ಎಲ್.ಜಿ ಜಿ6: ಫ್ಲಾಗ್ ಶಿಪ್ ಸ್ಮಾರ್ಟ್ ಫೋನಿನ ಬಗ್ಗೆ ನಿಮಗೆ ತಿಳಿದಿರಬೇಕಾದ ಐದು ಸಂಗತಿಗಳು.

ಎಲ್.ಜಿ ಜಿ5 ಫೋನಿನ ಮುಂದಿನ ತಲೆಮಾರಿನ ಫೋನಿನಲ್ಲಿ ಐರಿಸ್ ಸ್ಕ್ಯಾನರ್ ಇರಲಿದೆ ಮತ್ತು ಎಂದಿನ ಮಾಡ್ಯುಲಾರ್ ವಿನ್ಯಾಸಕ್ಕೆ ತಿಲಾಂಜಲಿ ನೀಡಲಾಗಿದೆ.

|

ಎಲ್.ಜಿ ಜಿ6 ಬಗೆಗಿನ ಸುದ್ದಿಗಳು ಹೆಚ್ಚುತ್ತಲಿವೆ, ಅಧಿಕೃತ ಬಿಡುಗಡೆ ಸಮೀಪದಲ್ಲಿದೆ. ಎಲ್.ಜಿ ಜಿ5 ಫೋನಿನ ಮುಂದಿನ ತಲೆಮಾರಿನ ಫೋನಾದ ಎಲ್.ಜಿ ಜಿ6ನ ಬಿಡುಗಡೆ 2017ರ ಮೊದಲ ಭಾಗದಲ್ಲಿ ಆಗಲಿದೆ, ಇದರಲ್ಲಲಿ ಹಲವಾರು ವಿಶೇಷತೆಗಳಿರಲಿವೆ.

ಎಲ್.ಜಿ ಜಿ6: ಫ್ಲಾಗ್ ಶಿಪ್ ಸ್ಮಾರ್ಟ್ ಫೋನಿನ ಬಗ್ಗೆ ತಿಳಿದಿರಬೇಕಾದ ಐದು ಸಂಗತಿಗಳು

ಓದಿರಿ: 2000 ರೂಪಾಯಿ ನೋಟು 'ನ್ಯಾನೋ ಜಿಪಿಎಸ್ ಚಿಪ್' ಹೊಂದಿದೆಯೇ/ಇಲ್ಲವೇ?

ನಮಗಿಲ್ಲಿಯವರೆಗೆ ಗೊತ್ತಿರುವುದೇನು ಮತ್ತು ಎಲ್.ಜಿಯ ಫ್ಲಾಗ್ ಶಿಪ್ ಫೋನಿನ ಬಗ್ಗೆ ನಮ್ಮ ನಿರೀಕ್ಷೆಗಳೇನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಐರಿಸ್ ಸ್ಕ್ಯಾನರ್.

ಐರಿಸ್ ಸ್ಕ್ಯಾನರ್.

ಜಿ.ಎಸ್.ಮರೆನಾದ ವರದಿಯ ಪ್ರಕಾರ ಹೊಸ ಎಲ್.ಜಿ ಜಿ6 ಫೋನಿನಲ್ಲಿ ಐರಿಸ್ ಸ್ಕ್ಯಾನರ್ ಇರಲಿದೆ. ಇದನ್ನು ಸೆಲ್ಫಿ ಕ್ಯಾಮೆರಾದಲ್ಲೇ ಅಡಕವಾಗಿಸಲಾಗಿದೆ. ಗ್ಯಾಲಕ್ಸಿ ನೋಟ್ 7ರಲ್ಲಿ ಸೆಲ್ಫಿ ಕ್ಯಾಮೆರ ಮತ್ತು ಐರಿಸ್ ಸ್ಕ್ಯಾನ್ ಗಾಗಿ ಪ್ರತ್ಯೇಕ ಕ್ಯಾಮೆರ ಇತ್ತು. ಎಲ್.ಜಿ ಎರಡನ್ನೂ ಒಂದರಲ್ಲೇ ಸೇರಿಸಿದೆ, ಮತ್ತು ಎರಡೂ ಕಾರ್ಯಗಳು ನಿರ್ವಹಿಸಲು ಒಂದು ಫಿಲ್ಟರ್ ಅನ್ನು ಹಾಕಿದೆ.

ಮಾಡುಲ್ಯಾರ್ ವಿನ್ಯಾಸಕ್ಕೆ ವಿದಾಯ ಹೇಳಿ.

ಮಾಡುಲ್ಯಾರ್ ವಿನ್ಯಾಸಕ್ಕೆ ವಿದಾಯ ಹೇಳಿ.

ಎಲ್.ಜಿ ಜಿ5 ಮಾಡ್ಯುಲಾರ್ ಸ್ಮಾರ್ಟ್ ಫೋನ್ ಆಗಿತ್ತು. ಅಂದರೆ ಪ್ಯಾನೆಲ್ ಅನ್ನು ಬದಲಿಸಿಕೊಂಡು ಮೊಬೈಲಿಗೆ ಹೊಸ ವಿಶೇಷತೆಯನ್ನು ಅಳವಡಿಸಿಕೊಳ್ಳಬಹುದಿತ್ತು. ಈ ವಿನ್ಯಾಸವು ಹಲವರನ್ನು ಆಕರ್ಷಿಸಿತ್ತು ಮತ್ತು ಇತರೆ ತಯಾರಕರು ಇದನ್ನು ತಯಾರಿಸಲಾರಂಭಿಸಿದ್ದರು.

