ಈ ಫೋನ್‌ಗಳನ್ನು ಬಳಸಿದ ಬಳಕೆದಾರರೇ ಭಾಗ್ಯವಂತರು!!!

Written By:

ಇಂದು ಮಾರುಕಟ್ಟೆಗೆ ಕಾಲಿಡುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಒಂದೇ ರೀತಿಯ ನೋಟವನ್ನು ಪಡೆದುಕೊಂಡು ಬರುತ್ತಿವೆ. ದೊಡ್ಡ ಪರದೆಗಳನ್ನು ಹೊಂದಿಕೊಂಡು ಬಂದಿರುವ ಈ ಡಿವೈಸ್‌ಗಳ ಕೆಳಗೆ ಎರಡು ಬಟನ್‌ಗಳನ್ನು ಕಾಣಬಹುದು. ಇನ್ನು ಬ್ರ್ಯಾಂಡ್‌ಗಳನ್ನಾಧರಿಸಿ ಪ್ರತಿಯೊಂದು ಫೋನ್‌ನ ವಿನ್ಯಾಸವನ್ನು ನಿರ್ಧರಿಸಲಾಗುತ್ತದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಅತ್ಯಾಧುನಿಕ ಮೊಬೈಲ್ ಫೋನ್ಸ್

ಆದರೆ ಕೆಲವು ವರ್ಷಗಳ ಹಿಂದೆ ನಾವು ಇದನ್ನು ನೋಡಿದಾಗ ಫೋನ್ ಗಾತ್ರದಲ್ಲಿ ಹೆಚ್ಚು ಬದಲಾವಣೆಗಳನ್ನು ಕಾಣಬಹುದಿತ್ತು. ಫ್ಲಿಪ್ ಫೋನ್‌ಗಳು ಆ ಕಾಲದಲ್ಲಿಯೇ ಬಳಕೆದಾರರಲ್ಲಿ ಕ್ರೇಜ್ ಅನ್ನು ಉಂಟುಮಾಡಿದ್ದವು. ಕ್ರಿಯಾತ್ಮಕ ವಿನ್ಯಾಸವನ್ನು ಪಡೆದುಕೊಂಡು ವಿಭಿನ್ನ ಶೈಲಿಯ ಫೋನ್‌ಗಳು ಆ ಸಮಯದಲ್ಲಿ ಕಾಣಸಿಗುತ್ತಿದ್ದವು. ಇಂತಹುದೇ ಫೋನ್ ಅನ್ನು ಬಳಸುವ ಬಳಕೆದಾರರು ನೀವಾಗಿದ್ದಲ್ಲಿ ನೀವು ಭಾಗ್ಯವಂತರೇ ಸರಿ.

ಓದಿರಿ: ಗೂಗಲ್ ಪ್ಲೇ ಸ್ಟೋರ್‌ ಉಚಿತವಾಗಿ ಬಳಸಬೇಕೇ? ಇಲ್ಲಿದೆ ಟಿಪ್ಸ್

ಇಂತಹುದೇ ಭಿನ್ನ ಭಿನ್ನ ಫೋನ್‌ಗಳ ದೊಡ್ಡ ಸಂಗ್ರಹವನ್ನೇ ಈ ಲೇಖನದ ಮೂಲಕ ನಾವು ನಿಮ್ಮ ಮುಂದಿಡುತ್ತಿದ್ದು ಇದು ನಿಮ್ಮ ಆಸಕ್ತಿಯನ್ನು ಗರಿಗೆದರಿಸುವುದು ಖಂಡಿತ. ಹಾಗಿದ್ದರೆ ತಡ ಮಾಡದೇ ಕೆಳಗಿನ ಸ್ಲೈಡರ್ ಪರಿಶೀಲಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1997

1997

ಮೋಟೋರೋಲಾ ಸ್ಟಾರ್ ಟ್ಯಾಕ್ ರೈನ್‌ಬೊ

ಇದು 100 ಸಂಖ್ಯೆಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. 90 ರ ದಶಕದ ಫೋನ್ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ.

1997

1997

ಸೋನಿ ಸಿಎಮ್‌ಡಿ ಜೆಡ್1

ಫೋನ್‌ನ ವಿನ್ಯಾಸ ಅತಿ ಸಣ್ಣದಾಗಿದ್ದರೂ ಆ ಕಾಲದ ಮಾಸ್ ಫೋನ್ ಎಂಬ ಹೆಗ್ಗಳಿಕೆ ಇದಕ್ಕಿದೆ. 20 ಸೆಕೆಂಡುಗಳ ಧ್ವನಿ ಮೆಮೇಸ್‌ಗಳನ್ನು ಇದು ಕಳುಹಿಸುತ್ತದೆ.

2003

2003

ಸ್ಯಾಮ್‌ಸಂಗ್ ಟಿ700

ಟಾಯ್ಲೆಟ್ ಸೀಟ್‌ನಂತೆಯೇ ಕಾಣುವ ಈ ಡಿವೈಸ್ ಭವಿಷ್ಯ ಸಂವಹನಕಾರ ಎಂಬ ಬಿರುದನ್ನು ಪಡೆದುಕೊಂಡಿತ್ತು. ಕ್ಯಾಲೊರಿ ಕ್ಯಾಲ್ಕುಲೇಟರ್ ಇದರಲ್ಲಿದೆ.

2003

2003

ನೋಕಿಯಾ 7600

"ಫ್ಯಾಷನ್ ಫೋನ್" ಎಂಬ ಬಿರುದನ್ನು ಈ ಡಿವೈಸ್ ಗಳಿಸಿಕೊಂಡಿದ್ದು ಇದರಲ್ಲಿ ಸಂದೇಶ ರಚನೆ ತುಂಬಾ ಕಷ್ಟದ ಮಾತಾಗಿದೆ. ಅತಿ ಸಣ್ಣ 3ಜಿ ಫೋನ್ ಇದಾಗಿದೆ.

2003

2003

ನೋಕಿಯಾ ಎನ್-ಗೇಜ್

ಗೇಮಿಂಗ್‌ಗಾಗಿ ಹೇಳಿಮಾಡಿಸಿರುವ ಫೋನ್ ಇದಾಗಿದ್ದು, ಫೋನ್ ವೈಶಿಷ್ಟ್ಯ ನಿಜಕ್ಕೂ ಮನಮೋಹಕವಾಗಿರುವಂಥದ್ದು.

2003

2003

ಸ್ಯಾಮ್‌ಸಂಗ್ ಡಿ700

ರೊಟೇಟಿಂಗ್ ಸ್ಕ್ರೀನ್ ಅನ್ನು ಈ ಡಿವೈಸ್ ಪಡೆದುಕೊಂಡಿದ್ದು ಆಕರ್ಷಕ ವಿನ್ಯಾಸಗಳಲ್ಲಿ ಬಳಕೆದಾರರ ಮನಗೆಲ್ಲಲು ಬಂದಿತ್ತು. ವೇವ್ ಮತ್ತು ಪೋಲಿಫೋನಿಕ್ ರಿಂಗ್‌ಟೋನ್‌ಗಳು ಇದರಲ್ಲಿದೆ.

2005

2005

ಸ್ಯಾಮ್‌ಸಂಗ್ ಸೆರೇನೆ

ಬ್ಯಾಂಗ್ ಹಾಗೂ ಒಲ್ಯುಫ್ಸನ್ ವಿನ್ಯಾಸವನ್ನು ಪಡೆದುಕೊಂಡು ಬಂದಿರುವ ಫೋನ್ ಇದಾಗಿದ್ದು, ಬಳಕೆದಾರರ ಅದ್ಭುತ ಆಯ್ಕೆ ಎಂದೆನಿಸಿತ್ತು. ಇದರಲ್ಲಿ ಕ್ಯಾಮೆರಾ ಉತ್ತಮ ಚಿತ್ರಗಳನ್ನು ತೆಗೆಯಲು ಅನುಕೂಲಕರವಾಗಿತ್ತು.

2005

2005

ಸ್ಯಾಮ್‌ಸಂಗ್ Z130

ಡಿಸ್‌ಪ್ಲೇ ರೊಟೇಟ್ ಆಗುತ್ತಿತ್ತು, 3ಜಿ ಫೋನ್ ವೀಡಿಯೊ ಕಾಲಿಂಗ್ ವ್ಯವಸ್ಥೆ ಇದರಲ್ಲಿತ್ತು.

2007

2007

ಮೋಟೋರೋಲಾ ಆವ್ರಾ

ಆವ್ರಾ ಸ್ಪಿನ್ನಿಂಗ್ ಮೋಶನ್ ಅನ್ನು ಒಳಗೊಂಡಿದ್ದು ವೃತ್ತಾಕಾರದ ಪರದೆಯನ್ನು ಹೊಂದಿತ್ತು. ಸ್ವಿಸ್ ವಾಚ್ ತಯಾರಕರು ಇದನ್ನು ವಿನ್ಯಾಸಗೊಳಿಸಿದ್ದರು.

2008

2008

ತೋಶಿಬಾ G450

ಈ ವರ್ಷದ ಹೆಚ್ಚು ಅಸಾಮಾನ್ಯ ವಿನ್ಯಾಸವುಳ್ಳ ಫೋನ್ ಎಂಬ ಹೆಗ್ಗಳಿಕೆಯನ್ನು ಇದು ಪಡೆದುಕೊಂಡಿದೆ. ರೆಟ್ರೊ ಮೊನೊಕ್ರೋಮ್ ಗ್ರಾಫಿಕ್ಸ್ ಇದರಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A few years ago, this was most certainly not the case. During the era of the flip phone, it was like the wild west. Sure, plenty of standard looking phones existed, but while striving for a creative design, some phones were quite a bit more out there.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot