ಹುರ್ರೇ! ಜಿಯೋ ಸಿಮ್ ಬೆಂಬಲಿಸುವ ವಾಟರ್ 10 ಫೋನ್ ರೂ 8,699 ಕ್ಕೆ

By Shwetha
|

ಹೆಚ್ಚು ಸೌಲಭ್ಯಗಳನ್ನು ಹೊಂದಿರುವ ರಿಲಾಯನ್ಸ್ ಜಿಯೋ 4ಜಿ ಸೇವೆಗಳು ಗ್ರಾಹಕರನ್ನು ಸೆಳೆಯುವತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದು, ಎಲ್‌ವೈಎಫ್ ಸಿರೀಸ್‌ಗಳ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ಕಾರ್ಯದಲ್ಲಿ ರಿಲಾಯನ್ಸ್ ತೊಡಗಿದೆ. ಎಲ್‌ವೈಎಫ್ ಸಾಲಿಗ ಹೊಸದಾಗಿ ಸೇರಿರುವ ಡಿವೈಸ್ ವಾಟರ್ 10 ಆಗಿದೆ.

ಓದಿರಿ: ರಿಲಾಯನ್ಸ್ ಜಿಯೋ ಸಿಗ್ನಲ್ ಸಮಸ್ಯೆಗೆ ಪರಿಹಾರ ಇಲ್ಲಿದೆ

ಇತರ ಎಲ್‌ವೈಎಫ್ ಮೊಬೈಲ್‌ಗಳಂತೆ, ಈ ಸ್ಮಾರ್ಟ್‌ಫೋನ್ ಕೂಡ 4ಜಿ ವೋಲ್ಟ್ ಸಪೋರ್ಟ್‌ಗೆ ಬೆಂಬಲವನ್ನು ನೀಡುತ್ತಿದ್ದು ಹಿಂಭಾಗದಲ್ಲಿ ಲೆದರ್ ಅನ್ನು ಪಡೆದುಕೊಂಡಿದೆ. ಇಂದಿನ ಲೇಖನದಲ್ಲಿ ಈ ಡಿವೈಸ್ ಕುರಿತಾದ ಎಂಟು ಫೀಚರ್‌ಗಳನ್ನು ತಿಳಿಸುತ್ತಿದ್ದು ಕಪ್ಪು ಬಣ್ಣದಲ್ಲಿ ಬಂದಿರುವ ಈ ಡಿವೈಸ್ ರೂ 8,699 ಬೆಲೆಯದ್ದಾಗಿದೆ.

ಉತ್ತಮ ಬಣ್ಣ ಹಾಗೂ ಗಾಢ ಬೆಳಕು

ಉತ್ತಮ ಬಣ್ಣ ಹಾಗೂ ಗಾಢ ಬೆಳಕು

ಎಲ್‌ವೈಎಫ್ ವಾಟರ್ 10 ಸ್ಮಾರ್ಟ್‌ಫೋನ್ 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1280x 720 ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ ಹಾಗೂ ಡಾಂಗಕ್ಸು ಗ್ಲಾಸ್ ಭದ್ರತೆಯನ್ನು ಡಿವೈಸ್ ಪಡೆದಿದೆ. ಮಿರಾವಿಶನ್ ಬೆಂಬಲದೊಂದಿಗೆ, ಈ ಸ್ಮಾರ್ಟ್‌ಫೋನ್ ವಿವಿಧ ಬಣ್ಣವನ್ನು ಪಡೆದುಕೊಂಡಿದ್ದು ಉತ್ತಮ ವೀಕ್ಷಣಾ ಆಂಗಲ್‌ಗಳನ್ನು ಹೊಂದಿದೆ.

ಬ್ಯಾಟರಿ ಕ್ಷಿಪ್ರತೆ

ಬ್ಯಾಟರಿ ಕ್ಷಿಪ್ರತೆ

ಈ ಸ್ಮಾರ್ಟ್‌ಫೋನ್ ಓಕ್ಟಾ ಕೋರ್ ಮೀಡಿಯಾ ಟೆಕ್ MT6753 ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು 1.3GHz ಜೊತೆಗೆ Mali-T720 ಜಿಪಿಯುವನ್ನು ಹೊಂದಿದೆ. ಸ್ಟ್ಯಾಂಡ್ ಬೈ ಇಂಟೆಲಿಜೆಂಟ್ ಪವರ್ ಸೇವಿಂಗ್ ಮೋಡ್ ಅನ್ನು ಡಿವೈಸ್ ಹೊಂದಿದ್ದು ಅಪ್ಲಿಕೇಶನ್ ನಿಯಂತ್ರಿಸುವಾಗ ಕಡಿಮೆ ಶಕ್ತಿಯನ್ನು ಬಳಸಿಕೊಳ್ಳುತ್ತದೆ.

ನಿಮ್ಮ ಮೆಚ್ಚಿನ ಚಲನ ಚಿತ್ರಗಳೊಂದಿಗೆ 64 ಜಿಬಿ ವಿಸ್ತರಿತ ಮೆಮೊರಿ

ನಿಮ್ಮ ಮೆಚ್ಚಿನ ಚಲನ ಚಿತ್ರಗಳೊಂದಿಗೆ 64 ಜಿಬಿ ವಿಸ್ತರಿತ ಮೆಮೊರಿ

ಈ ಸ್ಮಾರ್ಟ್‌ಫೋನ್ 3ಜಿಬಿ RAM ಅನ್ನು ಪಡೆದುಕೊಂಡಿದ್ದು, 16 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಇದರಲ್ಲಿದೆ ಮತ್ತು ಇದನ್ನು 64 ಜಿಬಿಗೆ ವಿಸ್ತರಿಬಹುದಾಗಿದೆ. 16 ಜಿಬಿ ಬಳಕೆದಾರರು 11 ಜಿಬಿ ಇನ್‌ಬಿಲ್ಟ್ ಸ್ಟೋರೇಜ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಲೈವ್ ಮೋಡ್

ಲೈವ್ ಮೋಡ್

ಎಲ್‌ವೈಎಫ್ ವಾಟರ್ 10, 13 ಎಮ್‌ಪಿ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ. ಮುಂಭಾಗದಲ್ಲಿ 5 ಎಮ್‌ಪಿ ಕ್ಯಾಮೆರಾ ಇದೆ. ಲೈವ್ ಮೋಡ್ ಮತ್ತು ಮಲ್ಟಿ ಆಂಗಲ್ ಮೋಡ್ ಅನ್ನು ಡಿವೈಸ್ ಪಡೆದುಕೊಂಡಿದೆ. ವಾಯ್ಸ್ ಕಮಾಂಡ್ಸ್ ಮತ್ತು ಗೆಸ್ಚರ್ ಕ್ಯಾಪ್ಚರ್ ಅನ್ನು ಚಿತ್ರಗಳನ್ನು ತೆಗೆಯುವಲ್ಲಿ ಉಪಯೋಗಿಸಬಹುದಾಗಿದೆ.

ಆಂಡ್ರಾಯ್ಡ್ 5.1 ಲಾಲಿಪಪ್

ಆಂಡ್ರಾಯ್ಡ್ 5.1 ಲಾಲಿಪಪ್

ಎಲ್‌ವೈಎಫ್ ವಾಟರ್ 10 ನಲ್ಲಿ ಆಂಡ್ರಾಯ್ಡ್ 5.1 ಲಾಲಿಪಪ್ ಅನ್ನು ಕಂಡುಕೊಳ್ಳಬಹುದಾಗಿದ್ದು, ಯಾವುದೇ ಯುಐ ಇದರಲ್ಲಿ ಸೇರಿಸದೇ ನಿಮಗೆ ಇದನ್ನು ಬಳಸಿಕೊಳ್ಳಬಹುದಾಗಿದೆ.

ಆಂಟಿ ಥೆಪ್ಟ್ ಫೀಚರ್

ಆಂಟಿ ಥೆಪ್ಟ್ ಫೀಚರ್

ಈ ಸ್ಮಾರ್ಟ್‌ಫೋನ್ ಆಂಟಿ ಥೆಪ್ಟ್ ಫೀಚರ್‌ನೊಂದಿಗೆ ಬಂದಿದ್ದು ತುರ್ತು ಸಂಪರ್ಕಕ್ಕೆ ಎಸ್‌ಎಮ್‌ಎಸ್ ಅನ್ನು ಕಳುಹಿಸುವ ಮೂಲಕ ಇದು ಫೋನ್ ಅನ್ನು ನಿಯಂತ್ರಿಸುತ್ತದೆ. ಫೋನ್‌ನಲ್ಲಿ ಸಿಮ್ ಕಾರ್ಡ್ ಅನ್ನು ಬದಲಾಯಿಸಿದ್ದಲ್ಲಿ, ತುರ್ತು ಸಂಪರ್ಕ ಅಧಿಸೂಚನೆಯನ್ನು ಪಡೆದುಕೊಳ್ಳುತ್ತದೆ.

ಗೆಸ್ಚರ್‌ನಿಂದ ಫೋನ್ ನಿಯಂತ್ರಿಸಿ

ಗೆಸ್ಚರ್‌ನಿಂದ ಫೋನ್ ನಿಯಂತ್ರಿಸಿ

ಅಷ್ಟಲ್ಲದೆ, ಎಲ್‌ವೈಎಫ್ ವಾಟರ್ 10, ಗೆಸ್ಚರ್ ಫೀಚರ್‌ಗಳನ್ನು ಪಡೆದುಕೊಂಡಿದ್ದು ಒಳಬರುವ ಕರೆಗಳನ್ನು ಮ್ಯೂಟ್ ಮಾಡಲು ಫ್ಲಿಪ್ ಅಥವಾ ಫೋನ್ ಕವರ್ ಮಾಡಬಹುದಾಗಿದೆ. ಮೂರು ಪಾಯಿಂಟ್ ಗೆಸ್ಚರ್ ಮೂಲಕ ಸ್ಕ್ರೀನ್ ಶಾಟ್‌ಗಳನ್ನು ತೆಗೆಯಬಹುದಾಗಿದೆ ಮತ್ತು ಎರಡು ಪಾಯಿಂಟ್ ಫೀಚರ್ ಮೂಲಕ ವಾಲ್ಯೂಮ್ ಅನ್ನು ಹೊಂದಿಸಬಹುದಾಗಿದೆ.

12 ಗಂಟೆಗಳ ಟಾಕ್ ಟೈಮ್

12 ಗಂಟೆಗಳ ಟಾಕ್ ಟೈಮ್

ಎಲ್‌ವೈಎಫ್ ವಾಟರ್ ಸ್ಮಾರ್ಟ್‌ಫೋನ್‌ನಲ್ಲಿ 2300mAh ಬ್ಯಾಟರಿಯನ್ನು ಕಂಡುಕೊಳ್ಳಬಹುದಾಗಿದ್ದು ಇದು 12 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತದೆ ಮತ್ತು 260 ಗಂಟೆಗಳ ಸ್ಟ್ಯಾಂಡ್ ಬೈ ಸಮಯವನ್ನು ನಿಮಗೆ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Today we have jotted down the list of 8 features you should know. Coming in Black color variant, the Lyf Water 10 is priced at Rs.8,699 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X