ಸ್ಮಾರ್ಟ್‌ಪೋನ್ ಕ್ಯಾಮೆರಾ ಕುರಿತು ನೀವು ತಿಳಿದುಕೊಂಡಿರಲೇಬೇಕಾದ 7 ಅಂಶಗಳು!!

By Avinash

  ಹಿಂದೊಂದು ಕಾಲವಿತ್ತು ಪೋಟೋ ತೆಗಿಸಿಕೊಳ್ಳಬೇಕಾದರೆ ಸ್ಟುಡಿಯೋಗೆ ಹೋಗಬೇಕಿತ್ತು. ಅಥವಾ ಮಣಭಾರದ ಕ್ಯಾಮೆರಾವನ್ನು ಹೊತ್ತುತರಬೇಕಾಗಿತ್ತು. ಅದಲ್ಲದೇ ಮೊದಲ ಕ್ಯಾಮೆರಾದಲ್ಲಿ ಪೋಟೋ ಸೆರೆಹಿಡಿಯಲು 8 ಗಂಟೆ ಬೇಕಾಗಿತ್ತು ಎಂದರೆ ನಂಬಲೇಬೇಕು. ಆದರೆ, ಈಗ ಕ್ಯಾಮೆರಾ ತಂತ್ರಜ್ಞಾನ ಬದಲಾಗಿದ್ದು, ಯಾರು ಬೇಕಾದರೂ ಪೋಟೋ ಕ್ಲಿಕ್ಕಿಸುವ ಅವಕಾಶ ಸೃಷ್ಟಿಯಾಗಿದೆ.

  ಗೂಗಲ್ ಎಂಬ ಸ್ವಾರಸ್ಯಕರ ಹುಡುಕಾಟ..! ನಿಮಗೆ ಗೊತ್ತಿಲ್ಲ ಹಲವು ಅಂಶಗಳು..!

  ಎಲ್ಲಾ ಮೊಬೈಲ್‌ಗಳಲ್ಲೂ ಕ್ಯಾಮೆರಾ ಇದ್ದೇ ಇರುತ್ತೇ. ಡಿಎಸ್ಎಲ್ಆರ್ ಕ್ಯಾಮೆರಾ ಬಳಸುವವರ ಸಂಖ್ಯೆ ಕುಂಠಿತಗೊಳ್ಳುತ್ತಿದೆ. ಎಲ್ಲವೂ ಮೊಬೈಲಲ್ಲಿಯೇ ಸಿಗುತ್ತಿರುವಾಗ ಮತ್ತೊಂದು ಪ್ರತ್ಯೇಕ ಕ್ಯಾಮೆರಾ ಯಾಕೆ ಎಂಬುದು ಸ್ಮಾರ್ಟ್‌ಪೋನ್ ಪ್ರಿಯರ ಪ್ರಶ್ನೆ. ಈಗಂತೂ ಒಂದಿಷ್ಟು ಸ್ಮಾರ್ಟ್‌ಪೋನ್ ಕಂಪನಿಗಳು ಕ್ಯಾಮೆರಾ ಕೇಂದ್ರಿಕರಿಸಿ ಮೊಬೈಲ್ ತಯಾರಿಸುತ್ತಿವೆ.

  ಸ್ಮಾರ್ಟ್‌ಪೋನ್ ಕ್ಯಾಮೆರಾ ಕುರಿತು ನೀವು ತಿಳಿದುಕೊಂಡಿರಲೇಬೇಕಾದ 7 ಅಂಶಗಳು!!

  ಸ್ಪೋರ್ಟ್ಸ್‌ ಕ್ಯಾಮೆರಾ, ಕೃತಕ ಬುದ್ಧಿಮತ್ತೆ ಬೆಂಬಲಿತ ಕ್ಯಾಮೆರಾ, ಡ್ಯುಯಲ್ ಲೆನ್ಸ್‌ ಕ್ಯಾಮೆರಾ, ಸೆಲ್ಫಿ ಪೋರ್ಟ್‌ರೇಟ್ ಬೆಂಬಲಿತ ಕ್ಯಾಮೆರಾ ಹೀಗೆ ಕ್ಯಾಮೆರಾಗಳ ವಿಧಗಳು ಬದಲಾಗಿ, ಹೊಸ ಹೊಸ ವೈಶಿಷ್ಟ್ಯಗಳಿಂದ ಪೋಟೋಗ್ರಾಫಿ ಆಸಕ್ತರನ್ನು ಸೆಳೆಯುತ್ತಿವೆ. ಆದರೆ, ಅನೇಕ ಜನರಿಗೆ ಕ್ಯಾಮೆರಾ ಯಾವ ರೀತಿ ಕಾರ್ಯನಿರ್ವಹಿಸುತ್ತೇ, ಕ್ಯಾಮೆರಾದಲ್ಲಿ ಯಾವುದು ಇದ್ದರೇ ಬೆಸ್ಟ್‌, ಯಾವುದು ಇಲ್ಲ ಅಂದ್ರೂ ನಡೆಯುತ್ತೆ ಎಂಬುದ ಗೊತ್ತಿರಲ್ಲ. ಅದಕ್ಕಾಗಿಯೇ ಸ್ಮಾರ್ಟ್‌ಪೋನ್ ಕ್ಯಾಮೆರಾದಲ್ಲಿ ನೀವು ತಿಳಿಯಲೆಬೇಕಾದ ಅಂಶಗಳನ್ನು ಇಲ್ಲಿ ಪಟ್ಟಿಮಾಡಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1.ಮೆಗಾಪಿಕ್ಸೆಲ್ Megapixel (MP)

  ನಾವೆಲ್ಲಾ ಸಾಮಾನ್ಯವಾಗಿ ಸ್ಮಾರ್ಟ್‌ಪೋನ್ ಅಥವಾ ಕ್ಯಾಮೆರಾದ ಜಾಹೀರಾತಿನಲ್ಲಿ ನೋಡಿರ್ತಿವಿ. 12MP, 16MP, 20MP ಕ್ಯಾಮೆರಾ ಎಂದು. ಹೀಗಂದ್ರೇ ಏನು ಎಂದರೆ ಮೆಗಾಪಿಕ್ಸೆಲ್ ಚಿತ್ರದ ಗಾತ್ರ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ್ದಾಗಿದೆ. ಹೆಚ್ಚು ಪಿಕ್ಸೆಲ್ ಇದ್ದಷ್ಟು ಚಿತ್ರದ ಗುಣಮಟ್ಟ ಹೆಚ್ಚಿರುತ್ತೆ. ಒಂದು ಮೆಗಾಪಿಕ್ಸೆಲ್ ಹತ್ತುಲಕ್ಷ ಪಿಕ್ಸೆಲ್‌ಗಳಿಗೆ ಸಮ. ಒಂದು ಚಿತ್ರ ತಯಾರಾಗಬೇಕೆಂದರೆ ಅಲ್ಲಿ ಪಿಕ್ಸೆಲ್‌ಗಳ ರಾಶಿ ಇರುತ್ತೇ ಎಂಬುದನ್ನು ತಿಳಿಯಬೇಕು. ಅದಲ್ಲದೇ ಚಿತ್ರದ ರೆಸಲ್ಯೂಷನ್ ಅಳೆಯುವುದಕ್ಕೆ ಅಥವಾ ಗುರುತಿಸುವುದಕ್ಕೆ ಮೆಗಾಪಿಕ್ಸೆಲ್ ಬಳಸುತ್ತಾರೆ. ಹೆಚ್ಚು ಪಿಕ್ಸೆಲ್ ಇದ್ದರೇ ಚಿತ್ರದ ರೆಸಲ್ಯೂಷನ್ ಕೂಡ ಚೆನ್ನಾಗಿರುತ್ತದೆ.

  2. ಅಪಾರ್ಚರ್ Aperture (f/stop)

  ಕ್ಯಾಮೆರಾ ಪರಿಣಿತರಿಗೆ ಅಪಾರ್ಚರ್ ಜ್ಞಾನ ಇದ್ದೇ ಇರುತ್ತೆ. ಅಪಾರ್ಚರ್ ಎಂದರೆ ಲೆನ್ಸ್‌ ತೆರೆದುಕೊಳ್ಳುವಿಕೆ ಪ್ರಕ್ರಿಯೆ. ಇದು ಲೆನ್ಸ್‌ ಮೂಲಕ ಹಾದು ಹೋಗುವ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ನಮ್ಮ ಕಣ್ಣಿನಂತೆ ಕ್ಯಾಮೆರಾದಲ್ಲೂ ಒಂದು ರಂಧ್ರವಿದ್ದು, ಲೆನ್ಸ್‌ ಮತ್ತು ಕ್ಯಾಮೆರಾ ಸೆನ್ಸಾರ್‌ಗೆ ಹೋಗುವ ಬೆಳಕನ್ನು ನಿಯಂತ್ರಿಸುತ್ತದೆ. ಸಾಮಾನ್ಯವಾಗಿ ಅಪಾರ್ಚರ್ ಅನ್ನು ‘f/1.5, f/2.4 ಈ ರೀತಿ ಗುರುತಿಸುತ್ತೇವೆ. ಕಡಿಮೆ ಅಪಾರ್ಚರ್ ಇದ್ದರೇ ವಿಶಾಲವಾಗಿ ಲೆನ್ಸ್ಸ್ ಮೂಲಕ ಬೆಳಕು ಹಾದು ಹೋಗುತ್ತದೆ. ಇದರಿಂದ ಚಿತ್ರದ ಗುಣಮಟ್ಟದಲ್ಲಿ ವ್ಯತ್ಯಾಸ ಕೂಡ ಆಗಬಹುದು. ಚಿತ್ರದ ಶಾರ್ಪನೇಸ್ ಅನ್ನು ನಿರ್ಧರಿಸುವ ಕೆಲಸವನ್ನು ಮಾಡುತ್ತದೆ. ಅದಲ್ಲದೇ ಡೆಪ್ತ್ ಆಫ್ ಫೀಲ್ಡ್‌ ಸೃಷ್ಟಿಸಲು ಸಹಾಯ ಮಾಡುತ್ತದೆ.

  3. ಆಪ್ಟಿಕಲ್ ಇಮೇಜ್ ಸ್ಟ್ಯಾಬಿಲೈಜೆಷನ್ Optical Image Stabilization (OIS)

  ಆಪ್ಟಿಕಲ್ ಇಮೇಜ್ ಸ್ಟ್ಯಾಬಿಲೈಜೆಷನ್ ಕ್ಯಾಮೆರಾದಲ್ಲಿ ಪ್ರಮುಖವಾಗಿದ್ದು, ಇಮೇಜ್ ಬ್ಲರ್ ಆಗುವುದನ್ನು ಕಡಿಮೆ ಮಾಡುತ್ತದೆ. ಸಾಮಾನ್ಯವಾಗಿ ವಿಡಿಯೋಗಳನ್ನು ಚಿತ್ರಿಸುವಾಗ ಮತ್ತು ಪೋಟೋ ಕ್ಲಿಕ್ಕಿಸುವಾಗ ಬ್ಲರ್ ಆಗುವುದನ್ನು ತಡೆಯಲು ಆಪ್ಟಿಕಲ್ ಇಮೇಜ್ ಸ್ಟ್ಯಾಬಿಲೈಜೆಷನ್ ಬಳಸಲಾಗುತ್ತದೆ. ಈ ತಂತ್ರಜ್ಞಾನ ಚಲಿಸುವ ಲೆನ್ಸ್ ಎಲೆಮೆಂಟ್ಸ್‌ ಮತ್ತು ಗೈರೋಸ್ಕೋಪ್ ಸೆನ್ಸಾರ್‌ನ್ನು ಬಳಸುತ್ತದೆ. OIS ಗೈರೋಸ್ಕೋಪ್ ಸೆನ್ಸಾರ್ ಮೂಲಕ ಕ್ಯಾಮೆರಾ ಚಲನೆಯನ್ನು ಗುರುತಿಸುತ್ತದೆ. ಈ ಮೂಲಕ ಕ್ಯಾಮೆರಾದ ಚಲನೆಯನ್ನು ಲೆನ್ಸ್‌ ಚಲನೆಯ ಮೂಲಕ ನಿಯಂತ್ರಸುತ್ತದೆ. ಈ ಫೀಚರ್ ಮಂದ ಬೆಳಕಿನಲ್ಲಿ ಪೋಟೋ ತೆಗೆಯುವಾಗ ಮತ್ತು ವಿಡಿಯೋ ಸೆರೆಹಿಡಿಯುವಾಗ ಹೆಚ್ಚು ಉಪಯುಕ್ತವಾಗುತ್ತದೆ.

  4. ಷಟ್ಟರ್‌ ಸ್ಪೀಡ್ Shutter speed

  ಪೋಟೋಗ್ರಾಫಿಯ ಪ್ರಮುಖ ಮೂರು ಆಧಾರಗಳೆಂದರೆ ಷಟ್ಟರ್‌ ಸ್ಪೀಡ್, ಅಪಾರ್ಚರ್, ISO. ಕ್ಯಾಮೆರಾ ಷಟ್ಟರ್ ನಮ್ಮ ಕಣ್ಣ ರೆಪ್ಪೆಯಂತೆ ಕಾರ್ಯನಿರ್ವಹಿಸುತ್ತದೆ. ಷಟರ್ ಒಪನ್ ಆಗಿ ಕ್ಲೋಸ್ ಆಗುವಾಗ ಒಳಹೋಗುವ ಬೆಳಕಿನಿಂದ ಕ್ಯಾಮೆರಾ ಇಮೇಜ್‌ನ್ನು ಕ್ಯಾಪ್ಚರ್ ಮಾಡುತ್ತದೆ. ಮತ್ತು ಷಟ್ಟರ್ ವೇಗವು ಸಮಯಕ್ಕೆ ಸಂಬಂಧಿಸಿದ್ದಾಗಿದ್ದು ಕ್ಯಾಮೆರಾ ಸೆನ್ಸಾರ್ ಮೇಲೆ ಬೆಳಕನ್ನು ಹಾಯಿಸುವ ಸಮಯವಾಗಿದೆ. ಷಟ್ಟರ್ ಸ್ಪೀಡ್ ಇಮೇಜ್ ಬ್ರೈಟ್‌ನೆಸ್‌ನ್ನು ನಿಯಂತ್ರಿಸುತ್ತದೆ. ಷಟ್ಟರ್ ಸ್ಪೀಡ್ ಕಡಿಮೆಯಿದ್ದರೆ ಇಮೇಜ್ ಹೆಚ್ಚು ಬ್ರೈಟ್ ಆಗುತ್ತದೆ. ಮಂದ ಬೆಳಕಿನಲ್ಲಿ ಚಿತ್ರ ಸೆರೆಹಿಡಿಯುವಾಗ ಷಟ್ಟರ್ ಸ್ಪೀಡ್ ಬಹಳಷ್ಟು ಸಹಾಯಕವಾಗುತ್ತದೆ.

  5. ಐಎಸ್‌ಒ ISO

  ISO ಕ್ಯಾಮೆರಾದಲ್ಲಿ ಪ್ರಮುಖವಾಗಿದ್ದು, ಇಮೇಜ್ ಸೆನ್ಸಾರ್‌ನ ಪರಿಣಾಮವನ್ನು ಅಳೆಯುತ್ತದೆ. ಬೆಳಕಿಗೆ ನಿಮ್ಮ ಕ್ಯಾಮೆರಾ ಸೆನ್ಸಾರ್ ಎಷ್ಟು ಸೂಕ್ಷ್ಮವಾಗಿ ವರ್ತಿಸುತ್ತದೆ ಎಂಬುದನ್ನು ಪ್ರಮಾಣಿಕರಿಸುತ್ತದೆ. ISOನಿಂದ ಮಂದ ಬೆಳಕಿನಲ್ಲಿ ಉತ್ತಮ ರೀತಿಯ ಪೋಟೋಗಳನ್ನು ಸೆರೆಹಿಡಿಯಬಹುದು. ಹೆಚ್ಚು ಬೆಳಕಿದ್ದಾಗ ISO ಕೂಡ ಜಾಸ್ತಿ ಇರಬೇಕೆಂಬ ನಿಯಮವಿದೆ. ಆದರೆ, ಸ್ಮಾರ್ಟ್‌ಪೋನ್‌ಗಳ ಕ್ಯಾಮೆರಾದಲ್ಲಿ ISO ಚಿತ್ರದ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡುತ್ತದೆ. ISO ಎಂದರೆ International Standards Organisation ಆಗಿದೆ. ಇದು ಕ್ಯಾಮೆರಾ ಸೆನ್ಸಾರ್‌ಗಳಿಗೆ ಇಮೇಜ್ ಸೆನ್ಸಿವಿಟಿ ರೇಟಿಂಗ್‌ನ್ನು ನೀಡುತ್ತದೆ.

