ಬೆಚ್ಚಿಬಿದ್ದ ಮೊಬೈಲ್ ಮಾರುಕಟ್ಟೆ: ರೂ.500ಕ್ಕೆ 4G ಸ್ಮಾರ್ಟ್‌ಫೋನ್, ರೂ.60 ಮಾಸಿಕ ಶುಲ್ಕ

  ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟ ರಿಲಯನ್ಸ್ ಮಾಲೀಕತ್ವದ ಜಿಯೋ ಬಿಡುಗಡೆ ಮಾಡಿದ್ದ ಜಿಯೋ ಫೋನ್, ಇತರೆ ಟೆಲಿಕಾಂ ಕಂಪನಿಗಳು ತಮ್ಮದೇ ಫೋನ್ ನಿರ್ಮಾಣಕ್ಕೆ ಮುಂದಾಗಲು ಪ್ರೋತ್ಸಾಹವನ್ನು ನೀಡಿತ್ತು. ಇದರೊಂದಿಗೆ ಜಿಯೋ ಮೊನ್ನೆ ನೀಡಿದಂತಹ ರೂ.49ರ ಮಾಸಿಕ ಪ್ಲಾನ್ ಇತರೆ ಟೆಲಿಕಾಂ ಕಂಪನಿಗಳ ನಿದ್ದೆಗೇಡಿಸಿದ್ದು, ಈ ಹಿನ್ನಲೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಒಂದಾಗಿ ಹೊಸ ಸಾಧ್ಯತೆಯೊಂದನ್ನು ತೋರಿಸಿಕೊಡಲು ಮುಂದಾಗಿವೆ ಎನ್ನಲಾಗಿದೆ.

  ಬೆಚ್ಚಿಬಿದ್ದ ಮೊಬೈಲ್ ಮಾರುಕಟ್ಟೆ: ರೂ.500ಕ್ಕೆ 4G ಸ್ಮಾರ್ಟ್‌ಫೋನ್, ರೂ.60 ಮಾಸಿಕ

  ದೇಶಿಯ ಟೆಲಿಕಾಂ ಕಂಪನಿಯಲ್ಲಿ ಟಾಪ್ ಕಂಪನಿಗಳು ಎನ್ನಿಸಿಕೊಂಡಿರುವ ಭಾರ್ತಿ ಏರ್‌ಟೆಲ್, ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ಕಂಪನಿಗಳು ಒಂದಾಗಿ ಸ್ಮಾರ್ಟ್‌ಫೋನ್ ತಯಾಕರ ಕಂಪನಿಗಳ ಕದ ತಟ್ಟಿದ್ದು, ರೂ.500ಕ್ಕೆ ಸ್ಮಾರ್ಟ್‌ಫೋನ್ ನಿರ್ಮಿಸಿ ಕೊಡುವಂತೆ ಮನವಿ ಮಾಡಿವೆ. ಇದಕ್ಕಾಗಿ ಯೋಜನೆಯೊಂದನ್ನು ನಿರ್ಮಿಸಿದ್ದು, ಈ ಸ್ಮಾರ್ಟ್‌ಫೋನ್ ನೊಂದಿಗೆ ಇದರೊಂದಿಗೆ ಅತೀ ಕಡಿಮೆ ಬೆಲೆಗೆ ಮಾಸಿಕ ಪ್ಲಾನ್ ಘೋಷಣೆ ಮಾಡಲು ಮುಂದಾಗಿವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಜಿಯೋ ವಿರುದ್ಧ ಸಮರ:

  ಈಗಾಗಲೇ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ವಿರುದ್ಧ ತೊಡೆ ತಟ್ಟಲಾಗದೆ ಸೋಲಿನ ಅಂಚಿನಲ್ಲಿರುವ ಏರ್‌ಟೆಲ್ ಹಾಗೂ ಸೋಲನ್ನು ಒಪ್ಟಿಕೊಂಡಿರುವ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಒಟ್ಟಾಗಿ ಜಿಯೋ ಮಣಿಸಲು ಈ ಹೊಸ ಯೋಜನೆಯನ್ನು ರೂಪಿಸಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

  ಜಿಯೋ ಮಣಿಸಲು:

  ಮಾರುಕಟ್ಟೆಯಲ್ಲಿ ಜಿಯೋ ಎಲ್ಲಾ ಬಳಕೆದಾರರನ್ನು ಸೆಳೆಯುತ್ತಿದ್ದು, ಇತರೆ ಕಂಪನಿಗಳ ಆದಾಯಕ್ಕೆ ಹೊಡತವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಜಿಯೋ ಮಣಿಸಲು ಕಡಿಮೆ ಬೆಲೆಗೆ 4G ಸ್ಮಾರ್ಟ್‌ಫೋನ್ ಮಾರಾಟ ಮಾಡಿ, ಕಡಿಮೆ ಮಾಸಿಕ ದರವನ್ನು ವಿಧಿಸಿ ಜಿಯೋವನ್ನು ಮುಗಿಸುವ ಪ್ಲಾನ್ ಮಾಡುತ್ತಿವೆ ಎನ್ನಲಾಗಿದೆ.

  ರೂ.500ಕ್ಕೆ ಸ್ಮಾರ್ಟ್‌ಫೋನ್:

  ಈಗಾಗಲೇ ರೂ.2000ಕ್ಕೆ ಆಂಡ್ರಾಯ್ಡ್ ಗೋ(ಓರಿಯೋ) ಆವೃತ್ತಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಈ ಟಾಪ್ ಮೂರು ಕಂಪನಿಗಳು ಸ್ಮಾರ್ಟ್‌ಫೋನ್ ಅನ್ನು ರೂ.500ಕ್ಕೆ ತಯಾರಿಸಿಕೊಡುವಂತೆ ಸ್ಮಾರ್ಟ್‌ಫೋನ್ ತಯಾರಕರ ಬೆನ್ನು ಬಿದ್ದಿವೆ. ಇದು ಸಾಧ್ಯ ಕೂಡ ಎನ್ನಲಾಗಿದೆ.

  ಅತೀ ಕಡಿಮೆ ಮಾಸಿಕ ಶುಲ್ಕ:

  ಇದಲ್ಲದೇ ರೂ.500 4G ಸ್ಮಾರ್ಟ್‌ಫೋನಿನೊಂದಿಗೆ ಅತೀ ಕಡಿಮೆ ಮಾಸಿಕ ಶುಲ್ಕವನ್ನು ವಿಧಿಸಲಿದ್ದು, ರೂ. 60-70 ಮಾತ್ರವೇ ಇರಲಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಫೋನ್ ವಂಚಿತರಾಗಿರುವ ಹಲವು ಮಂದಿಗೆ ಇದು ವರದಾನವಾಗಲಿದೆ.

  ಡೇಟಾ ಬಳಕೆಗೆ ಒತ್ತು:

  ಜಿಯೋ ಆರಂಭದ ನಂತರದಿಂದ ದೇಶದಲ್ಲಿ ಡೇಟಾ ಬಳಕೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಇತರೆ ಟೆಲಿಕಾಂ ಕಂಪನಿಗಳು ಸಹ ಸ್ಮಾರ್ಟ್‌ಫೋನ್ ಬಳಕೆದಾರರನ್ನು ಟಾರ್ಗೆಟ್ ಮಾಡಿ, ಹೆಚ್ಚು ಡೇಟಾವನ್ನು ಬಳಕೆ ಮಾಡುವಂತೆ ಮಾಡುತ್ತಿವೆ. ಇದರಿಂದಲೇ ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುತ್ತಿವೆ.

  ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
  ಈಗಾಗಲೇ ಮಾತುಕತೆ ಪೂರ್ಣ:

  ಈಗಾಗಲೇ ಮಾತುಕತೆ ಪೂರ್ಣ:

  ಈ ಮೂರು ಟೆಲಿಕಾಂ ಕಂಪನಿಗಳಿಗೆ ರೂ.500ಕ್ಕೆ ಸ್ಮಾರ್ಟ್‌ಫೋನ್ ನಿರ್ಮಿಸಿ ಕೊಡಲು ಸ್ಮಾರ್ಟ್‌ಫೋನ್ ತಯಾರಿಕ ಕಂಪನಿಯೊಂದು ಮುಂದೆ ಬಂದಿದೆ ಎನ್ನಲಾಗಿದೆ. ಇನ್ನ ಎರಡು ಮೂರು ತಿಂಗಳಲ್ಲಿ ಈ ಸ್ಮಾರ್ಟ್‌ಫೋನ್ ಗಳು ಮಾರುಕಟ್ಟೆಗೆ ಬಂದರು ಆಶ್ಚರ್ಯಪಡಬೇಕಾಗಿಲ್ಲ.

  ಜಿಯೋ ಕಟ್ಟಿರುವ ಸಾಮ್ರಾಜ್ಯ ಅಲ್ಲಾಡಿಸಲು ಏರ್‌ಟೆಲ್‌ನ ಇದೊಂದು ಆಫರ್ ಸಾಕು...!

