ಈ 15 ಹಳೇ ಫೋನ್‌ಗಳು ಖರೀದಿಸಿ ಲಾಭ ಮಾಡಿಕೊಳ್ಳಿ..!

|

ಈಗೆಲ್ಲ ಮಾರುಕಟ್ಟೆಯಲ್ಲಿ ಅದೆಷ್ಟು ಸ್ಮಾರ್ಟ್ ಫೋನ್ ಗಳು ಬಿಡುಗಡೆಗೊಳ್ಳುತ್ತದೆ ಎಂದರೆ ಕೊಂಡುಕೊಳ್ಳುವವರಿಗೆ ಗೊಂದಲ ಸೃಷ್ಟಿಯಾಗಿ ಬಿಡುತ್ತದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳೂ ಕೂಡ ಜಿದ್ದಿಗೆ ಬಿದ್ದವರಂತೆ ಫೋನ್ ಗಳನ್ನು ಬಿಡುಗಡೆಗೊಳಿಸುತ್ತದೆ. ಒಂದು ಹೊಸ ಫೋನಿನ ಮಾರುಕಟ್ಟೆಯ ಆಯಸ್ಸು ಬರೋಬ್ಬರಿ ಒಂದು ವರ್ಷವಾದರೆ ಹೆಚ್ಚು. ನೂತನ ಡಿವೈಸ್ ಗಳನ್ನು ಕೊಂಡುಕೊಳ್ಳುವ ಗ್ರಾಹಕರ ಬಯಕೆಯ 6 ತಿಂಗಳ ಹಿಂದೆ ಬಿಡುಗಡೆಗೊಂಡ ಒಂದು ಫೋನ್ ನ್ನೂ ಕೂಡ ಹಳೆಯದು ಎಂಬ ಭಾವನೆಗೆ ತಳ್ಳುತ್ತಿದೆ.

ಈ 15 ಹಳೇ ಫೋನ್‌ಗಳು ಖರೀದಿಸಿ ಲಾಭ ಮಾಡಿಕೊಳ್ಳಿ..!

ನಿಜಕ್ಕೂ ಹೇಳಬೇಕೆಂದರೆ ಕೆಲವು ಒಂದು ವರ್ಷ ಮುನ್ನವೇ ಬಿಡುಗಡೆಗೊಂಡಿರುವ ಫೋನ್ ಗಳೂ ಕೂಡ ಅಧ್ಬುತ ಫೋನ್ ಗಳಾಗಿರುತ್ತದೆ ಮತ್ತು ಬಳಕೆದಾರರಿಗೆ ಅದರ ನೈಜತೆಯ ಅರಿವೇ ಆಗುವುದಿಲ್ಲ. ಒಂದು ವೇಳೆ ನೀವು ಬಜೆಟ್ ಪ್ಲಾನ್ ನಲ್ಲಿ ಫೋನ್ ಖರೀದಿಸುವುದಾದರೆ ಹಳೆಯ ಫೋನ್ ಕೂಡ ನೂತನ ಫೀಚರ್ ಗಳನ್ನು ಅಪ್ ಡೇಟ್ ಮಾಡಿಕೊಂಡಿರುತ್ತದೆ . ಖಂಡಿತ ಅಂತಹ ಕೆಲವು ಫೋನ್ ಗಳನ್ನು ಖರೀದಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಹಾಗಾದ್ರೆ ಹಳೆಯ ಫೋನ್ ಆದರೂ ನೂತನ ಫೀಚರ್ ಗಳೊಂದಿಗೆ ಬೆಸ್ಟ್ ಅನ್ನಿಸಿಕೊಳ್ಳುವ ಕೆಲವು 15 ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಉತ್ತಮ ಬಜೆಟ್ ನಲ್ಲೇ ಒಂದು ಐಫೋನ್ ಕೊಳ್ಳುವ ಮನಸ್ಸಿದ್ದರೆ ಆಪಲ ಐಫೋನ್ 7 ಬೆಸ್ಟ್ ಆಯ್ಕೆ. 32GB ಯ ಐಫೋನ್ 7 ನಿಮಗೆ ಭಾರತದಲ್ಲಿ 55,000 ರುಪಾಯಿಗೆ ಸಿಗುತ್ತದೆ. ನೂತನ ಐಓಎಸ್ 12 ಆಪರೇಟಿಂಗ್ ಸಿಸ್ಟಮ್ ಗೆ ಇದು ಅಪ್ ಡೇಟ್ ಆಗಲಿದೆ. ಈ ಸ್ಮಾರ್ಟ್ ಫೋನ್ ಹೊಸ quad-core 2.37 GHz ಆಪಲ್ A10 ಫ್ಯೂಷನ್ ಪ್ರೊಸೆಸರ್ ನ್ನು ಹೊಂದಿದೆ. ಹಿಂದಿನ ವರ್ಷನ್ ಗಿಂತ 40 ಶೇಕಡಾ ವೇಗವಾಗಿ ಇದು ಇರುತ್ತದೆ ಎಂದು ಕಂಪೆನಿ ತಿಳಿಸಿದೆ.

ಆಪಲ್ ಐಫೋನ್ ಎಸ್ ಇ

ಆಪಲ್ ಐಫೋನ್ ಎಸ್ ಇ

ಭಾರತದಲ್ಲಿ ಅತೀ ಹೆಚ್ಚು ಮಾರಾಟವಾದ ಐಫೋನ್ ಗಳಲ್ಲಿ ಐಫೋನ್ ಎಸ್ ಇ ಸ್ಥಾನ. ಇದರ 32GB ವೇರಿಯಂಟ್ ಬೆಲೆ 17,999 ರುಪಾಯಿಗಳು. ಇದು ಹೊಸ ಎ9 ಪ್ರೊಸೆಸರ್ ನ್ನು ಹೊಂದಿದೆ ಮತ್ತು ಐಓಎಸ್ 12 ಅಪ್ ಡೇಟ್ ನ್ನು ರಿಸೀವ್ ಮಾಡುತ್ತದೆ. ಐಓಎಸ್ ಬಳಕೆದಾರರಿಗೆ ಇರುವ ಮೊದಲ ಅಧ್ಬುತ ಎಂಟ್ರಿ ಲೆವೆಲ್ ಐಫೋನ್ ಇದಾಗಿದೆ.

ಆಪಲ್ ಐಫೋನ್ ಎಕ್ಸ್

ಆಪಲ್ ಐಫೋನ್ ಎಕ್ಸ್

ಐಫೋನ್ ಎಕ್ಸ್ ಗೆ ಬೆಲೆ ಇಳಿಕೆಯಾಗಿದ್ದು ಇದೀಗ 89,999 ರುಪಾಯಿಗೆ ಲಭ್ಯವಿದೆ. ಕಳೆದ ವರ್ಷ ಐಫೋನ್ ಎಕ್ಸ್ ಐಫೋನ್ ಎಕ್ಸ್ಎಸ್ ನಂತೆ ಅನ್ನಿಸಿತ್ತು ಅದೇ ಅನುಭವವನ್ನು ಬಳಕೆದಾರರಿಗೆ ನೀಡುತ್ತಿತ್ತು. ಐಫೋನ್ ಎಕ್ಸ್ ಎಸ್ ಖರೀದಿಸಿ ಹಣ ವೆಚ್ಚ ಮಾಡುವ ಬದಲು ಅದೇ ವೈಶಿಷ್ಟ್ಯತೆಗಳಿರುವ ಎಕ್ಸ್ಎಸ್ ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಐಫೋನ್ ಎಕ್ಸ್ ನ್ನು ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8

ಹೊಸ ಗ್ಯಾಲಕ್ಸಿ ನೋಟ್ 9 ಬಿಡುಗಡೆಗೊಂಡ ನಂತರ ಹಳೆಯ ಗ್ಯಾಲಕ್ಸಿ ನೋಟ್ 8 ಯ ಬೆಲೆ ಕಡಿಮೆಯಾಯಿತು. ಇತ್ತೀಚೆಗೆ ಬಿಡುಗಡೆಗೊಂಡ ಗ್ಯಾಲಕ್ಸಿ ನೋಟ್ 9 ನ ಎಲ್ಲಾ ವೈಶಿಷ್ಟ್ಯತೆಗಳು ಹೆಚ್ಚು ಕಡಿಮೆ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ನಲ್ಲೂ ಇದೆ.

ಗೂಗಲ್ ಪಿಕ್ಸಲ್ ಎಕ್ಸ್ ಎಲ್

ಗೂಗಲ್ ಪಿಕ್ಸಲ್ ಎಕ್ಸ್ ಎಲ್

ಹೆಚ್ಚುವರಿ ವಾರೆಂಟಿಯೊಂದಿಗೆ ಮೊದಲ ಜನರೇಷನ್ನಿನ ಗೂಗಲ್ ಪಿಕ್ಸಲ್ ಎಕ್ಸ್ ಎಲ್ ಫೋನ್ ಖಂಡಿತವಾಗಲೂ ಖರೀದಿಸಬಹುದಾದ ಬೆಸ್ಟ್ ಫೋನ್ ಗಳಲ್ಲಿ ಒಂದೆನಿಸಿದೆ. ಉತ್ತಮ ಕ್ಯಾಮರಾ ಮತ್ತು ಬಳಕೆದಾರರಿಗೆ ಒಳ್ಳೆಯ ಅನುಭವವನ್ನು ನೀಡುವ ಬೆಸ್ಟ್ ಫೋನ್ ಗಳಲ್ಲಿ ಇದೂ ಒಂದಾಗಿದ್ದು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8

ಸದ್ಯ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8 ನ್ನು 40,000 ದಿಂದ 45,000 ಬೆಲೆಯಲ್ಲಿ ಖರೀದಿಸಬಹುದು.ಉತ್ತಮ ಕ್ಯಾಮರಾ ಜೊತೆಗೆ ಉತ್ತಮ ಪ್ರದರ್ಶನವನ್ನು ಇದರಲ್ಲಿರುವ ಫೀಚರ್ ಗಳು ನೀಡುತ್ತದೆ. ಈಗಲೂ ಕೂಡ ಉತ್ತಮ ಫೋನ್ ಗಳ ಆಯ್ಕೆಯಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 8 ನ್ನು ಹೆಸರಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8+

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8+

ಒನ್ ಪ್ಲಸ್ 5ಟಿ, ಎಲ್ ಜಿ6 ಮತ್ತು ಹಾನರ್ ವ್ಯೂ 10 ಫೋನ್ ಗಳ ಜೊತೆಗೆ ಸ್ಪರ್ಧೆಯ ಉದ್ದೇಶದಿಂದ ಈ ವರ್ಷದ ಆರಂಭದಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8+ ನ್ನು ಬಿಡುಗಡೆಗೊಳಿಸಲಾಯಿತು. ಇದರ ಬೆಲೆ 35,000 ರುಪಾಯಿ ಒಳಗೆ ಇದ್ದು ಈಗಲೂ ಬೆಸ್ಟ್ ಪರ್ಚೇಸ್ ಆಗುವುದಕ್ಕೆ ಅರ್ಹ ಫೋನ್ ಗಳಲ್ಲಿ ಒಂದೆನಿಸಿದೆ .

ಎಲ್ ಜಿ ಜಿ6

ಎಲ್ ಜಿ ಜಿ6

ಎಲ್ ಜಿ ಜಿ 6 ಕಡಿಮೆ ಬೆಲೆಯಲ್ಲಿ ಅಂದರೆ 27,990 ರುಪಾಯಿಗೆ ಲಭ್ಯವಿದೆ. ಮಿಲಿಟರಿ ಗ್ರೇಡ್ ಡ್ಯೂರೇಬಲಿಟಿಯನ್ನು ಇದು ನೀಡುತ್ತದೆ. ಬೆಜೆಲ್ ಲೆಸ್ ಡಿಸ್ಪ್ಲೇಯನ್ನು ಹೊಂದಿರುವ ಎಲ್ ಜಿ ಕಂಪೆನಿಯ ಮೊದಲ ಫೋನ್ ಇದಾಗಿದೆ. 'unique' 5.7- ಇಂಚಿನ ಫುಲ್ ವಿಷನ್ ಡಿಸ್ಪ್ಲೇ ಜೊತೆಗೆ 1440x2880 ಪಿಕ್ಸಲ್ ರೆಸಲ್ಯೂಷನ್ ಹೊಂದಿರುವ ಫೋನ್ ಇದಾಗಿದೆ.ಈ ಸ್ಮಾರ್ಟ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 821 ಪ್ರೊಸೆಸರ್ ನ್ನು ಇದು ಹೊಂದಿದ್ದು ಉತ್ತಮ ಆಯ್ಕೆಗಳಲ್ಲಿ ಒಂದೆನಿಸುವ ಫೋನ್ ಆಗಿದೆ.

ಒನ್ ಪ್ಲಸ್ 5ಟಿ

ಒನ್ ಪ್ಲಸ್ 5ಟಿ

ಒನ್ ಪ್ಲಸ್ 5ಟಿ ಸರಾಸಿರಿಯಾಗಿ ಫೋನ್ ಬಳಕೆ ಮಾಡುವ ಬಳಕೆದಾರರಿಗೆ ಹೇಳಿ ಮಾಡಿಸಿದ ಪೋನ್ ಆಗಿದ್ದು 30,000 ರುಪಾಯಿ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. 6 ಇಂಚಿನ ಸ್ಕ್ರೀನ್ ಜೊತೆಗೆ ಫುಲ್ ಹೆಚ್ ಡಿ ಡಿಸ್ಪ್ಲೇಯನ್ನು ಇದು ಹೊಂದಿದ್ದು 2,160 x 1,080 ಪಿಕ್ಸಲ್ ರೆಸಲ್ಯೂಷನ್ ಮತ್ತು 18:9 ಅನುಪಾತವನ್ನು ಹೊಂದಿದ್ದು. ಈ ಫೋನ್ ಆಂಡ್ರಾಯ್ಡ್ Nougat v7.1.1 ನಲ್ಲಿ ರನ್ ಆಗುತ್ತದೆ ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್ ಮತ್ತು 8ಜಿಬಿ ಮೆಮೊರಿಯನ್ನು ಒಳಗೊಂಡಿದೆ.

ಶಿಯೋಮಿ ರೆಡ್ಮಿ 5ಎ

ಶಿಯೋಮಿ ರೆಡ್ಮಿ 5ಎ

ಉತ್ತಮ ಬಜೆಟ್ ನ ಸ್ಮಾರ್ಟ್ ಫೋನ್ ನ್ನು ಖರೀದಿಸಬೇಕು ಎಂದು ನೀವಂದುಕೊಳ್ಳುವುದಾದರೆ ಶಿಯೋಮಿ ರೆಡ್ಮಿ 5ಎ ಕೂಡ ಉತ್ತಮ ಆಯ್ಕೆಯಾಗಿದ್ದು 7000 ರುಪಾಯಿ ಬೆಲೆಯಲ್ಲಿ ಲಭ್ಯವಾಗುತ್ತದೆ.

ಶಿಯೋಮಿ ರೆಡ್ಮಿ ನೋಟ್ 4

ಶಿಯೋಮಿ ರೆಡ್ಮಿ ನೋಟ್ 4

10,999 ರುಪಾಯಿಗೆ ಶಿಯೋಮಿ ರೆಡ್ಮಿ ನೋಟ್ 4 ಮಾರುಕಟ್ಟೆಯಲ್ಲಿ ಲಭ್ಯವಾಗಲಿದ್ದು ದಿನಂಪ್ರತಿ ಕೆಲಸಕ್ಕೆ ಹೇಳಿ ಮಾಡಿಸಿದ ಫೋನ್ ಆಗಿದೆ.ಈ ಸ್ಮಾರ್ಟ್ ಫೋನ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 625 ಪ್ರೊಸೆಸಪ್ ನ್ನು ಹೊಂದಿದ್ದು ಅದರ ಸಾಮರ್ಥ್ಯ 2.2GHz ಆಗಿದೆ. 4100mAh ನ ಬ್ಯಾಟರಿಯನ್ನು ಇದು ಒಳಗೊಂಡಿದೆ. ಕ್ಯಾಮರಾ ವಿಚಾರವನ್ನು ಹೇಳುವುದಾದರೆ ನೋಟ್ ನಲ್ಲಿ 13ಎಂಪಿ ಹಿಂಭಾಗ ಕ್ಯಾಮರಾವು ಡುಯಲ್ LED ಫ್ಲ್ಯಾಶ್ ನ್ನು ಮತ್ತು ಮುಂಭಾಗದಲ್ಲಿ 5ಎಂಪಿ ಸಾಮರ್ಥ್ಯದ ಸೆಲ್ಫೀ ಕ್ಯಾಮರಾವನ್ನು ಇದು ಒಳಗೊಂಡಿದೆ.

ಎಲ್ ಜಿ ವಿ 30 ಪ್ಲಸ್

ಎಲ್ ಜಿ ವಿ 30 ಪ್ಲಸ್

ಎಲ್ ಜಿ ವಿ30 ಪ್ಲಸ್ ನ ಬೆಲೆ 36,990 ರುಪಾಯಿಗಳು. ಎಲ್ ಜಿ ವಿ30 ಪ್ಲಸ್ 6 ಇಂಚಿನ ಡಿಸ್ಪ್ಲೇಯನ್ನು 1440x2880 ಪಿಕ್ಸಲ್ ರೆಸಲ್ಯೂಷನ್ ನಲ್ಲಿ ಹೊಂದಿದೆ ಮತ್ತು ಆಂಡ್ರಾಯ್ಡ್ ವಿ 7.1.2 (Nougat) ನಲ್ಲಿ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ.

ಹೆಚ್ ಟಿ ಸಿ ಯು11

ಹೆಚ್ ಟಿ ಸಿ ಯು11

ಹೆಚ್ ಟಿ ಸಿ ಯು11 45,999 ರುಪಾಯಿಗೆ ಲಭ್ಯ. ಇದರಲ್ಲಿ USP ಯ HTC U11 ‘squeezable' ಸೈಡ್ bezel ಗಳಿದೆ. ಮೂರು ಡಿಜಿಟಲ್ ಅಸಿಸ್ಟೆಂಟ್ ನ್ನು ಹೊಂದಿ ಮಾರುಕಟ್ಟೆಗೆ ಬಂದ ಮೊದಲ ಫೋನ್ ಇದಾಗಿದೆ.ಗೂಗಲ್ ಅಸಿಸ್ಟೆಂಟ್, ಅಮೇಜಾನ್ ಅಲೆಕ್ಸಾ ಮತ್ತು ಹೆಚ್ ಟಿಸಿಯ ಸ್ವಂತ ಸೆನ್ಸ್ ಕಂಪ್ಯಾನಿಯನ್ ನ್ನು ಇದು ಹೊಂದಿದೆ. ಇದು ಆಂಡ್ರಾಯ್ಡ್ 7.0 Nougat ಆಪರೇಟಿಂಗ್ ಸಿಸ್ಟಮ್ ನ್ನು ಇದು ಹೊಂದಿದ್ದು ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್ ನಲ್ಲಿ ರನ್ ಆಗುತ್ತದೆ.

ನೋಕಿಯಾ 8

ನೋಕಿಯಾ 8

26,000 ರುಪಾಯಿ ಬೆಲೆಯಲ್ಲಿ ನೋಕಿಯಾ 8 ಒಂದು ಅತ್ಯುತ್ತಮ ಫ್ಲಾಗ್ ಶಿಪ್ ಫೋನ್ ಆಗಲಿದೆ.ಇದು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಪ್ರೊಸೆಸರ್ ಮತ್ತು Adreno 540 GPU ನ್ನು ಹೊಂದಿದೆ. 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಮತ್ತು 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಿಕೊಳ್ಳಲು ಈ ಫೋನಿನಲ್ಲಿ ಅವಕಾಶವಿದೆ.

ಹಾನರ್ ವ್ಯೂ 10

ಹಾನರ್ ವ್ಯೂ 10

29,999 ರುಪಾಯಿಗೆ ಹಾನರ್ ವ್ಯೂ 10 ಲಭ್ಯವಾಗುತ್ತದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬೇಸ್ ಆಗಿರುವ ಮೊದಲ ಹಾನರ್ ಫೋನ್ ಇದಾಗಿದೆ.ಹಾನರ್ ಕಂಪೆನಿಯ ಸ್ವಂತ Kirin 970 ಪ್ರೊಸೆಸರ್ ನ್ನು ಇದು ಹೊಂದಿದೆ ಜೊತೆಗೆ ARM Cortex CPU ಮತ್ತು first-to-market Mali-G72 12-core GPU ನೊಂದಿಗೆ ಪೇರ್ ಆಗಿದೆ. 6ಜಿಬಿ ಮೆಮೊರಿ ಮತ್ತು 128ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದರಲ್ಲಿದ್ದು ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ. ಜೊತೆಗೆ EMUI 8.0 ಕೂಡ ಇದೆ.

Most Read Articles
Best Mobiles in India

English summary
15 old smartphones that are totally worth buying now. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more