Subscribe to Gizbot

ಆಪಲ್‌ ಐಫೋನ್ 7 ಖರೀದಿಗೆ ಸಿಗಲಿರುವ 5 ಅದ್ಭುತ ಆಫರ್‌ಗಳು: ಮಿಸ್‌ ಮಾಡದಿರಿǃ

Written By:

ಆಪಲ್‌ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಡಿವೈಸ್‌ಗಳು ಇಂದು ಭಾರತದ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಸಜ್ಜಾಗಿವೆ. ಅಲ್ಲದೇ ಮೊತ್ತೊಮ್ಮೆ ಆಪಲ್‌ ಪ್ರಿಯರಲ್ಲಿ ಕುತೂಹಲ ಹುಟ್ಟಿಸಿದ್ದು, ಭಾರತದಲ್ಲಿಯ ಆಪಲ್‌ ರೀಟೇಲ್‌ ಸ್ಟೋರ್‌ಗಳಲ್ಲಿ ಈಗಾಗಲೇ ಮಾರಾಟಕ್ಕೆ ಲಭ್ಯವಿವೆ.

ವಿಶೇಷ ಅಂದ್ರೆ ಇ-ಕಾಮರ್ಸ್ ವೇದಿಕೆಗಳು ಮತ್ತು ಟೆಲಿಕಾಂ ದೈತ್ಯ ಕಂಪನಿಗಳು ಆಪಲ್‌ 'ಐಫೋನ್ 7'(iPhone) ಮತ್ತು 'ಐಫೋನ್ 7 ಪ್ಲಸ್‌'(iPhone 7 Plus) ಡಿವೈಸ್ ಖರೀದಿಸಿದವರಿಗೆ ಅದ್ಭುತವಾದ ಆಫರ್‌ ಮತ್ತು ಡಿಸ್ಕೌಂಟ್‌ಗಳನ್ನು ನೀಡುತ್ತಿವೆ. ಆಪಲ್‌ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಡಿವೈಸ್ ಖರೀದಿದಾರರಿಗೆ ಕ್ಯಾಶ್‌ಬ್ಯಾಕ್‌, 4G ಡಾಟಾ ಬೆನಿಫಿಟ್‌ಗಳು ಆಫರ್‌ಗಳು ಇದ್ದು, ಇಎಂಐ ಪ್ಲಾನ್‌ಗಳು ಮಾತ್ರ ಇಲ್ಲ.

ನೀವೇನಾದ್ರು ಆಪಲ್‌ನ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಡಿವೈಸ್‌ಗಳನ್ನು ಖರೀದಿಸಲು ಪ್ಲಾನ್‌ ಮಾಡಿದ್ರೆ, ಈ ಡಿವೈಸ್‌ಗಳ ಖರೀದಿಯ 5 ಅದ್ಭುತ ಡೀಲ್‌ಗಳನ್ನು ಒಮ್ಮೆ ಓದಿಕೊಳ್ಳಿ.

ಆಧಾರ್‌ ಕಾರ್ಡ್ ಇದ್ದಲ್ಲಿ, 1,700 ರೂಗೆ 'ಐಫೋನ್ 7' ಖರೀದಿಸಿ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ನಾಪ್‌ಡೀಲ್‌'ನಲ್ಲಿ 10,000 ರೂಪಾಯಿ ಡಿಸ್ಕೌಂಟ್‌

ಸ್ನಾಪ್‌ಡೀಲ್‌'ನಲ್ಲಿ 10,000 ರೂಪಾಯಿ ಡಿಸ್ಕೌಂಟ್‌

ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ ಹೊಂದಿರುವವರು ಸ್ನಾಪ್‌ಡೀಲ್‌ನಲ್ಲಿ ಆಪಲ್‌ನ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಫೋನ್‌ಗಳನ್ನು ಖರೀದಿ ಮಾಡಿದಲ್ಲಿ 10,000 ರೂಪಾಯಿ ಡಿಸ್ಕೌಂಟ್‌ ಪಡೆಯಬಹುದು. ಸ್ನಾಪ್‌ಡೀಲ್‌ ಇ-ಕಾಮರ್ಸ್, ಅಮೆರಿಕದ ಎಕ್ಸ್‌ಪ್ರೆಸ್ ಜೊತೆಗೆ ಸಹಭಾಗಿತ್ವ ಹೊಂದಿದ್ದು, ಲ್ಯಾಟರ್ಸ್‌ ಕಾರ್ಡ್‌ಗೆ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಖರೀದಿ ಮೇಲೆ 10,000 ಡಿಸ್ಕೌಂಟ್‌ ಆಫರ್ ನೀಡುತ್ತಿದೆ. ಈ ಆಫರ್‌ ಅಕ್ಟೋಬರ್‌ 7 ರಿಂದ ಆರಂಭವಾಗಿದೆ.

ಪೇಟಿಎಮ್(Paytm)'ನಲ್ಲಿ ಕ್ಯಾಶ್‌ಬ್ಯಾಕ್

ಪೇಟಿಎಮ್(Paytm)'ನಲ್ಲಿ ಕ್ಯಾಶ್‌ಬ್ಯಾಕ್

ಅಂದಹಾಗೆ ಪೇಟಿಎಮ್ ಕ್ಯಾಶ್‌ಬ್ಯಾಕ್‌ ಯೋಜನೆಗಳಿಂದ ಪ್ರಖ್ಯಾತಗೊಂಡಿರುವುದು ನಿಮಗೆಲ್ಲಾ ತಿಳಿದಿದೆ. ಆನ್‌ಲೈನ್‌ ಪೇಮೆಂಟ್ ವೇದಿಕೆಯಾದ ಪೇಟಿಎಮ್ ಆಫಲ್‌ನ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಡಿವೈಸ್‌ಗಳ ಖರೀದಿ ಮೇಲೆ 5,000 ರೂಪಾಯಿ ಕ್ಯಾಶ್‌ಬ್ಯಾಕ್‌ ನೀಡುತ್ತಿದೆ. 5,000 ಕ್ಯಾಶ್‌ಬ್ಯಾಕ್‌ ಆಫರ್ 'ಐಫೋನ್ 7' 32GB ಡಿವೈಸ್‌ ಮೇಲೆ ಮತ್ತು 6,000 ಕ್ಯಾಶ್‌ಬ್ಯಾಕ್‌ ಆಫರ್ 'ಐಫೋನ್ 7' 128GB ಡಿವೈಶ್ ಮತ್ತು ಐಫೋನ್ 7 ಪ್ಲಸ್‌ ಮೇಲೆ ನೀಡುತ್ತಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 12 ತಿಂಗಳು ರಿಲಾಯನ್ಸ್ ಜಿಯೋ ಉಚಿತ 4G ಡಾಟಾ

12 ತಿಂಗಳು ರಿಲಾಯನ್ಸ್ ಜಿಯೋ ಉಚಿತ 4G ಡಾಟಾ

'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಡಿವೈಸ್‌ ಖರೀದಿದಾರರಿಗೆ ರಿಲಾಯನ್ಸ್ ಜಿಯೋ ಸಹ ಅತ್ಯಾಕರ್ಷಕ ಆಫರ್‌ ಅನ್ನು ನೀಡುತ್ತಿದೆ. ರಿಲಾಯನ್ಸ್ ಜಿಯೋ ಟೆಲಿಕಾಂ ವಾಯ್ಸ್ ಕರೆ, 20GB ಡಾಟಾ ಮತ್ತು ಅನ್‌ಲಿಮಿಟೆಡ್ ಎಸ್‌ಎಂಎಸ್‌ ಅನ್ನು ಒಂದು ವರ್ಷದ ಅವಧಿಗೆ ನೀಡುತ್ತಿದೆ. ಉಚಿತವಾಗಿ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಡಿವೈಸ್‌ಗಳ ಖರೀದಿ ಮೇಲೆ ನೀಡುವ ಈ ಸೇವೆಯ ಬೆಲೆ ರೂ.18,000. ಆದರೆ ಉಚಿತ ಎಂಬುದನ್ನು ಮರೆಯಬೇಡಿ. ಈ ಆಫರ್‌ ಅನ್ನು ಹೊಸ ಐಫೋನ್‌ ಬಳಕೆದಾರರು ಮುಂದಿನ ವರ್ಷದ ಜನವರಿ 1 ರಿಂದ ಬಳಸಬಹುದು.

ಏರ್‌ಟೆಲ್‌ ಪೋಸ್ಟ್‌ಪೇಡ್‌ ಗ್ರಾಹಕರಿಗೆ 10GB 4G ಉಚಿತ ಡಾಟಾ ಒಂದು ವರ್ಷದ ಅವಧಿಗೆ

ಏರ್‌ಟೆಲ್‌ ಪೋಸ್ಟ್‌ಪೇಡ್‌ ಗ್ರಾಹಕರಿಗೆ 10GB 4G ಉಚಿತ ಡಾಟಾ ಒಂದು ವರ್ಷದ ಅವಧಿಗೆ

ನೀವು ಇತ್ತೀಚಿನ ಏರ್‌ಟೆಲ್‌ ಪೋಸ್ಟ್‌ಪೇಡ್ ಪ್ಲಾನ್‌ ಬಳಕೆದಾರರೇ ಆಗಿದ್ದಲ್ಲಿ, 3G/4G 10GB ಉಚಿತ ಡಾಟಾವನ್ನು ತಿಂಗಳಿಗೆ, ಒಂದು ವರ್ಷದ ಅವಧಿವರೆಗೆ, 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ಡಿವೈಸ್‌ಗಳನ್ನು ರೀಟೇಲ್‌ ಸ್ಟೋರ್ ಅಥವಾ ವೆಬ್‌ಸೈಟ್‌ನಲ್ಲಿ ಖರೀದಿಸಿ ಪಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Infibeam's no-cost EMI plan

Infibeam's no-cost EMI plan

ಆಪಲ್‌ನ ಅಧಿಕೃತ ಇಂಟರ್ನೆಟ್ ಸೆಲ್ಲರ್ ಆದ Infibeam, ಐಫೋನ್ 7 ಖರೀದಿಗೆ no-cost EMI ಆಫರ್ ಮಾಡುತ್ತಿದೆ. ಬಳಕೆದಾರರು 3-12 ತಿಂಗಳವರೆಗಿನ no EMI ಸ್ಕೀಮ್‌ಗೆ ಸೈನಪ್‌ ಅಗಬಹುದು. ಅಲ್ಲದೇ ಬಳಕೆದಾರರು ರೂ.500 ಕ್ಯಾಶ್‌ಬ್ಯಾಕ್‌ ಅನ್ನು ಮೊದಲನೇ EMI ಮೇಲೆ ಪಡೆಯಬಹುದು.

ಡಿವೈಸ್‌ಗಳ ಬೆಲೆ
ಐಫೋನ್ 7 32GB :60,000
ಐಫೋನ್ 7 128GB :70,000
ಐಫೋನ್ 7 256GB: 80,000
ಐಫೋನ್ 7 ಪ್ಲಸ್‌ 32GB :72,000
ಐಫೋನ್ 7 ಪ್ಲಸ್‌ 128GB :82,000
ಐಫೋನ್ 7 ಪ್ಲಸ್‌ 256GB : 92,000

ಫ್ಲಿಪ್‌ಕಾರ್ಟ್‌ನಲ್ಲಿ ರೂ.24,500 ವರೆಗೆ ಎಕ್ಸ್‌ಚೇಂಜ್‌ ಆಫರ್‌

ಫ್ಲಿಪ್‌ಕಾರ್ಟ್‌ನಲ್ಲಿ ರೂ.24,500 ವರೆಗೆ ಎಕ್ಸ್‌ಚೇಂಜ್‌ ಆಫರ್‌

ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 7 ಖರೀದಿಗೆ ರೂ.24,500 ವರೆಗೆ ಎಕ್ಸ್‌ಚೇಂಜ್‌ ಆಫರ್‌ ಇದ್ದು, ಗ್ರಾಹಕರು ಪ್ರಸ್ತುತದಲ್ಲಿ ಬೆಂಗಳೂರು, ದೆಹಲಿ, ಮುಂಬೈಗಳಲ್ಲಿ ಮುಂಗಡವಾಗಿ ಬುಕ್‌ ಮಾಡಬಹುದು. ಅಂದಹಾಗೆ ಎಕ್ಸ್‌ಚೇಂಜ್‌ 'ಐಫೋನ್ 6ಎಸ್‌'ಗೆ 21,700 ಡಿಸ್ಕೌಂಟ್, ಐಫೋನ್ 6ಎಸ್ ಪ್ಲಸ್‌'ಗೆ ರೂ.24,500 ವರೆಗೆ ಡಿಸ್ಕೌಂಟ್ ಇದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
5 amazing deals on Apple iPhone 7 that you can’t afford to miss. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot