ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?

Written By:

ಸೆಲ್ಫಿ ಫೋನ್ ಪ್ರಿಯರಲ್ಲಿ ಖುಷಿಯನ್ನುಂಟು ಮಾಡುವ ವಿಚಾರವಾಗಿದೆ. ಇನ್ನು ಮಾರುಕಟ್ಟೆಗೆ ಬಂದಿರುವ ಎಲ್ಲಾ ಫೋನ್‌ಗಳು ಸೆಲ್ಫಿಯನ್ನೊಳಗೊಂಡೇ ಬರುತ್ತಿವೆ. ಹೀಗೆ ಸೆಲ್ಫಿ ಪದ ಪ್ರತಿಯೊಬ್ಬರಲ್ಲೂ ಒಂದು ಕ್ರೇಜ್ ಅನ್ನೇ ಉಂಟುಮಾಡುತ್ತಿದೆ. ಆದರೆ ಸಾಹಸ ಸೆಲ್ಫಿ ತೆಗೆದು ತಮ್ಮ ಜೀವವನ್ನು ಬಲಿಕೊಟ್ಟ ಸೆಲ್ಫಿ ಪ್ರೇಮಿಗಳನ್ನು ನೋಡಿದ್ದೀರಾ?

ಓದಿರಿ: ಒಬಾಮಾ ಸೆಲ್ಫಿ ನೋಡಬನ್ನಿ ಇಲ್ಲಿ!!!

ಹೌದು ಈ ಸೆಲ್ಫಿ ಪ್ರಿಯರು ಫೋಟೋ ಕ್ಲಿಕ್ಕಿಸಿದ ನಂತರ ತಮಗಾಗಿ ಕಾದಿದ್ದ ಮರಣದ ಕುರಿತು ಅರಿಯಲೇ ಇಲ್ಲ. ಸಾಹಸ ಸೆಲ್ಫಿ ತೆಗೆಯಲು ಹೋಗಿ ಕ್ಷಣ ಮಾತ್ರದಲ್ಲೇ ಯಮಪುರಿಗೆ ತಮ್ಮ ಪ್ರಯಾಣವನ್ನು ಮಾಡಿದ್ದಾರೆ. ಇವರ ಈ ದುರಂತ ಮರಣ ಸೆಲ್ಫಿ ಪ್ರೇಮದಿಂದ ಉಂಟಾಯಿತೋ? ಅಥವಾ ಸೆಲ್ಫಿ ತೆಗೆಯುವಾಗ ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಇರುವುದರಿಂದ ಸಂಭವಿಸಿತೋ ತಿಳಿಯುವುದಿಲ್ಲ.

ಓದಿರಿ: ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ಹಾಗಿದ್ದರೆ ನಿಮ್ಮ ಕುತೂಹಲಕ್ಕೆ ಬ್ರೇಕ್ ಹಾಕುವಂತೆ ಇಂದಿನ ಲೇಖನದಲ್ಲಿ ಅಪಾಯಕಾರಿ ಸೆಲ್ಫಿ ಕುರಿತ ಅಂಶಗಳನ್ನು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುಟ್ಟು ಕರಕಲಾಗಿಸಿದ ಸೆಲ್ಫಿ
  

ಸುಟ್ಟು ಕರಕಲಾಗಿಸಿದ ಸೆಲ್ಫಿ

ಅನ್ನಾ ಉರುಸು 18 ವರ್ಷದ ತರುಣಿ ವಿಶೇಷ ಸೆಲ್ಪೀಯನ್ನು ತೆಗೆಯುವುದಕ್ಕಾಗಿ ಟ್ರೈನ್ ಮೇಲ್ಭಾಗಕ್ಕೆ ಹತ್ತಿದ್ದಳು ಆದರೆ 27,000 ವೋಲ್ಟ್‌ನ ಇಲೆಕ್ಟ್ರಿಕ್ ವಯರ್ ಅವಳ ಜೀವಕ್ಕೆ ಮುಳ್ಳಾಗಿ ಬಲಿ ತೆಗೆದುಕೊಂಡಿತು.

ಬ್ರಿಡ್ಜ್‌ನಲ್ಲಿ ಸಾವು
  

ಬ್ರಿಡ್ಜ್‌ನಲ್ಲಿ ಸಾವು

ದಕ್ಷಿಣ ಸ್ಪೇನ್‌ನಲ್ಲಿ 23 ವರ್ಷದ ನರ್ಸಿಂಗ್ ವಿದ್ಯಾರ್ಥಿ ಬ್ರಿಡ್ಜ್‌ನಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಮರಣ ಹೊಂದಿದ್ದಾನೆ. ಸೇತುವೆ ಕೊನೆಯಲ್ಲಿ ನಿಂತು ಸಮತೋಲಿನ ತಪ್ಪಿ ಈ ಸಾವು ಸಂಭವಿಸಿದೆ.

ಗುಂಡು ತಾಗಿ ಸಾವು
  

ಗುಂಡು ತಾಗಿ ಸಾವು

2014 ರಲ್ಲಿ ಮೆಕ್ಸಿಕನ್ ವ್ಯಕ್ತಿ ಗನ್ ಬಳಸಿ ಸೆಲ್ಫಿ ತೆಗೆಯುತ್ತಿರುವಾಗ ಟ್ರಿಗ್ಗರ್ ಒತ್ತಿ ಸಾವು ಸಂಭವಿಸಿದೆ.

ಕಾರು ಅಪಘಾತ
  

ಕಾರು ಅಪಘಾತ

ಬ್ಯಾಚುಲರ್ ಪಾರ್ಟಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಮಾಡಿದ ಅವಾಂತರ ಸೆಲ್ಫಿ ಮೊರೀನೊ ಪ್ರಾಣವನ್ನೇ ಕಸಿದುಕೊಂಡಿತು.

ರೈಲ್ವೇ ಸೇತುವೆ ಸೆಲ್ಫಿ ಸಾವು
  

ರೈಲ್ವೇ ಸೇತುವೆ ಸೆಲ್ಫಿ ಸಾವು

30 ಫೀಟ್ ಎತ್ತರದ ರೈಲ್ವೇ ಸೇತುವೆಯ ಮೇಲ್ಭಾಗದಲ್ಲಿ ಸೆಲ್ಫಿ ತೆಗೆಯುತ್ತಿರುವಾಗ ಈ ಹುಡುಗಿ ತೀರಿ ಹೋಗಿದ್ದಾಳೆ.

ಪ್ರಥಮ ಡೇಟ್‌ನಲ್ಲೇ ಮರಣ
  

ಪ್ರಥಮ ಡೇಟ್‌ನಲ್ಲೇ ಮರಣ

ತನ್ನ ಪ್ರಿಯತಮನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವಾಗ ಈ ಯುವತಿ ಮರಣವನ್ನು ಹೊಂದಿದ್ದಾಳೆ.

ಬಾತ್‌ರೂಮ್ ಬಾಗಿಲಿನಿಂದ ಮರಣ
  

ಬಾತ್‌ರೂಮ್ ಬಾಗಿಲಿನಿಂದ ಮರಣ

ಈ ಯುವಕ ಬಾತ್‌ರೂಮ್ ಬಾಗಿಲಿನಲ್ಲಿ ನಿಂತು ಸೆಲ್ಫಿ ತೆಗೆಯುತ್ತಿರುವಾಗ ಮರಣ ಹೊಂದಿದ್ದಾನೆ.

ಹುಟ್ಟುಹಬ್ಬದಂದೇ ಮರಣ ಕಾದಿತ್ತು
  

ಹುಟ್ಟುಹಬ್ಬದಂದೇ ಮರಣ ಕಾದಿತ್ತು

ಗೆಳೆಯನ ಹುಟ್ಟುಹಬ್ಬವನ್ನು ಮುಗಿಸಿ ಸೆಲ್ಫಿ ತೆಗೆಸಿಕೊಳ್ಳುತ್ತಿರುವಾಗ ಚೆಸ್ಕಾ ಮರಣವನ್ನಪ್ಪಿದ್ದಾನೆ. ವಿಂಡ್ ಮಿಲ್‌ನಲ್ಲಿ ಈ ಸಂಭವ ಸಂಭವಿಸಿದೆ.

ಪೋಲಿಶ್ ಜೋಡಿ ಮರಣ
  

ಪೋಲಿಶ್ ಜೋಡಿ ಮರಣ

ಆಗಸ್ಟ್ 2014 ರಂದು ಪೋಲಿಶ್ ಜೋಡಿ ಪೋರ್ಚುಗಲ್‌ನ ಕಬಾಡೊ ರೊಕಾ ಸ್ಥಳದಲ್ಲಿ ಸೆಲ್ಫಿ ತೆಗೆಯುತ್ತಿರುವಾಗ ಮರಣ ಹೊಂದಿದ್ದಾರೆ.

ಮೋಟಾರ್‌ಸೈಕಲ್‌ನಿಂದ ಮರಣ
  

ಮೋಟಾರ್‌ಸೈಕಲ್‌ನಿಂದ ಮರಣ

ತನ್ನ ಮೋಟಾರ್‌ಸೈಕಲ್‌ನಿಂದ ಪೋಸ್ ಕೊಟ್ಟು ಸೆಲ್ಫಿ ತೆಗೆಯುತ್ತಿರುವಾಗ ಈ ಬೈಕ್ ಸವಾರ ಮರಣವನ್ನಪ್ಪಿದ್ದಾನೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article we can find 10 People Who Died While Taking Selfies. They wants to do some craze while taking selfies but they made mistakes and bring their death themselves.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot