ಎಲ್‌ಜಿ ಜಿ4 ಸೋಲಿಲ್ಲದ ಸರದಾರ ಏಕಿರಬಹುದು?

Written By:

ಸ್ಯಾಮ್‌ಸಂಗ್, ಎಚ್‌ಟಿಸಿ ಮತ್ತು ಸೋನಿ ತಮ್ಮ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ. ಇದೀಗ ಎಲ್‌ಜಿ ಸರದಿ. ಎಲ್‌ಜಿ ಜಿ4 ತನ್ನ ಅದ್ಭುತ ವೈಶಿಷ್ಟ್ಯತೆಗಳ ಮೂಲಕ ಬಳಕೆದಾರರ ಗಮನ ಸೆಳೆಯುತ್ತಿದೆ. ಮಾರುಕಟ್ಟೆಯಲ್ಲಿ ಅತಿ ದುಬಾರಿ ಫೋನ್ ಎಂಬ ಹೆಗ್ಗಳಿಕೆ ಗಳಿಸಿಕೊಂಡಿದ್ದರೂ ಇದು ಅದ್ಭುತ ಎಂಬ ಸ್ಥಾನಕ್ಕೆ ಪಾತ್ರವಾಗಿದ್ದಾದರೂ ಹೇಗೆ ಎಂಬುದನ್ನು ನೋಡಬೇಕೇ?

ಓದಿರಿ: ಸೆಲ್ಫಿ ಪ್ರಿಯರಿಗಾಗಿಯೇ ಸ್ಯಾಮ್‌ಸಂಗ್‌ನ ಈ ಫೋನ್‌ಗಳು

ಏನಾದರೂ ವಿಶೇಷತೆಗಳಿದ್ದಲ್ಲಿ ಫೋನ್‌ ಅಸಾಮಾನ್ಯ ಎಂಬ ಹಿರಿಮೆಗೆ ಪಾತ್ರವಾಗುತ್ತದೆ. ಅಂತೆಯೇ ಈ ಫೋನ್‌ನಲ್ಲೂ ಏನಾದರೂ ವಿಶೇಷತೆ ಇರುವುದು ಖಂಡಿತ. ಹಾಗಿದ್ದರೆ ಅದೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಿಂದ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್‌ಜಿ ಜಿ4 ಲೆದರ್ ಬ್ಯಾಕ್

ಎಲ್‌ಜಿ ಜಿ4 ಲೆದರ್ ಬ್ಯಾಕ್

ಲೆದರ್ ಹಿಂಭಾಗ

ಎಲ್‌ಜಿ ಜಿ4 ಲೆದರ್ ಬ್ಯಾಕ್ ಆಯ್ಕೆಯೊಂದಿಗೆ ಬಂದಿದೆ. ನಿಜಕ್ಕೂ ಇದು ವಿಭಿನ್ನವಾಗಿದ್ದು, ಚರ್ಮದ ಕವಚವನ್ನು ಹಿಂಭಾಗದಲ್ಲಿ ಹೊಂದಿ ಅಸಾಮಾನ್ಯವಾಗಿ ಕಂಡುಬಂದಿದೆ. ಆರು ಬಣ್ಣಗಳಲ್ಲಿ ಈ ಫೋನ್ ದೊರೆಯುತ್ತಿದ್ದು, ನಿಜಕ್ಕೂ ಬಳಕೆದಾರ ಸ್ನೇಹಿ ಎನ್ನಲು ಅಡ್ಡಿಯಿಲ್ಲ. ಇನ್ನು ಬಳಸಲು ಇದು ಆರಾಮದಾಯಕವಾಗಿದೆ.

ಸ್ನ್ಯಾಪ್‌ಡ್ರಾಗನ್ 808

ಸ್ನ್ಯಾಪ್‌ಡ್ರಾಗನ್ 808

ಪ್ರೊಸೆಸರ್

ಎಲ್‌ಜಿ ಜಿ 4 ಇತರ ಫೋನ್‌ಗಳಾದ ಎಚ್‌ಟಿಸಿ ಒನ್ ಎಮ್9 ನಲ್ಲಿರುವಂತೆ ಸ್ನ್ಯಾಪ್‌ಡ್ರಾಗನ್ 808 ಅನ್ನು ಒಳಗೊಂಡಿದೆ. ಈ 64 ಬಿಟ್ ಹೆಕ್ಸಾಕೋರ್ ಸಿಪಿಯುನಲ್ಲಿ 1.8GHZ ಅನ್ನು ನೋಡಬಹುದಾಗಿದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್‌ನಲ್ಲಿರುವ ಚಿಪ್‌ಸೆಟ್ ಅನ್ನು ಇದು ಪಡೆದುಕೊಂಡಿದೆ.

ಸ್ಕ್ರೀನ್ ಕರ್ವ್

ಸ್ಕ್ರೀನ್ ಕರ್ವ್

ಡಿಸ್‌ಪ್ಲೇ

ಕ್ಯುಎಚ್‌ಡಿ, 5.5 ಇಂಚಿನ ಸ್ಕ್ರೀನ್ ಇದು ಹೊಂದಿದ್ದು ಇದು ಅದ್ಭುತವಾಗಿದೆ. ಜಿ4 ಡಿಸ್‌ಪ್ಲೇ 20% ಬಣ್ಣ ಮರುಉತ್ಪದಾನೆಯನ್ನು ಒದಗಿಸುತ್ತಿದ್ದು, ಬ್ರೈಟ್‌ನೆಸ್‌ನಲ್ಲಿ 25% ಸುಧಾರಣೆಯನ್ನು ಕಂಡುಕೊಂಡಿದೆ. ಇನ್ನು ಸ್ಕ್ರೀನ್ ಸ್ವಲ್ಪ ಕರ್ವ್ ಆಗಿದ್ದು, ಇಡೀ ದಿನ ಬಳಸುವಷ್ಟು ಸೊಗಸುಗಾರಿಕೆಯನ್ನು ಪಡೆದುಕೊಂಡಿದೆ.

ಆಪಲ್‌ ಐಫೋನ್

ಆಪಲ್‌ ಐಫೋನ್

ಕ್ಯಾಮೆರಾ

ಇನ್ನು ಆಪಲ್‌ನ ಐಫೋನ್ ಕ್ಯಾಮೆರಾಗಳಿಗೆ ಪೈಪೋಟಿಯನ್ನು ನೀಡುವ ಕ್ಯಾಮೆರಾ ಅಂಶವನ್ನು ಎಲ್‌ಜಿ ಜಿ4 ಕಂಡುಕೊಂಡಿದೆ. 16 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದ್ದು 1.8 ಅಪಾರ್ಚರ್ ಲೆನ್ಸ್ ಇದರಲ್ಲಿದೆ. ಇದು ಕಡಿಮೆ ಬೆಳಕಿನ ವಲಯದಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು. ಮುಂಭಾಗ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ.

ಅದ್ಭುತ ವಿಶೇಷತೆ

ಅದ್ಭುತ ವಿಶೇಷತೆ

ಇತರೆ ಅಂಶಗಳು

ರಿಮೂವೇಬಲ್ ಬ್ಯಾಟರಿ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ನಿಜಕ್ಕೂ ಈ ಫೋನ್‌ಗೆ ಅದ್ಭುತ ಅಂಶವನ್ನು ಉಂಟುಮಾಡಿದೆ. ಎಲ್‌ಜಿ ಜಿ4 ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಪಡೆದುಕೊಂಡಿದ್ದರೂ, ಇನ್ನಷ್ಟು ಅದ್ಭುತ ವಿಶೇಷತೆಗಳನ್ನು ಈ ಡಿವೈಸ್ ಪಡೆದುಕೊಂಡಿದ್ದರೆ ಇನ್ನೂ ಉತ್ತಮವಾಗಿದ್ದಿತು. ಇನ್ನು ಆಂಡ್ರಾಯ್ಡ್‌ನ ಸುವಾಸನೆಯನ್ನು ಎಲ್‌ಜಿ ಈ ಫೋನ್‌ಗೆ ಸೇರಿಸಿದ್ದು ಅಸಾಮಾನ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Samsung, HTC and Sony have already released their flagship phones for the year; now it's LG's turn.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot