Subscribe to Gizbot

ವಿಶ್ವದ ಹೆಚ್ಚು ಸುಭದ್ರ ಡಿವೈಸ್‌ಗಳು

Written By:

ಇತ್ತೀಚೆಗೆ ಮಾರುಕಟ್ಟೆಗೆ ಆಗಮಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಭದ್ರತಾ ಫೀಚರ್‌ಗಳನ್ನು ಒಳಗೊಂಡು ಬರುತ್ತಿವೆ. ಫಿಂಗರ್ ಪ್ರಿಂಟ್ ಸೆನ್ಸಾರ್, ಐರಿಸ್ ಸ್ಕ್ಯಾನರ್ಸ್, ಎನ್‌ಕ್ರಿಪ್ಶನ್ ಹೀಗೆ ಇನ್ನಷ್ಟು ಫೀಚರ್‌ಗಳನ್ನು ಫೋನ್‌ನಲ್ಲಿ ನಿಮಗೆ ಕಾಣಬಹುದಾಗಿದೆ. ಸಾಮಾನ್ಯ ಬಳಕೆದಾರರಿಗೆ ಇದು ಸಾಕಷ್ಟಾಯಿತಾದರೂ ಕೆಲವೊಂದು ಬಳಕೆದಾರರು ತಾವು ಬಳಸುವ ಫೋನ್ ಹೆಚ್ಚಿನ ಭದ್ರತಾ ಫೀಚರ್‌ಗಳನ್ನು ಒಳಗೊಂಡಿರಬೇಕು ಎಂದೇ ಬಯಸುತ್ತಾರೆ.

ಓದಿರಿ: ಫೋನ್ ಬ್ಯಾಟರಿ ಉಳಿಸಬೇಕೇ? ಈ ತಪ್ಪುಗಳನ್ನು ಮರೆತೂ ಮಾಡದಿರಿ

ಅಧಿಕೃತ ಕೆಲಸದಲ್ಲಿರುವ ಫೋನ್ ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಸಾಕಷ್ಟು ರಕ್ಷಣಾ ವ್ಯವಸ್ಥೆಗಳಿರಬೇಕು ಎಂದು ಬಯಸುವುದು ಸರ್ವೇ ಸಾಮಾನ್ಯವಾಗಿದ್ದು ತಮ್ಮ ಫೋನ್‌ನಲ್ಲಿರುವ ಅಧಿಕೃತ ಮಾಹಿತಿಗಳು ಹೊರಗೆ ಸೋರಿಕೆಯಾಗದಂತೆ ಅವರು ಕಾಪಾಡಿಕೊಳ್ಳಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ತಯಾರು ಮಾಡಿರುವ ಸುಭದ್ರ ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದು ಇದು ನಿಮ್ಮನ್ನು ಚಕಿತಗೊಳಿಸುವುದು ಖಂಡಿತ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೋಲರಿನ್

ಸೋಲರಿನ್

ಇಸ್ರೇಲ್ ಸ್ಟಾರ್ಟಪ್ ಸೋಲರಿನ್ ವಿಶ್ವದ ಹೆಚ್ಚು ದುಬಾರಿ ಸ್ಮಾರ್ಟ್‌ಫೋನ್ ಅನ್ನು ನಿರ್ಮಿಸಿದೆ. ಕಂಪೆನಿಯ ಪ್ರಕಾರ ಹೆಚ್ಚು ಸುಧಾರಿತ ಗೌಪ್ಯತಾ ಸೆಟ್ಟಿಂಗ್‌ಗಳನ್ನು ಪಡೆದುಕೊಂಡಿದ್ದು ಏಜೆನ್ಸಿ ವಿಶ್ವಕ್ಕಿಂತ ಆಚೆಗೆ ಇದು ದೊರೆಯುವುದಿಲ್ಲ. 256 ಬಿಟ್ AES ಎನ್‌ಕ್ರಿಪ್ಶನ್ ಅನ್ನು ಇದು ಪಡೆದುಕೊಂಡಿದ್ದು, ಫೋನ್‌ನ ಹಿಂಭಾಗ ಸೆಕ್ಯುರಿಟಿ ಸ್ವಿಚ್ ಇದ್ದು ಇದನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ.

ಬ್ಲ್ಯಾಕ್‌ಬೆರ್ರಿ DTEK50

ಬ್ಲ್ಯಾಕ್‌ಬೆರ್ರಿ DTEK50

ಕೆನಾಡಿಯನ್ ಸ್ಮಾರ್ಟ್‌ಫೋನ್ ಬ್ಲ್ಯಾಕ್‌ಬೆರ್ರಿ DTEK50 ಅನ್ನು ಲಾಂಚ್ ಮಾಡಿದ್ದು ಇದು ಕೂಡ ವಿಶ್ವದ ಹೆಚ್ಚು ಸುಭದ್ರ ಫೋನ್‌ಗಳಲ್ಲಿ ಒಂದಾಗಿದೆ. 5.2 ಇಂಚಿನ ಪೂರ್ಣ ಎಚ್‌ಡಿ ಸ್ಕ್ರಾಚ್ ರೆಸಿಸ್ಟೆಂಟ್ ಡಿಸ್‌ಪ್ಲೇಯನ್ನು ಹೊಂದಿದ್ದು 1080x1920 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಇದು ಪಡೆದುಕೊಂಡಿದೆ.

ಬ್ಲ್ಯಾಕ್ ಫೋನ್ 2

ಬ್ಲ್ಯಾಕ್ ಫೋನ್ 2

ಸೈಲೆಂಟ್ ಸರ್ಕಲ್ ಫೋನ್ ಅನ್ನು ಲಾಂಚ್ ಮಾಡಿದ್ದು, ಕಂಪೆನಿಯ ಸೈಲೆಂಟ್ ಓಎಸ್ ಅನ್ನು ಇದು ಪಡೆದುಕೊಂಡಿದೆ. ಆಂಡ್ರಾಯ್ಡ್ ಮೂಲತಃ ಇದಾಗಿದ್ದು, ಇದು ಸುಧಾರಿತ ಫೀಚರ್‌ಗಳನ್ನೊಳಗೊಂಡು ಬಂದಿದೆ. 5.5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಡಿವೈಸ್ ಹೊಂದಿದ್ದು ಗೋರಿಲ್ಲಾ ಗ್ಲಾಸ್ ಭದ್ರತೆ ಇದರಲ್ಲಿದೆ. ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಅನ್ನು ಹೊಂದಿದ್ದು 13 ಎಮ್‌ಪಿ ಬಿಎಸ್ಐ ಸೆನ್ಸಾರ್ ಇದರಲ್ಲಿದೆ.

ಬೋಯಿಂಗ್ ಬ್ಲ್ಯಾಕ್

ಬೋಯಿಂಗ್ ಬ್ಲ್ಯಾಕ್

ಆಂಡ್ರಾಯ್ಡ್ ಆಧಾರಿತ ಫೋನ್ ಇದಾಗಿದ್ದು, ಸರಕಾರಿ ಏಜೆನ್ಸಿಗಳು ಮತ್ತು ಇತರ ವ್ಯವಹಾರಿ ವಿಧಗಳು ಬಳಸಿಕೊಳ್ಳುವಂತಹದ್ದಾಗಿದೆ. ಸೆಲ್ಫ್ ಡಿಸ್ಟ್ರಕ್ಟ್ ಫೀಚರ್‌fನೊಂದಿಗೆ ಫೋನ್ ಬಂದಿದ್ದು ಇದರಲ್ಲಿರುವ ಸಾಫ್ಟ್‌ವೇರ್ ಡೇಟಾ ಆಟೊ ಡಿಲೀಶನ್ ಮೊದಲಾದ ಕಾರ್ಯಗಳನ್ನು ನಿರ್ವಹಿಸುತ್ತದೆ. 5.2 ಇಂಚಿನ ಡಿಸ್‌ಪ್ಲೇಯನ್ನು ಪಡೆದುಕೊಂಡಿದ್ದು, ಡ್ಯುಯಲ್ ಕೋರ್ 1.2GHZ ಆರ್ಮ್ ಕೋರ್ಟೆಕ್ಸ್ A-9 ಪ್ರೊಸೆಸರ್ ಮತ್ತು 1.590mAh ಬ್ಯಾಟರಿಯನ್ನು ಪಡೆದುಕೊಂಡಿದೆ.

ಟ್ಯೂರಿಂಗ್ ಫೋನ್

ಟ್ಯೂರಿಂಗ್ ಫೋನ್

ಕೋಪರ್, ಅಲ್ಯುಮಿನಿಯಮ್, ನಿಕ್ಕಲ್ ಮತ್ತು ಸಿಲ್ವರ್ ಬಳಸಿಕೊಂಡು ತಯಾರಿಸಿ ಡಿವೈಸ್ ಇದಾಗಿದ್ದು, ಸೆಕ್ಯುರಿಟಿ ಆಧಾರಿತ ಯುಐ ಅನ್ನು ಮೇಲ್ಭಾಗದಲ್ಲಿ ಹೊಂದಿದೆ. ಎಂಡ್ ಟು ಎಂಡ್ ಎನ್‌ಕ್ರಿಪ್ಶನ್ ಅನ್ನು ಡಿವೈಸ್ ಒಳಗೊಂಡಿದೆ. 5.5 ಇಂಚಿನ ಡಿಸ್‌ಪ್ಲೇ, 2.5GHZ ಕ್ರೇಟ್ ಪ್ರೊಸೆಸರ್ ಇದರಲ್ಲಿದೆ. 3,000mAh ಬ್ಯಾಟರಿಯನ್ನು ಹೊಂದಿದೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Those security buffs, here are 5 such smartphones that claim to offer the best in smartphone security.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot