Subscribe to Gizbot

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನ ಖರೀದಿ ಏಕೆ ಮಾಡಬಾರದು?

Written By:

ಆಪಲ್‌ನ ಅತ್ಯಾಧುನಿಕ ಐಫೋನ್‌ಗಳು ಬಿಡುಗಡೆಯನ್ನು ಕಂಡುಕೊಂಡಿವೆ. ಹೊಚ್ಚ ಹೊಸ ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಹೆಚ್ಚು ವೇಗದ ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಉತ್ತಮ ಕ್ಯಾಮೆರಾ, ದೊಡ್ಡ ಬ್ಯಾಟರಿ ಮತ್ತು ಇನ್ನಷ್ಟು ಸೇರ್ಪಡೆಗಳನ್ನು ಪಡೆದುಕೊಂಡು ಬಂದಿವೆ.

ಓದಿರಿ: ಅತಿ ಕಡಿಮೆ ಬೆಲೆಯಲ್ಲಿ ಐಫೋನ್ 7 ಲಭ್ಯ!!!

ಆದರೆ ಇಂದಿನ ಲೇಖನದಲ್ಲಿ ಐಫೋನ್ 7 ಅನ್ನು ನೀವು ಏಕೆ ಖರೀದಿಸಬಾರದು ಎಂಬುದರ ಕುರಿತಾದ ವಿವರಣೆಯನ್ನು ನೀಡುತ್ತಿದ್ದೇವೆ. ಇದರಲ್ಲಿರುವ ಮಾರ್ಪಾಡುಗಳನ್ನು ಕಂಡಾದರೂ ನೀವು ಈ ದುಬಾರಿ ಫೋನ್‌ಗಳನ್ನು ಖರೀದಿಸಬೇಕೆಂದು ನೀವು ಹೊರಟಿದ್ದೀರಿ ಎಂದಾದಲ್ಲಿ ನಾವು ಅದಕ್ಕೆ ತಡೆಯನ್ನು ಹಾಕುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಇಲ್ಲ

ವಿನ್ಯಾಸದಲ್ಲಿ ಪ್ರಮುಖ ಬದಲಾವಣೆ ಇಲ್ಲ

ಐಫೋನ್ 7 ಮತ್ತು ಐಫೋನ್ 7 ಪ್ಲಸ್ ತಮ್ಮ ಹಿಂದಿನ ಡಿವೈಸ್‌ಗಳಂತೆಯೇ ಅದೇ ವಿನ್ಯಾಸವನ್ನು ಪಡೆದುಕೊಂಡು ಬಂದಿವೆ. ಈ ಹೊಸ ಡಿವೈಸ್‌ಗಳು ಕೆಳಭಾಗದಲ್ಲಿ ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆದುಕೊಂಡಿವೆ, ಡ್ಯುಯಲ್ ರಿಯರ್ ಕ್ಯಾಮೆರಾ ಇದರಲ್ಲಿದೆ ಅಂತೆಯೇ ಆಂಟೆನಾ ಲೈನ್‌ಗಳನ್ನು ಇದು ಹೊಂದಿದೆ.

ಐಫೋನ್ 6 ಎಸ್‌ನಂತೆಯೇ ಅದೇ ವಿನ್ಯಾಸ

ಐಫೋನ್ 6 ಎಸ್‌ನಂತೆಯೇ ಅದೇ ವಿನ್ಯಾಸ

ರೆಟೀನಾ ಎಚ್‌ಡಿ ಡಿಸ್‌ಪ್ಲೇಯನ್ನು ಐಫೋನ್ 7 ಸ್ಕ್ರೀನ್ ಪಡೆದುಕೊಂಡಿದ್ದು ಆಪಲ್‌ನ ಹಿಂದಿನ ಜನರೇಶನ್ ಹ್ಯಾಂಡ್‌ಸೆಟ್ ಇದರಲ್ಲಿದೆ.

ಬ್ಯಾಟರಿಯಲ್ಲಿ ಯಾವುದೇ ಬದಲಾವಣೆ ಇಲ್ಲ

ಬ್ಯಾಟರಿಯಲ್ಲಿ ಯಾವುದೇ ಬದಲಾವಣೆ ಇಲ್ಲ

ಐಫೋನ್ 7 ಮತ್ತು ಐಫೋನ್ 7 ಪ್ಲಸ್ ದೀರ್ಘವಾದ ಬ್ಯಾಟರಿಯೊಂದಿಗೆ ಬಂದಿದೆ ಎಂಬುದಾಗಿ ಕಂಪೆನಿ ಹೇಳಿಕೊಂಡಿದೆ. ಇದು ಹೆಚ್ಚು ಕಡಿಮೆ ಮೂರು ಗಂಟೆಗಳಿಗಿಂತ ಹೆಚ್ಚಿನ ಬ್ಯಾಟರಿಯನ್ನು ನೀಡುತ್ತದೆ.

ಹೆಡ್‌ಫೋನ್ ಜಾಕ್ ಇಲ್ಲ

ಹೆಡ್‌ಫೋನ್ ಜಾಕ್ ಇಲ್ಲ

ಐಫೋನ್ 7 ಶ್ರೇಣಿಯಲ್ಲಿ 3.5mm ಹೆಡ್‌ಫೋನ್ ಜಾಕ್ ಅನ್ನು ಆಪಲ್ ತೆಗೆದುಹಾಕಿದೆ. ಇದರಿಂದಾಗಿ ತಮ್ಮ ಹೊಸ ಹೆಡ್‌ಸೆಟ್‌ಗಳೊಂದಿಗೆ ಪ್ರಸ್ತುತ 3.5mm ಹೆಡ್‌ಫೋನ್‌ಗಳನ್ನು ಬಳಕೆದಾರರಿಗೆ ಬಳಸಲು ಸಾಧ್ಯವಾಗುವುದಿಲ್ಲ.

RAM

RAM

ಆಪಲ್ ಎಂದಿಗೂ ತನ್ನ ಡಿವೈಸ್‌ನ RAM ಸಾಮರ್ಥ್ಯವನ್ನು ಹೊರಹಾಕಿಲ್ಲ. ಐಫೋನ್ 7, 2ಜಿಬಿ RAM ಅನ್ನು ಪಡೆದುಕೊಂಡಿದ್ದರೆ, ಐಫೋನ್ 6ಎಸ್ ಕೂಡ 2ಜಿಬಿ RAM ಅನ್ನು ಒಳಗೊಂಡಿದೆ.

ಜೆಟ್ ಬ್ಲ್ಯಾಕ್ ಆವೃತ್ತಿ 32 ಜಿಬಿಯಲ್ಲಿ ಲಭ್ಯವಿಲ್ಲ

ಜೆಟ್ ಬ್ಲ್ಯಾಕ್ ಆವೃತ್ತಿ 32 ಜಿಬಿಯಲ್ಲಿ ಲಭ್ಯವಿಲ್ಲ

ಐಫೋನ್ 7 ಮತ್ತು ಐಫೋನ್ 7 ಪ್ಲಸ್‌ನ ಜೆಟ್ ಬ್ಲ್ಯಾಕ್ ಆವೃತ್ತಿ ಮಿರರ್ ಲುಕ್ ಫಿನಿಶ್ ಅನ್ನು ಪಡೆದುಕೊಂಡಿದೆ, ನೋಟವೂ ಅತ್ಯಪೂರ್ಣ ಎಂದೆನಿಸಿದೆ. ಜೆಟ್ ಬ್ಲ್ಯಾಕ್ ಕಲರ್ ಆವೃತ್ತಿಯು ನಿಮ್ಮ ಹಣವನ್ನು ಪೋಲಾಗಿಸುವುದು ಸತ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You wondering if you should shell out big bucks (price starts at Rs 60,000 in India) for buying the new iPhones? Here are six reasons why you can give them a miss.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot