ನಿಮ್ಮ ಸ್ಮಾರ್ಟ್ ಫೋನ್ ಮಾಡಬಹುದಾದ ಈ 18 ಕೆಲಸಗಳ ಬಗ್ಗೆ ನಿಮಗೆ ತಿಳಿದಿದೆಯೇ?

  By Gizbot Bureau
  |

  ಈಗೆಲ್ಲ ಸ್ಮಾರ್ಟ್ ಫೋನ್ ಅಂದರೆ ಕೇವಲ ಅಲಾರಾಂಗಳಿಗೆ, ಗಡಿಯಾರಕ್ಕೆ ಅಥವಾ ಕ್ಯಾಮರಾ, ಉತ್ತಮ ಬ್ಯಾಟರಿ ಬ್ಯಾಕ್ ಅಪ್ ಗೆ ಮಾತ್ರವೇ ಸೀಮಿತವಾಗಿಲ್ಲ. ಬದಲಾಗಿ ಹೆಚ್ಚೆಚ್ಚು ಅಡ್ವಾನ್ಸ್ ಆಗಿರುವ ತಂತ್ರಗಾರಿಕೆಯನ್ನು ಅಳವಡಿಕೆ ಮಾಡಲಾಗುತ್ತಿದ್ದು ಫಿಂಗರ್ ಪ್ರಿಂಟ್ ಸೆನ್ಸರ್, ನೂತನ ಪ್ರೊಸೆಸರ್ ಗಳು, ಉತ್ತಮ ಓಎಸ್ ಇತ್ಯಾದಿಗಳಿಂದ ಮೊಬೈಲ್ ಫೋನ್ ಗಳು ಹೆಚ್ಚು ಆಕರ್ಷಣೀಯವಾಗಿ ನಮ್ಮ ದೈನಂದಿನ ಕಾರ್ಯಗಳಿಗೆ ಸಹಕಾರ ನೀಡುತ್ತಿರುತ್ತಿವೆ. ಆದರೆ ಇದೆಲ್ಲವನ್ನೂ ಹೊರತು ಪಡಿಸಿ ಇನ್ನೂ ಕೆಲವು ಫೀಚರ್ ಗಳು ನಮ್ಮ ಪ್ರಯೋಜನಕ್ಕೆ ಬರುತ್ತದೆ.

  ನಿಮ್ಮ ಸ್ಮಾರ್ಟ್ ಫೋನ್ ಮಾಡಬಹುದಾದ ಈ 18 ಕೆಲಸಗಳ ಬಗ್ಗೆ ನಿಮಗೆ ತಿಳಿದಿದೆಯೇ?

  ಈಗೆಲ್ಲ ಡಿವೈಸ್ ಗಳು ನಮ್ಮ ಜೀವನದ ಅಂಗವಾಗಿ ಬಿಟ್ಟಿದೆ. ನ್ಯೂಸ್, ಹವಾಮಾನ, ಹಾರ್ಟ್ ಬೀಟ್, ವಿಮಾನದ ವೇಳಾಪಟ್ಟಿ ಇತ್ಯಾದಿ ಕೆಲಸಗಳಿಗೂ ಕೂಡ ಫೋನ್ ಗಳೇ ಆಧಾರವೆನ್ನಿಸಿದೆ. ಬಹುಶ್ಯಃ ಡಿವೈಸ್ ಗಳು ಮಾಡದ ಕೆಲಸವೇ ಇಲ್ಲ ಎಂಬಂತಾಗುತ್ತಿದೆ. ಪ್ರತಿಯೊಂದು ವಯಕ್ತಿಕ ಮಾಹಿತಿಗಳಿಗೂ ಕೂಡ ಬಳಕೆದಾರರು ಫೋನ್ ನ್ನೇ ಅವಲಂಬಿಸುವಂತಾಗುತ್ತಿದೆ. ಮೊಬೈಲ್ ಮಾಡುವ ಕೆಲವು ಕೆಲಸಗಳ ಪಟ್ಟಿ ಇಲ್ಲಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸುದ್ದಿಗಳು/ಹವಾಮಾನ

  ಫೋನ್ ಬಳಸಿ ಜಗತ್ತಿನ ಯಾವುದೇ ಮೂಲೆಯ ಸುದ್ದಿಗಳನ್ನು 24/7 ತಿಳಿದುಕೊಳ್ಳುತ್ತಲೇ ಇರಬಹುದು. ನ್ಯೂಸ್ ಆಪ್ಸ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಗೂಗಲ್ ಮೂಲಕವೂ ತಿಳಿಯಬಹುದು. ಹವಾಮಾನ ವರದಿಯನ್ನೂ ಕೂಡ ನೀವು ನಿಮ್ಮ ಕೈಯಲ್ಲೇ ತಿಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಮೊಬೈಲ್.ವಿದೇಶಿ ಹವಾಮಾನವನ್ನು ಕೂಡ ತಿಳಿಯಲು ಸಾಧ್ಯವಾಗುತ್ತದೆ.

  ನಿಮ್ಮ ಹಾರ್ಟ್ ರೇಟ್ ನ್ನು ಮಾನಿಟರ್ ಮಾಡುತ್ತದೆ

  ನಿಮ್ಮ ಹೃದಯ ಎಷ್ಟು ಆರೋಗ್ಯಕರವಾಗಿದೆ ಎಂದು ತಿಳಿಯುವುದು ಬಹಳ ಕಠಿಣವೆನಿಸಬಹುದು. ಅದಕ್ಕಾಗಿ ನೀವು ಯಾವಾಗಲೂ ನಿಮ್ಮ ವೈದ್ಯರ ಬಳಿ ತೆರಳು ಸಮಯ ನೀಡುವ ಅಗತ್ಯವಿಲ್ಲ. ಹೌದು ಕೆಲವು ಸಿಂಪಲ್ ಆಪ್ ಗಳನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುವು ಮೂಲಕ ಹಾರ್ಟ್ ರೇಟ್ ನ್ನು ಮಾನಿಟರ್ ಮಾಡಬಹುದು.

  ವಿಮಾನದ ಹಾರಾಟದ ವಿವರ

  ಯಾವ ವೇಳೆಗೆ ಯಾವ ವಿಮಾನ ಎಲ್ಲಿ ಹಾರುತ್ತದೆ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಿದೆ. ವಿಮಾನದ ವೇಳಾಪಟ್ಟಿ ನಿಮ್ಮ ಕೈಯಲ್ಲೇ ಇರುತ್ತದೆ. ಅಷ್ಟೇ ಅಲ್ಲ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಬಹುದು.

  ಬ್ಯಾಟರಿ ಗಳನ್ನು ವೇಗವಾಗಿ ಚಾರ್ಜ್ ಮಾಡಬಹುದು

  ಒಂದು ಕಾಲ ಇತ್ತು. ಮೊಬೈಲ್ ಗಳನ್ನು ಚಾರ್ಜ್ ಮಾಡುವುದಕ್ಕೆ ತಾಸುಗಟ್ಟಲೆ ಪ್ಲಗ್ ಇನ್ ಮಾಡಿಡಬೇಕಿತ್ತು. ಆದರೆ ಈಗ ಹಾಗಿಲ್ಲ. ಕ್ಷಣಮಾತ್ರದಲ್ಲೇ ನಿಮ್ಮ ಮೊಬೈಲ್ ಗಳು ಚಾರ್ಜ್ ಆಗುತ್ತವೆ. ಸೋ ಬ್ಯಾಟರಿ ಖಾಲಿಯಾದರೆ ತಾಸುಗಟ್ಟಲೆ ಕಾಯುವ ಅಗತ್ಯವಿಲ್ಲ.

  ನಿಮ್ಮ ಕಾರನ್ನು ಸ್ಟಾರ್ಟ್ ಮಾಡಿ

  ಸ್ಮಾರ್ಟ್ ಫೋನ್ ಬಳಸಿ ನಿಮ್ಮ ಕಾರಿನ ಇಂಜಿನ್ ನ್ನು ಕೂಡ ಸ್ಟಾರ್ಟ್ ಮಾಡಬಹುದು.ಕಾರ್ ಕೀಯನ್ನು ನೀವೆಲ್ಲಾದರೂ ಕಳೆದುಕೊಂಡಿದ್ದರೆ ನೀವು ಗೂಗಲ್ ಮಾಹಿತಿಯನ್ನು ಬಳಸಿಕೊಳ್ಳಬಹುದು. ಆ ಮೂಲಕ ಕಾರಿನ ಇಂಜಿನ್ ನ್ನು ನಿಮ್ಮ ಫೋನ್ ಮೂಲಕವೇ ಸ್ಟಾರ್ಟ್ ಮಾಡಬಹುದು.

  ಹಲವು ಆಪ್ ಗಳನ್ನು ಒಟ್ಟಿಗೆ ಕ್ಲೋಸ್ ಮಾಡಿ

  ನಿಮ್ಮ ಡಿವೈಸ್ ನಿಧಾನವಾಗಿದ್ದರೆ ಹೋಮ್ ಸ್ಕ್ರೀನಿನಲ್ಲಿರುವ ಎಡಭಾಗದ ಬಟನ್ ನ್ನು ಕ್ಲಿಕ್ಕಿಸಿ ಮತ್ತು ಟ್ಯಾಪ್ ಮಾಡಿ ಎಲ್ಲಾ ಆಪ್ ಗಳನ್ನು ಒಮ್ಮೆಲೆ ಕ್ಲೋಸ್ ಮಾಡಬಹುದು. ಸೆಕೆಂಡ್ ನಲ್ಲಿ ಮಾಡುವ ಈ ಕೆಲಸದಿಂದ ನೀವು ತೆರದ ಎಲ್ಲಾ ಆಪ್ ಗಳು ಕ್ಲೋಸ್ ಆಗಿ ಮೊಬೈಲ್ ಫಾಸ್ಟ್ ಆಗಿ ಕಾರ್ಯ ನಿರ್ವಹಿಸಲು ಆರಂಭಿಸುತ್ತದೆ.

  ರಕ್ತದ ಆಲ್ಕೋಹಾಲ್ ಕಟೆಂಟ್ ನ್ನು ಲೆಕ್ಕಚಾರ ಮಾಡಿ

  ಬಳಕೆದಾರರು ತಮ್ಮ ದೇಹದಲ್ಲಿರುವ ರಕ್ತದ ಆಲ್ಕೋಹಾಲ್ ಮಟ್ಟವನ್ನು ಟ್ರ್ಯಾಕ್ ಮಾಡುವುದಕ್ಕೆ ಕಷ್ಟ ಪಡುತ್ತಾರೆ. ಆದರೆ ಈ ಸಮಸ್ಯೆಗೂ ಕೂಡ ಡಿವೈಸ್ ಗಳೇ ಪರಿಹಾರ ನೀಡುತ್ತದೆ. ಕೆಲವು ರಕ್ತದ ಶುಗರ್ ಲೆವೆಲ್ ಗೆ ಸಂಬಂಧಿಸಿದ ಆಪ್ ಗಳನ್ನು ಇನ್ಸ್ಟಾಲ್ ಮಾಡಿ ಮತ್ತು ನಿಮ್ಮ ಆರೋಗ್ಯದ ಅಪ್ ಡೇಟ್ ಪಡೆದುಕೊಳ್ಳಿ.

  ಗ್ರೇಸ್ಕೇಲ್ ಅನೇಬಲ್ ಮಾಡುವ ಮೂಲಕ ಚೆನ್ನಾಗಿ ನಿದ್ರಿಸಿ

  ಕಲರ್ ಫಿಲ್ಟರ್ ಗೆ ಸ್ವಿಚ್ ಆಗಿ ಮತ್ತು ಆನ್ ಮಾಡಿ ಮತ್ತು ಗ್ರೇಸ್ಕೇಲ್ ನ್ನು ಸೆಲೆಕ್ಟ್ ಮಾಡಿ. ಒಮ್ಮೆ ಗ್ರೇ(ಬೂದು) ಬಣ್ಣಕ್ಕೆ ಬದಲಾದ ನಂತರ ನಿಮ್ಮ ಫೋನಿನಿಂದ ಪ್ರಕಾಶಿಸುವ ಬೆಳಕು ತಿಳಿಯಾಗುತ್ತದೆ ಮತ್ತು ರಾತ್ರಿಯ ವೇಳೆ ನೀವು ಆರಾಮಾಗಿ ನಿದ್ರಿಸುವುದಕ್ಕೆ ಸಾಧ್ಯವಾಗುತ್ತದೆ. ಗ್ರೇ ಲೈಟ್ ನಲ್ಲಿ ನೀವು ಮಲ್ಟಿ ಟಾಸ್ಕಿಂಗ್ ನ್ನು ರಾತ್ರಿಯ ವೇಳೆಯಲ್ಲಿ ಮಾಡುವುದಕ್ಕೂ ಕೂಡ ಸಾಧ್ಯವಾಗುತ್ತದೆ.

  ಪಿಕ್ಚರ್ ನ್ನು ನೇರವಾಗಿ ಹ್ಯಾಂಗ್ ಮಾಡುವುದಕ್ಕೆ ಸಾಧ್ಯ

  ಸ್ಮಾರ್ಟ್ ಫೋನ್ ಗಳು ಆಲ್ ರೌಂಡರ್ ಗಳು. ಇದೇ ಅಂಶವನ್ನು ಗಮನದಲ್ಲಿಟ್ಟುಕೊಂಡು ಹೇಳುವುದದರೆ ಇವು ಪಿಕ್ಚರ್ ಗಳನ್ನು ನೇರವಾಗಿ ಹ್ಯಾಂಗ್ ಮಾಡುವುದಕ್ಕೂ ಕೂಡ ನೆರವು ನೀಡುತ್ತವೆ. ನೀವು ಹ್ಯಾಂಗಿಂಗ್ ಪಿಕ್ಚರ್ ಗಳನ್ನು ಕ್ಲಿಕ್ಕಿಸುತ್ತಲೇ ಇರಬಹುದು ಮತ್ತು ಆ ನಂತರ ಅವುಗಳನ್ನು ಹ್ಯಾಂಗ್ ಮಾಡಲು ಸಾಧ್ಯವಿದೆ.

  ಟೆಕ್ಸ್ಟ್ ಮತ್ತು ಎಮೋಜಿ ಶಾರ್ಟ್ ಕಟ್ ಕ್ರಿಯೇಟ್ ಮಾಡಿ

  ನೀವು ಟೆಕ್ಸ್ಟ್ ಮತ್ತು ಎಮೋಜಿ ಶಾರ್ಟ್ ಕಟ್ ಗಳನ್ನು ಕ್ರಿಯೇಟ್ ಮಾಡಬಹುದು ಮತ್ತು ಉದ್ದವಾಗಿರುವ ಹಂತಗಳನ್ನು ಅನುಸರಿಸುವ ಬದಲು ಶಾರ್ಟ್ ಕರ್ಟ್ ಗಳ ಮೂಲಕ ಕೆಲಸವನ್ನು ಸುಲಭಗೊಳಿಸಿಕೊಳ್ಳಬಹುದು. ಬೇರೆಬೇರೆ ಆಪ್ಸ್ ಗಳಿಗೂ ಶಾರ್ಟ್ ಕಟ್ ಮಾಡಿಕೊಳ್ಳಬಹುದು.

  ಲೈಟ್ ಗಳನ್ನು ಆನ್ ಮಾಡುವುದಕ್ಕೆ ಬಳಕೆ

  ನಿಮ್ಮ ಮನೆಯ ಎಲ್ಲಾ ಲೈಟ್ ಗಳನ್ನು ಒಟ್ಟಿಗೆ ಆನ್ ಮಾಡಿ ಒಟ್ಟಿಗೆ ಆಫ್ ಮಾಡಲು ಮೊಬೈಲ್ ನಿಂದ ಸಾಧ್ಯವಿದೆ. ಹೌದು ಸ್ಮಾರ್ಟ್ ಸ್ವಿಚ್ ಗಳ ಮೂಲಕ ನಿಮ್ಮ ಮನೆಯ ಲೈಟ್ಸ್ ಗಳನ್ನು ಮೊಬೈಲ್ ನಿಂದಲೇ ಆನ್ ಮತ್ತು ಆಫ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ ಸ್ವಿಚ್ ತನಕ ನಡೆದು ಹೋಗುವುದೇ ಬೇಕಾಗಿಲ್ಲ.

  ಮನೆಗೆ ನಡೆದು ಸಾಗುವಾಗ ನಿಮ್ಮ ಸುರಕ್ಷಿತವಾಗಿಡಲು ನೆರವು

  ನೀವು ಬ್ಯುಸಿ ಇರುವ ರೋಡ್ ನಲ್ಲಿ ಸಂಚರಿಸುತ್ತಿರುವಾಗ ವಾಕಿಂಗ್ ಮೋಡ್ ಗೆ ನಿಮ್ಮ ಫೋನ್ ನ್ನು ಹಾಕಿಕೊಂಡರೆ, ನೀವು ವಾಕ್ ಮಾಡುವಾಗ ಯಾವುದೇ ಕರೆ ಅಥವಾ ಮೆಸೇಜ್ ಗಳು ಬರುವುದಿಲ್ಲ ಮತ್ತು ನಿಮಗೆ ತೊಂದರೆ ನೀಡುವುದಿಲ್ಲ.

  ನಿಮ್ಮ ಟಿವಿಯಲ್ಲಿ ನಿಮ್ಮ ಇಷ್ಟದ ಶೋ ಪ್ಲೇ ಮಾಡಲು ಸಹಕಾರಿ

  ನಿಮ್ಮ ಟಿವಿಯನ್ನು ನಿಮ್ಮ ಮೊಬೈಲಿಗೆ ಕನೆಕ್ಟ್ ಮಾಡಿಕೊಳ್ಳಬಹುದು ಆ ಮೂಲಕ ನಿಮ್ಮ ಇಷ್ಟದ ಶೋವನ್ನು ಯಾವುದೇ ಸಮಯದಲ್ಲೂ ನೋಡಬಹುದು. ಒಂದು ವೇಳೆ ನಿನ್ನೆಯ ಧಾರಾವಾಹಿ ನೋಡಲು ಸಾಧ್ಯವಾಗದೇ ಇದ್ದಲ್ಲಿ ಮಾರನೇ ದಿನ ಸಮಯ ಸಿಕ್ಕಾಗ ವೀಕ್ಷಿಸಲು ಅವಕಾಶ ಮಾಡಿಕಾಡುತ್ತದೆ ಮೊಬೈಲ್.

  ರಿಮೋಟ್ ನಲ್ಲಿರುವ ಬ್ಯಾಟರಿಯನ್ನು ಚೆಕ್ ಮಾಡುವುದಕ್ಕೆ ಸಾಧ್ಯ

  ಫೋನ್ ಗಳ ಸಹಾಯದಿಂದ ಬ್ಯಾಟರಿಯ ಲೆವೆಲ್ ಎಷ್ಟಿದೆ ಎಂಬುದನ್ನು ಪರೀಕ್ಷಿಸಬಹುದು. ಒಂದು ವೇಳೆ ನಿಮ್ಮ ಟಿವಿ ರಿಮೋಟಿನ ಬ್ಯಾಟರಿ ಲೋ ಆಗಿದ್ದರೆ ಅದನ್ನು ಮೊಬೈಲ್ ಮೂಲಕ ತಿಳಿಯಲು ಸಾಧ್ಯವಾಗುತ್ತದೆ. ಅಷ್ಟೇ

  ಕಾರಿನ ಸಮಸ್ಯೆಗಳನ್ನು ಗುರುತಿಸಲು ಉಪಯೋಗ

  ಒಂದು ವೇಳೆ ನಿಮ್ಮ ಕಾರು ಸಮಸ್ಯೆಯಲ್ಲಿದ್ದರೆ ಅದನ್ನು ಗುರುತಿಸುವುದಕ್ಕೆ ಫೋನ್ ನೆರವು ನೀಡುತ್ತದೆ. ಕೆಲವು ಆಪ್ ಗಳು ಮತ್ತು ಫೀಚರ್ ಗಳ ಸಹಾಯದಿಂದ ಕಾರಿನ ಸಮಸ್ಯೆಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗುತ್ತದೆ.

  ಕೆಟಗರಿ ಮೂಲಕ ಫೋಟೋಗಳ ಹುಡುಕಾಟ

  ನೀವು ಯಾವತ್ತೋ ಸೇವ್ ಮಾಡಿದ ಫೋಟೋ ಹುಡುಕಾಟವು ಸರಳಗೊಳ್ಳುತ್ತದೆ. ಕೆಲವು ನಿರ್ಧಿಷ್ಟ ಹುಡಾಕಟದ ಅಂಶಗಳನ್ನು ಟೈಪ್ ಮಾಡುವ ಮೂಲಕ ಇದನ್ನು ಸಾಧಿಸಬಹುದು.

  ಕಸ್ಟಮ್ ವೈಬ್ರೇಷನ್ ಕ್ರಿಯೇಟ್ ಮಾಡಲು

  ಡಿವೈಸ್ ಗಳನ್ನು ಬಳಸಿ ಕಸ್ಟಮ್ ವೈಬ್ರೇಷನ್ ನ್ನು ಕ್ರಿಯೇಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಕೆಲವು ಹಂತಗಳನ್ನು ಅನುಸರಿಸಿ ಅಥವಾ ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸಿದರೆ ಇದನ್ನು ಮಾಡಬಹುದು.ವೈಬ್ರೇಷನ್ ಮೂಲಕ ನೀವು ಯಾವುದೇ ಪ್ರಮುಖ ಕರೆಗಳನ್ನು ಕೂಡ ಮಿಸ್ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಕರೆ ಅಥವಾ ಮೆಸೇಜ್ ಎಲ್ಲಾದಕ್ಕೂ ಇದು ಲಭ್ಯವಿರುತ್ತದೆ.

  ಯಾವುದೇ ಆಪ್ ಇಲ್ಲದೆ ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿ

  ಕೆಲವು ಸ್ಮಾರ್ಟ್ ಫೋನ್ ಗಳಲ್ಲಿ ಕ್ಯೂಆರ್ ಕೋಡ್ ಫೀಚರ್ ಲಭ್ಯವಿದೆ. ಇದು ಯಾವುದೇ ಟ್ರೇಡ್ ಮಾರ್ಕಿನ ವಸ್ತುಗಳನ್ನು ಖರೀದಿಸುವುದಕ್ಕೆ ನೆರವು ನೀಡುತ್ತದೆ. ಪೇಟಿಎಂ, ಫೋನ್ ಪೇ ಇತ್ಯಾದಿಗಳಲ್ಲಿ ಇ-ಕ್ಯಾಷ್ ಟ್ರ್ಯಾನ್ಸ್ಟ್ಯಾಕ್ಷನ್ ಮಾಡುವಾಗ ಸುಲಭವಾಗಿ ಕ್ಯೂಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡಬಹುದು ಮತ್ತು ಪಾವತಿಯನ್ನು ಸಾಧಿಸಬಹುದು.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  The story deals about the facts related to wider adaptability which your smartphone can seek. These devices can perform many such activities which even a special task force won't be able to perform. Due to many advantages, you must rely on smartphones.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more