Subscribe to Gizbot

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

Written By:

ಇಂದಿನ ಅಧುನಿಕ ಯುಗದಲ್ಲಿ ಸ್ಮಾರ್ಟ್‌ಫೋನ್ ಎಂಬುದು ಪ್ರತಿಯೊಬ್ಬ ಬಳಕೆದಾರರ ಅತ್ಯಮೂಲ್ಯ ಆಸ್ತಿ ಎಂದೆನಿಸಿದೆ. ವೃತ್ತಿಪರ ಅಂತೆಯೇ ದೈನಂದಿನ ಜೀವನದಲ್ಲಿ ಅತಿಮುಖ್ಯ ಪಾತ್ರ ವಹಿಸುವ ಸ್ಮಾರ್ಟ್‌ಫೋನ್‌ಗಳ ಬಳಕೆ ದಿನದಿಂದ ಹೆಚ್ಚಾಗುತ್ತಿದೆಯೇ ಹೊರತು ಕುಸಿತವನ್ನು ಕಾಣುತ್ತಿಲ್ಲ. ಇನ್ನು ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಒಂದಕ್ಕಿಂತ ಭಿನ್ನವಾಗಿರುವ, ವೈಶಿಷ್ಟ್ಯತೆಗಳಿಂದ ಕೂಡಿರುವ ಫೋನ್‌ಗಳು ಗ್ರಾಹಕರಿಗೆ ಮೋಸ ಮಾಡದೇ ಇನ್ನಷ್ಟು ನಂಬಿಕೆಯನ್ನು ಗಳಿಸಿಕೊಂಡಿದೆ. [ಅತಿ ದುಬಾರಿಯಾಗಿರುವ ಟಾಪ್ 10 ಸ್ಮಾರ್ಟ್‌ಫೋನ್‌ಗಳು]

ಇನ್ನು ಸ್ಮಾರ್ಟ್‌ಫೋನ್ ಖರೀದಿಸುವಾಗ ನೀವು ಯಾವ ಎಲ್ಲಾ ಅಂಶಗಳತ್ತ ಗಮನಹರಿಸಬೇಕು ಎಂಬುದನ್ನು ಕುರಿತು ಇಂದಿನ ಲೇಖನದಲ್ಲಿ ನಾವು ಚರ್ಚಿಸೋಣ. ನಿಮ್ಮ ಸ್ಮಾರ್ಟ್‌ಫೋನ್ ಏನೆಲ್ಲಾ ಅಂಶಗಳನ್ನು ಹೊಂದಿರಬೇಕು ಎಂಬುದೇ ಈ ಲೇಖನದ ಒಳಗುಟ್ಟಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಮ್ಮ ಫೋನ್ ಹೇಗಿದ್ದರೆ ಚೆಂದ

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಮಾರುಕಟ್ಟೆಗೆ ಹೊಸ ಫೋನ್ ಬಂತೆಂದರೆ ಸಾಕು ಅದನ್ನು ಖರೀದಿಸುವ ಉತ್ಸಾಹ ನಮ್ಮಲ್ಲಿ ಇಮ್ಮಡಿಯಾಗುತ್ತದೆ. ಆದರೆ ಹೆಚ್ಚು ಉತ್ಸಾಹ ತೋರಿ ನಮಗೆ ಅಗತ್ಯವಿರದ ಫೋನ್ ಖರೀದಿಸುವುದಕ್ಕಿಂತ ಆ ಫೋನ್ ನಮಗೆ ಉಪಯೋಗಕಾರಿಯೇ ಎಂಬುದನ್ನು ಆಲೋಚಿಸಿ. ಅದರ ಪ್ರಯೋಜನಗಳನ್ನು ಕುರಿತು ನೀವು ಅರಿತುಕೊಳ್ಳಬೇಕು.

