ನೀವು ತಿಳಿದಿರಲೇಬೇಕಾದ ವಾಟ್ಸಾಪ್‌ನ ಹೊಸ 7 ಫೀಚರ್ಸ್

By Shwetha
|

ವಾಟ್ಸಾಪ್ ಇತ್ತೀಚೆಗಷ್ಟೇ 1 ಬಿಲಿಯನ್ ಬಳಕೆದಾರ ಹಬ್ ಅನ್ನು ಸೇರಿಕೊಂಡಿದೆ. ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ವಿಶ್ವದಲ್ಲಿರುವ ಎಲ್ಲಾ ದೇಶಗಳಿಗೂ ಸಂವಹನ ವೇದಿಕೆಯಾಗಿ ರೂಪುಗೊಂಡಿದೆ. ನಿಯಮಿತವಾಗಿ ಅಪ್‌ಡೇಟ್‌ಗಳನ್ನು ವಾಟ್ಸಾಪ್ ಪಡೆದುಕೊಳ್ಳುತ್ತಿದ್ದು ಬಳಕೆದಾರರಿಗೆ ಇದು ಸಂತಸಕರ ಸುದ್ದಿಯಾಗಿದೆ.

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಕೆಲವೊಂದು ವಿಶೇಷತೆಗಳನ್ನು ಪಡೆದುಕೊಂಡಿದ್ದು ಅದು ಏನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ. ಬನ್ನಿ ಈ ಹೊಸ ಫೀಚರ್‌ಗಳನ್ನು ಅರಿತುಕೊಂಡು ಅವುಗಳ ಮಹತ್ವವನ್ನು ನೀವೂ ಅರಿತುಕೊಳ್ಳಿ.

#1

#1

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡಾಕ್ಯುಮೆಂಟ್ ಶೇರಿಂಗ್ ಫೀಚರ್ ಅನ್ನು ವಾಟ್ಸಾಪ್ ಹೊರತಂದಿದೆ. ಪಿಡಿಎಫ್ ಫೈಲ್‌ಗಳನ್ನು ಮಾತ್ರವೇ ಹಂಚಿಕೊಳ್ಳಲು ಬಳಕೆದಾರರನ್ನು ಅನುಮತಿಸುತ್ತದೆ. ಅಂದರೆ ಡಾಕ್, ಎಕ್ಸ್‌ಎಲ್‌ಎಸ್ ಹಾಗೂ ಇತರೆ ಡಾಕ್ಯುಮೆಂಟ್‌ಗಳಿಗೆ ಇದು ಬೆಂಬಲವನ್ನು ನೀಡುತ್ತಿಲ್ಲ. ಫೈಲ್‌ಗಳನ್ನು ಶೇರ್ ಮಾಡಲು ಬಳಕೆದಾರರು ಪರದೆಯ ಬಲಮೇಲ್ಭಾಗದಲ್ಲಿರುವ ಅಟ್ಯಾಚ್‌ಮೆಂಟ್ ಐಕಾನ್ ಅನ್ನು ಸ್ಪರ್ಶಿಸಿ ಇಲ್ಲಿ ಡಾಕ್ಯುಮೆಂಟ್ ಆಪ್ಶನ್ ಚೂಸ್ ಮಾಡಿಕೊಳ್ಳಬೇಕು.

#2

#2

ಐಫೋನ್‌ಗಳಿಗಾಗಿ ವಾಟ್ಸಾಪ್ ಹೊಸ ಅಪ್‌ಡೇಟ್ ಅನ್ನು ಹೊರತಂದಿದ್ದು ಗೂಗಲ್ ಡ್ರೈವ್‌ನಿಂದ ನೇರವಾಗಿ ಫೈಲ್‌ಗಳನ್ನು ಕಳುಹಿಸುವುದು ಅಂತೆಯೇ ವೀಡಿಯೊ ಪ್ಲೇಯಾಗುತ್ತಿರುವಾಗ ಜೂಮ್ ಮಾಡುವ ಫೀಚರ್ ಕೂಡ ಇದರಲ್ಲಿದೆ. ಐಕ್ಲೌಡ್ ಡ್ರೈವ್ ಕೂಡ ಅಪ್‌ಡೇಟ್ ಹೊಸ ಬದಲಾವಣೆ ಎಂದೆನಿಸಿದ್ದು, ಐಕ್ಲೌಡ್ ಸ್ಟೋರೇಜ್‌ನಲ್ಲಿ ಸ್ಟೋರ್ ಆಗಿರುವ ಫೋಟೋಗಳು ಮತ್ತು ವೀಡಿಯೊಗಳನ್ನು ವಾಟ್ಸಾಪ್‌ನಿಂದ ನೇರವಾಗಿ ಕಳುಹಿಸಬಹುದು.

#3

#3

ವಾಟ್ಸಾಪ್ ಇತ್ತೀಚೆಗೆ ತಾನೇ ಬಳಕೆದಾರರ ಸಂಖ್ಯೆಯನ್ನು 256 ಕ್ಕೆ ಏರಿಸಿದೆ. ಇದು ಈ ಹಿಂದೆ 100 ಕ್ಕೆ ಸೀಮಿತವಾಗಿತ್ತು. ಈ ಅಪ್‌ಡೇಟ್ ಐಓಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೂ ಲಭ್ಯವಿದೆ.

#4

#4

ನಿಮ್ಮ ವೀಡಿಯೊಗಳು, ಲಿಂಕ್ಸ್, ಚಿತ್ರಗಳು ಎಲ್ಲವನ್ನೂ ಒಟ್ಟುಗೂಡಿಸುವ ಮೀಡಿಯಾ ಪರದೆಯನ್ನು ಪ್ರತೀ ವಾಟ್ಸಾಪ್ ಸಂವಾದ ಒಳಗೊಂಡಿದೆ. ಈ ಹೊಸ ಅಪ್‌ಡೇಟ್ ಈ ಎಲ್ಲಾ ಮಾಧ್ಯಮ ಮತ್ತು ಪಠ್ಯಗಳ ಮೇಲೆ ತ್ವರಿತ ದೃಷ್ಟಿ ಬೀರಲು ಸಹಕಾರಿಯಾಗಿದೆ.

#5

#5

ಐಓಎಸ್ ಬಳಕೆದಾರರಿಗೆ ಈ ಅನುಕೂಲತೆ ಇದ್ದು ವೀಡಿಯೊಗಳನ್ನು ಜೂಮ್ ಮಾಡಲು ಪಿಂಚ್ ಮಾಡಬಹುದಾಗಿದೆ. ವಾಟ್ಸಾಪ್‌ನಲ್ಲಿ ವೀಡಿಯೊ ಪ್ಲೇಯಗುತ್ತಿರುವಾಗ ಅದನ್ನು ಜೂಮ್ ಮಾಡಿ ನೋಡಬಹುದಾಗಿದೆ.

#6

#6

ವಾಟ್ಸಾಪ್ ಇತ್ತೀಚೆಗೆ ತಾನೇ ಬೀಟಾ ಟೆಸ್ಟರ್ ಪ್ರೊಗ್ರಾಮ್ ಅನ್ನು ಲಾಂಚ್ ಮಾಡಿದೆ. ಒಮ್ಮೆ ಸೈನ್ ಇನ್ ಆದರೆ ವಾಟ್ಸಾಪ್ ಮೆಸೆಂಜರ್ ಅಪ್ಲಿಕೇಶನ್ ಟೆಸ್ಟಿಂಗ್ ಆವೃತ್ತಿ ಇರುವ ಅಪ್‌ಡೇಟ್ ಅನ್ನು ನೀವು ಪಡೆದುಕೊಳ್ಳುತ್ತೀರಿ. ಈ ಪ್ರೊಗ್ರಾಮ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ.

#7

#7

ನಿಮ್ಮ ಚಾಟ್‌ಗಳನ್ನು ಅಳಿಸುವಾಗ ನಿಮಗೆ ಇನ್ನಷ್ಟು ಫ್ಲೆಕ್ಸಿಬಿಲಿಟಿಯನ್ನು ಈ ಫೀಚರ್ ನೀಡುತ್ತದೆ. 30 ದಿನ ಅಥವಾ 6 ತಿಂಗಳಿಗಿಂತಲೂ ಹೆಚ್ಚು ಹಳತಾಗಿರುವ ಸಂದೇಶಗಳನ್ನು ಅಳಿಸುವ ಆಪ್ಶನ್ ಆಂಡ್ರಾಯ್ಡ್ ಬಳಕೆದಾರರಿಗೆ ಇದೆ. ಆದರೆ ಇದರಲ್ಲೂ ಕೆಲವೊಂದನ್ನು ನಿಮಗೆ ಉಳಿಸಬೇಕು ಎಂದಾದಲ್ಲಿ ಇದೀಗ ನಿಮಗೆ ಆಯ್ಕೆ ಲಭ್ಯವಿದೆ. ಚಾಟ್ ಕ್ಲಿಯರ್ ಮಾಡುವಾಗ ಸ್ಟಾರ್ ಮಾಡಿದ ಸಂದೇಶಗಳನ್ನು ಬಳಕೆದಾರರು ಇರಿಸಿಕೊಳ್ಳಬಹುದಾಗಿದೆ. ಈ ಆವೃತ್ತಿ ಬೀಟಾ ಮೋಡ್‌ನಲ್ಲಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ವ್ಯಕ್ತಿಯ ಮರಣ ದಿನ ತಿಳಿಸುವ
ಹೊಸ ಸುದ್ದಿ! ವೈಫೈಗಿನ್ನು ಕಡಿಮೆ ವಿದ್ಯುತ್ ಸಾಕಂತೆ
ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡುವುದು ಹೇಗೆ?
ಅಳಿಸಿ ಹೋದ ಎಸ್‌ಎಮ್‌ಎಸ್ ಮರುಪಡೆದುಕೊಳ್ಳುವುದು ಹೇಗೆ? " title="ವ್ಯಕ್ತಿಯ ಮರಣ ದಿನ ತಿಳಿಸುವ "ಆನ್‌ಲೈನ್‌ ಕ್ಯಾಲ್ಕುಲೇಟರ್‌"
ಹೊಸ ಸುದ್ದಿ! ವೈಫೈಗಿನ್ನು ಕಡಿಮೆ ವಿದ್ಯುತ್ ಸಾಕಂತೆ
ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡುವುದು ಹೇಗೆ?
ಅಳಿಸಿ ಹೋದ ಎಸ್‌ಎಮ್‌ಎಸ್ ಮರುಪಡೆದುಕೊಳ್ಳುವುದು ಹೇಗೆ? " loading="lazy" width="100" height="56" />ವ್ಯಕ್ತಿಯ ಮರಣ ದಿನ ತಿಳಿಸುವ "ಆನ್‌ಲೈನ್‌ ಕ್ಯಾಲ್ಕುಲೇಟರ್‌"
ಹೊಸ ಸುದ್ದಿ! ವೈಫೈಗಿನ್ನು ಕಡಿಮೆ ವಿದ್ಯುತ್ ಸಾಕಂತೆ
ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡುವುದು ಹೇಗೆ?
ಅಳಿಸಿ ಹೋದ ಎಸ್‌ಎಮ್‌ಎಸ್ ಮರುಪಡೆದುಕೊಳ್ಳುವುದು ಹೇಗೆ?

Best Mobiles in India

English summary
The popular instant messaging app has received a slew of new features in the past few months. Here's a glance at 6 such cool features you should know about.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X