Subscribe to Gizbot

ಮುಗಿತು ಜಿಯೋ ಫೋನ್ ಕತೆ: ರೂ.1,399ಕ್ಕೆ ಏರ್‌ಟೆಲ್ ಸ್ಮಾರ್ಟ್‌ಫೋನ್‌ ಬಿಡುಗಡೆ..!

Written By:

ಸದ್ಯ ಮಾರುಕಟ್ಟೆಯಲ್ಲಿ ಈಗಾಗಲೇ ಜಿಯೋಫೋನ್ ಹೆಚ್ಚು ಸದ್ದು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಜಿಯೋವನ್ನು ಮೀರಿಸುವಂತಹ ಫೋನ್ ವೊಂದನ್ನು ಲಾಂಚ್ ಮಾಡಿದೆ ಏರ್‌ಟೆಲ್. ಹೌದು ಕಾರ್ಬನ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದ್ದು ರೂ.1399ಕ್ಕೆ ಸಾರ್ಟ್‌ಫೋನ್ ಬಿಡುಗಡೆ ಮಾಡಿದೆ. 

ಮುಗಿತು ಜಿಯೋ ಫೋನ್ ಕತೆ: ರೂ.1,399ಕ್ಕೆ ಏರ್‌ಟೆಲ್ ಸ್ಮಾರ್ಟ್‌ಫೋನ್‌ ಬಿಡುಗಡೆ..!

ಓದಿರಿ: ವಿಂಡೋಸ್ ಬಳಕೆದಾರರಿಗೆ ಕಹಿ ಸುದ್ದಿ: ಸ್ಥಬ್ದವಾಗಲಿದೆ ವಿಂಡೋಸ್ ಫೋನ್‌ಗಳು..!!

ಕಾರ್ಬನ್ A40 ಇಂಡಿಯನ್ ಸ್ಮಾರ್ಟ್‌ಫೋನ್ ಏರ್‌ಟೆಲ್ ನೊಂದಿಗೆ ಕಾಣಿಸಿಕೊಂಡಿದೆ. ಜಿಯೋ ಫೋನ್ ಒಂದು ಮಾದರಿಯಲ್ಲಿ ಉಚಿತ ಎನ್ನುವ ಮಾದರಿಯಲ್ಲಿಯೇ ಏರ್‌ಟೆಲ್-ಕಾರ್ಬನ್ ಫೋನ್ ಸಹ ಒಂದು ಮಾದರಿಯಲ್ಲಿ ರೂ.1399ಕ್ಕೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೇರಾ ಪೇಹೆಲಾ 4G ಸ್ಮಾರ್ಟ್‌ಫೋನ್:

ಮೇರಾ ಪೇಹೆಲಾ 4G ಸ್ಮಾರ್ಟ್‌ಫೋನ್:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ 4G ಸ್ಮಾರ್ಟ್‌ಫೋನ್‌ಗಳ ಹಾವಳಿ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಜಿಯೋ ಸಹ 4G ಫೀಚರ್ ಫೋನ್ ಬಿಡುಗಡೆ ಮಾಡಿತ್ತು. ಇದೇ ಮಾದರಿಯಲ್ಲಿ ಏರ್‌ಟೆಲ್ ಈ ಫೋನ್ ಬಿಡುಗಡೆ ಮಾಡಿದ್ದು, ಇದನ್ನು ಮೇರಾ ಪೇಹೆಲಾ 4G ಸ್ಮಾರ್ಟ್‌ಫೋನ್ ಎಂದು ಕರೆದಿದೆ.

ಬೆಲೆ ರೂ.3,499 ಆದರೆ ಕ್ಯಾಷ್ ಬ್ಯಾಕ್ ಇದೆ:

ಬೆಲೆ ರೂ.3,499 ಆದರೆ ಕ್ಯಾಷ್ ಬ್ಯಾಕ್ ಇದೆ:

ಕಾರ್ಬನ್ A40 ಇಂಡಿಯನ್ ಸ್ಮಾರ್ಟ್‌ಫೋನ್ ಬೆಲೆ ರೂ. 3,499 ಆಗಿದ್ದು, ಆದರೆ ಈ ಫೋನ್ ಸದ್ಯ ರೂ. 2,899ಕ್ಕೆ ದೊರೆಯುತ್ತಿದ್ದು, ಗ್ರಾಹಕರು ಮೊದಲು ರೂ.2,899 ಡೌನ್‌ ಪೇಮೆಂಟ್ ಮಾಡಬೇಕಾಗಿದೆ. ಇದಾದ ಮೇಲೆ ಏರ್‌ಟೆಲ್‌ ನಿಂದ ರೂ. 1500 ಕ್ಯಾಚ್ ಬ್ಯಾಕ್ ದೊರೆಯಲಿದೆ.

ಮೂರು ವರ್ಷಗಳಲ್ಲಿ ಈ ಕ್ಯಾಚ್ ಬ್ಯಾಕ್ ದೊರೆಯಲಿದೆ:

ಮೂರು ವರ್ಷಗಳಲ್ಲಿ ಈ ಕ್ಯಾಚ್ ಬ್ಯಾಕ್ ದೊರೆಯಲಿದೆ:

ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ನಿಂದ ಹಣ ಪಾವತಿ ಮಾಡಿ ಈ ಮೊಬೈಲ್ ಖರೀದಿ ಮಾಡಿದರೆ ಗ್ರಾಹಕರಿಗೆ ರೂ.1500ಕ್ಕೆ ದೊರೆಯಲಿದೆ. ಆದರೆ ಇದು ಮೂರು ವರ್ಷಗಳಲ್ಲಿ ಹಂತ ಹಂತವಾಗಿ ದೊರೆಯಲಿದೆ.

ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ?

ಕ್ಯಾಷ್ ಬ್ಯಾಕ್ ಪಡೆಯುವುದು ಹೇಗೆ?

ಈ ಕ್ಯಾಷ್ ಬ್ಯಾಕ್ ಪಡೆದುಕೊಳ್ಳಲು ಗ್ರಾಹಕರು ಮೊದಲ 18 ತಿಂಗಳಿನಲ್ಲಿ ರೂ. 3000 ರೀಚಾರ್ಜ್ ಮಾಡಿಸಿಕೊಂಡರೆ ರೂ. 500 ಕ್ಯಾಚ್ ಬ್ಯಾಕ್ ಬರಲಿದೆ. ಹಾಗೆಯೇ ನಂತರದ 18 ತಿಂಗಳಲ್ಲಿ ಅಷ್ಟೆ ಪ್ರಮಾಣದ ರೀಚಾರ್ಜ್ ಮಾಡಿಸಿಕೊಂಡರೆ ರೂ.1000 ಕ್ಯಾಷ್ ಬ್ಯಾಕ್ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Taking on the JioPhone 4G feature phone with smartphones, Airtel has partnered 4G device manufacturers in India for its 'Mera Pehla 4G Smartphone' initiative. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot