ಖರೀದಿಸಲು ಮರೆಯದಿರಿ: ಬಜೆಟ್ ಬೆಲೆಯ ಫೋನ್ ಲಾವಾ X81

By Shwetha
|

ಲಾವಾ ಕುಟುಂಬಕ್ಕೆ ಹೊಸ ಸೇರ್ಪಡೆಯುಂಟಾಗಿದ್ದು X81 ಸೌಂದರ್ಯ ಮತ್ತು ಬಾಳಿಕೆಗೆ ಇನ್ನೊಂದು ಹೆಸರು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಬಜೆಟ್ ಬೆಲೆಯ ಫೋನ್‌ಗಳೊಂದಿಗೆ ಸ್ಪರ್ಧಿಸಲಿರುವ ಲಾವಾ ತನ್ನ ವಿನ್ಯಾಸ ಮತ್ತು ಆಕರ್ಷಕ ಫೀಚರ್‌ಗಳಿಂದ ಗಮನ ಸೆಳೆಯುತ್ತದೆ. ಸ್ಲಿಮ್ ದೇಹ ರಚನೆ ಮತ್ತು ಮೆಟಾಲಿಕ್ ವಿನ್ಯಾಸವನ್ನು ಈ ಡಿವೈಸ್ ಪಡೆದಿದೆ.

ಲಾವಾ X81 ರೂ 11,500 ಕ್ಕೆ ದೊರೆಯುತ್ತಿದ್ದು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. ಆಕರ್ಷಕ ಫೀಚರ್ ಉಳ್ಳ ಉತ್ತಮ ಫೋನ್‌ಗಾಗಿ ನೀವು ಹುಡುಕಾಡುತ್ತಿದ್ದೀರಿ ಎಂದಾದಲ್ಲಿ ಲಾವಾ X81 ಹೇಳಿಮಾಡಿಸಿರುವಂಥದ್ದಾಗಿದೆ.

#1

#1

ಫೋನ್‌ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವುದೇ ಅದರ ಯೂನಿಬಾಡಿ ಮೆಟಲ್ ವಿನ್ಯಾಸಕ್ಕಾಗಿದೆ. ಸಿಲ್ವರ್ ಬಣ್ಣದ ಕಪ್ಪು ಪ್ಯಾನಲ್ ಡಿವೈಸ್ ಕರ್ವ್ ಮೂಲೆಗಳನ್ನು ಪಡೆದುಕೊಂಡಿದ್ದು ನೋಟದಲ್ಲಿ ಅಸದಳ ಎಂದೆನಿಸಿದೆ. ಸಿಮ್ ಸ್ಲಾಟ್ ಮತ್ತು ಬ್ಯಾಟರಿ ಈ ರಿಯರ್ ಪ್ಯಾನಲ್‌ನಲ್ಲಿ ಮರೆಯಾಗಿದ್ದು, ಹೆಚ್ಚಿನ ಫೋನ್‌ಗಳಲ್ಲಿ ಕಂಡುಬರದೇ ಇರುವ ವಿಶೇಷತೆ ಇದರಲ್ಲಿದೆ.

#2

#2

ಫೋನ್ 5 ಇಂಚಿನ ಐಪಿಎಸ್ 2.5 D ಕರ್ವ್ ಗ್ಲಾಸ್ ಅನ್ನು ಪಡೆದುಕೊಂಡಿದ್ದು ಪೂರ್ಣ ಎಚ್‌ಡಿ ರೆಸಲ್ಯೂಶನ್ 1280 X 720 ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ. ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆಯನ್ನು ಡಿವೈಸ್ ಹೊಂದಿದ್ದು ಪ್ರೀಮಿಯಮ್ ನೋಟದಿಂದ ಗಮನಸೆಳೆಯುವುದು ಖಂಡಿತ.

#3

#3

ಫೋನ್‌ನ ಆಕಾರ ಮಾತ್ರ ಸುಂದರವಾಗಿರದೇ ಇದು ವೇಗದ ಕಾರ್ಯಕ್ಷಮತೆಯನ್ನು ಪಡೆದುಕೊಂಡಿದೆ. 1.3GHZ ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಹೊಂದಿದ್ದು 3ಜಿಬಿ RAM ಅನ್ನು ಒಳಗೊಂಡಿದೆ. 16 ಜಿಬಿ ROM ಇದರಲ್ಲಿದ್ದು ಇದನ್ನು ವಿಸ್ತರಿಸಬಹುದಾಗಿದೆ, 32 ಜಿಬಿವರೆಗೆ ಇದನ್ನು ವಿಸ್ತರಿಸುವ ಶಕ್ತಿಯನ್ನು ಪಡೆದುಕೊಂಡಿದೆ.

#4

#4

ಫೋನ್ 13 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಫ್ಲ್ಯಾಶ್ ಇದರಲ್ಲಡಗಿದೆ. ಬ್ಯೂಟಿ ಫೋಕಸ್, ಪಿಕ್ ಫೋಕಸ್ ಫೀಚರ್ ಇದರಲ್ಲಿದೆ. ಇದರಲ್ಲಿ ವೀಡಿಯೊ ರೆಕಾರ್ಡಿಂಗ್ ಕೂಡ ಮಾಡಬಹುದು. ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದ್ದು ಫೋಟೋ ತೆಗೆಯುವಲ್ಲಿ ಇದು ಅತ್ಯುತ್ತಮ ಎಂದೆನಿಸಿದೆ.

#5

#5

ಹೆಚ್ಚಿನ ಫೋನ್‌ಗಳಲ್ಲಿ, ಮಾರ್ಶ್ ಮಲ್ಲೊಗೆ ಅಪ್‌ಗ್ರೇಡ್ ಮಾಡಲು ನಾವು ಕಷ್ಟಪಡುತ್ತಿರುತ್ತೇವೆ. ಆದರೆ ಈ ಡಿವೈಸ್ ಈಗಾಗಲೇ ಮಾರ್ಶ್ ಮಲ್ಲೊ 6.0 ಅನ್ನು ಒಳಗೊಂಡಿದ್ದು, ತನ್ನದೇ 3.0 ಯುಎಸ್ ಅನ್ನು ಹೊಂದಿದ್ದು ಹೆಚ್ಚುವರಿ ವೈಶಿಷ್ಟ್ಯತೆಗಳನ್ನು ಒಳಗೊಂಡಿದ್ದು ಬಳಸಲು ಉಪಯೋಗಕಾರಿ ಎಂದೆನಿಸಿದೆ.

Best Mobiles in India

English summary
The Lava X81 is priced at Rs. 11,500 and is available online on Flipkart. With this phone Lava reaches out to the discerning consumer who likes a good looking device which is rich in features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X