ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

|

ಸದ್ಯ ಮೊಬೈಲ್‌ ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಅವುಗಳಲ್ಲಿ ಗ್ರಾಹಕರು ಅವರ ಅಗತ್ಯಕ್ಕೆ ಅನುಗುಣವಾಗಿ ಸ್ಮಾರ್ಟ್‌ಫೋನ್‌ ಖರೀದಿಸಲು ಮುಂದಾಗುತ್ತಾರೆ. ಆದರೆ ಬಜೆಟ್‌ ದರದಲ್ಲಿ ಅತ್ಯುತ್ತಮ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರ ಸಂಖ್ಯೆಯೇ ಹೆಚ್ಚು.

ಪ್ಲ್ಯಾಗ್‌ಶಿಪ್‌

ಹೌದು, ದುಬಾರಿ ಬೆಲೆಯ ಪ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿದ್ದರೂ, ಬಜೆಟ್‌ ದರದ ಫೋನ್‌ಗಳು ಹೆಚ್ಚು ಆಕರ್ಷಕ ಅನಿಸುತ್ತವೆ. ಬಹುತೇಕ ಗ್ರಾಹಕರು ಇರುವುದರಲ್ಲೇ ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಂದಿರುವ ಬಜೆಟ್‌ ಬೆಲೆಯ ಸ್ಮಾರ್ಟ್‌ಪೋನ್‌ ಖರೀದಿಸಲು ಇಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಗ್ರಾಹಕರನ್ನು ಗಮನಿಸಿಕೊಂಡೆ ಮೊಬೈಲ್ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಬಜೆಟ್‌ ದರದಲ್ಲಿ ಉತ್ತಮ ಸ್ಮಾರ್ಟ್‌ಪೋನ್‌ ಪರಿಚಯಿಸುತ್ತಿವೆ. ಸದ್ಯ 10,000ರೂ ಒಳಗೆ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಪೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ರಿಯಲ್‌ ಮಿ Narzo 20A

ರಿಯಲ್‌ ಮಿ Narzo 20A

ರಿಯಲ್‌ ಮಿ Narzo 20A ಸ್ಮಾರ್ಟ್‌ಫೋನ್ 6.5 ಇಂಚಿನ LCD ಸ್ಕ್ರೀನ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಗೊರಿಲ್ಲಾ ಗ್ಲಾಸ್‌ ಪಡೆದಿದೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ನಲ್ಲಿ ಒಳಗೊಂಡಿದ್ದು, 4GB RAM ಮತ್ತು 64GB ವೇರಿಯಂಟ್ ಆಯ್ಕೆ ಪಡೆದಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನಲ್ಲಿರಲಿದೆ. ಹಾಗೆಯೇ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ. ಆರಂಭಿಕ ವೇರಿಯಂಟ್ ದರವು 8,499 ರೂ, ಆಗಿದೆ.

ರೆಡ್ಮಿ 9A

ರೆಡ್ಮಿ 9A

ಶಿಯೋಮಿಯ ರೆಡ್ಮಿ 9A ಸ್ಮಾರ್ಟ್‌ಫೋನ್ 6.53-ಇಂಚಿನ 720p ಪಿಕ್ಸಲ್ ಬಲದ ಡಿಸ್‌ಪ್ಲೇ ಹೊಂದಿದೆ. ಹಿಲಿಯೊ G25 ಪ್ರೊಸೆಸರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೂ ಆಂಡ್ರಾಯ್ಡ್‌ 10 ಓಎಸ್‌ ಸಫೋರ್ಟ್‌ ಪಡೆದಿದೆ. ಹಾಗೆಯೇ 5000mAh ಬ್ಯಾಟರಿ ಪವರ್‌ ಪಡೆದಿದ್ದು, 128GB ಸ್ಟೋರೇಜ್ ಅನ್ನು ಆಯ್ಕೆ ಪಡೆದಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಆರಂಭಿಕ ದರ 6,799ರೂ.

ನೋಕಿಯಾ C3

ನೋಕಿಯಾ C3

ನೋಕಿಯಾ C3 ಸ್ಮಾರ್ಟ್‌ಫೋನ್ 5.99-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ-ಕೋರ್ ಯುನಿಸಾಕ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಆಂಡ್ರಾಯ್ಡ್ 10 ಸಫೋರ್ಟ್‌ ಪಡೆದಿದೆ. ಹಾಗೆಯೇ 3040mAh ಬ್ಯಾಟರಿಯಿಂದ ಬೆಂಬಲ ಪಡೆದಿದೆ. ಹಿಂಬದಿ 8ಎಂಪಿ ಕ್ಯಾಮೆರಾ ಹಾಗೂ 5ಎಂಪಿ ಸೆಲ್ಫಿ ಕ್ಯಾಮೆರಾ ರಚನೆಯನ್ನು ಹೊಂದಿದೆ. ಬೆಲೆಯು 7,499ರೂ. ಆಗಿದೆ.

ಮೊಟೊ E7 ಪ್ಲಸ್‌

ಮೊಟೊ E7 ಪ್ಲಸ್‌

ಮೊಟೊರೊಲಾ ಕಂಪನಿಯ ಹೊಸ ಮೊಟೊ E7 ಪ್ಲಸ್‌ 6.5-ಇಂಚಿನ ಡಿಸ್‌ಪ್ಲೇ ಹೊಂದಿದ್ದು, 20: 9 ಆಕಾರ ಅನುಪಾತ ಪಡೆದಿದೆ. ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 460 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ ಸಫೋರ್ಟ್‌ ಇದೆ. ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್‌ನಲ್ಲಿದೆ. ಜೊತೆಗೆ 5000mAh ಬ್ಯಾಟರಿ ಇದ್ದು, 10W ವೇಗದ ಚಾರ್ಜಿಂಗ್ ಹೊಂದಿದೆ. ಆರಂಭಿಕ ಬೆಲೆಯು 9,499ರೂ.

ಒಪ್ಪೋ A12

ಒಪ್ಪೋ A12

ಒಪ್ಪೊ ಇತ್ತೀಚೆಗೆ ಹೊಸ A12 ಸ್ಮಾರ್ಟ್‌ಫೋನ್ 6.22-ಇಂಚಿನ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿದೆ. ಮೀಡಿಯಾ ಟೆಕ್ ಹೆಲಿಯೊ ಪಿ 35 ಪ್ರೊಸೆಸರ್ ಇದ್ದು, 64 ಜಿಬಿ ಸ್ಟೋರೇಜ್ ಆಯ್ಕೆ ಪಡೆದಿದೆ. ಮುಖ್ಯ ಕ್ಯಾಮರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಇದ್ದು, ಸೆಲ್ಫಿಗಳಿಗಾಗಿ, 5 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಪಡೆದಿದೆ. ಆರಂಭಿಕ ಬೆಲೆಯು 9,990 ರೂ.

Best Mobiles in India

English summary
The budget segment lies under Rs 10,000, which is where brands such as Redmi, Realme, Samsung, Nokia, and Motorola have become even more active.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X