  6. ಡೆಫ್ತ್ ಆಫ್ ಫೀಲ್ಡ್‌ Depth of field

  ಡೆಫ್ತ್ ಆಫ್ ಫೀಲ್ಡ್‌ ಇಮೇಜ್‌ನಲ್ಲಿರುವ ಸಬ್ಜೇಕ್ಟ್‌ನ್ನು ಫೋಕಸ್ ಮಾಡಲು ಸಹಾಯ ಮಾಡುತ್ತದೆ. ನೀವೊಂದು ಪೋರ್ಟ್‌ರೇಟ್ ಇಮೇಜ್ ತೆಗೆಯುತ್ತಿರುವಾಗ ಸಬ್ಜೇಕ್ಟ್‌ ಫೋಕಸ್ ಆಗಬೇಕು. ಆದರೆ, ಇದು ಪೀಕ್ಚರ್ ಅನ್ನು ಅವಲಂಭಿಸಿರುತ್ತೆ. ಇಮೇಜ್‌ನಲ್ಲಿ ಎಲ್ಲವೂ ಫೋಕಸ್ ಆಗುತ್ತಿರುವಾಗ ಡೆಪ್ತ್‌ ಆಫ್ ಫೀಲ್ಡ್ ಆಳವಾಗಿದ್ದರೆ ಇಮೇಜ್ ಅನ್ನು ಬ್ಯಾಕ್‌ಗ್ರೌಂಡ್ ಅಥವಾ ಫಾರ್‌ಗ್ರೌಂಡ್ ಅನ್ನು ಫೋಕಸ್ ಮಾಡಬಹುದು. ಡೆಪ್ತ್ ಆಫ್ ಫೀಲ್ಡ್ ಅನ್ನು ಕ್ಯಾಮೆರಾ ಅಪಾರ್ಚರ್ ನಿಯಂತ್ರಿಸುತ್ತದೆ.

  7. ಫ್ಲಾಶ್ Flash

  ಸ್ಮಾರ್ಟ್‌ಪೋನ್‌ಗಳು ಪೋರ್ಟೆಬಲ್ ಆಗಿದ್ದು, ಬಳಸಲು ಸುಲಭವಾಗಿವೆ. ಕ್ಯಾಮೆರಾದ ಮೂಲಕ ಸುಲಭವಾಗಿ ಪೋಟೋ ತೆಗೆಯಬಹುದಾಗಿದೆ. ಬಹಳಷ್ಟು ಸ್ಮಾರ್ಟ್‌ಪೋನ್‌ಗಳು ಲೋ ಲೈಟ್ ಪೋಟೋಗ್ರಾಫಿಯಲ್ಲಿ ಎಡವುತ್ತವೆ. ಆ ಸಂದರ್ಭದಲ್ಲಿ ನೆರವಿಗೆ ಬರುವುದೇ ಫ್ಲಾಶ್. ಇದರಿಂದ ಚಂದದ ಪೋಟೋಗಳನ್ನು ಕ್ಲಿಕ್ಕಿಸಬಹುದಾಗಿದೆ. ಸ್ಮಾರ್ಟ್‌ಪೋನ್‌ಗಳು ಎರಡು ರೀತಿಯ ಫ್ಲಾಶ್ ಲೈಟ್ ಹೊಂದಿದ್ದು, LED ಮತ್ತು ಟ್ರೂ ಟೋನ್ LED. ಬಜೆಟ್ ಮತ್ತು ಮಧ್ಯಮವರ್ಗದ ಸ್ಮಾರ್ಟ್‌ಪೋನ್‌ಗಳಲ್ಲಿ ಅಗ್ಗದ LED ಬಳಸಲಾಗಿರುತ್ತೆ. ಟ್ರೂ ಟೋನ್ LED ಫ್ಲಾಶ್ ಲೈಟ್ ಉತ್ತಮ ತಂತ್ರಜ್ಞಾನವಾಗಿದ್ದು, ಆಧುನಿಕ ಹೈ-ಎಂಡ್ ಸ್ಮಾರ್ಟ್‌ಪೋನ್‌ಗಳಲ್ಲಿ ಬಳಕೆಯಾಗುತ್ತದೆ. ಬಿಳಿ ಮತ್ತು ಆಂಬರ್ LED ಸಹಯೋಜನೆ ಹೊಂದಿರುವ ಫ್ಲಾಶ್ ಇದಾಗಿದ್ದು, ಚಿತ್ರದ ವೈಟ್‌ ಬ್ಯಾಲೆನ್ಸ್‌ನ್ನು ಅಭಿವೃದ್ಧಿಗೊಳಿಸುತ್ತೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  7 things you must know about your smartphone’s camera. To know more this visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more