2018ರ ಈ 5 ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಉತ್ತಮವಾಗಿರಬಹುದಿತ್ತು ಅಲ್ಲವೇ?

|

2018 ಅಂತ್ಯಗೊಳ್ಳುತ್ತಿರುವ ಈ ಸಮಯದಲ್ಲಿ ಈ ವರ್ಷ ಬಿಡುಗಡೆಗೊಂಡಿರುವ ಕೆಲವು ಸ್ಮಾರ್ಟ್ ಫೋನ್ ಗಳ ಪ್ರದರ್ಶನವನ್ನು ಗಮನಿಸಿದಾಗ ಇನ್ನಷ್ಟು ಉತ್ತಮವಾಗಿದ್ದರೆ ಚೆನ್ನಾಗಿ ಇರ್ತಿತ್ತು ಅಂತ ಅನ್ನಿಸಿದ್ದುಂಟು. ಹಾಗಂದ ಮಾತ್ರಕ್ಕೆ ಈ ಫೋನ್ ಗಳು ಯಶಸ್ಸು ಗಳಿಸಲಿಲ್ಲವೆಂದಲ್ಲ.

 2018ರ ಈ 5 ಸ್ಮಾರ್ಟ್‌ಫೋನ್‌ಗಳು ಇನ್ನಷ್ಟು ಉತ್ತಮವಾಗಿರಬಹುದಿತ್ತು ಅಲ್ಲವೇ?

ಖಂಡಿತವಾಗಲೂ ಇವು ಬೆಸ್ಟ್ ಫೋನ್ ಗಳಾಗಿದ್ದವು ಮತ್ತು ಉತ್ತಮ ಪ್ರದರ್ಶನ ನೀಡುವ ಕೆಲವು ಅತ್ಯದ್ಭುತ ಫೀಚರ್ ಗಳನ್ನು ಒಳಗೊಂಡಿದ್ದವು. ಆದರೆ ಈ ಹ್ಯಾಂಡ್ ಸೆಟ್ ಗಳನ್ನು ಟೆಸ್ಟ್ ಮಾಡಿದಾಗ ಕೆಲವು ಬೆಟರ್ ಫೀಚರ್ ಗಳು ಇದ್ದಿದ್ದರೆ ಇನ್ನಷ್ಟು ಚೆನ್ನಾಗಿರ್ತಿತ್ತು ಎಂದು ಅನ್ನಿಸಿದ್ದಿದೆ. ಅಂತಹ ಕೆಲವು ಫೋನ್ ಗಳ ಪಟ್ಟಿಯನ್ನು ನೀವಿಲ್ಲಿ ನೀಡುತ್ತಿದ್ದೇವೆ.

ಆಪಲ್ ಐಫೋನ್ XS/XS ಮ್ಯಾಕ್ಸ್ ಮತ್ತು XR

ಆಪಲ್ ಐಫೋನ್ XS/XS ಮ್ಯಾಕ್ಸ್ ಮತ್ತು XR

ಆಪಲ್ ಐಫೋನ್ ಗಳ ಡಿಸೈನ್ ನಲ್ಲಿ ಬಹಳ ಬದಲಾವಣೆಗಳಾಗುತ್ತಿದೆ. ಆಪಲ್ ಇದೀಗ ಪ್ರತಿ ವರ್ಷ ಹೊಸ ಹೊಸ ಐಫೋನ್ ಗಳನ್ನು ವಿಭಿನ್ನವಾಗಿ ತಯಾರಿಸುತ್ತಿದೆ ಮತ್ತು ಹೆಚ್ಚು ಲಾಭವನ್ನು ಗಳಿಸುವುದಕ್ಕೆ ಪ್ರಯತ್ನಿಸುತ್ತಿದೆ. ಕೆಲವು ಹೆಚ್ಚುವರಿ ಫೀಚರ್ ಗಳೊಂದಿಗೆ ಶೈನಿ ಮೆಟಲ್ ಗ್ಲಾಸ್ ಫೋನ್ ನ್ನು ಈ ಬಾರಿ ಆಪಲ್ ಬಿಡುಗಡೆಗೊಂಳಿಸಿದೆ. ಇದರ ಲುಕ್ ನಿಜಕ್ಕೂ ಅಧ್ಬುತವಾಗಿದೆ. ಆದರೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಆಪಲ್ ಐಫೋನ್ ಗಳು ಆಪಲ್ ನ ವಿಫಲ ಆವಿಷ್ಕಾರಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಉತ್ತಮ ಹಾರ್ಡ್ ವೇರ್,ದೊಡ್ಡ ಸ್ಕ್ರೀನ್, ಕ್ಯಾಮರಾಗಳಲ್ಲಿ ಅಭಿವೃದ್ಧಿ, ಬೆಟರ್ ಬ್ಯಾಟರಿ ಲೈಫ್ ಎಲ್ಲವೂ ಇದೆ. ಆದರೆ ಆವಿಷ್ಕಾರದ ವಿಚಾರದಲ್ಲಿ ಇನ್ನಷ್ಟು ಹೊಸತು ಇದ್ದಿದ್ದರೆ ಚೆನ್ನಾಗಿತ್ತು ಎಂದೆನಿಸಿದ ಫೋನ್ ಗಳಿವು. ಹೆಚ್ಚು ಬೆಲೆಯಲ್ಲಿ ಲಭ್ಯವಾಗುವ ಐಫೋನ್ ಎಂದು ಹೇಳುವುದನ್ನು ಹೊರತು ಪಡಿಸಿದರೆ ಇದಕ್ಕಿಂತ ಕಡಿಮೆ ಬೆಲೆಯ ಆಂಡ್ರಾಯ್ಡ್ ಫ್ಲ್ಯಾಗ್ ಶಿಪ್ ಗಳಲ್ಲಿ ಇನ್ನೂ ಹೆಚ್ಚಿನ ಸವಲತ್ತುಗಳು ಲಭ್ಯವಿರುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ9

ವಿಶ್ವದ ಮೊದಲ ಕ್ವಾಡ್-ಲೆನ್ಸ್ ಕ್ಯಾಮರಾವಿರುವ ಸ್ಮಾರ್ಟ್ ಫೋನ್ ಉತ್ತಮವಾಗಿರುವ ಕೆಲವು ಹೊಸ ಆಪರ್ ಗಳನ್ನು ನೀಡುತ್ತಿದೆಯಾದರೂ ರಿಯಲ್ ಲೈಫ್ ಕ್ಯಾಮರಾ ಪ್ರದರ್ಶನವು ಕ್ಯಾಮರಾ ಸೆಂಟ್ರಿಕ್ ಸ್ಮಾರ್ಟ್ ಫೋನ್ ಗಳಿಗಿಂತ ಕಡಿಮೆ ಪ್ರದರ್ಶನವನ್ನು ನೀಡುತ್ತದೆ. ಹಾರ್ಡ್ ವೇರ್ ಶ್ರೀಮಂತಿಕೆ ಇರುವ ಕ್ಯಾಮರಾವನ್ನು ಈ ಫೋನ್ ಒಳಗೊಂಡಿದೆ ಆದರೆ ಪ್ರದರ್ಶನ ವಿಚಾರ ಬಂದಾಗ ಸರಾಸರಿ ಪ್ರದರ್ಶನವಿದೆಯೇ ಹೊರತು ಅತ್ಯುತ್ತಮ ಪ್ರದರ್ಶನವನ್ನು ಇದು ನೀಡುವುದಿಲ್ಲ. ಇದೇ ಬೆಲೆಯಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಬಳಕೆದಾರರಿಗೆ ಈ ಫೋನ್ ಸ್ವಲ್ಪ ನಿರಾಸೆಯೇ ಆಗಿತ್ತು.

ಒನ್ ಪ್ಲಸ್ 6

ಒನ್ ಪ್ಲಸ್ 6

ಒನ್ ಪ್ಲಸ್ 6 ಬಹಳ ಪ್ರಸಿದ್ಧಿಯಾಗಿದ್ದ ಮತ್ತು ಬೆಲೆಗೆ ತಕ್ಕ ಫೋನ್ ಎಂಬ ಖ್ಯಾತಿಯೊಂದಿಗೆ ಬಿಡುಗಡೆಗೊಂಡಿತ್ತು. ಉತ್ತಮ ಸ್ಪೀಡ್ ಮತ್ತು ಪ್ರದರ್ಶನವನ್ನು ಮಲ್ಟಿಟಾಸ್ರಿಂಗ್, ಕಂಪ್ಯೂಟಿಂಗ್, ಗೇಮಿಂಗ್ ಮತ್ತು ಚಾರ್ಜಿಂಗ್ ವಿಚಾರದಲ್ಲಿ ನೀಡುವುದು ಸತ್ಯದ ವಿಚಾರವೇ.ಆದರೆ ಕ್ಯಾಮರಾ ಪ್ರದರ್ಶನದ ವಿಚಾರದಲ್ಲಿ ಒನ್ ಪ್ಲಸ್ ನಿರೀಕ್ಷೆಯ ಮಟ್ಟವನ್ನು ಬೆಲೆಯ ವಿಚಾರದಲ್ಲಿ ನೋಡಿದಾಗ ತಲುಪಲಿಲ್ಲ. IP ರೇಟಿಂಗ್ ನ್ನು ಹ್ಯಾಂಡ್ ಸೆಟ್ ನೀಡಲಿಲ್ಲ ಜೊತೆಗೆ ವಾಟರ್-ಡಸ್ಟ್ ರೆಸಿಸ್ಟೆಂಟ್ ಕೂಡ ಇಲ್ಲ. ಈಗಿನ ಕಾಲದಲ್ಲಿ ಪ್ರತಿ ಸ್ಮಾರ್ಟ್ ಫೋನ್ ನಲ್ಲೂ ಕೂಡ ಬೇಸಿಕ್ ಲೆವೆಲ್ ನ ಡ್ಯೂರೇಬ್ಲಿಟಿಯನ್ನು ನಾವು ನಿರೀಕ್ಷಿಸುತ್ತೇವೆ. ಮುಂದಿನ ಫೋನ್ ನಲ್ಲಾದರೂ ಅಂದರೆ ಒನ್ ಪ್ಲಸ್ 7 ನಲ್ಲಾದರೂ ಇದು ಇರಲಿ ಎಂಬ ನಿರೀಕ್ಷೆ ಒನ್ ಪ್ಲಸ್ ಅಭಿಮಾನಿಗಳದ್ದಾಗಿದೆ.

ನೋಕಿಯಾ 7 ಪ್ಲಸ್

ನೋಕಿಯಾ 7 ಪ್ಲಸ್

ನೋಕಿಯಾ 7 ಪ್ಲಸ್ ಖಂಡಿತವಾಗಲೂ ಅಧ್ಬುತ ಹ್ಯಾಂಡ್ ಸೆಟ್.ಕ್ಸಿಪ್ಸ್ ಆಗಿರುವ 18:9 ಡಿಸ್ಪ್ಲೇ, ಉತ್ತಮ ಬ್ಯಾಟರಿ ಲೈಫ್, ಉತ್ತಮ ಸಾಫ್ಟ್ ವೇರ್ ಪ್ರದರ್ಶನ ಮತ್ತು ಸ್ನ್ಯಾಪಿ ಸ್ನ್ಯಾಪ್ ಡ್ರ್ಯಾಗನ್ 660 CPU ವನ್ನು ಹೊಂದಿದೆ. ಆದರೆ, ಇನ್ನಷ್ಟು ಉತ್ತಮವಾಗಿರುವ ಕ್ಯಾಮರಾ ಈ ಫೋನ್ ನಲ್ಲಿ ಅಗತ್ಯವಿತ್ತು. ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋ ಕ್ಲಿಕ್ಕಿಸುವ ವ್ಯವಸ್ಥೆ ಇದರಲ್ಲಿ ಲಭ್ಯವಿಲ್ಲ. 25,999 ರುಪಾಯಿ ಬೆಲೆಗೆ ಈ ಫೋನ್ ಭಾರೀ ದುಬಾರಿ ಎಂದೆನಿಸುತ್ತದೆ.

ಒಪ್ಪೋ ಫೈಂಡ್ X

ಒಪ್ಪೋ ಫೈಂಡ್ X

ಒಪ್ಪೋ ಫೈಂಡ್ X ಖಂಡಿತವಾಗಲೂ ಫ್ಯೂಚರಿಸ್ಟಿಕ್ ಮತ್ತು ಉತ್ತಮ ಲುಕ್ ಇರುವ ಸ್ಮಾರ್ಟ್ ಫೋನ್ ಆಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸೆಕ್ಸಿಯಸ್ಟ್ ಫೋನ್ ಎಂದು ಇದನ್ನು ಕರೆಯಲಾಗುತ್ತದೆ. ಆದರೆ ಸುಂದರವಾಗಿರುವ ಮತ್ತು ಕ್ರಿಯಾತ್ಮಕವಾಗಿರುವ ಡಿಸೈನ್ ನ್ನು ಹೊರತು ಪಡಿಸಿ ಗ್ರಾಹಕ ಸ್ನೇಹಿ ಪ್ರದರ್ಶನದ ವಿಚಾರದಲ್ಲಿ ಇದು ಸೋತಿದೆ. ಹಾರ್ಡ್ ವೇರ್ ಮತ್ತು ಕ್ಯಾಮರಾ ಪ್ರದರ್ಶನವು ಫ್ಲ್ಯಾಗ್ ಶಿಪ್ ಸ್ಟ್ಯಾಂಡರ್ಡ್ ಗೆ ಹೊಂದಿಕೆಯಾಗುತ್ತಿಲ್ಲ. ಇನ್ನಷ್ಟು ಉತ್ತಮಗೊಳಿಸುವುದಕ್ಕೆ ಅವಕಾಶವಿತ್ತು. ಒಂದು ಡಿಸೈನ್ ಮಾತ್ರವೇ ನಿಮ್ಮ ಆದ್ಯತೆಯಾಗಿದ್ದರೆ ಖಂಡಿತ ಇದು ಬೆಸ್ಟ್ ಫೋನ್. ಆದರೆ ಬೆಲೆಗೆ ತಕ್ಕನಾಗಿ ಪ್ರದರ್ಶನ, ಡಿಸೈನ್ ಹಾಗೂ ಇತರೆ ಎಲ್ಲಾ ವಿಚಾರವನ್ನು ಗಣನೆಗೆ ತೆಗೆದುಕೊಂಡಾಗ ಅಷ್ಟೇನು ಉತ್ತಮವೆನಿಸಲಾರದು.

Best Mobiles in India

English summary
Here are 5 smartphones that could have done better in the year 2018 for users. The list includes iPhone XR, Samsung Galaxy A9, OnePlus 6, Nokia 7 Plus, OPPO Find X

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X