2018 ರ ತ್ರೈಮಾಸಿಕದಲ್ಲಿ ಭಾರತದ 5 ದೊಡ್ಡ ಸ್ಮಾರ್ಟ್ ಫೋನ್ ಕಂಪೆನಿಗಳು

|

ಸಂಶೋಧನಾ ಸಂಸ್ಥೆ ಇಂಟರ್ ನ್ಯಾಷನಲ್ ಡಾಟಾ ಕಾರ್ಪೋರೇಷನ್(ಐಡಿಸಿ) ಅರ್ಧ ವಾರ್ಷಿಕದಲ್ಲಿ ಸ್ಮಾರ್ಟ್ ಫೋನ್ ಗಳು ಮಾರಾಟವಾದ ದಾಖಲೆಯ ಆಧಾರದಲ್ಲಿ ಯಾವ ಕಂಪೆನಿಯು ಭಾರತದಲ್ಲಿ ಅತೀ ದೊಡ್ಡ ಸ್ಮಾರ್ಟ್ ಫೋನ್ ಕಂಪೆನಿಯಾಗಿ ಗುರುತಿಸಿಕೊಂಡಿದೆ ಎಂಬ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. 2018 ರಲ್ಲಿ ಒಟ್ಟು 42.6 ಮಿಲಿಯನ್ ಯುನಿಟ್ ನಷ್ಟು ಮೊಬೈಲ್ ಫೋನ್ ಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಕಂಡಿವೆ. 2018 ರಲ್ಲಿ ದಾಖಲಿಸಿರುವ ಈ ಮೊತ್ತವು ಇದುವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ದಾಖಲಾಗಿರುವ ಅತೀ ದೊಡ್ಡ ಸಂಖ್ಯೆಯಾಗಿದೆ. ಹಾಗಾದ್ರೆ ಅವುಗಳಲ್ಲಿ ಅತೀ ದೊಡ್ಡ ಕಂಪೆನಿ ಯಾವುದು ? ಯಾವ ಫೋನ್ ಅತೀ ಹೆಚ್ಚು ಮಾರಾಟ ಕಂಡಿದೆ ಎಂಬ ಬಗೆಗಿನ ಪಟ್ಟಿ ಇಲ್ಲಿದೆ.

ಶಿಯೋಮಿ

ಶಿಯೋಮಿ

ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಶಿಯೋಮಿ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಟಾಪ್ ಸ್ಥಾನವನ್ನು ಪಡೆದುಕೊಂಡಿದೆ.2018 ರ ಮೂರನೇ ತ್ರೈಮಾಸಿಕದಲ್ಲಿ 27% ಅಭಿವೃದ್ಧಿಯನ್ನು ಕಂಡಿದೆ. ಶಿಯೋಮಿ 11.7 ಮಿಲಿಯನ್ ಸ್ಮಾರ್ಟ್ ಫೋನ್ ಗಳನ್ನು ಈ ತ್ರೈಮಾಸಿಕದಲ್ಲಿ ಮಾರಾಟಮಾಡಿದೆ. ಒಟ್ಟಾರೆ ಶಿಪ್ ಮೆಂಟ್ ನ 27.3% ದಷ್ಟು ಶೇರನ್ನು ಹೊಂದಿದೆ.

ಸ್ಯಾಮ್ ಸಂಗ್

ಸ್ಯಾಮ್ ಸಂಗ್

ಸೌತ್ ಕೊರಿಯಾದ ಟೆಕ್ನಾಲಜಿ ಸಂಸ್ಥೆ ಸ್ಯಾಮ್ ಸಂಗ್ ವಿಶ್ವದಲ್ಲಿ ಟಾಪ್ ಶಿಪ್ ಮೆಂಟ್ ನ್ನು ಹೊಂದಿದ್ದು ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ದ್ವೀತೀಯ ಸ್ಥಾನವನ್ನು ಸೆಪ್ಟೆಂಬರ್ 2018 ರ ಅಂತ್ಯದ ಮೂರನೇ ತ್ರೈಮಾಸಿಕದಲ್ಲಿ ಹೊಂದಿದ್ದು 22.6% ಶೇರನ್ನು ಹೊಂದಿದೆ. 2018 ರ ತ್ರೈಮಾಸಿಕದಲ್ಲಿ ವಾರ್ಷಿಕ 4.8% ಅಭಿವೃದ್ಧಿಯನ್ನು ತೋರಿಸಿದೆ.

ವಿವೋ

ವಿವೋ

ಮೂರನೇ ಸ್ಥಾನವನ್ನು ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಂದಿರುವುದು ವಿವೋ ಸಂಸ್ಥೆ. ಚೀನಾದ ಈ ಸ್ಮಾರ್ಟ್ ಫೋನ್ ಬ್ರ್ಯಾಂಡ್ 10.5% ಶೇರ್ ನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಂದಿದೆ. ಶಿಪ್ ಮೆಂಟ್ ವಿಚಾರದಲ್ಲಿ ಎರಡನೇ ಅತೀ ಹೆಚ್ಚು ಅಭಿವೃದ್ಧಿ ಹೊಂದಿರುವ ಸಂಸ್ಥೆ 35.4% ಶೇರು ಹೊಂದಿದೆ.

ಕಂಪೆನಿಯೇ ತಿಳಿಸುವಂತೆ ಮಾರುಕಟ್ಟೆಯಲ್ಲಿನ ಅತೀ ಹೆಚ್ಚು ಹೂಡಿಕೆ, ಪ್ರಮೋಷನಲ್ ಆಕ್ಟಿವಿಟಿಗಳು, ಪಾರ್ಟ್ನರ್ ಸ್ಕ್ರೀಮ್ ಗಳಿಂದಾಗಿ ವಿವೋ ತನ್ನ ಹೆಚ್ಚಿನ ಶಿಪ್ ಮೆಂಟ್ ನ್ನು ಮಾರುಕಟ್ಟೆಯಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗಿದೆ.

ಮೈಕ್ರೋ ಮ್ಯಾಕ್ಸ್

ಮೈಕ್ರೋ ಮ್ಯಾಕ್ಸ್

77.3% ದಷ್ಟು ಅಭಿವೃದ್ಧಿ ಸಾಧಿಸಿರುವ ಮೈಕ್ರೋ ಮ್ಯಾಕ್ಸ್ ಈ ತ್ರೈಮಾಸಿಕದಲ್ಲಿ ಅತೀ ಹೆಚ್ಚು Y-o-Y ಅಭಿವೃದ್ಧಿಯನ್ನು ಶಿಪ್ ಮೆಂಟ್ ವಿಚಾರದಲ್ಲಿ ದಾಖಲಿಸಿದೆ. 2018 ತ್ರೈಮಾಸಿಕದಲ್ಲಿ ಈ ಡೊಮೆಸ್ಟಿಕ್ ಸ್ಮಾರ್ಟ್ ಫೋನ್ ಕಂಪೆನಿ ದಾಖಲೆಯ 2.9 ಮಿಲಿಯನ್ ಸ್ಮಾರ್ಟ್ ಫೋನ್ ಗಳನ್ನು ಶಿಪ್ ಮಾಡಿದೆಯಂತೆ. ಕಳೆದ ವರ್ಷ 1.7 ಮಿಲಿಯನ್ ಯುನಿಟ್ ಗಳನ್ನು ಶಿಪ್ ಮಾಡಿರುವ ಕಂಪೆನಿ ಈ ಬಾರಿ ಹೆಚ್ಚು ಮಾರಾಟವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಮುಂದಿನ ತ್ರೈಮಾಸಿಕದ ನಂತರ ಇದರ ಶಿಪ್ ಮೆಂಟ್ ನಲ್ಲಿ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಐಡಿಸಿ ಅಂದಾಜಿಸುತ್ತಿದೆ.

ಓಪ್ಪೋ

ಓಪ್ಪೋ

ಓಪ್ಪೋ Y-o-Y ಶಿಪ್ ಮೆಂಟ್ ವಿಚಾರದಲ್ಲಿ ಸ್ವಲ್ಪ ಹಿನ್ನೆಡೆಯನ್ನು ಅನುಭವಿಸಿದೆ. ಕಂಪೆನಿಯು ನೀಡದ ಯಾವುದೇ ಪ್ರಮೋಷನಲ್ ಆಕ್ಟಿವಿಟಿಗಳು, ಕಸ್ಟಮರ್ ಸ್ಕ್ರೀಮ್ ಗಳು ಮತ್ತು ಆಕರ್ಷಕ ಚಾನೆಲ್ ಗಳ ಕೊರತೆ, ಇತ್ಯಾದಿಗಳ ಕಾರಣದಿಂದಾಗಿ ಕಂಪೆನಿಯು 2018 ರ ಮೂರನೇ ತ್ರೈಮಾಸಿಕದಲ್ಲಿ 7.1% ಶಿಪ್ ಮೆಂಟ್ ನ್ನು ದಾಖಲಿಸಿದ್ದು ಹಿನ್ನೆಡೆಯನ್ನು ಕಂಡಿದೆ. ಹೊಸದಾಗಿ ಬಿಡುಗಡೆಗೊಳಿಸಿದ್ದ ಓಪ್ಪೋ ಎಫ್ 9 ಮತ್ತು ಎಫ್9 ಪ್ರೋ ಗಳನ್ನು ಕೂಡ ಮಾರುಕಟ್ಟೆಯಲ್ಲಿ ಹೆಚ್ಚು ಡಿಮ್ಯಾಂಡ್ ಸೃಷ್ಟಿಸಿ ಮಾರಾಟ ಮಾಡಲು ವಿಫಲವಾಗಿದೆ.

Best Mobiles in India

Read more about:
English summary
5 biggest smartphone companies in India in Q3, 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X