ಬಜೆಟ್ ಸ್ಮಾರ್ಟ್ ಫೋನ್ ಗಳಿಗೆ ಅಮೇಜಾನಿನ ಹೋಲಿ ಡೇ ಸೇಲ್ ನಲ್ಲಿ ಭರ್ಜರಿ ಆಫರ್

By Gizbot Bureau
|

ಹೋಲಿ ಪ್ರಯುಕ್ತ ಅಮೇಜಾನ್ ನಲ್ಲಿ ವಿಶೇಷ ಸೇಲ್ ಆರಂಭವಾಗುತ್ತಿದೆ. ಫೆಬ್ರವರಿ 28 ರಿಂದ ಈ ಸೇಲ್ ಆರಂಭವಾಗಿದ್ದು ಮಾರ್ಚ್ 10,2020ರ ವರೆಗೂ ಕೂಡ ನಡೆಯಲಿದೆ. ಈ ಸೇಲ್ ನಲ್ಲಿ ಹಲವು ಸ್ಮಾರ್ಟ್ ಫೋನ್ ಗಳಿಗೆ ವಿಶೇಷ ರಿಯಾಯಿತಿ ಲಭ್ಯವಿದೆ. ಅದರಲ್ಲೂ ಕೂಡ ಬಜೆಟ್ ಸ್ಮಾರ್ಟ್ ಫೋನ್ ಗಳು ಬಹಳ ಕಡಿಮೆ ಬೆಲೆಗೆ ಕೈಗೆಟುತ್ತದೆ. ಅಂತಹ ಕೆಲವು ಬಜೆಟ್ ಸ್ನೇಹಿ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್

ಅಮೇಜಾನಿನಲ್ಲಿ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡಿನ ಇಎಂಐ ಆಯ್ಕೆಗೆ 10% ರಿಯಾಯಿತಿ ಲಭ್ಯವಿದೆ. ಕೊಟಕ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಗೆ ಮತ್ತು ಕ್ರೆಡಿಟ್ ಮತ್ತು ಡೆಬಿಟ್ ಇಎಂಐ ಆಯ್ಕೆಗೆ 10% ಇನ್ಸೆಂಟ್ ರಿಯಾಯಿತಿ ಇದೆ. ಎಕ್ಸ್ ಚೇಂಜ್ ಆಫರ್ ಗಳು, ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡಿಗೆ 5% ಇನ್ಸೆಂಟ್ ರಿಯಾಯಿತಿ ಮತ್ತು ಹಲವು ಆಫರ್ ಗಳು ಈ ಸಂದರ್ಬದಲ್ಲಿ ಸಿಗುತ್ತದೆ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ಈ ಸ್ಮಾರ್ಟ್ ಫೋನ್ 19% ರಿಯಾಯಿತಿಯಲ್ಲಿ ಅಂದರೆ 10,499 ರುಪಾಯಿ ಬೆಲೆಗೆ ಅಮೇಜಾನಿನಲ್ಲಿ ಸಿಗುತ್ತದೆ. ಇದರಲ್ಲಿ AI 48MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು, 6.53-ಇಂಚಿನ ಡಿಸ್ಪ್ಲೇ, ಮತ್ತು 5000mAh ಲೀಥಿಯಂ ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಇದು ನೀಡುತ್ತದೆ. 517 ರುಪಾಯಿ ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು.

ವಿವೋ ಯು10

ವಿವೋ ಯು10

ಈ ಹ್ಯಾಂಡ್ ಸೆಟ್ಟಿನ ಪ್ರಮುಖ ಫೀಚರ್ ಎಂದರೆ 13MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು, 5000mAh ಬ್ಯಾಟರಿ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರಾಗನ್ 665 AIE ಪ್ರೊಸೆಸರ್.ಇದು 8,990 ರುಪಾಯಿ ಬೆಲೆಗೆ ಸಿಗುತ್ತದೆ. 750 ರುಪಾಯಿಯ ಆರಂಭಿಕ ಇಎಂಐ ಆಯ್ಕೆ ಇದರಲ್ಲಿದೆ.

ರೆಡ್ಮಿ ನೋಟ್ 8 ಪ್ರೋ

ರೆಡ್ಮಿ ನೋಟ್ 8 ಪ್ರೋ

15,999 ರುಪಾಯಿ ಬೆಲೆಗೆ 6GB RAM ಮತ್ತು 128GB ROM ವ್ಯವಸ್ಥೆಯ ಫೋನ್ ನ್ನು ಗ್ರಾಹಕರು ಕೊಂಡುಕೊಳ್ಳುವ ಅವಕಾಶವಿದೆ. ಎಕ್ಸ್ ಚೇಂಜ್ ಆಫರ್ ನಲ್ಲಿ 12,000 ದ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು. ಹೆಲಿಯೋ ಜಿ90ಟಿ ಗೇಮಿಂಗ್ ಪ್ರೊಸೆಸರ್ ಜೊತೆಗೆ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನವನ್ನು ಇದು ಹೊಂದಿದೆ. 4500mAh ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜರ್ ನ್ನು ಇದು ಹೊಂದಿದೆ ಮತ್ತು ಡಾಟ್ ನಾಚ್ HDR ಡಿಸ್ಪ್ಲೇ ವ್ಯವಸ್ಥೆ ಇದೆ. ಇಎಂಐ ಆಯ್ಕೆಯಲ್ಲಿ ಪ್ರತಿ ತಿಂಗಳು 753 ರುಪಾಯಿ ಪಾವತಿ ಮಾಡಿ ಕೂಡ ನೀವು ಈ ಫೋನ್ ನ್ನು ಖರೀದಿಸಬಹುದು.

ವಿವೋ ಯು20

ವಿವೋ ಯು20

16MP AI ಟ್ರಿಪಲ್ ಹಿಂಭಾಗದ ಕ್ಯಾಮರಾಗಳು ಮತ್ತು 16MP ಮುಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ. ಈ ಹ್ಯಾಂಡ್ ಸೆಟ್ ನಲ್ಲಿ 5000mAh ಬ್ಯಾಟರಿ ಜೊತೆಗೆ 18W ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಈ ಫೋನ್ ಮಾರಾಟಕ್ಕೆ ಲಭ್ಯವಿದ್ದು 517 ರುಪಾಯಿ ಪ್ರತಿ ತಿಂಗಳು ಪಾವತಿಸುವ ಮೂಲಕ ಖರೀದಿಸಬಹುದು.

ಒಪ್ಪೋ ಎ7

ಒಪ್ಪೋ ಎ7

ಇದು 4230mAh ಬ್ಯಾಟರಿ ಬ್ಯಾಕ್ ಅಪ್ ನ್ನು ಹೊಂದಿದೆ. ಮತ್ತು ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಇದೆ. 8,990 ರುಪಾಯಿಗೆ ಅಂದರೆ 47% ರಿಯಾಯಿತಿಯಲ್ಲಿ ನೀವು ಈ ಫೋನ್ ಖರೀದಿಸಬಹುದು.ಇಎಂಐ ಆಯ್ಕೆ ಕೂಡ ಸಿಗಲಿದ್ದು ಪ್ರತಿ ತಿಂಗಳು 423 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ಪೋಕೋ ಎಫ್1

ಪೋಕೋ ಎಫ್1

ಈ ಹ್ಯಾಂಡ್ ಸೆಟ್ಟಿನ 6GB RAM ಮತ್ತು 128GB ROM ವ್ಯವಸ್ಥೆಯನ್ನು 15,999 ರುಪಾಯಿ ಬೆಲೆಗೆ ಖರೀದಿಸಬಹುದು. ಇಎಂಐ ಆಯ್ಕೆ ಕೂಡ ಲಭ್ಯವಿದ್ದು ಪ್ರತಿ ತಿಂಗಳು 753 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು. ಇದರಲ್ಲಿ AI ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಮತ್ತು 20MP ಮುಂಭಾಗದ ಕ್ಯಾಮರಾ ಮತ್ತು 6.18-ಇಂಚಿನ ಡಿಸ್ಪ್ಲೇ ವ್ಯವಸ್ಥೆ ಇದೆ.

ಒಪ್ಪೋ ಎಫ್11

ಒಪ್ಪೋ ಎಫ್11

ಅಮೇಜಾನಿನಲ್ಲಿ ಈ ಫೋನ್ 13,990 ರುಪಾಯಿಗೆ ಅಂದರೆ 42% ರಿಯಾಯಿತಿಯಲ್ಲಿ ಖರೀದಿಸಬಹುದು. ಇದರಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ FHD+ ಡಿಸ್ಪ್ಲೇ ಮತ್ತು 4020mAh ಲಿಥಿಯಂ ಬ್ಯಾಟರಿ ವ್ಯವಸ್ಥೆ ಇದೆ. ಇಎಂಐ ಆಯ್ಕೆ ಕೂಡ ಲಭ್ಯವಿದ್ದು ಪ್ರತಿ ತಿಂಗಳು 659 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ವಿವೋ ವೈ91ಐ

ವಿವೋ ವೈ91ಐ

2GB RAM ಮತ್ತು 32GB ROM ವ್ಯವಸ್ಥೆಯ ಫೋನ್ ನ್ನು 6,990 ರುಪಾಯಿ ಬೆಲೆಗೆ ಕೊಂಡುಕೊಳ್ಳಬಹುದು. ಹೆಚ್ಚುವರಿ ರಿಯಾಯಿತಿ ಕೂಡ ಲಭ್ಯವಿದೆ. ಈ ಫೋನಿನಲ್ಲಿ 13MP ಹಿಂಭಾಗದ ಕ್ಯಾಮರಾ,5MP ಮುಂಭಾಗದ ಕ್ಯಾಮರಾ,ಮತ್ತು 4030mAh ಬ್ಯಾಟರಿ ಕೆಪಾಸಿಟಿ ಇದರಲ್ಲಿದೆ.

ಒಪ್ಪೋ ಎಫ್15

ಒಪ್ಪೋ ಎಫ್15

ಈ ಫೋನಿನ 8GB RAM ಮತ್ತು 128GB ROM ವ್ಯವಸ್ಥೆಯ ಫೋನ್ ನ್ನು 19,990 ರುಪಾಯಿ ಬೆಲೆಗೆ ಖರೀದಿಸಬಹುದು. 10,200 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ಪಡೆದುಕೊಳ್ಳುವ ಅವಕಾಶವಿದೆ. ಇದರಲ್ಲಿ ಮೀಡಿಯಾ ಟೆಕ್ ಹೆಲಿಯೋ ಪಿ70 ಆಕ್ಟಾ ಕೋರ್ ಪ್ರೊಸೆಸರ್ ಮತ್ತು 4000mAh ಬ್ಯಾಟರಿ ವ್ಯವಸ್ಥೆ ಇದರಲ್ಲಿದೆ.

Most Read Articles
Best Mobiles in India

English summary
Amazon has geared up for its longest sales, marking Holi. The “Holi Days” starting from February 28 until March 10, 2020 bring some incredible offers on some budget smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X