ಫೋನ್ ಕಾಂಟ್ರಾಕ್ಟ್

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಇನ್ನು ನೀವು ಫೋನ್ ಅನ್ನು ಕಾಂಟ್ರಾಕ್ಟ್ ಅಲ್ಲಿ ಖರೀದಿಸಿದ್ದು ಎಂದಾದಲ್ಲಿ ಕಾಂಟ್ರಾಕ್ಟ್ ತೀರುವ ಮುನ್ನವೇ ಹೊಸ ಫೋನ್ ಅವಶ್ಯಕತೆಯಿದೆಯೇ ಎಂಬುದನ್ನು ಮನಗಾಣಿ. ಹಳೆಯ ಫೋನ್‌ನ ಕಾಂಟ್ರಾಕ್ಟ್ ಅಂತೆಯೇ ಹೊಸ ಫೋನ್ ಖರೀದಿಯ ದುಡ್ಡು ನಿಮ್ಮ ತಲೆಯನ್ನು ತಿನ್ನುವಂತಿರಬಾರದು.

ಫೋನ್ ಸ್ಕ್ರೀನ್ ಎಷ್ಟು ದೊಡ್ಡದಾಗಿರಬೇಕು?

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಇನ್ನು ಫೋನ್ ಸ್ಕ್ರೀನ್ ಕೂಡ ನಿಮ್ಮ ಖರೀದಿಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ದೊಡ್ಡ ಸ್ಕ್ರೀನ್ ಅನ್ನು ನೀವು ಬಯಸುತ್ತೀರಿ ಎಂದಾದಲ್ಲಿ ಆಂಡ್ರಾಯ್ಡ್ ಉತ್ತಮ ಆಯ್ಕೆಯಾಗಿದೆ. ಬಜೆಟ್‌ಗೂ ನಿಲುಕುವ ಅಂತೆಯೇ ಆಕರ್ಷಣೆ ಕುಂದದ ಆಂಡ್ರಾಯ್ಡ್ ಫೋನ್‌ಗಳು ನಿಜಕ್ಕೂ ಉತ್ತಮವಾಗಿದೆ.

ಐಫೋನೇ ಅಥವಾ ಆಂಡ್ರಾಯ್ಡ್

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಕೆಲವರಿಗೆ ಆಂಡ್ರಾಯ್ಡ್ ಓಎಸ್ ಇಷ್ಟವಾದಲ್ಲಿ ಇನ್ನು ಕೆಲವರಿಗೆ ಐಓಎಸ್ ಇಷ್ಟವಾಗುತ್ತದೆ. ಕೆಲವೊಂದು ನಿರ್ಬಂಧಗಳನ್ನು ಹೊಂದಿರುವ ಐಓಎಸ್ ಆಂಡ್ರಾಯ್ಡ್‌ನಂತೆ ಬಳಕೆದಾರ ಸ್ನೇಹಿ ಎಂದೆನಿಸುವುದಿಲ್ಲ.

ಯಾವ ಓಎಸ್ ಸುಭದ್ರ

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಆಪಲ್‌ನ ಐಓಎಸ್ ಆಂಡ್ರಾಯ್ಡ್‌ಗಿಂತ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ ಹ್ಯಾಕರ್‌ಗಳ ಹಾವಳಿಗೆ ಸುಲಭವಾಗಿ ಸಿಲುಕುವಂತಿದ್ದು ಐಓಎಸ್ ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತದೆ.

ಎಲ್ಲವೂ ಒಂದೇ ಡಿವೈಸ್‌ನಲ್ಲಿ

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ನಿಮ್ಮ ಫೋನ್ ಎಲ್ಲಾ ಫೀಚರ್‌ಗಳಾದ ಕರೆಮಾಡುವಿಕೆ, ಸಂದೇಶ ರಚಿಸುವಿಕೆ, ನಿಗದಿಪಡಿಸುವಿಕೆ ಮತ್ತು ಮನರಂಜನೆ ಕೇಂದ್ರವಾಗಿರಬೇಕೆಂದು ಬಯಸುವಿರಾ? ಹಾಗಿದ್ದಲ್ಲಿ ಉತ್ತಮ ಬ್ರ್ಯಾಂಡ್‌ನ ಫೋನ್ ಆಯ್ಕೆ ನಿಮ್ಮದಾಗಲಿ.