ದುರದೃಷ್ಟವಶಾತ್, ಎಲ್.ಜಿ ಜಿ6 ಈ ಮಾಡ್ಯುಲಾರ್ ವಿನ್ಯಾಸಕ್ಕೆ ವಿದಾಯ ಹೇಳಿದೆ. ಹೌದು, ನೀವು ಓದಿದ್ದು ಸತ್ಯ. ಮಾಡುಲ್ಯಾರ್ ವಿನ್ಯಾಸ ತಂತ್ರಜ್ಞಾನವನ್ನು ಉತ್ತಮಗೊಳಿಸುವುದರ ಬದಲು ಎಲ್.ಜಿ ನಾನ್ ಮಾಡುಲ್ಯಾರ್ ವಿನ್ಯಾಸಕ್ಕೇ ಮತ್ತೆ ಮೊರೆ ಹೋಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಲ್.ಜಿ ಮೊಬೈಲ್ ಪೇಮೆಂಟ್.

ಎಲ್.ಜಿ ಮೊಬೈಲ್ ಪೇಮೆಂಟ್.

ಕಳೆದೊಂದು ವರುಷದಿಂದ ಎಲ್.ಜಿ ತನ್ನದೇ ಆದ ಮೊಬೈಲ್ ಪೇಮೆಂಟ್ ವ್ಯವಸ್ಥೆಯನ್ನು ಸೃಷ್ಟಿಸಲು ಕೆಲಸ ಮಾಡುತ್ತಿತ್ತು. ಎಲ್.ಜಿ ಜಿ6ನಲ್ಲಿ ಮೊಬೈಲ್ ಪೇಮೆಂಟ್ ಗಳಿಗಾಗಿ ಎಂ.ಎಸ್.ಟಿ ತಂತ್ರಜ್ಞಾನವನ್ನು ಉಪಯೋಗಿಸುವ ಸುದ್ದಿಗಳಿವೆ. ಇದು ಸ್ಯಾಮ್ಸಂಗ್ ತನ್ನ ಸ್ಮಾರ್ಟ್ ಫೋನುಗಳಲ್ಲಿ ಉಪಯೋಗಿಸುವ ಸ್ಯಾಮ್ಸಂಗ್ ಪೇ ಮಾದರಿಯದೇ ತಂತ್ರಜ್ಞಾನ.

ಎಲ್.ಜಿ ಜಿ6ನಲ್ಲಿ ಎಲ್ ಜಿ ಪೇ ಮೊಬೈಲ್ ಪೇಮೆಂಟ್ ಅನ್ನು ನಾವು ನೋಡಬಹುದು.

4ಕೆ ಪರದೆ?

4ಕೆ ಪರದೆ?

ಎಲ್.ಜಿ ಜಿ5ನಲ್ಲಿ 5.3 ಇಂಚಿನ 2ಕೆ ಪರದೆ ಇತ್ತು, ಎಲ್.ಜಿ ಜಿ6ನಲ್ಲಿ ಪರದೆ ಮತ್ತಷ್ಟು ಉತ್ತಮವಾಗುವುದು ಖಂಡಿತ. ಈ ಟೆಕ್ ದೈತ್ಯ ಎಲ್.ಜಿ ಜಿ6ನಲ್ಲಿ 4ಕೆ ಪರದೆಯನ್ನು ನೀಡುವ ಸಾಧ್ಯತೆಗಳಿವೆ, ಇದರಿಂದ ನೋಡುವ ಗುಣಮಟ್ಟ ಉತ್ತಮವಾಗುತ್ತದೆ.

ಆ್ಯಂಡ್ರಾಯ್ಡ್ 7.0 ನೌಗಾಟ್ ಮತ್ತು ಹೊಸ ಸ್ನಾಪ್ ಡ್ರಾಗನ್ 830 ಸಿಪಿಯು.

ಆ್ಯಂಡ್ರಾಯ್ಡ್ 7.0 ನೌಗಾಟ್ ಮತ್ತು ಹೊಸ ಸ್ನಾಪ್ ಡ್ರಾಗನ್ 830 ಸಿಪಿಯು.

ಎಲ್.ಜಿ ಈಗಾಗಲೇ ತನ್ನ ಫೋನುಗಳಾದ ಎಲ್.ಜಿ ವಿ20ಗೆ ಆ್ಯಂಡ್ರಾಯ್ಡ್ 7.0 ನೌಗಾಟ್ ನೀಡುತ್ತಿದೆ. ಹಾಗಾಗಿ ಹೊಸ ಫೋನಾದ ಎಲ್.ಜಿ ಜಿ6ನಲ್ಲಿ ಹೊಸ ಸಾಫ್ಟ್ ವೇರ್ ಇರುವ ಸಾಧ್ಯತೆಗಳು ಅಧಿಕ.

ಜೊತೆಗೆ, ಎಲ್.ಜಿ.ಜಿ6ನಲ್ಲಿ ಕ್ವಾಲ್ ಕಮ್ ನ ಹೊಸ ಸ್ನಾಪ್ ಡ್ರಾಗನ್ 830 ಸಿಪಿಯು ಇರುವ ಸಾಧ್ಯತೆಗಳು ಅಧಿಕ. ಎಲ್.ಜಿ ತನ್ನ ಎಲ್.ಜಿ ಜಿ5ನಲ್ಲೂ ಕೂಡ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೇ ಉತ್ತಮ ಫೋನ್ ಅನ್ನು ನೀಡಿತ್ತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
LG G6 will not be a modular smartphone but will have some exciting tricks under its sleeve

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X