2018 ರಲ್ಲಿ ವಿನೂತನ ಆವಿಷ್ಕಾರಗಳೊಂದಿಗೆ ಹೊರಬಂದವು ಈ 10 ಸ್ಮಾರ್ಟ್ ಫೋನ್ ಗಳು

|

2018 ರಲ್ಲಿ ಸ್ಮಾರ್ಟ್ ಫೋನ್ ಜಗತ್ತಿನಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳಾಗಿದೆ. ವಿಭಿನ್ನ ಫೀಚರ್ ಗಳು ಸ್ಮಾರ್ಟ್ ಫೋನ್ ಗಳಲ್ಲಿ ಕಾಣಿಸಿಕೊಂಡಿವೆ. ಹಲವು ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು ತಮ್ಮ ಪ್ರೊಡಕ್ಟ್ ನಲ್ಲಿ ಈ ಹಿಂದೆ ಎಂದೂ ಕಂಡಿರದ ಕೆಲವು ಫೀಚರ್ ಗಳನ್ನು ತಮ್ಮ ಫೋನ್ ನಲ್ಲಿ ಅಳವಡಿಸಿ ಜನಸಾಮಾನ್ಯರ ದೈನಂದಿನ ಚಟುವಟಿಕೆಯನ್ನು ಮತ್ತಷ್ಟು ಸರಳಗೊಳಿಸಲು ನೆರವು ನೀಡಿದೆ.

2018 ರಲ್ಲಿ ಈ 10 ಸ್ಮಾರ್ಟ್ ಫೋನ್ ಗಳು ಹೊಸತನ್ನು ಅಳವಡಿಸಿಕೊಂಡಿದ್ದವು

ನಾವಿಲ್ಲಿ 10 ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ ಮತ್ತು ಇವು ಆವಿಷ್ಕಾರವನ್ನು ಒಂದು ಹಂತಕ್ಕೆ ಮೇಲಕ್ಕೆ ಕೊಂಡಯ್ದ ಫೋನ್ ಗಳು ಎಂದರೆ ಅತಿಶಯೋಕ್ತಿ ಆಗಲಾರದು. ಅನನ್ಯವಾಗಿರುವ ಫೀಚರ್ ಗಳಿಂದ 2018 ರಲ್ಲಿ ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆದ ವಿಭಿನ್ನ ಸ್ಮಾರ್ಟ್ ಫೋನ್ ಗಳ ಪಟ್ಟಿ ಇದು.

ವಿವೋ ನೆಕ್ಸ್ ಎಸ್ ನಲ್ಲಿ ಹಿಂತೆಗೆದುಕೊಳ್ಳಬಹುದಾದ ಕ್ಯಾಮರಾ(retractable camera)

ವಿವೋ ನೆಕ್ಸ್ ಎಸ್ ನಲ್ಲಿ ಹಿಂತೆಗೆದುಕೊಳ್ಳಬಹುದಾದ ಕ್ಯಾಮರಾ(retractable camera)

ವಿವೋ ನೆಕ್ಸ್ ಎಸ್ ನಲ್ಲಿ ವಿಶ್ವದಲ್ಲೇ ಮೊದಲ ಬಾರಿಗೆ ಹಿಂತೆಗೆದುಕೊಳ್ಳಬಹುದಾಗಿರುವ ಕ್ಯಾಮರಾವನ್ನು ಅಳವಡಿಸಲಾಗಿದೆ. ಇದು ನಾಚ್ ಇಲ್ಲದೆಯೋ ಹೆಚ್ಚಿನ ಸ್ಕ್ರೀನ್ ಟು ಬಾಡಿ ಅನುಪಾತವನ್ನು ನೀಡುತ್ತದೆ ಮತ್ತು ಎಡ್ಜ್-ಟು-ಎಡ್ಜ್ ಡಿಸೈನ್ ನ್ನು ಹೊಂದಿದೆ. ವಿವೋ ನೆಕ್ಸ್ ಎಸ್ ಇತರೆ ಕಂಪೆನಿಗಳಿಗೆ ಸ್ಕ್ರೀನ್ ಎಡ್ಜ್-ಟು-ಎಡ್ಜ್ ಡಿಸೈನಿನ ಸ್ಮಾರ್ಟ್ ಫೋನ್ ತಯಾರಿಸಿ ಬಳಕೆದಾರರಿಗೆ ಉತ್ತಮ ಸ್ಮಾರ್ಟ್ ಫೋನ್ ಅನುಭವವನ್ನು ನೀಡುವಂತೆ ಮಾಡಲು ಪ್ರಭಾವ ಬೀರಿತು.

ಒಪ್ಪೋ ಆರ್17 ಪ್ರೋ ನಲ್ಲಿ ಸೂಪರ್ VOOC ಫ್ಲ್ಯಾಶ್ ಚಾರ್ಜಿಂಗ್

ಒಪ್ಪೋ ಆರ್17 ಪ್ರೋ ನಲ್ಲಿ ಸೂಪರ್ VOOC ಫ್ಲ್ಯಾಶ್ ಚಾರ್ಜಿಂಗ್

ನಾವು ಮೊಬೈಲ್ ನ್ನು ಚಾರ್ಜ್ ಮಾಡುವ ಮಾದರಿಯನ್ನೇ ಬದಲಾಯಿಸುವ ತಂತ್ರಜ್ಞಾನ ಇದು. ಸೂಪರ್VOOC ಫ್ಲ್ಯಾಶ್ ಚಾರ್ಜ್ ಒಪ್ಪೋದಿಂದ ಬಂದಿರುವ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನದ ಒಂದು ಟ್ರೇಡ್ ಮಾರ್ಕ್ ಅನ್ನಿಸಿಕೊಂಡಿದೆ. 40 ನಿಮಿಷದಲ್ಲಿ ಒಂದು ಸ್ಮಾರ್ಟ್ ಫೋನ್ ನ್ನು 0 ಯಿಂದ 100 % ಕ್ಕೆ ಚಾರ್ಜ್ ಮಾಡುವ ತಾಕತ್ತಿದೆ( ಫೋನ್ 3500 mAhನ ಬ್ಯಾಟರಿ ಆಗಿದ್ದಾಗ). ಭಾರತದಲ್ಲಿ ಈ ತಂತ್ರಜ್ಞಾನ ಬಳಸಿ ಬಿಡುಗಡೆಗೊಂಡ ಮೊದಲ ಸ್ಮಾರ್ಟ್ ಫೋನ್ ಓಪ್ಪೋ ಆ17 ಪ್ರೋ.

ಹುವಾಯಿ ಪಿ20 ಪ್ರೋ ನಲ್ಲಿ 3x ಆಪ್ಟಿಕಲ್ ಝೂಮ್

ಹುವಾಯಿ ಪಿ20 ಪ್ರೋ ನಲ್ಲಿ 3x ಆಪ್ಟಿಕಲ್ ಝೂಮ್

ಹುವಾಯಿ ಪಿ20 ಪ್ರೋ 3ಎಕ್ಸ್ ಆಪ್ಟಿಕಲ್ ಝೂಮ್ ನ್ನು ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ಆಗಿದೆ. ಚಿತ್ರದ ಕ್ವಾಲಿಟಿಯನ್ನು ಕಡಿಮೆಗೊಳಿಸಿದೆ ಝೂಮ್ ಮೂಲಕ ಹೈ ಕ್ವಾಲಿಟಿ ಫೋಟೋವನ್ನು ಕ್ಲಿಕ್ಕಿಸುವುದಕ್ಕೆ ಇದು ನೆರವು ನೀಡುತ್ತದೆ. ಹುವಾಯಿ ಪಿ20 ಪ್ರೋ 40 MPಸೆನ್ಸರ್ ಜೊತೆಗೆ f/1.8 ಅಪರ್ಚರ್ ನ್ನು ಹೊಂದಿರುವ ಮೊದಲ ಫೋನ್ ಆಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9 2018 ನಲ್ಲಿ ನಾಲ್ಕು ಕ್ಯಾಮರಾ ಸೆಟ್ ಅಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9 2018 ನಲ್ಲಿ ನಾಲ್ಕು ಕ್ಯಾಮರಾ ಸೆಟ್ ಅಪ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9 2018 ವಿಶ್ವದ ಮೊದಲ ಕ್ವಾಡ್ ಕ್ಯಾಮರಾ ಸೆಟ್ ಅಪ್ ಇರುವ ಫೋನ್ ಆಗಿದೆ. ಇದರಲ್ಲಿ ಸ್ಟ್ಯಾಂಡರ್ಡ್RGB ಸೆನ್ಸರ್ (24 MP), ಟೆಲಿಫೋಟೋ ಲೆನ್ಸ್ (10 MP),ವೈಡ್ ಆಂಗಲ್ ಲೆನ್ಸ್ (8 MP) ಮತ್ತು ಡೆಪ್ತ್ ಸೆನ್ಸರ್ (5 MP) ಇದೆ. ಕ್ವಾಡ್ ಕ್ಯಾಮರಾ ಸೆಟ್ ಅಪ್ ನೊಂದಿಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9 2018 ಒಂದು ಫ್ರೇಮ್ ಗೆ ನಾಲ್ಕು ದೃಷ್ಟಿಕೋನವನ್ನು ಒದಗಿಸುತ್ತದೆ.

ಶಿಯೋಮಿ ಎಂಐ ಮಿಕ್ಸ್ 3, ಸ್ಪ್ಲೈಡರ್ ಫೋನ್

ಶಿಯೋಮಿ ಎಂಐ ಮಿಕ್ಸ್ 3, ಸ್ಪ್ಲೈಡರ್ ಫೋನ್

ಶಿಯೋಮಿ ಎಂಐ ಮಿಕ್ಸ್ 3 ಸ್ಲೈಡ್ ಮೆಕಾನಿಸಂನ್ನು ಹೊಂದಿರುವ ಮೊದಲ ಫೋನ್ ಏನೂ ಅಲ್ಲ.ಆದರೆ ಶಿಯೋಮಿ ಎಂಐ ಮಿಕ್ಸ್ 3 ಯೂನಿಕ್ ಸ್ಲೈಡರ್ ಮೆಕಾನಿಸಂನ್ನು ಹೊಂದಿರುವ ಆಧುನಿಕ ಸ್ಮಾರ್ಟ್ ಫೋನ್ ಆಗಿದ. ಇದು ಹೈಯರ್-ಸ್ಕ್ರೀನ್ ಟು ಬಾಡಿ ರೆಶ್ಯೂ ವನ್ನು ಆಫರ್ ಮಾಡುತ್ತದೆ ಮತ್ತು ಸೆಲ್ಫೀ ಕ್ಯಾಮರಾ ಮತ್ತು ಇತರೆ ಅಗತ್ಯ ಸೆನ್ಸರ್ ಗಳ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ.

ಐಫೋನ್ ಎಕ್ಸ್ಎಶ್ ನಲ್ಲಿ E-SIM

ಐಫೋನ್ ಎಕ್ಸ್ಎಶ್ ನಲ್ಲಿ E-SIM

ಐಫೋನ್ ಎಕ್ಸ್ಎಸ್ ನಲ್ಲಿ ಮೊದಲ ಬಾರಿಗೆ ಡುಯಲ್ ಸಿಮ್ ಕಾರ್ಡ್ ಗೆ ಬೆಂಬಲ ನೀಡಿ ಅದರಲ್ಲಿ ಇ-ಸಿಮ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಬಳಕೆದಾರರು ಇದರಲ್ಲಿ ಇ-ಸಿಮ್ ನ ಜೊತೆಗೆ ಫಿಸಿಕಲ್ ಸಿಮ್ ಕಾರ್ಡ್ ಕೂಡ ಬಳಸಬಹುದು. ಅದು ಐಫೋನ್ ಎಕ್ಸ್ಎಸ್, ಐಫೋನ್ ಎಕ್ಸ್ಎಸ್ ಮ್ಯಾಕ್ಸ್ ಮತ್ತು ಐಫೋನ್ ಎಕ್ಸ್ಆರ್ ನಲ್ಲೂ ಕೂಡ ಕಾರ್ಯ ನಿರ್ವಹಿಸುತ್ತದೆ.

ಹುವಾಯಿ ಮೇಟ್ 20 ಪ್ರೋ ನಲ್ಲಿ ರಿವರ್ಸ್ ಚಾರ್ಜಿಂಗ್

ಹುವಾಯಿ ಮೇಟ್ 20 ಪ್ರೋ ನಲ್ಲಿ ರಿವರ್ಸ್ ಚಾರ್ಜಿಂಗ್

ಹುವಾಯಿ ಮೇಟ್ 20 ಪ್ರೋ ಮೊದಲ ಬಾರಿಗೆ ರಿವರ್ಸ್ ವಯರ್ ಲೆಸ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ. ಕ್ಯೂಐ ಅನೇಬಲ್ ಆಗಿರುವ ಹ್ಯಾಂಡ್ ಸೆಟ್ ನಲ್ಲಿ ಬಳಕೆದಾರರು ಸ್ಮಾರ್ಟ್ ಫೋನ್ ನ್ನು ವಯರ್ ಲೆಸ್ ಚಾರ್ಜಿಂಗ್ ತಂತ್ರಜ್ಞಾನದಿಂದ ಚಾರ್ಜ್ ಮಾಡಬಹುದು. ಅಂದರೆ ಹುವಾಯಿ ಮೇಟ್ 20 ಪ್ರೋ ಇಲ್ಲಿ ಪವರ್ ಬ್ಯಾಂಕ್ ನಂತೆ ಕಾರ್ಯ ನಿರ್ವಹಿಸುತ್ತದೆ. ಅಂದರೆ ಬಳಕೆದಾರರು ಮೇಟ್ 20 ಪ್ರೋ ನಲ್ಲಿರುವ ಚಾರ್ಜ್ ನ್ನು ಇತರೆ ವಯರ್ ಲೆಸ್ ಡಿವೈಸ್ ಗಳ ಜೊತೆಗೆ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡುವ ವಿಭಿನ್ನ ತಂತ್ರಗಾರಿಕೆಯನ್ನು ಅಳವಡಿಸಿಕೊಂಡು ಬಂದಿರುವ ಫೋನ್ ಇದಾಗಿದೆ.

ಆರ್ ಓಜಿ ಫೋನ್ ನಲ್ಲಿ ಓವರ್ ಕ್ಲಾಕ್ಡ್ ಪ್ರೊಸೆಸರ್

ಆರ್ ಓಜಿ ಫೋನ್ ನಲ್ಲಿ ಓವರ್ ಕ್ಲಾಕ್ಡ್ ಪ್ರೊಸೆಸರ್

ROG ವಿಶ್ವದ ಏಕಮಾತ್ರ ಫೋನ್ ಕಸ್ಟಮೈಸ್ಡ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಜೊತೆಗೆ ಕ್ಲಾಕ್ ಸ್ಪೀಡ್ 2.96 GHz ನ್ನು ಹೊಂದಿದೆ. ಇದು ಸಾಮಾನ್ಯ ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 845 ಸಾಕೆಟ್ ಗಿಂತ ಸ್ಟ್ಯಾಂಡರ್ಡ್ ಆಗಿದೆ. ಹೆಚ್ಚುವರಿ ಬಿಟ್ ನ ಪ್ರೊಸೆಸಿಂಗ್ ಪವರ್ ನಿಂದಾಗಿ ROG ಫೋನ್ ಉತ್ತಮ ಗೇಮಿಂಗ್ ಮತ್ತು ಇತರೆ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದಾಗ CPU ಇಂಟೆನ್ಸೀವ್ ಪ್ರದರ್ಶನ ಉತ್ತಮವಾಗಿದೆ.

ರೆಡ್ ಹೈಡ್ರೋಜನ್ ಒನ್ ನಲ್ಲಿ 3ಡಿ ಡಿಸ್ಪ್ಲೇ ಸ್ಮಾರ್ಟ್ ಫೋನ್

ರೆಡ್ ಹೈಡ್ರೋಜನ್ ಒನ್ ನಲ್ಲಿ 3ಡಿ ಡಿಸ್ಪ್ಲೇ ಸ್ಮಾರ್ಟ್ ಫೋನ್

ಹೋಲೋಗ್ರಾಫಿಕ್ಸ್ ಡಿಸ್ಪ್ಲೇಯನ್ನು ಹೊಂದಿರುವ ಮೊದಲ ಸ್ಮಾರ್ಟ್ ಫೋನ್ ನ್ನು ಬಿಡುಗಡೆಗೊಳಿಸಿದ ಕೀರ್ತಿ ಸಲ್ಲಬೇಕಾಗಿರುವುದು ರೆಡ್ ಹೈಡ್ರೋಜನ್ ಒನ್ ಗೆ ಆಗಿದೆ. 3ಡಿ ಗ್ಲಾಸ್ ಗಳನ್ನು ಬಳಕೆ ಮಾಡದೇ ಇದರ ಸ್ಕ್ರೀನ್ ನಲ್ಲಿ 3ಡಿ ಕಟೆಂಟ್ ಗಳನ್ನು ವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ.

ಮೋಟೋ ಝಡ್4 ನಲ್ಲಿ 5G MOD

ಮೋಟೋ ಝಡ್4 ನಲ್ಲಿ 5G MOD

ಮೊಟೊರೋಲಾ ಮೋಟೋ ಝಡ್ 4 ಏಕಮಾತ್ರ ಸ್ಮಾರ್ಟ್ ಫೋನ್ 5ಜಿ ನೆಟ್ ವರ್ಕ್ ನ್ನು ಬೆಂಬಲಿಸುವ ಸ್ಮಾರ್ಟ್ ಫೋನ್ ಆಗಿದೆ( ಕೆಲವೇ ದಿನದಲ್ಲಿ ಲಾಂಚ್ ಆಗುತ್ತದೆ). ಇದರಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಸಾಕೆಟ್ ಇದೆ. ಕಂಪೆನಿಯು ಹೇಳಿರುವ ಪ್ರಕಾರ 5G ಮೊಟೋ MOD ವರ್ಷದ ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳುತ್ತದೆ ಅದು 5ಜಿ ನೆಟ್ ವರ್ಕ್ ಗೆ ಬೆಂಬಲಿಸುತ್ತದೆ.

ತೀರ್ಮಾನ:

ತೀರ್ಮಾನ:

ಈ 10 ಸ್ಮಾರ್ಟ್ ಫೋನ್ ಗಳು ಯೂನಿಕ್ ಫೀಚರ್ ಗಳನ್ನು ಒಳಗೊಂಡು 2018 ರಲ್ಲಿ ಮಾರುಕಟ್ಟೆಗೆ ಪರಿಚಿತವಾದವು ಮತ್ತು ಇತರೆ ಸ್ಮಾರ್ಟ್ ಫೋನ್ ಗಳಿಗಿಂತ ವಿಭಿನ್ನ ಅನ್ನಿಸಿಕೊಂಡವು. ಈ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂಬುದನ್ನು ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

Best Mobiles in India

English summary
10 smartphones with unique innovations launched in 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X