ಅತ್ಯಾಧುನಿಕ ಸ್ಮಾರ್ಟ್‌ಫೋನ್ ಒಪ್ಪಂದಗಳನ್ನು ಹುಡುಕುವುದು ಹೇಗೆ?

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಕ್ಯಾರಿಯರ್ಸ್ ಮುಖ್ಯ ವೆಬ್‌ಸೈಟ್‌ಗೆ ಹೋಗಿ ಒಪ್ಪಂದಗಳ ಬಗ್ಗೆ ಮಾಹಿತಿ ಕಲೆಹಾಕಿ. ಬ್ಲ್ಯಾಕ್ ಫ್ರೈಡೇ ಮತ್ತು ಸೈಬರ್ ಮಂಡೇಯಂತಹ ವಿಶೇಷ ದಿನಗಳಲ್ಲಿ ಫೋನ್ ಡೀಲ್‌ಗಳು ಕಾಣಸಿಗುತ್ತವೆ.

ಕಾನ್ಫರೆನ್ಸ್ ಕಾಲ್‌ಗಾಗಿ ಉತ್ತಮ ಫೋನ್

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಮತ್ತು ನೋಟ್‌ನಂತಹ ಫೋನ್‌ಗಳು ಕಾನ್ಫರೆನ್ಸ್ ಕರೆ ಮಾಡಲು ಆರಾಮದಾಯಕ ಎಂದೆನಿಸಿವೆ. ಇದು ವೈರ್‌ಲೆಸ್ ಪರಿಕರಗಳನ್ನು ಹೊಂದಿದ್ದು ಕಾನ್ಫರೆನ್ಸ್ ಕರೆಗೆ ಅನುವು ಮಾಡಿಕೊಡುತ್ತದೆ.

ಸುದೀರ್ಘ ಬ್ಯಾಟರಿ ಬಾಳ್ವಿಕೆ

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

4ಜಿ ಮೋಟೋರೋಲಾ ಡ್ರಾಯ್ಡ್ ರಜಾರ್ ಮ್ಯಾಕ್ಸ್ ಎಚ್‌ಡಿ ಉತ್ತಮ ಬ್ಯಾಟರಿ ಬಾಳ್ವಿಕೆ ಇರುವ ಫೋನ್ ಆಗಿ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ.

ವ್ಯವಹಾರಕ್ಕಾಗಿ ಉತ್ತಮ ಫೋನ್

ಸ್ಮಾರ್ಟ್‌ಫೋನ್ ಖರೀದಿಗೆ ಅಗತ್ಯವಾಗಿರುವ 10 ಸೂತ್ರಗಳು

ಆಪಲ್ 5 ಎಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್4 ಆಕ್ಟೀವ್, ಮೋಟೋರೋಲಾ ಮೋಟೋ ಎಕ್ಸ್ ವ್ಯವಹಾರಕ್ಕಾಗಿ ಹೇಳಿಮಾಡಿಸಿದ ಫೋನ್‌ಗಳಾಗಿವೆ. ಕರೆಮಾಡುವುದು, ಇಮೇಲ್ ಪರಿಶೀಲಿಸುವುದು, ಪಠ್ಯ ಕಳುಹಿಸುವಿಕೆ ಮೊದಲಾದ ಕೆಲಸಗಳನ್ನು ಬರಿಯ ಸ್ಪರ್ಶದಲ್ಲೇ ಈ ಫೋನ್‌ಗಳು ಚಕಚಕನೇ ಮಾಡಿ ಮುಗಿಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A smartphone is arguably the single most valuable tool for today's time-strapped entrepreneur. They help us navigate -- and hopefully dominate -- our overbooked professional and personal lives, instantly connecting us to everything we need on the go.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot