2019ರಲ್ಲಿ ಗೂಗಲ್‌ ಸರ್ಚ್‌ನಲ್ಲಿ ಟ್ರೆಂಡಿಂಗ್‌ನಲ್ಲಿರುವ ಫೋನ್ ಯಾವುದು ಗೊತ್ತಾ?

|

ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಇಂದಿನ ಪ್ರಮುಖ ಅಗತ್ಯ ಡಿವೈಸ್‌ ಆಗಿದ್ದು, ಈ ನಿಟ್ಟಿನಲ್ಲಿ ಮಾರುಕಟ್ಟೆಗೆ ಲಾಂಚ್ ಆಗುವ ಹೊಸ ಫೋನ್‌ಗಳತ್ತ ಫೋನ್‌ ಪ್ರಿಯರು ಚಿತ್ತ ನೆಟ್ಟಿರುತ್ತಾರೆ. ಇನ್ನು ಕೆಲವರು ಗೂಗಲ್ ಸರ್ಚ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹುಡುಕುತ್ತಿರುತ್ತಾರೆ. ಹೊಸ ಫೋನ್ ಖರೀದಿಸಬೇಕಿದ್ದರೂ ಸಹ ಗೂಗಲ್‌ ಸರ್ಚ್ ಮಾಡಿ ಫೋನ್‌ಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ಹೀಗೆ ಈ ವರ್ಷ ಗೂಗಲ್‌ ಸರ್ಚ್‌ನಲ್ಲಿ ಹೆಚ್ಚು ಸರ್ಚ್ ಆದ ಫೋನ್‌ ಯಾವುವು ಗೊತ್ತಾ?

ಸ್ಮಾರ್ಟ್‌ಫೋನ್‌ಗಳು

ಪ್ರಸಕ್ತ ವರ್ಷ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಟ್ಟಿವೆ. ಆದರೆ ಅವುಗಳೆಲ್ಲವು ಗ್ರಾಹಕರನ್ನು ಆಕರ್ಷಿಸಿಲ್ಲ. ಕೆಲವು ಫೋನ್‌ಗಳು ಅತ್ಯುತ್ತಮ ಫೀಚರ್ಸ್‌ಗಳಿಂದ ಹೆಚ್ಚು ಸೌಂಡ್ ಮಾಡಿವೆ ಹಾಗೆಯೇ ಇನ್ನು ಕೆಲವು ಹೇಗೆ ಲಾಂಚ್ ಆದವೋ ಹಾಗೆಯೇ ಹೇಳ ಹೆಸರಿಲ್ಲದೇ ಹೋಗಿವೆ. 2019ರಲ್ಲಿ ಅತೀ ಹೆಚ್ಚು ಗೂಗಲ್‌ ಸರ್ಚ್ ಆದ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ರೆಡ್‌ ಮಿ ನೋಟ್ 7 ಪ್ರೊ

ರೆಡ್‌ ಮಿ ನೋಟ್ 7 ಪ್ರೊ

ಶಿಯೋಮಿ ಕಂಪನಿಯ ಈ ರೆಡ್‌ ಮಿ ನೋಟ್ 7 ಪ್ರೊ ಈ ವರ್ಷ ಮಾರುಕಟ್ಟೆಯಲ್ಲಿ ಹೆಚ್ಚು ಸೌಂಡ್ ಮಾಡಿರೊ ಫೋನ್ ಆಗಿದ್ಉ, ಹಾಗೆಯೇ ಗೂಗಲ್ ಸರ್ಚ್‌ನಲ್ಲಿಯೂ ಸಹ ನಂಬರ್‌ ಒನ್ ಸ್ಥಾನ ಕಂಡಿದೆ. 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ, ಮುಖ್ಯ ಕ್ಯಾಮೆರಾ 48ಎಂಪಿ, ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್, ಅಧಿಕ ಬ್ಯಾಟರಿ ಬಾಳಿಕೆ ಮತ್ತು ಡಿಸೈನ್‌ ಫೀಚರ್ಸ್‌ಗಳಿಂದ ಹೆಚ್ಚು ಗಮನ ಸೆಳೆದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ20

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ20

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ20 ಸ್ಮಾರ್ಟ್‌ಫೋನ್ ಸಹ ಗೂಗಲ್ ಸರ್ಚ್‌ನಲ್ಲಿ ಹೆಚ್ಚಿನ ಸರ್ಚ್ ಕಂಡಿದ್ದು, ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 5,000mAh ಬ್ಯಾಟರಿ, 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಇನ್‌ಫಿನಿಟಿ ಡಿಸ್‌ಪ್ಲೇ, Exynos 7904 ಪ್ರೊಸೆಸರ್‌ ಹಾಗೂ ಟೈಪ್‌ ಸಿ ಫೋರ್ಟ್‌ ಫೀಚರ್ಸ್‌ಗಳನ್ನು ಪಡೆದಿದೆ.

ರೆಡ್ಮಿ ನೋಟ್ 8 ಪ್ರೊ

ರೆಡ್ಮಿ ನೋಟ್ 8 ಪ್ರೊ

ಶಿಯೋಮಿ ಸಂಸ್ಥೆಯ ಈ ರೆಡ್ಮಿ ನೋಟ್ 8 ಪ್ರೊ ಫೋನ್ ಸಹ ಗೂಗಲ್ ಸರ್ಚ್‌ನಲ್ಲಿ ಭಾರಿ ಸದ್ದು ಮಾಡಿದ್ದು, ಹೆಚ್ಚಿನ ಗ್ರಾಹಕರನ್ನು ಸೆಳೆಯುವಲ್ಲಿ ಯಶ ಕಂಡಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್‌ G90T ಪ್ರೊಸೆಸರ್‌ ಅನ್ನು ಪಡೆದಿದೆ. ಕ್ವಾಡ್‌ ಕ್ಯಾಮೆರಾ ಫೀಚರ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ ಬ್ಯಾಟರಿ ಸಹ ಅಧಿಕವಾಗಿದೆ.

ರಿಯಲ್‌ ಮಿ 5

ರಿಯಲ್‌ ಮಿ 5

ಚೀನಾ ಮೂಲದ ರಿಯಲ್‌ ಮಿ ಕಂಪನಿಯ ಹೊಸ ರಿಯಲ್‌ ಮಿ 5 ಸ್ಮಾರ್ಟ್‌ಫೋನ್ ಬಗ್ಗೆ ಗ್ರಾಹಕರು ಗೂಗಲ್‌ ಸರ್ಚ್‌ನಲ್ಲಿ ಹೆಚ್ಚಾಗಿ ಹುಡುಕಿದ್ದಾರೆ. ಈ ಫೋನ್ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ, 5,000mAh ಬ್ಯಾಟರಿ ಬಾಳಿಕೆ, ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಐಫೋನ್‌ 11

ಐಫೋನ್‌ 11

ಆಪಲ್‌ ಸಂಸ್ಥೆಯ ಇತ್ತೀಚಿಗಿನ ಹೊಸ ಐಫೋನ್ 11 ಸರಣಿಯು ಸಹ ಬಾರಿ ಟ್ರೆಂಡ್ ಹುಟ್ಟು ಹಾಕಿದ್ದು, ಗೂಗಲ್‌ ಸರ್ಚ್‌ನಲ್ಲಿ ಜನರು ಐಫೋನ್‌ 11 ಸನ್ನು ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಇನ್ನು ಐಫೋನ್ 11 A13 ಬಯೋನಿಕ್ ಚಿಪ್‌ ಹೊಂದಿದ್ದು, ಐಓಎಸ್‌ 13 ಹೊಂದಿದೆ. 12ಎಂಪಿಯ ಡ್ಯುಯಲ್‌ ಕ್ಯಾಮೆರಾ ಹೊಂದಿದ್ದು, ಅತ್ಯುತ್ತಮ ಬ್ಯಾಟರಿ ಪಡೆದಿದೆ.

Best Mobiles in India

English summary
10 most searched phones on Google in 2019. The list includes Redmi Note 8 Pro, Vivo S1, Realme 5 and more. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X