ಆಧಾರ್‌ ಕಾರ್ಡ್ ಇದ್ದಲ್ಲಿ, 1,700 ರೂಗೆ 'ಐಫೋನ್ 7' ಖರೀದಿಸಿ!

By Suneel
|

ಆಪಲ್‌ 'ಐಫೋನ್ 7' ಅನ್ನು ಕೇವಲ ರೂ.1,700 ಕ್ಕೆ ಖರೀದಿಸಬಹುದು. ಆಪಲ್‌ನ ಬಹು ನಿರೀಕ್ಷಿತ 'ಐಫೋನ್ 7 ಮತ್ತು ಐಫೋನ್ 7 ಪ್ಲಸ್‌' ಬಿಡುಗಡೆಯಾಗಿದ್ದು, ಮಾಧ್ಯಮ ವರದಿಗಳ ಪ್ರಕಾರ 'ಐಫೋನ್ 7' ಅನ್ನು ರೂ.1,700 ಕ್ಕೆ ಖರೀದಿಸಬಹುದು ಎಂದು ತಿಳಿಯಲಾಗಿದೆ.

ಸ್ಮಾರ್ಟ್‌ಫೋನ್‌ ಬಳಕೆದಾರರು ಆಪಲ್‌ನ ಐಫೋನ್ ಅನ್ನು ಖರೀದಿ ಮಾಡುತ್ತಾರೋ ಇಲ್ಲವೋ ಆದರೆ ಕ್ರೇಜ್‌ ಅಂತೂ ಹೆಚ್ಚಾಗೆ ಇರುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸಲು ಪ್ಲಾನ್‌ ಮಾಡಿರುವವರು ಆಧಾರ್‌ ಕಾರ್ಡ್‌ ಇದ್ದಲ್ಲಿ ಈಗ ಕಡಿಮೆ ಬೆಲೆಯಲ್ಲಿ 'ಐಫೋನ್ 7' (iPhone 7) ಅನ್ನೇ ರೂ.1,700 ಗೆ ಖರೀದಿಸಬಹುದು.

'ಐಫೋನ್ 7' ವಾಟರ್‌ ಪ್ರೂಫ್ ಡಿವೈಸ್‌: ವಾರಂಟಿಗೆ 'ದ್ರವ ಹಾನಿ' ಅಪ್ಲೇ ಆಗುವುದಿಲ್ಲ

ರೂ. 1,700 ಗೆ ಐಫೋನ್ 7 ಖರೀದಿ

ರೂ. 1,700 ಗೆ ಐಫೋನ್ 7 ಖರೀದಿ

ಮಾಧ್ಯಮ ವರದಿಗಳ ಪ್ರಕಾರ, ಆಧಾರ್‌ ಕಾರ್ಡ್‌ ಹೊಂದಿರುವವರು, ರೂ. 1,700 ಡೌನ್‌ ಪೇಮೆಂಟ್ ಮಾಡಿ ಐಫೋನ್ 7 ಖರೀದಿ ಮಾಡಬಹುದು. ಉಳಿದ ಬಾಕಿ ಹಣವನ್ನು ಕಂತುಗಳಲ್ಲಿ ಪಾವತಿಸಬೇಕು.

ಭಾರತೀಯ ಬ್ಯಾಂಕ್‌ಗಳೊಂದಿಗೆ ಆಪಲ್‌ ಮಾತುಕತೆ

ಭಾರತೀಯ ಬ್ಯಾಂಕ್‌ಗಳೊಂದಿಗೆ ಆಪಲ್‌ ಮಾತುಕತೆ

ಆಪಲ್‌ ಕಂಪನಿಯು ಭಾರತೀಯ ಐಫೋನ್‌ ಪ್ರಿಯರಿಗೆ ಸುಲಭವಾಗಿ 'ಐಫೋನ್ 7' ಒದಗಿಸುವ ಸಲುವಾಗಿ ಭಾರತೀಯ ಬ್ಯಾಂಕ್‌ಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಮಾಧ್ಯಮ ವರದಿಗಳ ಪ್ರಕಾರ ತಿಳಿಯಲಾಗಿದೆ.

'ಐಫೋನ್ 7'

'ಐಫೋನ್ 7'

'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' 32GB, 128GB, 256GB ಸ್ಟೋರೇಜ್‌ ಸಾಮರ್ಥ್ಯದ ವೈವಿಧ್ಯತೆಯಲ್ಲಿ ಲಭ್ಯವಿವೆ. ಡಿವೈಸ್‌ಗಳು ಚಿನ್ನ, ಬೆಳ್ಳಿ ಮತ್ತು ಗುಲಾಬಿ ಚಿನ್ನದ ಬಣ್ಣಗಳಲ್ಲಿ ಲಭ್ಯವಿವೆ.

'ಐಫೋನ್ 7' ಖರೀದಿ ಬೆಲೆ

'ಐಫೋನ್ 7' ಖರೀದಿ ಬೆಲೆ

ಅಕ್ಟೋಬರ್ 7 ರಂದು ಭಾರತದಲ್ಲಿ ಖರೀದಿಗೆ ಬರಲಿರುವ 32GB 'ಐಫೋನ್ 7' ಬೆಲೆ ರೂ.60,000 ಇರಲಿದ್ದು, ಇತರೆ ಮಾಡೆಲ್‌ಗಳ ದರವನ್ನು ಖಚಿತಪಡಿಸಿಲ್ಲ. 128GB, 256GB ಡಿವೈಸ್‌ಗಳು ಹೊಸ ಜೆಟ್‌ ಬ್ಲ್ಯಾಕ್‌ ಬಣ್ಣದ ವೈವಿಧ್ಯತೆಯಲ್ಲಿ ಬರಲಿವೆ.

'ಐಫೋನ್ 7 ಇತರೆ ಫೀಚರ್

'ಐಫೋನ್ 7 ಇತರೆ ಫೀಚರ್

'ಐಫೋನ್ 7' 4.7 ಇಂಚಿನ 3D ಟಚ್ ಡಿಸ್‌ಪ್ಲೇ, 'ಐಫೋನ್ 7 ಪ್ಲಸ್' 5.5 ಇಂಚಿನ ರೆಟಿನಾ HD 3D ಟಚ್ ಹೊಂದಿದೆ. ಆದರೆ ಎರಡು ಡಿವೈಸ್‌ಗಳು ಸಹ ಕ್ವಾಟ್‌ಕೋರ್ ಆಪಲ್‌ ಎ10 ಫ್ಯೂಸನ್‌ ಪ್ರೊಸಸರ್ ಸಂಯೋಜಿತವಾಗಿವೆ. ಈ ಡಿವೈಸ್‌ಗಳು ಶೇ.40 ರಷ್ಟು ಹಿಂದಿನ ಜೆನೆರೇಷನ್‌ಗಿಂತ ವೇಗವಾಗಿವೆ.

'ಐಫೋನ್ 7' ಇತರೆ ಫೀಚರ್‌

'ಐಫೋನ್ 7' ಇತರೆ ಫೀಚರ್‌

ಐಓಎಸ್ 10 ಚಾಲಿತ 'ಐಫೋನ್ 7' 12MP ಹಿಂಭಾಗ ಕ್ಯಾಮೆರಾ ಮತ್ತು 4K ವೀಡಿಯೊ ರೆಕಾರ್ಡಿಂಗ್ ಹೊಂದಿದೆ. 'ಐಫೋನ್ 7 ಪ್ಲಸ್' 12MP ಯ ಎರಡು ಹಿಂಭಾಗ ಕ್ಯಾಮೆರಾಗಳನ್ನು ಹೊಂದಿದೆ. ವೈಡ್‌ ಆಂಗಲ್ ಮತ್ತು ಟೆಲಿಫೋಟೋ ಲೆನ್ಸ್ ಫೀಚರ್ ಹೊಂದಿವೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್' ಎರಡು ಡಿವೈಸ್‌ಗಳು ಸಹ 7MP ಸೆಲ್ಫಿ ಕ್ಯಾಮೆರಾ ಫೀಚರ್ ಹೊಂದಿವೆ. ಈ ಮಾಡೆಲ್‌ಗಳು ಹೊಸ ಹೋಮ್‌ ಬಟನ್ ಅನ್ನು ಹೊಂದಿವೆ.

ನೀರು ಮತ್ತು ಧೂಳಿನಿಂದ ಸುರಕ್ಷತೆ

ನೀರು ಮತ್ತು ಧೂಳಿನಿಂದ ಸುರಕ್ಷತೆ

ಇದೇ ಮೊದಲ ಬಾರಿಗೆ ಹೊಸ 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್' IP67 ನೀರು ಮತ್ತು ಧೂಳಿನಿಂದ ಸುರಕ್ಷತೆ ಹೊಂದುವ ಫೀಚರ್‌ ಒಳಗೊಂಡಿವೆ. 3.2 ಅಡಿ ನೀರಿನಲ್ಲಿ 30 ನಿಮಿಷ ಮುಳಿಗಿದ್ದರು ಸಹ ಐಫೋನ್‌ಗಳು‌ ಸುರಕ್ಷಿತವಾಗಿರುತ್ತದೆ.

Best Mobiles in India

English summary
Get iPhone 7 at only Rs 1,700 by using Aadhar card Know how. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X