ಮೂರು ಸ್ಕ್ರೀನ್ ಗಳ ಫೋಲ್ಡೇಬಲ್ ಟ್ಯಾಬ್ಲೆಟ್ ಬಿಡುಗಡೆಗೊಳಿಸಲಿರುವ ಸ್ಯಾಮ್ ಸಂಗ್

|

ಸ್ಯಾಮ್ ಸಂಗ್ ಕಂಪೆನಿ ಈ ವರ್ಷ ಕೆಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು ತನ್ನ ಮಾರಾಟ ಹೆಚ್ಚಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದೆ. ನಾಲ್ಕು ಹಿಂಭಾಗದ ಕ್ಯಾಮರಾವನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್ ಫೋನ್ ಬಿಡುಗಡೆಯ ಸುದ್ದಿ ಮಾತ್ರವಲ್ಲದೆ ಮಿಡ್ ರೇಂಜಿನ ಸ್ಮಾರ್ಟ್ ಫೋನ್ ಗಳನ್ನು ಇನ್ನಷ್ಟು ಫೀಚರ್ ಗಳನ್ನು ಸೇರಿಸಿ ಬಿಡುಗಡೆಗೊಳಿಸುವ ಉದ್ದೇಶವನ್ನು ಕೂಡ ಸ್ಯಾಮ್ ಸಂಗ್ ಸಂಸ್ಥೆ ಹೊಂದಿದೆ.

ಸ್ಯಾಮ್ ಸಂಗ್ ನ ಮುಂದಿನ ಗುರಿ:

ಸ್ಯಾಮ್ ಸಂಗ್ ನ ಮುಂದಿನ ಗುರಿ:

ಫೋಲ್ಡೇಬಲ್ ಸ್ಕ್ರೀನ್ ಇರುವ ಸ್ಮಾರ್ಟ್ ಫೋನ್ ನ್ನು 2019ರ ಆರಂಭದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಕೂಡ ಸ್ಯಾಮ್ ಸಂಗ್ ಸಂಸ್ಥೆ ತಿಳಿಸಿದೆ. ಇದೀಗ ಸೌತ್ ಕೊರಿಯನ್ ಸಂಸ್ಥೆ ಸ್ಯಾಮ್ ಸಂಗ್ ಜೊತೆಗೆ ಪೇಟೆಂಟ್ ಮಾಡಿಕೊಂಡಿರುವ ಸಂಸ್ಥೆಯೊಂದು ಬಹಿರಂಗ ಪಡಿಸಿರುವಂತೆ ಸ್ಯಾಮ್ ಸಂಗ್ ಸಂಸ್ಥೆಯ ಸಂಶೋಧನೆಗಳು ಇಲ್ಲಿಗೇ ನಿಂತಿಲ್ಲ. ಬದಲಾಗಿ ಫೋಲ್ಡೇಬಲ್ ಟ್ಯಾಬ್ಲೆಟ್ ಬಿಡುಗಡೆಗೊಳಿಸುವುದಕ್ಕೂ ಕೂಡ ಸಂಸ್ಥೆ ಆಲೋಚಿಸುತ್ತಿದೆ. ಅದು ಕೇವಲ ಎರಡು ಸ್ಕ್ರೀನ್ ಅಲ್ಲ ಬದಲಾಗಿ ಮೂರು ಸ್ಕ್ರೀನ್ ಗಳ ಫೋಲ್ಡೇಬಲ್ ಟ್ಯಾಬ್ಲೆಟ್ ಬಿಡುಗಡೆಗೆ ಸ್ಯಾಮ್ ಸಂಗ್ ಪ್ರಯತ್ನಿಸುತ್ತಿದೆ ಎನ್ನಲಾಗುತ್ತಿದೆ.

ಮೂರು ಸ್ಕ್ರೀನ್ ಗಳ ಫೋಲ್ಡೇಬಲ್ ಟ್ಯಾಬ್ಲೆಟ್:

ಮೂರು ಸ್ಕ್ರೀನ್ ಗಳ ಫೋಲ್ಡೇಬಲ್ ಟ್ಯಾಬ್ಲೆಟ್:

ಈ ಪೇಟೆಂಟ್ ನ್ನು ಮೊಬೈಲ್ಕೂಪನ್ ವೆಬ್ ಸೈಟ್ ಹುಡುಕಿದ್ದು ಈಗಾಗಲೇ ಎರಡು ಸ್ಕ್ರೀನ್ ಗಳ ಫೋಲ್ಡೇಬಲ್ ಟ್ಯಾಬ್ಲೆಟ್ ಬಗ್ಗೆ ಯೋಚಿಸುತ್ತಿದ್ದ ಸ್ಯಾಮ್ ಸಂಗ್ ಎರಡರ ಬದಲಾಗಿ ಮೂರು ಸ್ಕ್ರೀನ್ ಗಳ ಬಗ್ಗೆ ಚಿಂತನ ನಡೆಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ನೀವು ಈ ಮೂರು ಸ್ಕ್ರೀನ್ ಗಳನ್ನು ಮಡಚುವುದಕ್ಕೆ ಅವಕಾಶವಿರುತ್ತದೆ. ಆದರೆ ಹೀಗೆ ಮಾಡುವುದರಿಂದಾಗಿ ಡಿವೈಸ್ ಸ್ವಲ್ಪ ದಪ್ಪವಾಗುವ ಸಾಧ್ಯತೆ ಇದೆ. ಎಲ್ಲಾ ಮೂರು ಸ್ಕ್ರೀನ್ ಗಳನ್ನು ಮಡಚಿದಾಗ ಅದು ಟ್ಯಾಬ್ಲೆಟ್ ಆಗುತ್ತದೆ. ಅಷ್ಟೇ ಅಲ್ಲ ಈ ಡಿವೈಸ್ ನ್ನು ಕೇವಲ ಎರಡೇ ಫೋಲ್ಡಿಂಗ್ ನಲ್ಲಿ ಬಳಸುವುದಕ್ಕೂ ಕೂಡ ಅವಕಾಶವಿರುತ್ತದೆ.

ಅಂದರೆ ಇದು ಸ್ಮಾರ್ಟ್ ಫೋನ್ ಗಿಂತಲೂ ಸ್ವಲ್ಪ ದೊಡ್ಡದಾಗಿದ್ದು ಟ್ಯಾಬ್ಲೆಟ್ ಗಿಂತಲೂ ಸ್ವಲ್ಪ ಚಿಕ್ಕದಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಇದಿಷ್ಟು ಮಾಹಿತಿಯನ್ನು ಹೊರತುಪಡಿಸಿದರೆ ಯಾವುದೇ ಇತರೆ ಮಾಹಿತಿಗಳು ಇದುವರೆಗೂ ಹೊರಬಿದ್ದಿಲ್ಲ.

ಒಂದು ಮಿಲಿಯನ್ ಫೋನ್ ಮಾರಾಟ:

ಒಂದು ಮಿಲಿಯನ್ ಫೋನ್ ಮಾರಾಟ:

2019 ರಲ್ಲಿ ಸ್ಯಾಮ್ ಸಂಗ್ ಸಂಸ್ಥೆ ಮಹತ್ವದ ಮೈಲಿಗಲ್ಲು ಇಡುವ ಎಲ್ಲಾ ಲಕ್ಷಣಗಳಿದ್ದು ಈ ಬಗ್ಗೆ ಸಂಸ್ಥೆ ಕೂಡ ಬಹಳ ವಿಶ್ವಾಸದಲ್ಲಿದೆ ಎಂಬ ವದಂತಿಗಳು ಹಬ್ಬಿದೆ. ಒಂದು ಮಿಲಿಯನ್ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಗಳನ್ನು ಕಂಪೆನಿ ಮುಂದಿನ ವರ್ಷ ಮಾರಾಟ ಮಾಡುವ ಗುರಿಯನ್ನು ಹೊಂದಿದೆ.

ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಫೋಲ್ಡೇಬಲ್ ಡಿವೈಸ್ ನ ಫೀಚರ್ ಗಳು:

ಕಳೆದ ತಿಂಗಳ ಸ್ಯಾಮ್ ಸಂಗ್ ಡೆವಲಪರ್ ಕಾನ್ಫರೆನ್ಸ್ ನಲ್ಲಿ ಸದ್ಯದ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಬಗ್ಗೆ ಸ್ಯಾಮ್ ಸಂಗ್ ಸಂಸ್ಥೆ ಕಿರುಪರಿಚಯವನ್ನು ಒದಗಿಸಿದೆ. ಹೊರಗಿನ ಸ್ಕ್ರೀನ್ ಮತ್ತು ಕವರ್ ಡಿಸ್ಪ್ಲೇ 4.58- ಇಂಚು ಹೊಂದಿರುತ್ತದೆ ಮತ್ತು ಅದರ ಅನುಪಾತ 21:9 ಜೊತೆಗೆ 840x1960 ಪಿಕ್ಸಲ್ ನ್ನು ಹೊಂದಿರಲಿದೆ. ಪ್ರಮುಖ ಡಿಸ್ಪ್ಲೇ 7.3- ಇಂಚಿನ ಸೈಜ್ ಹೊಂದಿದ್ದು, 4.2:3 ಅನುಪಾತ ಮತ್ತು 1536x2152 ಪಿಕ್ಸಲ್ ಆಗಿದೆ.

ಸ್ಯಾಮ್ ಸಂಗ್ ಈಗಾಗಲೇ ಖಾತ್ರಿ ಪಡಿಸಿರುವಂತೆ ಈ ಫೋಲ್ಡೇಬಲ್ ಸ್ಕ್ರೀನ್ ಮೂರು ಆಪ್ ಗಳನ್ನು ಏಕಕಾಲದಲ್ಲಿ ರನ್ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.ಈ ಫೀಚರ್ ನ್ನು ಮಲ್ಟಿ ಆಕ್ಟೀವ್ ವಿಂಡೋ ಎಂದು ಕರೆಯಲಾಗುತ್ತದೆ.ಈ ಎಲ್ಲಾ ವಿಚಾರಗಳು ಇದೀಗ ಫೋಲ್ಡೇಬಲ್ ಟ್ಯಾಬ್ಲೆಟ್ ನ ಸುದ್ದಿ ಹರಿದಾಡುವುದಕ್ಕೆ ಕಾರಣವೂ ಆಗಿರಬಹುದು. ಯಾವುದಕ್ಕೂ ನಿಜ ವಿಚಾರ ಏನೆಂದು ತಿಳಿಯಲು ಅಧಿಕೃತ ಪ್ರಕಟಣೆ ಸಿಗುವವರೆಗೂ ಕಾಯಲೇಬೇಕು.

Best Mobiles in India

Read more about:
English summary
After foldable phones, Samsung patent shows a foldable tablet with three screens

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X