ್ತಿರುವ ಗ್ಯಾಜೆಟ್ ಎಂದರೆ ಮೊಬೈಲ್ ಎನ್ನುಬಹುದು. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಹಲವು ಫೋನ್ ಗಳು ಮಾರುಕಟ್ಟೆಯಲ್ಲಿ ತಮ್ಮದೇ ಚಾಪು ಮೂಡಿಸಿವೆ. ಈ ಕುರಿತಂತೆ ಮಾಹಿತಿಯೂ ಇಲ್ಲಿದೆ.

ಮೊಟೊರೊಲಾ ಡೈನಾಟ್ಯಾಕ್, 1984:
ಇದು 1984ರಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಫೋನ್ ಆಗಿದ್ದು, 10 ಗಂಟೆ ಚಾರ್ಜ್ ಆಗುವ ಸಮಯವನ್ನು ತೆಗೆದುಕೊಳ್ಳುತ್ತಿತ್ತು, ಅಲ್ಲದೇ 30 ನಿಮಿಷಗಳ ಟಾಕ್ ಟೈಮ್ ಮಾತ್ರವೇ ಹೊಂದಿತ್ತು. ಇದರಲ್ಲಿ 30 ನಂಬರ್ ಮಾತ್ರವೇ ಸೇವ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಇದರ ಬೆಲೆ $4000 ಆಗಿತ್ತು.

ಮೊಟೊರೊಲಾ ಸ್ಟಾರ್ ಟ್ಯಾಕ್ 1996:
ಇದು $100ಕ್ಕೆ ದೊರೆಯುತಿತ್ತು ಎನ್ನಲಾಗಿದೆ. ಇದು 500mAh ಬ್ಯಾಟರಿಯನ್ನು ಒಳಗೊಂಡಿತು ಎನ್ನಲಾಗಿದೆ. ಇದು 2ಜಿ ಫೋನ್ ಆಗಿತ್ತು ಎನ್ನಲಾಗಿದೆ. ಇದು ಫ್ಲಿಪ್ ಫೋನ್ ಆಗಿತ್ತು.

ನೋಕಿಯಾ ಕಮ್ಯುನಿಕೇಟರ್, 1996:
ಇದು 8MB ಸ್ಟೋರೆಜ್ ಹೊಂದಿದ್ದ ಸ್ಮಾರ್ಟ್ ಫೋನ್ ಇದಾಗಿದೆ. ಆಗಿನ ಕಾಲಕ್ಕೆ ಇದು ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿತ್ತು ಎನ್ನಲಾಗಿದೆ. ಇದರಲ್ಲಿ ಕ್ವಲ್ಟಿ ಕೀ ಬೋರ್ಟ್ ಅನ್ನು ಕಾಣಬಹುದಾಗಿತ್ತು. ಇಮೇಲ್ ಗಳನ್ನು ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿತ್ತು.


ನೋಕಿಯಾ 3310:
ನೋಕಿಯಾ ನಿರ್ಮಾಣ ಮಾಡಿದ್ದ ಅತ್ಯಂತ ಜನಪ್ರಿಯ ಫೋನ್ ಇದಾಗಿದೆ ಎನ್ನಲಾಗಿದೆ. ಇದರಲ್ಲಿ ಟೆಕ್ಸ್ ಮೇಸೆಜ್ ಕಳುಹಿಸುವ ಅವಕಾಶವನ್ನು ನೀಡಲಾಗಿತ್ತು.

ನೋಕಿಯಾ 1100:
ಈ ಪೋನ್ ಬ್ಯಾಟರಿ ಬ್ಯಾಕಪ್ ಗೆ ಹೆಚ್ಚು ಹೆಸರುವಾಸಿಯಾಗಿತ್ತು ಎನ್ನಲಾಗಿದೆ. ಇದು ಟೆಕ್ಸ್ ಮೇಸೆಜ್ ಅನ್ನು ಸ್ಟೋರ್ ಮಾಡಿಕೊಳ್ಳುವ ಅವಕಾಶವನ್ನು ಹೊಂದಿತ್ತು.

ಟೆರೋ 180:
ಇದು ಸಹ ಜನ ಪ್ರಿಯ ಫೋನ್ ಗಳಲ್ಲಿ ಒಂದು ಎನ್ನಲಾಗಿದೆ. ಇದು ಫ್ಲಿಪ್ ಫೋನ್ ಆಗಿತ್ತು, ಟೆಚ್ ಸ್ಕ್ರಿನ್ ಅನ್ನು ಒಳಗೊಂಡಿತ್ತು.

ಮೊಟೊರೊಲಾ ರೈಜರ್:
ಇದು ಸಹ ಉತ್ತಮ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿತ್ತು. ಇದು ಯುಎಸ್ ಬಿ ಪೋರ್ಟ್ ಹೊಂದಿಲ್ಲದೇ ಮ್ಯೂಸಿಕ್ ಕೇಳುವ ಅವಕಾಶವನ್ನು ನೀಡಿತ್ತು.

ಐಫೋನ್:
ಇದು ಸ್ಮಾರ್ಟ್ ಪೋನ್ ಇತಿಹಾಸಹದಲ್ಲಿಯೇ ಅತ್ಯಂತ ಖ್ಯಾತಿಯನ್ನು ಪಡೆದುಕೊಂಡಿದ್ದ ಫೋನ್ ಎನ್ನಲಾಗಿದೆ. ಇದು ಸ್ಮಾರ್ಟ್ ಲೋಕದ ಮೊದಲ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದ ಪೋನ್ ಎನ್ನಲಾಗಿದೆ.

ಸ್ಯಾಮ್ ಸಂಗ್ ಗ್ಯಾಲೆಕ್ಸಿ ನೋಟ್:
ಇದು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಇತಿಹಾಸದಲ್ಲೇ ಹೊಸ ಅಲೆಯನ್ನು ಸೃಷ್ಟಿಸಿತ್ತು ಎನ್ನಲಾಗಿದೆ. ಇದರಲ್ಲಿ 5.3 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿತ್ತು.

LG G6:
ಮಾರುಕಟ್ಟೆಯಲ್ಲಿ 18:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಿದ್ದ ಮೊದಲ ಸ್ಮಾರ್ಟ್ ಫೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದು ಸಹ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡಿತ್ತು.


Click it and Unblock the Notifications








