Subscribe to Gizbot

ಆಪಲ್‌ಗೆ ಸೆಡ್ಡು ಹೊಡೆದ ಹುವಾವೆ ಮೆಟ್ 9 ಸ್ಮಾರ್ಟ್‌ಫೋನ್!! ಅಂತಹ ವಿಶೇಷತೆ ಏನು?

Written By:

ವಾರದ ಮೊದಲು ಬಿಡುಗಡೆಗೊಂಡ ಹುವಾವೆ ಮೆಟ್ 9 ಸ್ಮಾರ್ಟ್‌ಫೋನ್ ಮೊಬೈಲ್ ಪ್ರಿಯರ ಮನಗೆದ್ದಿದೆ, ಉತ್ತಮ ಫೀಚರ್ ಹೊಂದಿರುವ ಹುವಾವೆ ಮೆಟ್ 9 ಸ್ಮಾರ್ಟ್‌ಫೋನ್ ಆಪಲ್ ಕಂಪೆನಿಗೂ ಸೆಡ್ಡು ಹೊಡೆಯುವಂತಹ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿದೆ.

ಚೀನಾದ ಮೊಬೈಲ್ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿರುವ ಹುವಾವೆ( huawe) ಕಂಪೆನಿ ಪ್ರಪಮಬದ ದೊಡ್ಡ ಮೊಬೈಲ್ ಮಾರುಕಟ್ಟೆ ಭಾರತದಲ್ಲಿಯೂ ನೆಲೆನಿಲ್ಲಲು ಪ್ರಯತ್ನಿಸುತ್ತಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್‌ಗಳನ್ನು ಹೊಂದಿದ್ದ ಮೊಬೈಲ್‌ಗಳನ್ನು ಬಿಡುಗಡೆಮಾಡುತ್ತಿದ್ದ ಹುವಾಯೆ ಇದೀಗ ಅತ್ಯುತ್ತಮ ಫೀಚರ್ ಒಳಗೊಂಡಿರುವ ಹುವಾವೆ( huawe) ಮೆಟ್ 9 ಬಿಡುಗಡೆಮಾಡಿದ್ದು, ಹುವಾಯ್‌ ಮೊಬೈಲ್ ಸರಣಿಯಲ್ಲಿಯೇ ಇದು ಅತ್ಯುತ್ತಮ ಮೊಬೈಲ್ ಎಂದು ಹೇಳಬಹುದು.

ಇಂಟರ್‌ನೆಟ್ ಬಳಸಿದ ನಂತರ ಹ್ಯಾಕರ್‌ಗಳಿಂದ ಪಾರಾಗಲು ಹೀಗೆ ಮಾಡಲೇಬೇಕು?

ಹುವಾವೆ( huawe) ಮೆಟ್ 9 ಈ ವರ್ಷದ ಉತ್ತಮ ಮೊಬೈಲ್‌ಗಳಲ್ಲಿ ಒಂದಾಗಿದ್ದು, ಹಾಗಾದರೆ ಈ ಮೊಬೈಲ್ ಏನೇನು ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ ಮೂಲಕ ತಿಳಿಯಿರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.9 ಇಂಚ್ ಡಿಸ್‌ಪ್ಲೇ.

5.9 ಇಂಚ್ ಡಿಸ್‌ಪ್ಲೇ.

ಗ್ರಾಹಕರ ಆಶಯಕ್ಕೆ ತಕ್ಕಂತೆ ಹುವಾವೆ( huawe) ಮೆಟ್ 9 ಅತ್ಯಾಕರ್ಷಕ 5.9 ಇಂಚ್ ಡಿಸ್‌ಪ್ಲೇ ಹೊಂದಿದೆ. ಇನ್ನು ಮೊಬೈಲ್‌ಗೆ ಅತ್ಯುತ್ತಮ ಎನ್ನುವಂತಹ ವಿನ್ಯಾಸ ನೀಡಲಾಗಿದೆ. ನೋಲು ಸುಂದರವಾಗಿರುವ ಮತ್ತು ಹಿಡಿಯಲು ಖುಷಿಯಾಗುವ ಹುವಾವೆ( huawe) ಮೆಟ್ 9 ಗ್ರಾಹಕರ ಮನಗೆಲ್ಲುತ್ತದೆ.

ಉತ್ತಮ ಬಾಳಿಕೆಯ ಬ್ಯಾಟರಿ.

ಉತ್ತಮ ಬಾಳಿಕೆಯ ಬ್ಯಾಟರಿ.

ಹುವಾವೆ( huawe) ಮೆಟ್ 9 4000 amh ಬ್ಯಾಟರಿಯನ್ನು ಒಳಗೊಂಡಿದೆ. ಸ್ಮಾಟ್‌ಫೋನ್ ನಲ್ಲಿ ಹೆಚ್ಚು ಮಿಡಿಯಾ ಬಳಕೆಯಾದರೂ ಪವರ್‌ ಸೇವಿಂಗ್ ಮೂಡ್ ಆನ್ ಮಾಡದೆ 36 ಗಂಟೆಗಳ ಕಾರ್ಯನಿರ್ವಹಣೆ ಮಾಡುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಡ್ರಾಯ್ಡ್ ನ್ಯೂಗ ( android nougat)

ಆಂಡ್ರಾಯ್ಡ್ ನ್ಯೂಗ ( android nougat)

ಇತ್ತೀಚಿಗೆ ಬಿಡುಗಡೆಯಾಗಿರುವ ಆಂಡ್ರಾಯ್ಡ್ ನ್ಯೂಗ ಆಪರೇಟಿಂಗ್ ಸಿಸ್ಟಮ್ ಹುವಾವೆ( huawe) ಮೆಟ್ 9 ನಲ್ಲಿದೆ. ಇದರಿಂದ ಹೆಚ್ಚು ಪೀಚರ್‌ಗಳನ್ನು ಬಳಕೆದಾರರು ಹೊಂದಬಹುದು.

ಅತ್ಯುತ್ತಮ ಕ್ಯಾಮರಾ ಗುಣಮಟ್ಟ.

ಅತ್ಯುತ್ತಮ ಕ್ಯಾಮರಾ ಗುಣಮಟ್ಟ.

ಕ್ರಮವಾಗಿ 20 ಮತ್ತು 8 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಹೊಂದಿರುವ ಹುವಾವೆ( huawe) ಮೆಟ್ 9 ಉತ್ತಮ ಗುಣಮಟ್ಟದ ಚಿತ್ರಗಳನ್ನು ಚಿತ್ರಿಸಬಲ್ಲದು. ಮಾನೋಕ್ರೋಮ್ ಸೆನ್ಸಾರ್ ಮತ್ತು ಹೈಬ್ರೀರ್ ಜೂಮ್ ಆಯ್ಕೆಯನ್ನು ಹೊಂದಿದೆ.

ಅತ್ಯುನ್ನತ ಕಾರ್ಯನಿರ್ವಹಣೆ.

ಅತ್ಯುನ್ನತ ಕಾರ್ಯನಿರ್ವಹಣೆ.

4Gb ರ್ಯಾಮ್ ಮತ್ತು ಬ್ರಾಂಡ್ ನ್ಯೂ8 ಕೋರ್ ಪ್ರೊಸೆಸರ್ ಹೊಂದಿರುವ ಹುವಾವೆ( huawe) ಮೆಟ್ 9 ಅತ್ಯುನ್ನತ ಕಾರ್ಯನಿರ್ವಹಣೆ ನೀಡುತ್ತದೆ. ಗ್ರಾಫಿಕ್ಸ್ ಚಿತ್ರಗಳಿಗೆ ಮೊಬೈಲ್ ಪೂರ್ಣ ಸಹಕಾರ ನೀಡುವುದರಿಂದ ನಿಮಗೆ ಉಪಯೋಗಿಸಲು ಇಷ್ಟವಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The latest Mate 9 is an interesting device offering from Huawei to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot