6,000mAh ಬ್ಯಾಟರಿ ಸಾಮರ್ಥ್ಯದ 5 ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು!

|

ಪ್ರಸ್ತುತ ಬಹುತೇಕ ಬಳಕೆದಾರರು ವೇಗದ ಕಾರ್ಯವೈಖರಿಯ ಸ್ಮಾರ್ಟ್‌ಫೋನ್ ಹೊಂದಲು ಇಷ್ಟಪಡುತ್ತಾರೆ. ಅದರೊಂದಿಗೆ ಬಿಗ್ ಬ್ಯಾಟರಿ ಬಾಳಿಕೆಯ ಇರಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಮೊಬೈಲ್‌ ಕಂಪನಿಗಳು ಅಧಿಕ ಬ್ಯಾಟರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್‌ಗಳ ಮಾಡೆಲ್‌ಗಳನ್ನು ಪರಿಚಯಿಸುತ್ತಿವೆ. ಹೀಗಾಗಿ ಪ್ರಸ್ತುತ ಫೋನ್ ಖರೀದಿಸುವ ಗ್ರಾಹಕರು ಕಡಿಮೆಯೆಂದರೂ 6,000mAh ಬ್ಯಾಟರಿ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್ ಕೊಳ್ಳಲು ಮುಂದಾಗುತ್ತಾರೆ.

ಬ್ಯಾಟರಿ

ಹೌದು, 6,000mAh ಬ್ಯಾಟರಿ ಸಾಮರ್ಥ್ಯವಿರುವ ಫೋನ್‌ಗಳಲ್ಲಿ ಫೋನ್ ಬಾಳಿಕೆಯು ಬಾಳಿಕೆ ದೀರ್ಘ ಅವಧಿಯಲ್ಲಿರುತ್ತದೆ. ಹೀಗಾಗಿ ನೂತನ ಸ್ಮಾರ್ಟ್‌ಫೋನ್ ಖರೀದಿಸುವ ಬಹುತೇಕ ಗ್ರಾಹಕರು ಅತ್ಯುತ್ತಮ ಕ್ಯಾಮೆರಾ ಸೆನ್ಸಾರ್‌ ಜೊತೆಗೆ ಬಿಗ್ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳನ್ನು ಆಯ್ಕೆ ಮಾಡುವುದು ಸಾಮಾನ್ಯ. ಹಾಗಾದರೇ ಪ್ರಸ್ತುತ ಮೀಡ್‌ರೇಂಜ್‌ನ ಬೆಲೆಯಲ್ಲಿ ಲಭ್ಯವಿರುವ 8GB RAM 6,000mAh ಬ್ಯಾಟರಿ ಫೋನ್‌ಗಳ ಬಗ್ಗೆ ನೋಡೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಸ್ಯಾಮ್‌ಸಂಗ್‌ನ ಬಿಗ್ ಬ್ಯಾಟರಿ ಸ್ಮಾರ್ಟ್‌ಫೋನ್ ಆಗಿ ಗುರುತಿಸಿಕೊಂಡಿರುವ ಗ್ಯಾಲಕ್ಸಿ F41 ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 64ಎಂಪಿ ಸೆನ್ಸಾರ್‌ನಲ್ಲಿದೆ. ಹಾಗೆಯೇ 32ಎಂಪಿ ಸೆನ್ಸಾರ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್‌ ಆಕರ್ಷಕ ಫೀಚರ್ಸ್‌ಗಳೊಂದಿಗೆ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ 6.5-ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಎಕ್ಸಿನೋಸ್ 9611 ಚಿಪ್‌ಸೆಟ್ ಪ್ರೊಸೆಸರ್ ಪಡೆದಿದೆ. ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಲ್ಫಿ ಕ್ಯಾಮೆರಾವು 32ಎಂಪಿ ಆಗಿದೆ. ಇದರೊಂದಿಗೆ 25W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ ಹೊಂದಿದೆ.

ಪೊಕೊ X3 ಸ್ಮಾರ್ಟ್‌ಫೋನ್

ಪೊಕೊ X3 ಸ್ಮಾರ್ಟ್‌ಫೋನ್

ಬಜೆಟ್‌ ಬೆಲೆಯ ಹೊಸ ಪೊಕೊ X3 ಸ್ಮಾರ್ಟ್‌ಫೋನ್ 8GB RAM ಆಯ್ಕೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರುವುದು ಮುಖ್ಯ ಹೈಲೈಟ್‌ ಆಗಿದೆ. ಇದರೊಂದಿಗೆ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 732 ಪ್ರೊಸೆಸರ್ ಹೊಂದಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿರುವ ಈ ಫೋನ್ ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. ಸೆಲ್ಫಿ ಕ್ಯಾಮೆರಾವು 20ಎಂಪಿ ಸೆನ್ಸಾರ್‌ ಸಾಮರ್ಥ್ಯ ಪಡೆದಿದೆ.

ರಿಯಲ್‌ಮಿ ನಾರ್ಜೊ 20

ರಿಯಲ್‌ಮಿ ನಾರ್ಜೊ 20

ಇತ್ತೀಚಿಗೆ ಬಿಡುಗಡೆ ಆಗಿರುವ ರಿಯಲ್‌ಮಿ ನಾರ್ಜೊ 20 ಫೋನ್ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹೆಲಿಯೊ ಜಿ 85 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಆಂಡ್ರಾಯ್ಡ್ 10 ಓಎಸ್ ಸಪೋರ್ಟ್‌ ಸಹ ಪಡೆದಿದೆ. ಹಾಗೆಯೇ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾ 48ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ.

ರಿಯಲ್‌ ಮಿ C12 ಸ್ಮಾರ್ಟ್‌ಫೋನ್‌

ರಿಯಲ್‌ ಮಿ C12 ಸ್ಮಾರ್ಟ್‌ಫೋನ್‌

ರಿಯಲ್‌ ಮಿ C12 ಸ್ಮಾರ್ಟ್‌ಫೋನ್‌ 6.52-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಪೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇನ್ನು ಈ ಫೋನ್ ಮೀಟಿಯಾ ಟೆಕ್ ಹಿಲಿಯೊ G35 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದರೊಂದಿಗೆ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

Most Read Articles
Best Mobiles in India

English summary
List of 6000 mAh Battery Phones in India with price, specs, and reviews.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X