  ಟೆಲಿಕಾಂ ವಲಯದಲ್ಲಿ ದಿನಕ್ಕೊಂದು ಆಫರ್ ಗಳು ಹೊಸದಾಗಿ ಕಾಣಿಸಿಕೊಳ್ಳುತ್ತಿದೆ. ಜಿಯೋ ಕೊಟ್ಟ ಮರುದಿನವೇ ಆದಕ್ಕೆ ಹೊಸ ರೂಪ ನೀಡಿ ಏರ್‌ಟೆಲ್‌ ಸಹ ಹೊಸ ಆಫರ್ ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮತ್ತೊಂದು ಆಫರ್ ಸಹ ಕಾಣಿಸಿಕೊಂಡಿದೆ. ಏರ್‌ಟೆಲ್‌ ರೂ.399 ಪ್ಲಾನ್ ರೀಲಾಂಚ್ ಮಾಡಿದ್ದು, ಜಿಯೋ ಆಫರ್ ಅಲುಗಾಡಿಸಲು ಇದೊಂದೇ ಸಾಲು ಎನ್ನುವ ಮಾತು ಕೇಳಿಬಂದಿದೆ.

  ಜಿಯೋ ನೀಡಿರುವ ಮಾದರಿಯಲ್ಲಿ ಏರ್‌ಟೆಲ್ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಗೆ ಹೆಚ್ಚಿನ ಲಾಭವನ್ನು ನೀಡುವಂತಹ ಆಫರ್ ಅನ್ನು ನೀಡುತ್ತಿದೆ. ಏರ್‌ಟೆಲ್ ರೂ.399ಕ್ಕೆ ನೀಡಿರುವ ಆಫರ್ ನಲ್ಲಿ ಕರೆ ಮಾಡುವ ಮತ್ತು ಉಚಿತ ಡೇಟಾ ಸೇರಿದಂತೆ ಉಚಿತ SMS ಕಳುಹಿಸುವಂತಹ ಆಯ್ಕೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ಏರ್‌ಟೆಲ್ ಬಳಕೆದಾರರಿಗೆ ಹೆಚ್ಚಿನ ಲಾಭವು ದೊರೆಯಲಿದೆ ಎನ್ನಲಾಗಿದೆ.

  84 ದಿನಗಳ ವ್ಯಾಲಿಡಿಟಿ:

  ಏರ್‌ಟೆಲ್ ನೀಡುತ್ತಿರುವ ರೂ.399 ಪ್ಲಾನ್‌ನಲ್ಲಿ ಬಳಕೆದಾರರು 84 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದು, ಈ ಸಮಯದಲ್ಲಿ ಪ್ರತಿ ನಿತ್ಯ 1GB ಡೇಟಾವನ್ನು ಬಳಕೆಗೆ ದೊರೆಯಲಿದ್ದು, ಅಲ್ಲದೇ ಪ್ರತಿ ನಿತ್ಯ 100 SMS ಗಳನ್ನು ಕಳುಹಿಸುವ ಅವಕಾಶವು ಲಭ್ಯವಿದೆ. ಇದಲ್ಲದೇ ಬಳಕೆದಾರರು ಉವಿತ ಕರೆಗಳನ್ನು ಮಾಡಬಹುದಾಗಿದೆ.

  ಬದಲಾದ ಪ್ಲಾನ್‌:

  ಈ ಹಿಂದೆ ಜಿಯೋ ತನ್ನ ಬಳಕೆದಾರರಿಗೆ ಪ್ಲಾನ್‌ನಲ್ಲಿ ಬದಲಾವಣೆಯನ್ನು ಮಾಡಿದ ರೀತಿಯಲ್ಲಯೇ ಏರ್‌ಟೆಲ್‌ ಸಹ ಆಫರ್ ಬದಲಾಯಿಸಲು ಮುಂದಾಗಿದೆ. ಈ ಹಿಂದೆ 70 ದಿನಗಳು ಇದ್ದ ವ್ಯಾಲಿಡಿಟಿಯನ್ನು ಈ ಬಾರಿ 84 ದಿನಗಳಿಗೆ ಏರಿಕೆ ಮಾಡಲು ಮುಂದಾಗಿದೆ.

  ಇದಲ್ಲದೇ ರೂ.149 ಪ್ಲಾನ್ ಸಹ ಬದಲಾಗಿದೆ:

  ಇದಲ್ಲದೇ ರೂ.149 ಪ್ಲಾನ್‌ ಸಹ ಬದಲಾವಣೆಯನ್ನು ಕಂಡಿದ್ದು, ಬಳಕೆದಾರರಿಗೆ ಹೆಚ್ಚಿನ ಲಾಭವು ದೊರೆಯಲಿದೆ. ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 28 ದಿನಗಳ ಅವಧಿಗೆ 1GB ಡೇಟಾ ದೊಂದಿಗೆ ಅನ್‌ಲಿಮಿಟೆಡ್ ಉಚಿತ ಕರೆ ಮಾಡವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

  ಜಿಯೋಗೆ ಸೆಡ್ಡು:

  ಏರ್‌ಟೆಲ್ ಮಾರುಕಟ್ಟೆಯಲ್ಲಿ ಉಳಿಯಬೇಕಾದರೆ ಜಿಯೋ ವಿರುದ್ಧ ಸ್ಪರ್ಧಿಸಲೇ ಬೇಕಾದ ಅನಿರ್ವಾಯತೆಯೂ ಎದುರಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋಗೆ ಸೆಡ್ಡು ಹೊಡೆಯುವಂತಹ ಸೇವೆಗಳನ್ನ ಏರ್‌ಟೆಲ್‌ ನೀಡುತ್ತಿದೆ. ಈ ಹೊಸ ಆಫರ್ ಸಹ ಇದೇ ಮಾದರಿಯಲ್ಲಿದೆ.

  ಜಿಯೋ ಪ್ರೈಮ್ ಗ್ರಾಹಕರಿಗೆ "ಬೈ ಒನ್ ಗೆಟ್‌ ಒನ್" ಬಂಪರ್ ಆಫರ್ !!

  ಜಿಯೋವಿನ ಪ್ರೈಮ್ ಆಫರ್‌ಗೂ ವಿರುದ್ದವಾಗಿ ಏರ್‌ಟೆಲ್, BSNL ಮತ್ತು ಇತರ ಟೆಲಿಕಾಂಗಳು ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಆಫರ್ ಬಿಡುಗಡೆ ಮಾಡುತ್ತಿದ್ದು, ಅವುಗಳಿಗೆ ಸೆಡ್ಡು ಹೊಡೆಯಲು ಇದೀಗ ಜಿಯೋ ಪ್ರೈಮ್ ಬಳಕೆದಾರರಿಗೆ "ಬೈ ಒನ್ ಗೆಟ್‌ ಒನ್" ಆಫರ್ ನೀಡಿದೆ.!

  303 ರೂಪಾಯಿಗೆ ಪ್ರತಿ ದಿನ ಒಂದು ಜಿಬಿ ಡೇಟಾವನ್ನು ನಿಡುವುದಾಗಿ ಹೇಳಿದ್ದ ಜಿಯೋ, ಇದೀಗ ಡೇಟಾ ಆಫರ್‌ ಅನ್ನು ಮತ್ತುಷ್ಟು ಹೆಚ್ಚಿದೆ. 303 ರೂಪಾಯಿ ರೀಚಾರ್ಜ್‌ಗೆ 30GB ಗೆ ಬದಲಾಗಿ 35GB ಡೇಟಾ , ಮತ್ತು 499 ರೂಪಾಯಿ ರೀಚಾರ್ಜ್‌ಗೆ ಪ್ರತಿ ದಿವಸ 2GB ಡೇಟಾ ಜೊತೆಗೆ 10GB ಹೆಚ್ಚು ಡೇಟಾ ಪಡೆಯಬಹುದಾಗಿದೆ.

  ಜಿಯೋ ಪರವಾಗಿ ಕನ್ನಡಿಗರು ಬರೆದ ಟಾಪ್ 5 ಫೇಸ್‌ಬುಕ್ ಕಾಮೆಂಟ್ ಇವು!!

  ಜಿಯೋ ಪ್ರೈಮ್ ಆಪರ್ ರೀತಿಯಲ್ಲಿಯೇ 345 ರೂಪಾಯಿಗೆ 28GB ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್ ಆಫರ್ ನೀಡಿದ ಏರ್‌ಟೆಲ್‌ ಮತ್ತು ವೊಡಾಫೊನ್‌ಗೆ ಸೆಡ್ಡು ಹೊಡೆಯಲು ಜಿಯೋ ಈ ಆಫರ್ ಬಿಡುಗಡೆ ಮಾಡಿದ್ದು, "ಬೈ ಒನ್ ಗೆಟ್‌ ಒನ್" ಆಫರ್ ಮೂಲಕ ಜಿಯೋ ಪ್ರೈಮ್ ಗ್ರಾಹಕರು 303 ರೂಪಾಯಿ ರೀಚಾರ್ಜ್‌ಗೆ 201 ರೂ ಉಳಿತಾಯ ಮಾಡಲಿದ್ದಾರೆ. ಮತ್ತು 499 ರೂಪಾಯಿ ರೀಚಾರ್ಜ್‌ಗೆ 301 ರೂಪಾಯಿ ಉಳಿತಾಯ ಮಾಡಲಿದ್ದಾರೆ ಎಂದು ಜಿಯೋ ತಿಳಿಸಿದೆ.!

  ಮಾರ್ಚ್ 31 ರ ಒಳಗಾಗಿ ಏರ್‌ಟೆಲ್‌ನ ಅನ್‌ಲಿಮಿಟೆಡ್ ಆಫರ್ ರೀಚಾರ್ಜ್ ಮಾಡಿಸಿದರೆ ಒಂದು ವರ್ಷಗಳ ಕಾಲ ಏರ್‌ಟೆಲ್‌ ಈ ಆಫರ್ ಅನ್ನು ತನ್ನ ಗ್ರಾಹಕರಿಗೆ ನೀಡುವುದಾಗಿ ಏರ್‌ಟೆಲ್ ಹೇಳಿತ್ತು.! ಇನ್ನು ಮೊನ್ನೆಯಷ್ಟೆ BSNL ಪ್ರತಿ ದಿವಸ 2GB ಡೇಟಾ ಯಂತೆ ಅನ್‌ಲಿಮಿಟೆಡ್ ಆಫರ್ ನೀಡಿದೆ.!!

  ಕೊನೆಗೂ ಗೆಲ್ಲಲಿಲ್ಲ ಏರ್‌ಟೆಲ್ , ಐಡಿಯಾ!..ಜಿಯೋ ಉಚಿತ ಆಫರ್ ಮುಂದುವರೆಯುತ್ತದೆ!!!

  ಜಿಯೋಗಾಗಿ ಪೋರ್ಟ್ ಬೆಲೆ ಕಡಿಮೆ ಮಾಡಿತು ಟ್ರಾಯ್!?..ಟೆಲಿಕಾಂ ಕಂಪೆನಿಗಳ ಆಕ್ಷೇಪ!!

  ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ದಿನದಿಂದ ದಿನಕ್ಕೆ ಟೆಲಿಕಾಂ ಬಳಕೆದಾರರಿಗೆ ಮತ್ತು ಜಿಯೋ ಟೆಲಿಕಾಂಗೆ ಸಿಹಿಸುದ್ದಿಯನ್ನು ನೀಡುತ್ತಿದೆ.! ಮೊಬೈಲ್ ಪೋರ್ಟಬೆಲಿಟಿ (MNP) ಸೇವೆಯ ಶುಲ್ಕವನ್ನು ಟ್ರಾಯ್ 79 ಪರ್ಸೆಂಟ್‌ನಷ್ಟು ಕಡಿತಗೊಳಿಸಿದ್ದು, ಈ ಬದಲಾವಣೆ ತಕ್ಷಣ ಜಾರಿಗೆ ಬರಲಿದೆ ಎನ್ನುವ ವರದಿಗಳು ಹೊರಬಿದ್ದಿವೆ.!!

  ಟೆಲಿಕಾಂನಲ್ಲಿ ಪ್ರಸ್ತುತ ಮೊಬೈಲ್ ಪೋರ್ಟಬೆಲಿಟಿಗೆ (ಒಂದು ಕಂಪೆನಿ ಸೇವೆಯಿಂದ ಮತ್ತೊಂದು ಕಂಪೆನಿ ಸೇವೆಗೆ ಬಳಕೆದಾರರ ಬದಲಾವಣೆ ) 19 ರೂಪಾಯಿಗಳ ದರವಿದ್ದು, ದರಸಮರ ಹೆಚ್ಚುತ್ತಿರುವ ಈ ಸಮಯದಲ್ಲಿ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡುವ ಗುರಿಯನ್ನು ಸಹಹ ಟ್ರಾಯ್ ಹೊಂದಿದೆ.!!

  ಆದರೆ, ಟ್ರಾಯ್ ನಿರ್ಧಾರಕ್ಕೆ ಇತರೆ ಟೆಲಿಕಾಂ ಕಂಪೆನಿಗಳು ಆಕ್ಷೇಪವನ್ನು ಸಹ ವ್ಯಕ್ತಪಡಿಸಿದ್ದು, MNP ಸೇವಾ ಶುಲ್ಕವನ್ನು 19 ರೂಪಾಯಿಗಳವರೆಗೆ ಉಳಿಸಿಕೊಳ್ಳಲು ಬಯಸುತ್ತಿವೆ. ಹಾಗಾದರೆ, ಏನಿದು ಪೋರ್ಟ್ ಸೇವೆ? ದರ ಕಡಿಮೆಯಾದರೆ ಗ್ರಾಹಕರಿಗೆ ಮತ್ತು ಜಿಯೋಗೆ ಏನು ಲಾಭ ? ಪೋರ್ಟ್ ಆಗುವುದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.!!

  ಪೋರ್ಟ್ ದರ ಕಡಿಮೆ ಮಾಡುತ್ತಿರುವುದು ಏಕೆ?

  MNP ಸೇವಾ ಶುಲ್ಕ ಗಣನೀಯವಾಗಿ ಕಡಿಮೆಯಾಗಿರುವುದರಿಂದ, ಅದೇ ಸಮಯದಲ್ಲಿ MNP ಟ್ರಾಫಿಕ್ ಪ್ರಮಾಣವು ಹೆಚ್ಚಾಗುತ್ತಿದೆ ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. ಹಾಗಾಗಿಯೇ, MNP ಸೇವಾ ಶುಲ್ಕವನ್ನು 19 ರೂಪಾಯಿಗಳಿಂದ 4 ರೂಪಾಯಿಗಳೀಗೆ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.!!

  ಟೆಲಿಕಾಂ ಕಂಪೆನಿಗಳು ಆಕ್ಷೇಪ!!

  MNP ಸೇವಾ ಶುಲ್ಕಗಳು ಕಡಿಮೆಯಾದರೆ ಗ್ರಾಹಕರನ್ನು ಪೋರ್ಟ್ಗಾಗಿ ವಿನಂತಿಸಲು ಟೆಲಿಕಾಂ ಕಂಪೆನಿಗಳು ಭಾರೀ ಪ್ರಯತ್ನ ನಡೆಸುತ್ತವೆ. ಇದರಿಂದ ಗ್ರಾಹಜಕರು ಒಮ್ಮೆಲೆ ಮತ್ತೊಂದು ಕಂಪೆನಿಗೆ ಜಾರಿ ಹೋಗುವ ಭಯ ಟೆಲಿಕಾಂ ಕಂಪೆನಿಗಳಿಗೆ ಕಾಡುತ್ತಿರುವುದರಿಂದ ಈ ನಿರ್ಧಾರಕ್ಕೆ ಟೆಲಿಕಾಂ ಕಂಪೆನಿಗಳು ಆಕ್ಷೇಪ ವ್ಯಕ್ತಪಡಿಸಿವೆ.!!

  ಜಿಯೋಗೆ ಭಾರೀ ಲಾಭ?

  MNP ಸೇವಾ ಶುಲ್ಕವನ್ನು ಕಡಿಮೆಗೊಳಿಸುವ ಟ್ರಾಯ್ ನಿರ್ಧಾರದಿಂದ ಜಿಯೋಗೆ ಹೆಚ್ಚು ಲಾಭವಾಗಲಿದೆ ಎನ್ನಲಾಗಿದೆ. ಜಿಯೋ ಹೆಚ್ಚು ಗ್ರಾಹಕರನ್ನು ಸೆಳೆಯಲು ಈ ನಿರ್ಧಾರ ಸಹಕಾರಿಯಾಗುತ್ತದೆ. ಹಾಗೂ ಇತರೆ ಟೆಲಿಕಾಂ ಕಂಪೆನಿಗಳಿಗೆ ಪಾವತಿಸಬೇಕಾದ ಮೊತ್ತವು ಕಡಿಮೆಯಾಗಲಿದೆ ಎನ್ನುತ್ತವೆ ವರದಿಗಳು.!!

  COAI ಡೈರೆಕ್ಟರ್ ಅಭಿಪ್ರಾಯವೇನು?

  ಜಿಎಸ್ಎಮ್ ಟೆಲ್ಕೋಸ್ ಪ್ರತಿನಿಧಿಸುವ COAI ನ ನಿರ್ದೇಶಕ ಜನರಲ್ ರಾಜನ್ ಎಸ್. ಮ್ಯಾಥ್ಯೂಸ್ ಅವರು, ಪೋರ್ಟ್( MNP) ಸೇವಾ ಶುಲ್ಕವನ್ನು ಕಡಿಮೆಗೊಳಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಪ್ರತಿ ಯಶಸ್ವಿ ಪೋರ್ಟ್ ಮಾಡುವ ವಿನಂತಿಯಲ್ಲೂ ಇಂತಹ ಸೇವೆಯ ಅವಶ್ಯಕತೆ ಇದ್ದು, ಕನಿಷ್ಟ 4 ರೂ.ಗೆ ಈ ಸೇವೆ ಒದಗಿಸಬಹುದು ಎಂದು ಹೇಳಿದ್ದಾರೆ.!!

  ಪೋರ್ಟ್ ಆಗುವುದು ಹೇಗೆ?

  ನಿಮ್ಮ ನಂಬರ್ ಅನ್ನು ಎಸ್‌ಎಮ್‌ಎಸ್ ಮೂಲಕ (PORT 84960***22) ಈ ರೀತಿಯಾಗಿ 1900ಗೆ ಸೆಂಡ್ ಮಾಡಿದರೆ ನಿಮಗೆ ಟೆಲಿಕಾಂ ಕಂಪೆನಿಯೊಂದ ಕೋಡ್‌ಗಳಿರುವ ಮತ್ತೊಂದು ಎಸ್‌ಎಮ್‌ಎಸ್ ತಲುಪುತ್ತದೆ. ಆ ಎಸ್‌ಎಮ್‌ಎಸ್ ಅನ್ನು ಟೆಲಿಕಾಂ ಔಟ್‌ಲೇಟ್‌ಗಳಲ್ಲಿ ನೀಡಿದರೆ, ಇನ್ನೊಂದು ಟೆಲಿಕಾಂ ಕಂಪೆನಿ ಸೇವೆಯನ್ನು ನೀವು ಪಡೆಯಬಹುದು.!!

  ಓದಿರಿ: ಭಾರತದಲ್ಲಿ ಶಿಯೋಮಿ ಅಲೆ ಅಳಿಸಲಿದೆ ಭಾರತೀಯ 'ಸ್ಮಾರ್ಟಾನ್ ಟಿ' ಫೋನ್!!

  ಬಂಪರ್ ಆಫರ್ ಕೊಟ್ಟ ಜಿಯೋ: ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಆಡ್‌ಆನ್‌ ಡೇಟಾ..!

  ಮೊನ್ನೆ ತಾನೆ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಬಳಕೆದಾರರಿಗೆ ರೂ.49ಕ್ಕೆ ಒಂದು ತಿಂಗಳ ವ್ಯಾಲಿಡಿಟಿಯ ಆಫರ್ ಅನ್ನು ನೀಡಿದ ಬೆನ್ನಲ್ಲೇ ಮತ್ತೊಂದು ಭರ್ಜರಿ ಆಫರ್ ಅನ್ನು ಲಾಂಚ್ ಮಾಡಿದೆ. ಈ ಬಾರಿ ತಿಂಗಳ ಆಫರ್ ಅನ್ನು ಬದಲಾವಣೆ ಮಾಡುವ ಬದಲಿಗೆ, ಡೇಟಾ ಆಡ್ ಆನ್ ಪ್ಯಾಕ್‌ಗಳನ್ನು ಆಪ್‌ಡೇಟ್ ಮಾಡಿದ್ದು, ಈ ಮೂಲಕ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಜಿಯೋ ನೀಡುವ ಡೇಟಾ ಸಾಲುವುದಿಲ್ಲ ಎನ್ನುವರಿಗೆ ಈ ಆಡ್ ಆನ್ ಪ್ಯಾಕ್‌ಗಳು ಸಹಾಯಕಾರಿಯಾಗಿದೆ.


  ಜಿಯೋ ತನ್ನ ಆಡ್ ಆನ್ ಪ್ಯಾಕ್‌ಗಳನ್ನು ಆಪ್‌ಡೇಟ್ ಮಾಡಿದ್ದು, ಈ ಕುರಿತು ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಈ ಮೂಲಕ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಈಗಾಗಲೇ ಹೆಚ್ಚಿನ ಡೇಟಾವನ್ನು ಬಳಕೆದಾರರಿಗೆ ನೀಡುತ್ತಿದ್ದು, ಈ ಆಡ್ ಆನ್ ಪ್ಯಾಕ್‌ಗಳ ಮೂಲಕ ಇನ್ನು ಹೆಚ್ಚಿನ ಡೇಟಾವನ್ನು ತನ್ನ ಜಿಯೋ ಬಳಕೆದಾರರಿಗೆ ನೀಡುತ್ತಿದ್ದು, ಇದರಿಂದಾಗಿ ಬೇರೆ ನೆಟ್‌ವರ್ಕ್‌ಗಳಿಗೆ ಹೋಲಿಕೆ ಮಾಡಿಕೊಂಡರೆ ಜಿಯೋ ಹೆಚ್ಚಿನ ಲಾಭವನ್ನು ಗ್ರಾಹಕರಿಗೆ ನೀಡುತ್ತಿದೆ.

  ಓದಿರಿ: ಸ್ಯಾಮ್‌ಸಂಗ್ ಚಳಿ ಬಿಡಿಸಿದ ಶಿಯೋಮಿಯ ಸ್ಮಾರ್ಟ್‌ಫೋನ್‌: ವಿಶೇಷತೆ ಕೇಳಿ ಬೆಚ್ಚಿಬಿದ್ದ ಮಾರುಕಟ್ಟೆ ...!

  ಆಡ್ ಆನ್‌ ಪ್ಯಾಕ್‌ಗಳು:

  ಜಿಯೋ ತನ್ನ ಆಡ್ ಆನ್ ಪ್ಯಾಕ್‌ಗಳನ್ನು ಆಪ್‌ಡೇಟ್ ಮಾಡಿದ್ದು, ರೂ.11, ರೂ.21, ರೂ.51 ಮತ್ತು ರೂ.101 ಪ್ಯಾಕ್‌ಗಳು ಬಳಕೆದಾರರಿಗೆ ತೆರೆದುಕೊಂಡಿದ್ದು, ಗ್ರಾಹಕರಿಗೆ ಅಗತ್ಯವಿರುವ ಹೆಚ್ಚಿನ ಡೇಟಾವನ್ನು ಪೂರೈಸಲಿದೆ ಎನ್ನಲಾಗಿದೆ. ಪ್ರತಿ ಆಡ್ ಆನ್ ಪ್ಯಾಕ್‌ಗಳು ತಮ್ಮದೇ ವಿಶೇಷತೆಗಳನ್ನು ಹೊಂದಿದೆ.

  ಪ್ಯಾಕ್‌ಗಳು:

  ರೂ.11 ಆಡ್ ಆನ್‌ ಪ್ಯಾಕ್‌ನಲ್ಲಿ 400MB ಡೇಟಾ ಬಳಕೆಗೆ ದೊರೆಯಲಿದ್ದು, ರೂ.21 ರಲ್ಲಿ 1GB ಡೇಟಾ ಬಳಕೆಗೆ ದೊರೆಯಲಿದೆ. ಹಾಗೇ ರೂ.51ಕ್ಕೆ 3GB 4G ವೇಗದ ಡೇಟಾ ಲಭ್ಯವಿದ್ದು, ರೂ.101 ಪ್ಯಾಕ್‌ನಲ್ಲಿ 6GB ಡೇಟಾವನ್ನು ನೀಡಲಿದೆ. ಆದರೆ ಈ ಪ್ಯಾಕ್‌ಗಳಲ್ಲಿ ಬಳಕೆದಾರರಿಗೆ ಯಾವುದೇ ವ್ಯಾಲಿಡಿಟಿಯೂ ದೊರೆಯುವುದಿಲ್ಲ ಎನ್ನಲಾಗಿದೆ.

  ಬೆಲೆಗಳಲ್ಲಿ ಭಾರೀ ಇಳಿಕೆ:

  ತನ್ನ ಡೇಟಾ ಪ್ಲಾನ್‌ಬೆಲೆಗಳನ್ನು ಇಳಿಕೆ ಮಾಡಿದ ರೀತಿಯಲ್ಲಿಯೇ ಜಿಯೋ ಆಡ್ ಆನ್‌ ಪ್ಯಾಕ್‌ ಬೆಲೆಯಲ್ಲಿಯೂ ಇಳಿಕೆಯನ್ನು ಮಾಡಿದ್ದು, ಈ ಮೂಲಕ ಗ್ರಾಹಕರು ಅತೀ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಇದೇ ಮಾದರಿಯ ಆಡ್ ಆನ್‌ ಪ್ಯಾಕ್‌ಗಳು ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದವು.

  ಬೇರೆ ಎಲ್ಲಿಯೂ ಇಲ್ಲ:

  ಜಿಯೋ ತನ್ನ ಬಳಕೆದಾರರಿಗೆ ನೀಡುತ್ತಿರುವ ಆಡ್‌ ಆನ್ ಪ್ಯಾಕ್ ಮಾದರಿಯ ಆಫರ್ ಅನ್ನು ಬೇರೆ ಟೆಲಿಕಾಂ ಕಂಪನಿಗಳು ನೀಡುತ್ತಿಲ್ಲ. ಬೇರೆ ಕಂಪನಿಗಳು ಗ್ರಾಹಕರಿಗೆ ನೀಡುವ ಡೇಟಾದಲ್ಲಿಯೇ ಕಡಿತವನ್ನು ಮಾಡುತ್ತಿದ್ದರೇ ಜಿಯೋ ಮಾತ್ರವೇ ಹೆಚ್ಚುವರಿ ಡೇಟಾವನ್ನು ಬಳಕೆಗೆ ನೀಡಲು ಮುಂದಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಓದಿರಿ: ಸ್ಯಾಮ್‌ಸಂಗ್ ಹೊಸ ಪ್ರಯತ್ನ: ಹಾನರ್, ನೋಕಿಯಾ ಮತ್ತು ಶಿಯೋಮಿಗೆ ಸೆಡ್ಡು..!

  English summary
  4G smartphones at Rs 500, on a monthly plan of Rs 60. to know more visit kananda.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more