ಜೋಶ್ ನೀಡಲು ಬರುತಿದೆ ಜೋಶ್ ಮೊಬೈಲ್

By Super
|
ಜೋಶ್ ನೀಡಲು ಬರುತಿದೆ ಜೋಶ್ ಮೊಬೈಲ್
ಭಾರತದ ನೂತನ ಮೊಬೈಲ್ ಕಂಪನಿ ಜೋಶ್ ಇದೀಗ ಯುವ ಪೀಳಿಗೆಗೆ ಜೋಶ್ ನೀಡಲು ಬರುತ್ತಿದೆ. ಜೋಶ್ ಕಂಪನಿ, JB 289 ಎಂಬ ಮೊಬೈಲನ್ನು ಬಿಡುಗಡೆಗೊಳಿಸಿದ್ದು, ವಿಶೇಷ ಮ್ಯೂಸಿಕ್ ಸೌಲಭ್ಯ ಮತ್ತು ಕಣ್ಣಿಗೆ ಹಿತವೆನಿಸುವ ಅನೇಕ ಬಣ್ಣಗಳಲ್ಲಿ ಈ ಮೊಬೈಲ್ ಲಭ್ಯವಿದೆ.

ಡ್ಯೂಯಲ್ ಸಿಮ್ GSM JB 289 ಮೊಬೈಲ್ ನಲ್ಲಿ ಆಡಿಯೋದ ಎಲ್ಲಾ ಸೌಕರ್ಯಗಳೂ ಇದ್ದು, MIDI, MP3 and AMR ಆಡಿಯೋ ಫಾರ್ಮಾಟ್ ಕೂಡ ಹೊಂದಿದೆ. ಪುಟ್ಟದಾದ 2 ಇಂಚಿನ TFT ಸ್ಕ್ರೀನ್ ಹೊಂದಿರುವ ಈ ಮೊಬೈಲ್ ನಲ್ಲಿ ವಿಡಿಯೋ ಪ್ಲೇಯರ್, ಇ-ಬುಕ್ ರೀಡರ್ ಮತ್ತು ಇಮೇಜ್ ಬ್ರೌಸರ್ ಕೂಡ ಇದೆ.

ವಿಡಿಯೋ ರೆಕಾರ್ಡ್ ಮತ್ತು ಪ್ಲೇಬ್ಯಾಕ್ ನೊಂದಿಗೆ JB289 plays 3GP and MP4 video ಫಾರ್ಮಾಟ್ ಕೂಡ ಇದರಲ್ಲಿ ಸಾಧ್ಯವಿದೆ. 1.3 ಮೆಗಾ ಪಿಕ್ಸಲ್ ಡಿಜಿಡಲ್ ಕ್ಯಾಮೆರಾ ಹೊಂದಿರುವ ಈ ಮೊಬೈಲ್ ನಲ್ಲಿ ಗೇಮ್ಸ್ ನಲ್ಲೂ ಕೂಡ ವಿವಿಧತೆ ಇದೆ.

5 ಗಂಟೆಗಳ ಟಾಕ್ ಟೈಮ್, 4 GB T-Flash ವಿಸ್ತರಣೆಯ ಮೆಮೊರಿ,1800mAh ಬ್ಯಾಟರಿ ಮತ್ತು ಸತತ 240 ಗಂಟೆ ಸ್ಟಾಂಡ್ ಬೈ ಟೈಮ್ ಇದರದಾಗಿದೆ.

ಇಷ್ಟೇ ಅಲ್ಲ, ಇದರ ಎಸ್ ಎಂ ಎಸ್ ಮೆಮೊರಿ 300 ಇದ್ದು, ಫೋನ್ ಬುಕ್ ಮೆಮೊರಿ 500ರವರೆಗೂ ಲಭ್ಯವಿದೆ. ಆದರೆ ಬೆಲೆ ಕೇಳಿದರೆ ನೀವೇ ದಂಗಾಗಿ ಹೋಗ್ತೀರ. ಇದರ ಬೆಲೆ ಕೇವಲ 1,800 ರೂ. ಇಷ್ಟೆಲ್ಲಾ ಸೌಲಭ್ಯಗಳನ್ನು ಹೊಂದಿರುವ ಜೋಶ್ ಮೊಬೈಲ್ ಖರೀದಿಸಿ ನೀವ್ಯಾಕೆ ಜೋಶ್ ಆಗಿರಬಾರದು?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X